ಟ್ರಂಪ್‌ ಬೆಂಬಲಿಗನ ಎದುರು ಅಮೋಘ ಗೆಲುವು ಸಾಧಿಸಿದ ಅಮೀಶ್ ಶಾ ಯಾರು ಗೊತ್ತಾ?

Date:

ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿ, ಮಾಜಿ ರಾಷ್ಟ್ರೀಯ ಫುಟ್‌ಬಾಲ್ ಲೀಗ್ ಆಟಗಾರರಾದ ಜೇ ಫೀಲಿಗೆ ಹಿನ್ನಡೆ ಉಂಟುಮಾಡಿರುವ ಭಾರತೀಯ ಮೂಲದ ವೈದ್ಯ ಅಮೀಶ್ ಶಾ, ಅರಿಜೋನಾದ ಮೊದಲನೇ ಕಾಂಗ್ರೆಸ್ ಕ್ಷೇತ್ರದಲ್ಲಿ ಜಯ ಘೋಷಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಶಾ, ನವೆಂಬರ್ 4ರಂದು ಗೆಲುವನ್ನು ಪ್ರಕಟಿಸಿದ್ದು, ಅರಿಜೋನಾದಿಂದ ಅಮೆರಿಕದ ಪ್ರತಿನಿಧಿ ಸಭೆಗೆ ಆಯ್ಕೆಯಾಗುವ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ. ರಿಪಬ್ಲಿಕನ್ನರ ವಶದಲ್ಲಿದ್ದ ಕ್ಷೇತ್ರ ಇದೀಗ ಡೆಮಾಕ್ರಟರತ್ತ ಒಲಿದಿದೆ.

- Advertisement -

ಡಿಸಿಷನ್ ಡೆಸ್ಕ್ ಎಚ್‌ಕ್ಯೂ ಪ್ರಕಟಿಸಿದ ಲೆಕ್ಕಾಚಾರದಂತೆ ಶಾ 1,67,807 ಮತಗಳನ್ನು, ಅಂದರೆ ಶೇ 52.49ರಷ್ಟು ಮತಗಳನ್ನು ಪಡೆದಿದ್ದಾರೆ. ಫೀಲಿಗೆ 1,45,313 ಮತಗಳು, ಅಂದರೆ ಶೇ 45.45ರಷ್ಟು ಬೆಂಬಲ ದೊರೆತಿದೆ. ಇಬ್ಬರ ನಡುವಿನ ಅಂತರ 22,494 ಮತಗಳಾಗಿದೆ. ನವೆಂಬರ್ 4ರ ರಾತ್ರಿ ಅಮೆರಿಕದ ಪೂರ್ವ ಕಾಲಮಾನ 8.39ಕ್ಕೆ ಸಂಸ್ಥೆಯು ಶಾ ಗೆಲುವನ್ನು ಅಂದಾಜಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅರಿಜೋನಾದ ಮುಂದಿನ ಸಂಸದನಾಗುವ ಅವಕಾಶ ಬದುಕಿನ ಅತ್ಯುನ್ನತ ಗೌರವ ಎಂದು ಶಾ ಪ್ರತಿಕ್ರಿಯಿಸಿದ್ದಾರೆ. ತಮಗೆ ಮತ ನೀಡಿದವರನ್ನೂ, ನೀಡದವರನ್ನೂ ಸಮಾನವಾಗಿ ಪ್ರತಿನಿಧಿಸುವುದಾಗಿ ಭರವಸೆ ನೀಡಿದ್ದಾರೆ. ರಾಜಕೀಯ ದ್ವೇಷಕ್ಕೆ ತೆರೆ ಎಳೆದು, ಜೀವನವೆಚ್ಚ ತಗ್ಗಿಸುವುದು, ಆರೋಗ್ಯ ಸೇವೆಯ ವ್ಯಾಪ್ತಿ ಹೆಚ್ಚಿಸುವುದು, ನೀರಿನ ಬಿಕ್ಕಟ್ಟು ಪರಿಹರಿಸುವುದು ಹಾಗೂ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಕಠಿಣ ಪೈಪೋಟಿ ನೀಡಿದ ಫೀಲಿಯನ್ನು ಅಭಿನಂದಿಸಿರುವ ಅವರು, ಈಗ ಕೆಲಸ ಆರಂಭಿಸುವ ಸಮಯ ಬಂದಿದೆ ಎಂದಿದ್ದಾರೆ.

ತುರ್ತು ಚಿಕಿತ್ಸಾ ವೈದ್ಯರಾಗಿರುವ ಶಾ, ಅರಿಜೋನಾ ರಾಜ್ಯ ಪ್ರತಿನಿಧಿ ಸಭೆಗೆ 2018, 2020 ಮತ್ತು 2022ರಲ್ಲಿ ಸತತವಾಗಿ ಆಯ್ಕೆಯಾಗಿದ್ದರು. ತಮ್ಮ ಚುನಾವಣಾ ಪ್ರಚಾರದಲ್ಲಿ ಜನರೊಂದಿಗೆ ನೇರ ಸಂಪರ್ಕಕ್ಕೆ ಒತ್ತು ನೀಡಿದ ಅವರು, 28 ಸಾವಿರಕ್ಕೂ ಹೆಚ್ಚು ಮನೆಗಳ ಬಾಗಿಲು ತಟ್ಟಿದ್ದಾರೆ ಎಂದು ಅವರ ಪ್ರಚಾರ ತಂಡ ತಿಳಿಸಿದೆ. ದುಬಾರಿ ಚಿಕಿತ್ಸೆ ಮತ್ತು ಹೆಚ್ಚುತ್ತಿರುವ ವೆಚ್ಚದ ಕುರಿತು ಮತದಾರರ ಅಹವಾಲುಗಳನ್ನು ಆಲಿಸಿದ ಶಾ, ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮಾಡುವ ಭರವಸೆ ನೀಡಿದ್ದರು.

1960ರ ದಶಕದಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋದ ಗುಜರಾತಿ ಪೋಷಕರ ಮಗನಾದ ಶಾ, ಶಿಕಾಗೊದಲ್ಲಿ ಹುಟ್ಟಿ ಬೆಳೆದವರು. ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ಅರ್ಹತೆಯ ಆಧಾರದಲ್ಲಿ ಪೂರ್ಣ ವಿದ್ಯಾರ್ಥಿವೇತನ ಪಡೆದು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಈ ಚುನಾವಣೆಯ ಎದುರಾಳಿಗಳ ನಡುವೆ ಹಿಂದಿನ ವೃತ್ತಿನಂಟೂ ಇದೆ: ಫೀಲಿ ಆಡಿದ್ದ ನ್ಯೂಯಾರ್ಕ್ ಜೆಟ್ಸ್ ಫುಟ್‌ಬಾಲ್ ತಂಡದಲ್ಲಿ ಶಾ ತುರ್ತು ವೈದ್ಯಕೀಯ ಸೇವೆ ಒದಗಿಸುತ್ತಿದ್ದರು.

ಈ ಚುನಾವಣೆಯಲ್ಲಿ ಶಾ ಅವರೊಂದಿಗೆ ಅಮಿ ಬೇರಾ, ರೋ ಖನ್ನಾ, ಪ್ರಮೀಳಾ ಜಯಪಾಲ್, ಸುಹಾಸ್ ಸುಬ್ರಹ್ಮಣ್ಯಂ ಮತ್ತು ಪಿಯಾ ದಾಂಡಿಯಾ ಭಾರತೀಯ ಮೂಲದ ವಿಜೇತರ ಪಟ್ಟಿಯಲ್ಲಿದ್ದಾರೆ. ರಾಜಾ ಕೃಷ್ಣಮೂರ್ತಿ ಮತ್ತು ಶ್ರೀ ಥಾಣೇದಾರ್ ಮುಂದಿನ ಪ್ರತಿನಿಧಿ ಸಭೆಯಲ್ಲಿ ಇರುವುದಿಲ್ಲ. ಅವರ ಸ್ಥಾನವನ್ನು ಹೊಸಮುಖಗಳಾದ ಶಾ ಮತ್ತು ದಾಂಡಿಯಾ ತುಂಬಲಿದ್ದು, ಭಾರತೀಯ ಅಮೆರಿಕನ್ ಸದಸ್ಯರ ಸಂಖ್ಯೆ ಆರಕ್ಕೆ ಏರಿದೆ. ಈ ಆರು ವಿಜೇತರೂ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಲು, ಬಸ್ ದರ ಏರಿಕೆ; ಕಾಂಗ್ರೆಸ್ ಸರ್ಕಾರದ ಸರಣಿ ಎಡವಟ್ಟು!

ರಾಜ್ಯದಲ್ಲಿ ನವೆಂಬರ್ ತಿಂಗಳು ಜನಸಾಮಾನ್ಯರ ದೈನಂದಿನ ಬದುಕಿನ ಮೇಲಿನ ಭಾರೀ ಆರ್ಥಿಕ...

ಹಣಬಲ ಮಣಿಸಿದ ಜನಬಲ: ಅಮೆರಿಕದ ಸೆನೇಟ್‌ಗೆ ಮೊದಲ ಮುಸ್ಲಿಂ ಪ್ರತಿನಿಧಿ ‘ಅಬ್ದುಲ್ ಎಲ್ ಸಯ್ಯದ್’ ಆಯ್ಕೆ

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯೊಂದು ಆರಂಭವಾಗಿದೆ. ಮಿಶಿಗನ್ ರಾಜ್ಯದಿಂದ ಡೆಮಾಕ್ರಟಿಕ್...

ಯುಪಿಗೆ ಚಿರಾಗ್-ನಿತಿನ್ ಎಂಟ್ರಿ; ‘ಮಹಾ ಸಮರ’ಕ್ಕೆ ಸಜ್ಜಾದ ಎನ್‌ಡಿಎ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಬಿಹಾರದ...

100 ರೂ.ಗೆ 10 ಬಗೆಯ ತರಕಾರಿ: ‘ವೆಟ್ರಿ ಕಿಟ್’ ಯೋಜನೆ ಆರಂಭಿಸಿದ ತಮಿಳು ಸರ್ಕಾರ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಅಗತ್ಯ ತರಕಾರಿಗಳನ್ನು ಒದಗಿಸುವ...