ನಿಖಿಲ್ ಕುಮಾರಸ್ವಾಮಿ ವೈಯಕ್ತಿಕ ಸಾಧನೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ: ಎಂ.ಎಸ್ ಶಿವಕುಮಾರ್

Date:

ಭಾರತ್ ಜೋಡೋ ಯಾತ್ರೆ, ಪಾದಯಾತ್ರೆ ಹಾಗೂ ಚುನಾಯಿತ ಪ್ರತಿನಿಧಿಗಳ ಕುರಿತು ಹೇಳಿಕೆ ನೀಡಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇತರರ ರಾಜಕೀಯವನ್ನು ಟೀಕಿಸುವ ಮೊದಲು ತಮ್ಮ ರಾಜಕೀಯ ನಿಲುವು, ವೈಯಕ್ತಿಕ ಸಾಧನೆ ಮತ್ತು ರಾಜಕೀಯ ನಿರ್ಧಾರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

- Advertisement -

ರಾಹುಲ್ ಗಾಂಧಿಯವರ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಆಶಯ, ಸಂದೇಶ ಮತ್ತು ಮಹತ್ವವನ್ನು ಮತ್ತೊಮ್ಮೆ ಜನರಿಗೆ ನೆನಪಿಸುವ ಉದ್ದೇಶದಿಂದ ಭಾರತ್ ಜೋಡೋ 2.0 ಹಮ್ಮಿಕೊಳ್ಳಲಾಗಿದೆ. ದೇಶದ ಏಕತೆ, ಸೌಹಾರ್ದತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದ ಐತಿಹಾಸಿಕ ಪಾದಯಾತ್ರೆಯನ್ನು ಸ್ಮರಿಸುವುದರಲ್ಲಿ ತಪ್ಪೇನಿದೆ? ಅದರ ಮಹತ್ವವನ್ನು ಅರ್ಥಮಾಡಿಕೊಳ್ಳದೆ ಟೀಕೆ ಮಾಡುವುದು ಯಾವ ರೀತಿಯ ರಾಜಕೀಯ ಪ್ರಬುದ್ಧತೆ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ ಕೆಲವು ಕಡೆ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ತಂದೆ, ಸಹೋದರ ಅಥವಾ ಕುಟುಂಬದ ಇತರ ಪುರುಷರು ಆಡಳಿತದಲ್ಲಿ ಹಸ್ತಕ್ಷೇಪ...

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

ಪಾದಯಾತ್ರೆಗಳ ಬಗ್ಗೆ ಮಾತನಾಡುವ ನಿಖಿಲ್ ಕುಮಾರಸ್ವಾಮಿ ಅವರು ಮೊದಲು ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಸ್ಪಷ್ಟನೆ ನೀಡಲಿ. ಬಿಜೆಪಿಯೊಂದಿಗಿನ ರಾಜಕೀಯ ಸಂಬಂಧಗಳು ಮತ್ತು ಹೊಂದಾಣಿಕೆಗಳ ಕುರಿತು ಪ್ರಶ್ನೆಗಳು ಎದುರಾದಾಗ ಅವರ ನಿಲುವು ಏನು? ಬಿಜೆಪಿಯ ಆಡಳಿತಾವಧಿಯಲ್ಲಿ ತಮ್ಮ ರ‍್ಯಾಲಿಗಳಿಗೆ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಅವಕಾಶ ನೀಡಲಾಗಿತ್ತೇ? ಇತರ ಸ್ಥಳಗಳಲ್ಲಿ ರ‍್ಯಾಲಿ ನಡೆಸಲು ಅನುಮತಿ ದೊರೆಯಲಿಲ್ಲವೇ? ಹಾಗಿದ್ದರೆ, ಅದರ ಹಿಂದಿನ ಕಾರಣಗಳೇನು ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಶಿವಮೊಗ್ಗ ಮತ್ತು ಭದ್ರಾವತಿಯಂತಹ ಪ್ರಮುಖ ಪ್ರದೇಶಗಳ ವಿಚಾರದಲ್ಲಿ ರಾಜಕೀಯ ಹೊಂದಾಣಿಕೆಗಳ ಬಗ್ಗೆ ಪ್ರಶ್ನೆಗಳು ಎದ್ದಿರುವಾಗ, ಇತರರ ರಾಜಕೀಯವನ್ನು ಮಾತ್ರ ಗುರಿಯಾಗಿಸಿಕೊಂಡು ಟೀಕಿಸುವುದು ಸರಿಯಲ್ಲ. ರಾಜಕೀಯದಲ್ಲಿ ಯಾರೊಂದಿಗೆ ಯಾವ ರೀತಿಯ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕಿಂತ ಜನರ ಹಿತಾಸಕ್ತಿಗೆ ಎಷ್ಟು ಆದ್ಯತೆ ನೀಡಲಾಗಿದೆ ಎಂಬುದೇ ಮುಖ್ಯ ಎಂದು ಶಿವಕುಮಾರ್ ಹೇಳಿದ್ದಾರೆ.

ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಹಿನ್ನೆಲೆಯನ್ನೂ ಪ್ರಶ್ನಿಸಿರುವ ಅವರು, “ನೀವು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಗ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಈ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ಹೊರತುಪಡಿಸಿ ನಿಮ್ಮದೇ ಆದ ವೈಯಕ್ತಿಕ ರಾಜಕೀಯ ಅರ್ಹತೆ ಏನು? ನಿಮ್ಮ ಸ್ವಂತ ಹೋರಾಟ, ಸಾಮರ್ಥ್ಯ ಮತ್ತು ಜನಬೆಂಬಲದಿಂದ ನೀವು ಏನು ಸಾಧಿಸಿದ್ದೀರಿ? ಕುಟುಂಬದ ಹೆಸರು ಮತ್ತು ರಾಜಕೀಯ ಪರಂಪರೆಯನ್ನು ಮೀರಿ ನಿಮ್ಮದೇ ಆದ ಸ್ವತಂತ್ರ ರಾಜಕೀಯ ಗುರುತನ್ನು ಎಷ್ಟು ಬೆಳೆಸಿಕೊಂಡಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

“ಸ್ವಂತ ರಾಜಕೀಯ ಸಾಧನೆ ಏನು ಎಂಬುದಕ್ಕೆ ಉತ್ತರಿಸಿ. ಕುಟುಂಬದ ಹೆಸರು ನಿಮಗೆ ಪರಿಚಯ ನೀಡಬಹುದು; ಆದರೆ ಜನರ ವಿಶ್ವಾಸವನ್ನು ಗಳಿಸಬೇಕಾದದ್ದು ನಿಮ್ಮ ಸ್ವಂತ ಕೆಲಸ ಮತ್ತು ಹೋರಾಟದಿಂದ. ಇತರರ ಬಗ್ಗೆ ಪ್ರಶ್ನೆ ಮಾಡುವ ಮೊದಲು ನಿಮ್ಮ ರಾಜಕೀಯ ನಿಲುವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ” ಎಂದು ಎಂ.ಎಸ್. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಕಾಂಗ್ರೆಸ್ ಕಚೇರಿಯಲ್ಲಿ ಮಾರಾಮಾರಿ, ಚಪ್ಪಲಿ ತೂರಾಟ

ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಕಚೇರಿಯಲ್ಲಿ ತೀವ್ರ ಹೈಡ್ರಾಮಾ ನಡೆದಿದ್ದು,...

ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ ಸದ್ದು; ತನಿಖೆಗೆ ಒತ್ತಾಯಿಸಿದ ಸಿದ್ದರಾಮಯ್ಯ, ಹೆಚ್‌ಡಿಕೆ

ಕರ್ನಾಟಕ ರಾಜಕೀಯದಲ್ಲಿ ಇದೀಗ ಸ್ಟಿಂಗ್ ಆಪರೇಷನ್ ವಿವಾದ ತೀವ್ರ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ...

ಜಂತರ್ ಮಂತರ್ ಪ್ರವೇಶಿಸಲು ಯತ್ನ: ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ವಶಕ್ಕೆ

'ಜಂತರ್ ಮಂತರ್' ಅನ್ನು ಪ್ರತಿಭಟನಾ ತಾಣವಲ್ಲ ಎಂದು ಕೇಂದ್ರ ಸರ್ಕಾರ ಆದೇಶ...