ಶಿವಮೊಗ್ಗ | ಭಾರತ್‌ ಜೋಡೊ ಯಾತ್ರೆ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ ಖಂಡಿಸಿ ಪ್ರತಿಭಟನೆ

Date:

ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಿಂದ ಮಹಾವೀರ ವೃತ್ತವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದೆ.

ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಅಸ್ಸಾಂ ರಾಜ್ಯದಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ಕಾರ್ಯಕರ್ತರು ರಾಹುಲ್ ಗಾಂಧಿಯವರು ಕುಳಿತಿದ್ದ ಬಸ್ಸನ್ನು ಅಡ್ಡಗಟ್ಟಿ ರಾಹುಲ್ ಗಾಂಧಿ ಅವರ ಮೇಲೆ ದಾಳಿ ಮಾಡಲು ಯತ್ನಿಸಿದ್ದನ್ನು ಪ್ರತಿಭಟನಾಕಾರರು ಖಂಡಿಸಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿಯಾಗಿದ್ದ ಎಚ್.ಸಿ. ಯೋಗೇಶ್ ಮಾತನಾಡಿ, 2014ರ ನಂತರ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ. ಮಾತನಾಡವ ಸ್ವಾತಂತ್ರ್ಯಕ್ಕೆ, ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳುವುದಕ್ಕೆ ಸ್ವಾತಂತ್ರ್ಯ, ಉದ್ಯೋಗಕ್ಕಾಗಿ ಸ್ವಾತಂತ್ರ್ಯ, ಹೋರಾಟ ಮಾಡುವುದಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಬೇಕಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಯಾಕೆಂದರೆ, ಮೊನ್ನೆ ನಡೆದ ರಾಹುಲ್ ಗಾಂಧಿ ನ್ಯಾಯ ಯಾತ್ರೆಯಲ್ಲಿ ಅಸ್ಸಾಂನಲ್ಲಿ ನಡೆದಿರುವಂತ ಘಟನೆ. ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕೆಲವು ಕಿಡಿಗೇಡಿಗಳು ರಾಹುಲ್ ಗಾಂಧಿ ಯಾತ್ರೆಗೆ ಅಡ್ಡಿಪಡಿಸಿದಲ್ಲದೆ, ಮೋದಿ… ಮೋದಿ… ಎಂದು ಕೂಗಿದಲ್ಲದೆ, ರಾಹುಲ್ ಗಾಂಧಿ ಅವರಿಗೆ ದೇವಸ್ಥಾನಗಳಲ್ಲಿ ನಿಬಂದನೇ ವಿಧಿಸಿದ್ದು ಯಾಕೆ? ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಬಾರದಾ? ಅಸ್ಸಾಂ ಅಲ್ಲಿ ತಿರುಗಾಡಬಾರದ? ಎಂದು ಪ್ರಶ್ನಿಸಿದರು. ಹಾಗಾಗಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕೇನೋ ಎಂದು ಈ ಸಂದರ್ಭದಲ್ಲಿ ಅನಿಸುತ್ತಿದೆ ಎಂದರು.

ಹಾಗೆ ಅಸ್ಸಾಂ ಮುಖ್ಯಮಂತ್ರಿಗಳು ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ, ಆ ಪೋಲಿ ಪಟಿಂಗರಿಗೆ ಹಾಗೂ ಆ ಕಿಡಿಗೇಡಿಗಳಿಗೆ ಯಾವ ರೀತಿ ಒಬ್ಬ ನಾಯಕ ಬಂದಾಗ ವರ್ತಿಸಬೇಕು ಎನ್ನುವ ಸ್ವಲ್ಪ ವಿದ್ಯೆ ಹೇಳಿಕೊಡಬೇಕು ಎಂದರು.

ಶಿವಮೊಗ್ಗ ಗ್ರಾಮಾಂತರ ನಿಕಟಪೂರ್ವ ಅಭ್ಯರ್ಥಿಯಾದ ಶ್ರೀನಿವಾಸ್ ಕರಿಯಣ್ಣ ಮಾತನಾಡಿ, ನಮಗೆ ಸ್ವಾತಂತ್ರ್ಯ ಇಲ್ಲವೇ ಅನಿಸುತ್ತಿದೆ. ಯಾಕೆಂದರೆ, ರಾಹುಲ್ ಗಾಂಧಿ ಅವರನ್ನು ತಡೆದು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿರುವದು ಖಂಡನೀಯ ಎಂದರು.

ರಾಹುಲ್ ಗಾಂಧಿ ಹಿಂದೂ ಅಲ್ಲವಾ ಅವರು ದೇವಸ್ಥಾನಕ್ಕೆ ಹೋಗಬಾರದು. ನಾವು ಕೂಡ ರಾಮನ ಭಕ್ತರು ಅಲ್ಲವಾ? ನೆನ್ನೆ ಸಿದ್ದರಾಮಯ್ಯ ಅವರೇ ಜೈ ಶ್ರೀರಾಮ್ ಎಂದಿದ್ದಾರೆ. ಹಾಗಾಗಿ ಎಮೋಷನಲ್ ಬ್ಲಾಕ್ಮೇಲೆ ಹಾಗೂ ವಿಷ ಬೀಜವನ್ನು ಮೋದಿ ಬಿತ್ತುತ್ತಿದ್ದಾರೆ. ನಾವೆಲ್ಲರೂ ಒಂದಾಗಿ ಬದುಕಿ ಬಾಳಬೇಕು ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ  ಕಾಂಗ್ರೆಸ್ ವಕ್ತಾರ ರಮೇಶ್ ಹೆಗ್ಡೆ, ಚೇತನ್, ಮಧುಸೂದನ್, ಸುಡೂರ್ ಶಿವಣ್ಣ, ಸಯೇದ್ ಜಮೀಲ್, ಪುಷ್ಪಲತಾ, ಸೌಗಾಂಧಿಕ, ಸುವರ್ಣ ನಾಗರಾಜ್, ವಿಶ್ವನಾಥ್ ಕಾಶಿ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ: ಓರ್ವ ಮೃತ್ಯು; ಮತ್ತೋರ್ವ ಗಂಭೀರ

ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟು, ಸಹ ಸವಾರ ಗಂಭೀರ...

ಗುಬ್ಬಿ | ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿಯ ಎಸ್.ರಘು ಅವರಿಗೆ ‘ಉದ್ಯೋಗದಾತ’ ಬಿರುದು ಪ್ರದಾನ

ಗ್ರಾಮೀಣ ಭಾಗದ ಕನಿಷ್ಠ ವಿದ್ಯಾಭ್ಯಾಸದ ಯುವಕ ಯುವತಿಯರಿಗೆ ಕಂಪ್ಯೂಟರ್ ತರಬೇತಿ...

ಹಾವೇರಿ | ಕನ್ನಡದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ ಬೇಕೇ ಹೊರತು ರಾಜಕಾರಣಿಗಳ ಭಾಷಣಗಳಲ್ಲ: ಬಸವರಾಜ ಪೂಜಾರ

ನಮ್ಮ ರಾಜ್ಯದ ಮಾತೃ ಭಾಷೆ ಕನ್ನಡ ಉಳಿವಿಗಾಗಿ, ಅಭಿವೃದ್ಧಿಗಾಗಿ ಕನ್ನಡಿಗರಿಗೆ ಶಿಕ್ಷಣ...

ಸಾಗರ | ಆಟೋ-ಕಾರು ಮುಖಾಮುಖಿ ಡಿಕ್ಕಿ: ಇಬ್ಬರು ಮೃತ್ಯು

ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದಲ್ಲಿ ಆಟೋ ಹಾಗೂ ಕಾರಿನ ನಡುವೆ ಭೀಕರ...