ತುಂಗಭದ್ರಾ | ಆಂಧ್ರ ರೈತರೊಂದಿಗೆ ನೀರಿಗಾಗಿ ಎಂದಿಗೂ ಜಗಳವಾಡಿಲ್ಲ: ಬಳ್ಳಾರಿ ರೈತರು

Date:

ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರು ತುಂಗಭದ್ರಾ ನದಿ ನೀರನ್ನು ಹಂಚಿಕೊಳ್ಳುವ ವಿಷಯದಲ್ಲಿ ಎಂದಿಗೂ ಜಗಳವಾಡಿಲ್ಲ. ಸಹೋದರರಂತಿದ್ದು, ಕಾವೇರಿ ನದಿ ನೀರಿನ ವಿವಾದಕ್ಕೆ ವ್ಯತಿರಿಕ್ತವಾಗಿದೆ. ಸಾಮರಸ್ಯಕ್ಕೆ ಮಾದರಿಯಾಗಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿಯೂ ಈ ರೀತಿಯ ಅನುಪಾತದ ನೀರು ಹಂಚಿಕೆ ನಿಗದಿಯಾಗಿ ವಿವಾದಕ್ಕೆ ಅಂತ್ಯವಾಡುವ ದಿನಗಳು ಬರಬೇಕಾಗಿದೆ.

ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ರೈತರ ಜೀವನಾಡಿ ತುಂಗಭದ್ರಾ ಜಲಾಶಯವು ಭರ್ತಿಯಾಗುವ ಹಂತಕ್ಕೆ ತಲುಪಿದೆ. ಇದರಿಂದ ಕಳೆದ ತಿಂಗಳು ಎದುರಾಗಿದ್ದ ಆತಂಕ ಈಗ ದೂರಾಗಿದ್ದು, ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಶತಕದ ಗಡಿಯಲ್ಲಿದೆ. ಜುಲೈನಲ್ಲಿ ನೀರಿನ ಸಂಗ್ರಹ ಕುಸಿದು ಆತಂಕ ಸೃಷ್ಟಿಸಿದ್ದ ಜಲಾಶಯದ ಸಂಗ್ರಹ ಮಟ್ಟ ಕೇವಲ ಒಂದೇ ತಿಂಗಳಲ್ಲಿ ಚೇತರಿಸಿಕೊಂಡಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ.

- Advertisement -

ಪ್ರಸ್ತುತ ಒಳಹರಿವಿನ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತ ಸಾಗುತ್ತಿದ್ದರೂ, ಈಗಾಗಲೇ 94.82 ಟಿಎಂಸಿಗೂ ಅಧಿಕ ನೀರು ಸಂಗ್ರಹಗೊಂಡಿದೆ. ಕೇವಲ ಮೂರು ಅಡಿಗಳ ಅಂತರದಲ್ಲಿ ಭರ್ತಿಯಾಗಲು ಸಜ್ಜಾಗಿರುವ ಟಿಬಿ ಜಲಾಶಯದ ನೀರಿನ ಏರಿಕೆಯು ಈ ಭಾಗದ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ಜೀವಕಳೆ ತುಂಬಿದ್ದು, ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ಜಲಾಶಯದ ಪ್ರಸ್ತುತ ನೀರಿನ ಮಟ್ಟ ಗರಿಷ್ಠ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಪೈಕಿ 94.82 ಟಿಎಂಸಿ ಸಂಗ್ರಹವಿದೆ. ಗರಿಷ್ಠ ನೀರಿನ 1633 ಅಡಿಯ ಪೈಕಿ ಪ್ರಸ್ತುತ ನೀರಿನ ಮಟ್ಟ 1630.20 ಅಡಿ ದಾಖಲಾಗಿದ್ದು, ಭರ್ತಿಗೆ ಇನ್ನು ಕೇವಲ 3 ಅಡಿ ಬಾಕಿ ಇದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಈವರೆಗೆ ಒಟ್ಟು 98.87 ಟಿಎಂಸಿ ನೀರು ಹರಿದುಬಂದಿದೆ.

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಾದರೆ, ಕರ್ನಾಟಕ ಮತ್ತು ತಮಿಳುನಾಡಿನ ರೈತರ ನಡುವೆ ವಿವಾದ ಸೃಷ್ಟಿಯಾಗುತ್ತದೆ. ಆದರೆ ತುಂಗಭದ್ರಾ ಜಲಾನಯನ ಪ್ರದೇಶದ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸ್ಥಿತಿ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಬಳ್ಳಾರಿಯ ರೈತ ಮುಖಂಡರು ಆಂಧ್ರಪ್ರದೇಶದ ಭತ್ತದ ಬೆಳೆಗಾರರನ್ನು ಬೆಂಬಲಿಸಿದ್ದು, ನೀರಿನ ಬೇಡಿಕೆಯನ್ನು ಈಡೇರಿಸುವಂತೆ, ಕರ್ನೂಲ್ ಜಿಲ್ಲೆ ಮತ್ತು ಇತರ ರಾಯಲಸೀಮಾ ಪ್ರದೇಶಗಳಲ್ಲಿನ ಕಾಲುವೆಗಳಿಗೆ ತಮ್ಮ ಪಾಲಿನ ಅಣೆಕಟ್ಟು ನೀರನ್ನು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ರೈತರು, ಆಂಧ್ರಪ್ರದೇಶದ ಪಾಲಿನ ನೀರನ್ನು ಬಿಡುಗಡೆ ಮಾಡುವವರೆಗೆ ತಮ್ಮ ಕಾಲುವೆಗಳಿಗೆ ನೀರು ಹರಿಯುವುದನ್ನು ತಾತ್ಕಾಲಿಕವಾಗಿ ತಡೆದಿದ್ದರು. ಪ್ರಸ್ತುತ, ಅಣೆಕಟ್ಟಿನ ಒಟ್ಟು ಸಾಮರ್ಥ್ಯ 105.79 ಟಿಎಂಸಿ ಅಡಿಗಳಾಗಿದ್ದು, ಪ್ರಸ್ತುತ 94.82 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಿದೆ.

ಕಳೆದ ವಾರ, ನೀರಾವರಿ ಸಮಾಲೋಚನಾ ಸಮಿತಿಯು ಮುಂದಿನ 90 ದಿನಗಳವರೆಗೆ ತುಂಗಭದ್ರಾ ಅಣೆಕಟ್ಟು ಪ್ರದೇಶದ ಅಡಿಯಲ್ಲಿರುವ ಐದು ನೀರಾವರಿ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ಇದು ಮೊದಲ ಬಾರಿಗೆ ಕರ್ನಾಟಕದ ಪಾಲಿನ 650 ಕ್ಯುಸೆಕ್ ನೀರನ್ನು ಮಾತ್ರ ಕೆಳಮಟ್ಟದ ಕಾಲುವೆಗೆ ಬಿಡುಗಡೆ ಮಾಡಿದೆ. ಆದರೂ ತುಂಗಭದ್ರಾ ಮಂಡಳಿಗೆ ನೀರಿನ ಹಂಚಿಕೆ ಅನುಪಾತವನ್ನು ಎರಡೂ ರಾಜ್ಯಗಳ ನಡುವೆ 60:40ಕ್ಕೆ ನಿಗದಿಪಡಿಸಲಾಗಿದೆ.

ಆಂಧ್ರಪ್ರದೇಶವು ಬೆಳೆ ನೀರಾವರಿಗಿಂತ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದು, ಎಲ್ ನಿನೊ ಪರಿಣಾಮದ ನಂತರ ಭತ್ತದಂತಹ ನೀರಿನ ಅಗತ್ಯ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಸಲಹೆ ನೀಡಿರುವುದರಿಂದ ತನ್ನ ನೀರಿನ ಪಾಲಿನ ಬೇಡಿಕೆ ಸಲ್ಲಿಸುವಲ್ಲಿ ವಿಳಂಬ ಮಾಡಿರುವುದಾಗಿ ಹೇಳಲಾಗಿದೆ.

ಆದರೂ ಬಳ್ಳಾರಿ ಜಿಲ್ಲೆಯ ರೈತರು 1,500 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲು ಕೋರಿದ್ದು, ಇದರಲ್ಲಿ ಆಂಧ್ರಪ್ರದೇಶದ ಪಾಲು ಸೇರಿದೆ. ಏಕೆಂದರೆ ಇದರಿಂದ ಕಾಲುವೆಯ ಕೊನೆಯ ಭಾಗದಲ್ಲಿರುವ(ಟೈಲ್-ಎಂಡ್‌) ರೈತರ ಜಮೀನುಗಳಿಗೂ ಸಮರ್ಪಕವಾಗಿ ನೀರು ತಲುಪಿಸಲು ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ತುಂಗಭದ್ರಾ ನೀರು ಹಂಚಿಕೆ

ಚಾಮರಾಜ ಮಾಲಿ ಪಾಟೀಲ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನೆರೆಯ ಕರ್ನೂಲ್‌ ಮತ್ತು ಆಂಧ್ರಪ್ರದೇಶದ ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಭತ್ತವನ್ನು ಬೆಳೆದಿದ್ದಾರೆ. ಅವರ ಬೆಳೆಗಳನ್ನು ರಕ್ಷಿಸಲು ಅವರಿಗೆ ನೀರಿನ ಅಗತ್ಯವಿದೆ. ನಮ್ಮ ಜಿಲ್ಲೆಯ ಎರಡು ವಿತರಣಾ ಕಾಲುವೆಗಳಿಂದ ಸಾಕಷ್ಟು ನೀರನ್ನು ಪೂರೈಸಲು ಆಗುವುದಿಲ್ಲವಾದ್ದರಿಂದ, ಬಳ್ಳಾರಿ ತಾಲೂಕಿನ ಸಿಂದವಲ್‌ ಕಾಲುವೆಯಲ್ಲಿ ನೀರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ, ಆಂಧ್ರಪ್ರದೇಶದ ಪಾಲಿನ ನೀರನ್ನು ಬಿಡುಗಡೆ ಮಾಡುವಂತೆ ಅಣೆಕಟ್ಟು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದೇವೆ. ಕರ್ನೂಲ್ ಜಿಲ್ಲೆಯ ರೈತರೊಂದಿಗೆ ನಾವು ಸಾಮರಸ್ಯದ ಸಂಬಂಧವನ್ನು ಉಳಿಸಿಕೊಂಡಿದ್ದೇವೆ. ಸಹೋದರರಂತೆ ಬದುಕುತ್ತೇವೆ ಮತ್ತು ನೀರಿಗಾಗಿ ಎಂದಿಗೂ ಜಗಳವಾಡಿಲ್ಲ” ಎಂದು ಹೇಳಿದರು.

“ಜಲಾಶಯದಲ್ಲಿ ಎಷ್ಟೇ ಪ್ರಮಾಣದ ನೀರು ಸಂಗ್ರಹವಾಗಿದ್ದರೂ ಕೂಡ ಕಾನೂನು ಪ್ರಕಾರ ಅವರ ಪಾಲಿಗಿರುವ ನೀರನ್ನು ನಾವು ಬಿಡಲೇಬೇಕಾಗುತ್ತದೆ. ಅವರೂ ಕೂಡ ರೈತರೇ ಅಲ್ಲವೆ. ಈಗ ಬರ ಬಂದಿದೆ ನಮಗೇ ನೀರಿಲ್ಲ, ಹಾಗಾಗಿ ನಿಮಗೆ ನೀರು ಕೊಡುವುದಿಲ್ಲವೆಂದು ಹೇಳುವುದಕ್ಕೆ ಆಗುವುದಿಲ್ಲ. ಅವರ ಪಾಲಿನ ಹಕ್ಕನ್ನು ಅವರಿಗೆ ನೀಡಲೇಬೇಕಾಗುತ್ತದೆ. ಉತ್ತಮ ಮಳೆಯಾದರೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಬರ ಬಂದಾಗ ನೀರು ಹಂಚಿಕೆ ಕಡಿಮೆ ಆಗಬಹುದೇ ಹೊರತು, ವಿವಾದ ಉಂಟಾಗುವುದಿಲ್ಲ. ನೆರೆಯ ರಾಜ್ಯಗಳೊಂದಿಗೆ ಸಮನ್ವಯತೆ, ಸಹೋದರತ್ವ ಚೆನ್ನಾಗಿದೆ” ಎಂದರು.

ರೈತ ಕೊಂಡಯ್ಯನವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತುಂಗಭದ್ರಾ ನೀರು ಹಂಚಿಕೆ ಸಂಬಂಧ ಈ ಭಾಗದಲ್ಲಿ ಗಲಾಟೆಗಳು ನಡೆಯುವುದಿಲ್ಲ. ಎರಡೂ ರಾಜ್ಯಗಳು ತಮ್ಮ ಪಾಲಿನ ನೀರನ್ನು ಸಮರ್ಪಕವಾಗಿ ಹಂಚಿಕೊಳ್ಳುವುದರಿಂದ ತೊಂದರೆಯಾಗುವುದಿಲ್ಲ, ಬಳ್ಳಾರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿಯೂ ಭತ್ತ, ಮೆಕ್ಕೆಜೋಳ ಹತ್ತಿ ಬೆಳೆಯಲಾಗುತ್ತದೆ. ನೀರಿನ ಕೊರತೆ ಉಂಟಾದರೆ ಭತ್ತದಂತಹ ಬೆಳೆಗಳನ್ನು ಬೆಳೆಯುವುದಿಲ್ಲ. ಈ ಬಾರಿ ಎಲ್‌ನಿನೊ ಪರಿಣಾಮದಿಂದಾಗಿ ಮಳೆ ಕೊರತೆ ಉಂಟಾಗಿರುವುದರಿಂದ ಹೆಚ್ಚು ನೀರು ಅವಲಂಬಿತ ಬೆಳೆಗಳನ್ನು ಬೆಳೆಯದಂತೆ ಎರಡೂ ಸರ್ಕಾರಗಳು ಸೂಚನೆ ನೀಡಿದ್ದವು. ಹಾಗಾಗಿ ಆಂಧ್ರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಅವರ ಪಾಲಿನ ನೀರನ್ನು ಬೇಸಿಗೆಯವರೆಗೂ ಕಾಪಿಟ್ಟುಕೊಳ್ಳುವ ಆಲೋಚನೆ ಮಾಡಿದ್ದರು. ಈಗ ತುಂಗಭದ್ರಾಕ್ಕೆ ಒಳಹರಿವು ಹೆಚ್ಚಿರುವುದರಿಂದ ಆಂಧ್ರ ರೈತರು ಭತ್ತ ನಾಟಿ ಮಾಡಿಕೊಂಡಿದ್ದಾರೆ. ಈಗ ಅವರ ಪಾಲಿನ ನೀರನ್ನು ಅವರಿಗೆ ನೀಡಿದರೆ ಅವರೂ ಬೆಳೆ ಬೆಳೆದುಕೊಳ್ಳುತ್ತಾರೆ” ಎಂದು ಹೇಳಿದರು.

ಆಂಧ್ರಪ್ರದೇಶದ ಜಲಸಂಪನ್ಮೂಲ ಸಚಿವ ನಿಮ್ಮಲ ರಾಮನಾಯ್ಡು ಅವರು ಕಳೆದ ವಾರ ಶಾಸಕರು ಮತ್ತು ಅಣೆಕಟ್ಟು ಅಧಿಕಾರಿಗಳೊಂದಿಗೆ ನೀರಿನ ಹಂಚಿಕೆ ಮತ್ತು ಬಳಕೆಯ ಬಗ್ಗೆ ಚರ್ಚಿಸಲು ಸಭೆ ನಡೆಸಿದ್ದರು. ಜುಲೈ 2027 ರವರೆಗೆ ರಾಯಲಸೀಮಾದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ತುಂಗಭದ್ರಾ ಅಣೆಕಟ್ಟಿನ ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯಕ್ ಮಾತನಾಡಿ, “ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡರಲ್ಲೂ ಒಂದು ಬೆಳೆಗೆ ಒಟ್ಟು 140 ಟಿಎಂಸಿ ಅಡಿ ನೀರು ಅತ್ಯಗತ್ಯವಾಗಿದೆ. ಈ ವರ್ಷ ಮಳೆ ಕೊರತೆಯಿಂದಾಗಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಿತ್ತು. ನೆರೆಯ ರಾಜ್ಯ ಸರ್ಕಾರವು ಮುಂದಿನ ವರ್ಷದ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದರಿಂದ ಪರಿಸ್ಥಿತಿಯನ್ನು ಅರಿತು ನೀರಿನ ಬೇಡಿಕೆ ಸಲ್ಲಿಸಲಿಲ್ಲ” ಎಂದು ಹೇಳಿದರು.

ತುಂಗಭದ್ರಾ ಒಳಹರಿವು

“ಮಳೆ ಕೊರತೆಯಿಂದಾಗಿ ಆಂಧ್ರಪ್ರದೇಶಕ್ಕೆ 24 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೂ, ಕೇವಲ 11 ಟಿಎಂಸಿ ಅಡಿ ನೀರು ಮಾತ್ರ ಸಿಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಮತ್ತು ನೀರಾವರಿ ಎರಡಕ್ಕೂ ಅಗತ್ಯ ನೀರು ಪೂರೈಸಲು ಸಾಧ್ಯವಿಲ್ಲ. ಏಕೆಂದರೆ ನಾವು 40 ಟಿಎಂಸಿ ಅಡಿ ನೀರಿನ ಕೊರತೆಯನ್ನು ಎದುರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿದ್ದೀರಾ? ಕಾವೇರಿ ಜಲವಿವಾದ: ಆಗಸ್ಟ್ 31ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿಕೆ

ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರು ತುಂಗಭದ್ರಾ ನದಿ ನೀರನ್ನು ಹಂಚಿಕೊಳ್ಳುವ ವಿಷಯದಲ್ಲಿ ಯಾವಾಗಲೂ ಸಾಮರಸ್ಯದಿಂದ ನಡೆದುಕೊಂಡಿದ್ದು, ನಾವು ಸಹೋದರರಂತೆ ಇದ್ದೇವೆ ಎನ್ನುವುದು ಕಾವೇರಿ ನೀರಿನ ವಿವಾದಕ್ಕೆ ವ್ಯತಿರಿಕ್ತವಾಗಿದೆ. ಸಾಮರಸ್ಯಕ್ಕೆ ಮಾದರಿಯಾಗಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿಯೂ ಈ ರೀತಿಯ ಅನುಪಾತದ ನೀರು ಹಂಚಿಕೆ ನಿಗದಿಯಾದರೆ, ವಿವಾದಕ್ಕೆ ಅಂತ್ಯವಾಡಬಹುದು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬೆಣ್ಣೂರ ಬಿ ಗ್ರಾಮಕ್ಕೆ ಪ್ರತ್ಯೇಕ ಬಸ್‌ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ಕಾಳಗಿ ತಾಲೂಕಿನ ಬೆಣ್ಣೂರ ಬಿ ಗ್ರಾಮಕ್ಕೆ ಸಮರ್ಪಕ ಬಸ್‌ ಸಂಚಾರವಿಲ್ಲದೆ ಕಳೆದ...

ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ

ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು...

ಯಾದಗಿರಿ | ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸಲು ಅ.17ರಿಂದ ತರಬೇತಿ ಶಿಬಿರ

ಯುವಜನರಲ್ಲಿ ಸಂವಿಧಾನಾತ್ಮಕ ಅರಿವು, ಸಾಮಾಜಿಕ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ...