2027 ಯುಪಿ ಚುನಾವಣೆ | ಬಿಟ್ಟುಹೋದ 40-80 ಲಕ್ಷ ಹಿಂದೂ ಮತದಾರರನ್ನೇ ಸೇರಿಸಲು ಯೋಗಿ ಸರ್ಕಾರದ ‘ಅಂತಿಮ್ ಮೌಕಾ’ ಅಭಿಯಾನ

Date:

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು (ಎಸ್‌ಐಆರ್) ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳ ಬಿರುಗಾಳಿ ಎಬ್ಬಿಸಿದೆ. ಎಸ್‌ಐಆರ್ ವೇಳೆ ಕೈಬಿಟ್ಟು ಹೋಗಿರುವ 40 ರಿಂದ 80 ಲಕ್ಷ ಹಿಂದೂ ಮತದಾರರನ್ನು ಮರಳಿ ಪಟ್ಟಿಗೆ ಸೇರಿಸಲು ಬಿಜೆಪಿ ‘ಅಂತಿಮ್ ಮೌಕಾ’ ಎಂಬ ಬೃಹತ್ ಅಭಿಯಾನ ಆರಂಭಿಸುತ್ತಿದೆ.

- Advertisement -

ಆದರೆ, ಈ ಅಭಿಯಾನವು ಕೇವಲ ನಿರ್ದಿಷ್ಟ ಸಮುದಾಯದ ಮತದಾರರನ್ನು ಮಾತ್ರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಮತ್ತು ವಿರೋಧ ಪಕ್ಷಗಳ ಸಾಂಪ್ರದಾಯಿಕ ಮತದಾರರನ್ನು ಹೊರಗಿಡುವ ವ್ಯವಸ್ಥಿತ ತಂತ್ರ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತಿದೆ. ಬರೀ ಹಿಂದೂ ಮತದಾರರನ್ನಷ್ಟೇ ಸೇರಿಸಲು ಬಿಜೆಪಿ ಮುಂದಾಗಿರುವುದು ಏಕೆ? ಮುಸ್ಲಿಂ ಮತದಾರರೂ ಕಳೆದುಕೊಂಡಿರುವುದು ಅವರ ಮತದಾನದ ಹಕ್ಕಲ್ಲವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಇದನ್ನೂ ಓದಿ: ಬೀದರ್‌ | ಎಸ್‌ಐಆರ್‌ ರದ್ದತಿಗೆ ಆಗ್ರಹ: ನ.5ರ ಪ್ರತಿಭಟನೆಗೆ ಬೆಂಬಲ

ಆಡಳಿತಾರೂಢ ಬಿಜೆಪಿಯು ಸರ್ಕಾರಿ ಯಂತ್ರಾಂಗ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳನ್ನು ಬಳಸಿಕೊಂಡು ತಮಗೆ ಅನುಕೂಲಕರವಾದ ಮತದಾರರನ್ನು ಮಾತ್ರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಇತರ ವಿಪಕ್ಷ ನಾಯಕರ ಆರೋಪಕ್ಕೆ ಬಿಜೆಪಿ ಸರ್ಕಾರದ ಈ ನಡೆಯು ಪುಷ್ಠಿ ನೀಡಿದೆ.

ಪರಿಷ್ಕರಣೆಯ ನೆಪದಲ್ಲಿ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳ (PDA) ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ಅಳಿಸಿಹಾಕಲಾಗುತ್ತಿದೆ ಎಂದು ವಿಪಕ್ಷಗಳು ದೂರಿವೆ. ಬಿಜೆಪಿಯು ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳನ್ನು ನಿರ್ಲಕ್ಷಿಸಿ, ಕೇವಲ ತನ್ನ ಗೆಲುವಿನ ಸಾಧ್ಯತೆಯಿರುವ ಕ್ಷೇತ್ರಗಳಲ್ಲಿ ಮಾತ್ರ ಹಿಂದೂ ಮತದಾರರ ಹೆಸರುಗಳನ್ನು ಸೇರಿಸಲು ಕಾರ್ಯಕರ್ತರನ್ನು ನಿಯೋಜಿಸುತ್ತಿರುವುದು ಪಕ್ಷಪಾತದ ನಡೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

‘ಅಂತಿಮ್ ಮೌಕಾ’ ಅಭಿಯಾನ

ಮತ್ತೊಂದೆಡೆ, ಬಿಜೆಪಿಯು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಅಕ್ಟೋಬರ್ 27, 2025 ರಿಂದ ಏಪ್ರಿಲ್ 10, 2026 ರವರೆಗೆ ನಡೆದ SIR ಪ್ರಕ್ರಿಯೆಯಲ್ಲಿ ರಾಜ್ಯದ ಒಟ್ಟು ಮತದಾರರ ಸಂಖ್ಯೆ 15.44 ಕೋಟಿಯಿಂದ 13.39 ಕೋಟಿಗೆ ಇಳಿಕೆಯಾಗಿದೆ ಎಂದು ತಿಳಿಸಿದೆ. ಪಂಚಾಯತ್ ಚುನಾವಣಾ ಪಟ್ಟಿಗೆ ಹೋಲಿಸಿದರೆ ವಿಧಾನಸಭಾ ಪಟ್ಟಿಯಿಂದ ಸುಮಾರು 1.27 ಕೋಟಿ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ | ಎಸ್‌ಐಆರ್‌ ಆರಂಭ; ಅಂತಿಮ ಮತಪಟ್ಟಿ 2026ರ ಫೆಬ್ರವರಿಗೆ ಬಿಡುಗಡೆ

2026ರ ನವೆಂಬರ್ 20ರಂದು ಕರಡು ಪಟ್ಟಿ ಪ್ರಕಟವಾದ ಬಳಿಕ, 2027ರ ಜನವರಿ 4ರ ಅಂತಿಮ ಪಟ್ಟಿ ಪ್ರಕಟಣೆಯ ಒಳಗಾಗಿ ಪ್ರತಿ ಕ್ಷೇತ್ರದಲ್ಲಿ 10,000 ದಿಂದ 25,000 ಮತದಾರರನ್ನು ಸೇರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಮುಂದಿನ ಒಂದು ತಿಂಗಳು ಪಕ್ಷದ ಬೇರೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಲಿಂಗಾನುಪಾತ 834ಕ್ಕೆ ಕುಸಿದಿರುವುದರಿಂದ ಬಿಟ್ಟುಹೋದ ಮಹಿಳಾ ಮತದಾರರು, 18-19 ವರ್ಷದ ಯುವಕರು ಮತ್ತು ವಲಸೆ ಕಾರ್ಮಿಕರ ಹೆಸರನ್ನು ಪಟ್ಟಿಗೆ ಸೇರಿಸಲು ಬೂತ್ ಮಟ್ಟದ ಏಜೆಂಟರಿಗೆ (BLA) ಸೂಚಿಸಲಾಗಿದೆ ಎಂದು ಸಿಎಂ ಯೋಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ, 2027ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಮತದಾರರ ಪಟ್ಟಿ ಪರಿಷ್ಕರಣೆಯು ಉತ್ತರ ಪ್ರದೇಶದಲ್ಲಿ ಪ್ರಮುಖ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದೆ. ಮುಸ್ಲಿಮರ ಹೆಸರುಗಳನ್ನು ಬಿಟ್ಟು ಕೇವಲ ಹಿಂದೂಗಳ ಹೆಸರನ್ನಷ್ಟೇ ಪಟ್ಟಿಗೆ ಸೇರ್ಪಡೆ ಮಾಡುವ ತಂತ್ರ ನಡೆಯುತ್ತಿದೆ ಮತ್ತು ಬಿಜೆಪಿ ತಮಗೆ ಬೇಕಾದ ಮತದಾರರನ್ನೇ ಉಳಿಸಿಕೊಳ್ಳಲು ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಗಂಭೀರ ಆರೋಪಗಳಿಗೆ, ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಪ್ರತಿಯೊಬ್ಬ ಅರ್ಹ ಮತದಾರನ ಹೆಸರನ್ನು ಪಟ್ಟಿಯಲ್ಲಿ ಖಚಿತಪಡಿಸುವ ಮೂಲಕವೇ ಉತ್ತರ ನೀಡಬೇಕಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UGC-NET ಕೀ-ಉತ್ತರ ವಿವಾದ; 4 ಪ್ರಶ್ನೆಗಳ ಮರುಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶ!

ಸ್ಪರ್ಧಾತ್ಮಕ ಪರೀಕ್ಷೆಗಳ ಕೀ-ಉತ್ತರಗಳ ವಿವಾದಗಳಲ್ಲಿ ನ್ಯಾಯಾಂಗದ ಸಂಯಮವು ಸಂಪೂರ್ಣವಾದುದಲ್ಲ. ಯಾವುದೇ ತರ್ಕ...

ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದಿಟ್ಟ ಆ 2 ನಿಮಿಷಗಳ ಮಾತು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು...

ಗೋಕುಲ್ ಡೇರಿ ಚುನಾವಣೆಯಲ್ಲಿ ಮೋಸದ ಗೆಲುವು ಬಿಜೆಪಿಗೆ ಮುಳುವಾಗುವುದೇ?

ಮಹಾರಾಷ್ಟ್ರದ ಅತಿದೊಡ್ಡ ಡೇರಿಗಳಲ್ಲಿ ಒಂದಾದ 'ಗೋಕುಲ್'ನ ನಿಯಂತ್ರಣ ಸಾಧಿಸಲು ಆಡಳಿತಾರೂಢ 'ಮಹಾಯುತಿ'...