ಹಳೆ ಮೈಸೂರು ಭಾಗದಿಂದ ಆರು ಮಂದಿ ಯುವ ನಾಯಕರು ವಿಧಾನಸಭೆಗೆ

Date:

ಹಳೆ ಮೈಸೂರು ಭಾಗದ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಮತ್ತು ಕೊಡಗು – ಐದು ಜಿಲ್ಲೆಗಳಿಂದ ಆರು ಯುವ ನಾಯಕರು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ. ಕುತೂಹಲಕಾರಿ ಎಂದರೆ, ಅವರ ಪೋಷಕರು ಅಸೆಂಬ್ಲಿ ಸದಸ್ಯರಾಗಿದ್ದರು.

ದರ್ಶನ್ (ನಂಜನಗೂಡು) ಅವರ ತಂದೆ ಧ್ರುವನಾರಾಯಣ ಆರ್‌ ಮಾಜಿ ಶಾಸಕ ಮತ್ತು ಸಂಸದರಾಗಿದ್ದರು. ಮಂತರ್ ಗೌಡ (ಮಡಿಕೇರಿ) ಅವರ ತಂದೆ ಎ ಮಂಜು ಮಾಜಿ ಸಚಿವರು ಹಾಗೂ ಈಗ ಅರಕಲಗೂಡಿನ ಜೆಡಿಎಸ್ ಶಾಸಕರಾಗಿದ್ದಾರೆ. ಎಚ್.ಎಂ ಗಣೇಶ್ ಪ್ರಸಾದ್ (ಗುಂಡ್ಲುಪೇಟೆ) ಅವರ ತಂದೆ ಎಚ್.ಎಸ್ ಮಹಾದೇವ ಪ್ರಸಾದ್ ಐದು ಬಾರಿ ಶಾಸಕ ಮತ್ತು ತಾಯಿ ಗೀತಾ ಮಹಾದೇವ ಪ್ರಸಾದ್ ಕೂಡ ಒಮ್ಮೆ ಶಾಸಕರಾಗಿದ್ದರು. ಈಗ ಮೂವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕುಮಾರಸ್ವಾಮಿ ಅವರೇ ಪಕ್ಷ ವಿಸರ್ಜನೆ ಯಾವಾಗ? ಕಾಲೆಳೆದ ನೆಟ್ಟಿಗರು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಚ್.ಡಿ ಹರೀಶ್ ಗೌಡ (ಹುಣಸೂರು) ಅವರ ತಂದೆ ಜಿ.ಟಿ ದೇವೇಗೌಡ (ಚಾಮುಂಡೇಶ್ವರಿ) ಹಾಲಿ ಶಾಸಕ. ಸ್ವರೂಪ್ ಪ್ರಕಾಶ್ (ಹಾಸನ) ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅವರ ಪುತ್ರ. ಇಬ್ಬರೂ ಜೆಡಿಎಸ್‌ನಿಂದ ಆಯ್ಕೆಯಾಗಿದ್ದಾರೆ.

ದರ್ಶನ್ ಪುಟ್ಟಣ್ಣಯ್ಯ (ಮೇಲುಕೋಟೆ), ಸರ್ವೋದಯ ಕರ್ನಾಟಕ ಪಕ್ಷವನ್ನು ಸ್ಥಾಪಿಸಿದ ಜನಪ್ರಿಯ ರೈತ ನಾಯಕ, ಮಾಜಿ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರ ಪುತ್ರ. ದರ್ಶನ್‌ ಪುಟ್ಟಣ್ಣಯ್ಯ ಅವರು ಈ ಬಾರಿ ಸರ್ವೋದಯ ಪಕ್ಷದಿಂದ ಗೆಲವು ಸಾಧಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ: ವಿನಯ್ ಕುಮಾರ್

ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನನ್ನದು. ಸಚಿವ ಎಸ್ ಎಸ್...

ಕಲಬುರಗಿ | ನನ್ನನ್ನು ಎನ್‌ಕೌಂಟರ್ ಮಾಡುವ ಜೀವ ಬೆದರಿಕೆ ಪತ್ರ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ಗಲಭೆ ಸೃಷ್ಟಿಸಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ...