ಅತ್ಯುತ್ತಮ ಸಾಧನೆಗೈದ ಸ್ವ-ಸಹಾಯ ಗುಂಪುಗಳಿಗೆ ‘ಕೌಶಲ್ಯ ಶೃಂಗಸಭೆ–2025’ ಪ್ರಶಸ್ತಿ

Date:

ರಾಷ್ಟ್ರೀಯ ಜೀವನೋಪಾಯ ಅಭಿಯಾನ (NRLM & NULM) ಅಡಿಯಲ್ಲಿ ಅತ್ಯುತ್ತಮ ಸಾಧನೆಗೈದ ರಾಜ್ಯದ 8 ಜಿಲ್ಲೆಗಳ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಬೆಂಗಳೂರು ʼಕೌಶಲ್ಯ ಶೃಂಗಸಭೆ-2025ʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

- Advertisement -

ಬೆಂಗಳೂರಿನ ಲಲಿತ್ ಅಶೋಕ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಮೂರು‌ ದಿನಗಳ ಕೌಶಲ್ಯ ಶೃಂಗಸಭೆ-2025ರಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ್ ಆರ್ ಪಾಟೀಲ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...
WhatsApp Image 2025 11 06 at 8.31.34 PM

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿರುವ ವಿವಿಧ ಅಂಗ ಸಂಸ್ಥೆಗಳಿಗೆ ನೀಡುವ ಕೌಶಲ್ಯ ಶೃಂಗ ಸಭೆ 2025ರ ಪ್ರಶಸ್ತಿಯಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಾವಿಕೆರೆ ಗ್ರಾಮ ಪಂಚಾಯತಿಯ ʼಸ್ಫೂರ್ತಿ ಸಂಜೀವಿನಿʼ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ʼಹಿರಿಹೊನ್ನಪ್ಪ ವಿಕಾಸ ಮಹಿಳಾ ಸ್ವ ಸಹಾಯ ಸಂಘʼ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಳ್ತಮಜಲಿನ ಆಶೀರ್ವಾದ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ʼಶ್ರೀ ಸಿದ್ದಿವಿನಾಯಕ ಮಹಿಳಾ ಸ್ವ-ಸಹಾಯ ಸಂಘʼ, ಕಲಬುರಗಿಯ ಅಳಂದ ತಾಲ್ಲೂಕಿನ ಗುಂಜ ಬಬಲಾದ ಗ್ರಾ ಪಂಚಾಯತಿಯ ಗಂಗಾ ಪರಮೇಶ್ವರಿ ಒಕ್ಕೂಟದ ʼಚೆನ್ನಮ್ಮ ಸ್ವ ಸಹಾಯ ಸಂಘʼ, ಚಿತ್ರದುರ್ಗ ಜಿಲ್ಲೆಯ ಹಿರಯೂರು ತಾಲ್ಲೂಕಿನ‌ ವಿವಿಪುರ ಗ್ರಾಮ ಪಂಚಾಯತಿಯ‌ ಝಾನ್ಸಿ‌ರಾಣಿ‌ ಮಹಿಳಾ ಒಕ್ಕೂಟದ ʼಶ್ರೀರಾಮ ಆತ್ಮ ಮಹಿಳಾ ಆಹಾರ‌ ಭದ್ರತಾ ಗುಂಪುʼ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ನಡವಿ ಗ್ರಾಮ ಪಂಚಾಯತಿಯ ಶ್ರೀ ರಾಮಲಿಂಗೇಶ್ವರಿ ಸಂಜೀವಿನಿ‌ ಮಹಿಳಾ ಒಕ್ಕೂಟದ ʼತಾಯಮ್ಮದೇವಿ ಸ್ವ-ಸಹಾಯ ಗುಂಪುʼ, ಶಿವಮೊಗ್ಗ ಜಿಲ್ಲೆಯ ಮಹಾನಗರ ಪಾಲಿಕೆಯ ಶ್ರೀದುರ್ಗಾ ಪ್ರದೇಶ ಮಟ್ಟದ ಒಕ್ಕೂಟದ ʼದಿವ್ಯಜ್ಯೋತಿ ನಿರಂತರ ಉಳಿತಾಯ ಗುಂಪುʼ, ಬೆಂಗಳೂರು ನಗರ‌ ಜಿಲ್ಲೆಯ ಪಶ್ಚಿಮ‌ ನಗರ ಪಾಲಿಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸರೋಜಿನಿ‌ ನಾಯ್ಡು ಪ್ರದೇಶ ಮಟ್ಟದ ಒಕ್ಕೂಟದ ʼಅನ್ನಪೂರ್ಣೇಶ್ವರಿ ಮಹಿಳಾ ಸ್ವ-ಸಹಾಯ ಸಂಘʼ ಹಾಗೂ ರಾಯಚೂರು‌ ಜಿಲ್ಲೆಯ ರಾಯಚೂರು ಮಹಾನಗರ ಪಾಲಿಕೆಯ ಗಣೇಶ ಪ್ರದೇಶ ಮಟ್ಟದ ಒಕ್ಕೂಟದ ʼಅಕ್ಕ ಮಹಾದೇವಿ ಮಹಿಳಾ ಸ್ವ-ಸಹಾಯ ಸಂಘʼ ಅತ್ಯುತ್ತಮ‌ ಮಹಿಳಾ ಸ್ವ ಸ-ಸಹಾಯ ಸಂಘ ಪ್ರಶಸ್ತಿಗೆ ಭಾಜನವಾಗಿವೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಹರಿಯಾಣದ ‘ಮಹಾ ಮತಗಳ್ಳತನ’ ಮತ್ತು ಚುನಾವಣಾ ಆಯೋಗವೆಂಬ ಮೋದಿ ‘ಪಂಜರದ ಗಿಳಿ’

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ, ಕೆಎಸ್ ಡಿಎ ಅಧ್ಯಕ್ಷ ಡಾ. ಇ ವಿ ರಮಣರೆಡ್ಡಿ, ಸಂಜೀವಿನಿ- ಕೆಎಸ್ ಆರ್ ಎಲ್ ಪಿಎಸ್ ಅಭಿಯಾನ‌ದ ಅಪರ ನಿರ್ದೇಶಕ ಶ್ರೀನಿವಾಸ್ ಎಂ ಹಾಗೂ‌ ಸಮಾರಂಭದಲ್ಲಿ ವಿವಿಧ ಇಲಾಖೆಗಳ ಗಣ್ಯರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಬಿಸಿಯೂಟ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ಬಿಸಿಯೂಟ ನೌಕರರ ವೇತನ ಹೆಚ್ಚಳ, ಉದ್ಯೋಗ ಭದ್ರತೆ, ಆರೋಗ್ಯ ವಿಮೆ ಸೇರಿದಂತೆ...

ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸೆ.29 ಕೊನೆಯ ದಿನ

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಅರ್ಹ...

ಕಲಬುರಗಿ | ವಜ್ರ ಮಹೋತ್ಸವದ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಕಲ್ಯಾಣ ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಲ್ಲಿ ತನ್ನದೇ ಆದ...

ಯಾದಗಿರಿ | ಪ್ರವಾಸೋದ್ಯಮಕ್ಕೆ ಹೊಸ ಒತ್ತು: 21 ತಾಣಗಳ ಅಭಿವೃದ್ಧಿಗೆ ಆದ್ಯತೆ

ಐತಿಹಾಸಿಕ, ನೈಸರ್ಗಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿರುವ ಯಾದಗಿರಿ ಜಿಲ್ಲೆಯ ಪ್ರವಾಸೋದ್ಯಮ...