ಬಿಜೆಪಿ ಬದಲಿಸಿದ್ದ ಪಠ್ಯಗಳನ್ನು ಕಾಂಗ್ರೆಸ್‌ ತೆಗೆಯಬೇಕು: ಕುಂ.ವೀ

Date:

  • ಇಲ್ಲಿಯವರೆಗೆ 16 ಬೆದರಿಕೆ ಪತ್ರ ಬಂದಿವೆ, ಲೇಖಕನಿಗೆ ಬೆದರಿಕೆ ಪತ್ರಗಳು ಪ್ರೇಮಪತ್ರಗಳಂತೆ
  • ಭಾರತೀಯತೆ, ಸಂಸ್ಕೃತಿ ಪಠ್ಯಕ್ರಮ ಎಂದು ಸುನೀಲ್ ಕುಮಾರ್ ಹೇಳಿರುವುದು ಅಪಕ್ವ ಹೇಳಿಕೆ

ಸರ್ಕಾರಗಳು ಬಂದಾಗ ಶಾಲಾ ಪಠ್ಯಗಳು ಬದಲಾಗುತ್ತವೆ, ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆಯಬೇಕು ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯ 500 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದೆ, ಅವರು ರೂಪಿಸಿದ್ದ ಪಠ್ಯದಲ್ಲಿ ಮಕ್ಕಳ ಭವಿಷ್ಯ ಇರಲಿಲ್ಲ, ವೈಚಾರಿಕತೆ ಇರಲಿಲ್ಲ, ಪಠ್ಯ ರಚನೆ ಸಮಿತಿಗೆ ಅಪಕ್ವ ರೋಹಿತ್ ಚಕ್ರತೀರ್ಥ ಅಧ್ಯಕ್ಷನನ್ನಾಗಿ ಮಾಡಿದ್ದು, ನಾಗೇಶ್ ಮಾಡಿದ ಮೊದಲ ತಪ್ಪು ಎಂದು ಕಿಡಿಕಾರಿದರು.

ಹೊಸ ಸರ್ಕಾರ ಬಂದಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಜಾರಿ ಮಾಡಬೇಕು. ಸಾವರ್ಕರ್, ಹೆಡಗೆವಾರ್‌ ಎಂಬ ಹುಸಿ ದೇಶಭಕ್ತರ ಪಠ್ಯವನ್ನು ತೆಗೆಯಬೇಕು. ಯಾವ ಪಠ್ಯವನ್ನು ಬೋಧಿಸಬೇಕೆಂದು ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಭಾರತೀಯತೆ, ಸಂಸ್ಕೃತಿ ಪಠ್ಯಕ್ರಮ ಎಂದು ಸುನೀಲ್ ಕುಮಾರ್ ಹೇಳಿರುವುದು ಅಪಕ್ವ ಹೇಳಿಕೆ. ಭಾರತೀಯತೆ ಎಂದರೆ ಸಮಗ್ರತೆ, ಎಲ್ಲರನ್ನೂ ಒಳಗೊಳ್ಳುವ ಸಮಗ್ರತೆ. ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಪಾರ್ಸಿ ಎಲ್ಲರನ್ನೂ ಒಳಗೊಳ್ಳಬೇಕು, ಆರ್ ಎಸ್ ಎಸ್ ಪ್ರಣೀತ ಭಾರತೀಯತೆಯಲ್ಲ. ಶೇ. 1.5ರಷ್ಟು ಜನರ ಭಾರತೀಯತೆ ಅಲ್ಲ ಎಂದು ತಿರುಗೇಟು ನೀಡಿದರು.

ಈ ಹಿಂದೆ ನಡೆಸಿದ್ದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಗಣತಿ ವರದಿ ಬಹಿರಂಗವಾಗಬೇಕು ಮತ್ತು ಜಾರಿಯಾಗಬೇಕು. ಬ್ರಾಹ್ಮಣ ಸೇರಿದಂತೆ ಎಲ್ಲ ವರ್ಗಗಳಲ್ಲಿ ಯಾರು ಹಿಂದುಳಿದವರೋ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ, ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ ಶಾಸಕರ ಊರಿನಲ್ಲೇ ಇಲ್ಲ ಖಾಯಂ ಶಿಕ್ಷಕರು

ಕಳೆದ 15 ದಿನಗಳ ಹಿಂದೆಯೂ ನನಗೆ ಬೆದರಿಕೆ ಪತ್ರ ಬಂದಿದೆ. ಯಾವ ಲೇಖಕನಿಗೆ ಹೆಚ್ಚು ಬೆದರಿಕೆ ಪತ್ರ ಬರುವುದೋ ಆತನೇ ನಿಜವಾದ ಲೇಖಕ. ಲೇಖಕನಿಗೆ ಬೆದರಿಕೆ ಪತ್ರಗಳು ಪ್ರೇಮಪತ್ರಗಳು ಇದ್ದಂತೆ ಎಂದುಕೊಂಡಿದ್ದೇನೆ, ಮೋದಿಯನ್ನು ಅವಹೇಳನ ಮಾಡುತ್ತೀರಿ, ಮುಸ್ಲಿಮರನ್ನು ಒಲೈಸುತ್ತೀರಿ ಎಂದು ಬೆದರಿಕೆ ಪತ್ರಗಳು ಬರುತ್ತಿದ್ದು, ಒಟ್ಟು ನನಗೆ 16 ಪತ್ರಗಳು ಬಂದಿದೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸಂಬಂಧ ಮಾತನಾಡಿ, ಗ್ಯಾರಂಟಿ ಯೋಜನೆಗಳು ಬಡವರ ಪರವಾದ ಯೋಜನೆಗಳು, ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟರೇ ಇವರಪ್ಪನ ಗಂಟು ಹೋಗೋದೇನೂ..? ಬಿಜೆಪಿ ಅವರು ಲೋಕಸಭೆಯಲ್ಲಿ ಗೆಲ್ಲಬೇಕಾದರೆ ಗ್ಯಾರಂಟಿ ಯೋಜನೆ ಬೆಂಬಲಿಸಬೇಕು ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಂದಾಯ ಕರ್ಮಕಾಂಡ -3 | ಲಂಚವಿಲ್ಲದೆ ಈ ಇಲಾಖೆಯಲ್ಲಿ ಒಂದು ಕಡತವೂ ಚಲಿಸುವುದಿಲ್ಲ!

'ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಉನ್ನತ ಶ್ರೇಣಿಯಿಂದ ಕೆಳಹಂತದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ....

ದಕ್ಷಿಣ ಕನ್ನಡ | ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಡಿವೈಎಫ್ಐ ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬೋಳಾರ...

ಬೆಳಗಾವಿ | ಹಿಡಕಲ್ ಡ್ಯಾಂನಿಂದ ನೀರು ಹರಿಸುವಂತೆ ರೈತರ ಪ್ರತಿಭಟನೆ

ಹಿಡಕಲ್‌ ಜಲಾಶಯದಿಂದ ಘಟಪ್ರಭಾ ಎಡದಂಡೆ ನಾಲೆಯ ರೈತರಿಗೆ ನೀರುಹರಿಸುವಂತೆ ಕೋರಿ ಚಿಕ್ಕೋಡಿ-ಮಿರಜ್‌...

ಗದಗ | ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗಿಲ್ಲ ಬೋಧಕರು; ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು 380...