ತುಮಕೂರು | ನಮ್ಮ ಹಟ್ಟಿಯಲ್ಲೊಂದು ಹೋರಾಟದ ಬೆಳಕು : ನಟರಾಜ್ ಬೂದಾಳ್

Date:

‘ನಮ್ಮ ಹಟ್ಟಿ’ ಒಬ್ಬರ ಕಥೆಯಲ್ಲ. ಇದು ಇಡೀ ಹಟ್ಟಿಯ ಆಟೋಬಯಾಗ್ರಫಿ. ಇದು ಆತ್ಮಕಥೆ ಅಲ್ಲ. ಯಾಕೆಂದ್ರೆ ಆತ್ಮ ಮತ್ತು ಕಥೆ ಎಂಬ ಎರಡು ಪದಗಳು ಭಾರತವನ್ನೇ ಬರ್ಬಾದ್ ಮಾಡಿಬಿಟ್ಟಿವೆ. ಹಾಗಾಗಿ ಕನ್ನಡದಲ್ಲಿ ಆಟೋಬಯಾಗ್ರಫಿಗೆ ಸಮಾನವಾದ ಬೇರೆ ಪದ ಹುಡುಕಿಕೊಳ್ಳಬೇಕು. ಅಲ್ಲಿಯವರೆಗೂ ಆಟೋಬಯಾಗ್ರಫಿ ಅನ್ನುವ ಪದವೇ ಬಳಸಿಕೊಳ್ಳೋಣ. ಯಾವ ಕಾರಣಕ್ಕೂ ಈ ಆತ್ಮವೂ ಬೇಡ, ಈ ಕಥೆಯೂ ಬೇಡ. ಯಾಕೆ ಅಂದರೆ, ಇಡೀ ಭಾರತದ ಬದುಕನ್ನು ನಿಯಂತ್ರಿಸಲಿಕ್ಕೆ ಒಂದಷ್ಟು ಪುಡಿ ಕಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಅದು ನಾವು ಯಾವುದೋ ಒಂದು ಕೃತಿಯನ್ನು ಆರೋಪಿಸಿ ಮನುಸ್ಮೃತಿಯನ್ನು ಕುರಿತು ಆರೋಪಿಸಿ ಮಾತನಾಡುವುದು ಬಹಳಷ್ಟು ಕೇಳಿದ್ದೇವೆ. ಆದರೆ ಮನುಸ್ಮೃತಿಗಿಂತ ಘೋರವಾದ ಇನ್ನೊಂದು ಪುಸ್ತಕ ನಮ್ಮ ಮನೋಸ್ಮೃತಿ. ನಮ್ಮ ಮನೋಸ್ಮೃತಿಯ ಮೂಲೆಯಲ್ಲಿರುವ ಈ ಕೇಡಿನ ಕತ್ತಲು ಇದೆಯಲ್ಲ, ಈ ಕತ್ತಲನ್ನು ಹಚ್ಚಿಡಲಿಕ್ಕೆ ಈ ಪುಸ್ತಕ ಸಹಕಾರಿಯಾಗಿದೆ ಎಂದು ವಿಮರ್ಶಕ ನಟರಾಜ್ ಬೂದಾಳ್ ಹೇಳಿದರು.

- Advertisement -

ಪ್ರತಿಪದ ಪ್ರಕಾಶನದ ವತಿಯಿಂದ ಜನಪರ ಚಿಂತಕ ಕೆ.ದೊರೈರಾಜ್ ಅವರ ‘ನಮ್ಮ ಹಟ್ಟಿ’ ಒಂದು ಹಟ್ಟಿಯ ಆತ್ಮಕಥಾನಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಪುಸ್ತಕ ಕುರಿತು ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಜಾತಿ ಒಂದು ಭ್ರಮಾತ್ಮಕವಾದ ಕಲ್ಪನೆ. ಆದರೆ ಗಂಭೀರವಾದ ವಾಸ್ತವವನ್ನು ಉಂಟು ಮಾಡುತ್ತದೆ. ನಮ್ಮ ಹಟ್ಟಿ ಕೃತಿ ಒಂದು ರೀತಿಯಲ್ಲಿ ಎಲ್ಲರ ಕಥೆ. ಈ ಎಲ್ಲರ ಕಥೆಯನ್ನು ಮುಂದಿನ ಪೀಳಿಗೆಯ ಮಕ್ಕಳು ಬಿಡುಗಡೆ ಮಾಡಿದ್ದು ಬಹಳ ಸಾಂಕೇತಿಕವಾಗಿತ್ತು ಮತ್ತು ಸರಿಯಾದದ್ದು ಎಂದು ಹೇಳಿದರು.

ಕತ್ತಲನ್ನು ನಿಭಾಯಿಸಲು, ನಿರ್ವಹಿಸಲು ಇಂಥಾದ್ದೊAದು ಪುಸ್ತಕ ಅಗತ್ಯವಿದೆ. ನಮ್ಮ ಈವರೆಗಿನ ಅಕ್ಷರ ಮತ್ತು ಅಕ್ಷರಗಳನ್ನು ಬಳಸಿ ನಡೆಸೋ ಓದಿನ ಹತಾರಗಳಿವೆಯಲ್ಲ, ಆ ಹತಾರಗಳನ್ನು ಬಳಸಿ ಈ ಪುಸ್ತಕವನ್ನು ಓದುವುದು ಕಷ್ಟ. ಸಾಧ್ಯವಿಲ್ಲ ಅನ್ನಿಸುತ್ತದೆ. ಯಾಕೆ ಅಂದ್ರೆ ಅದೇ ಅಕ್ಷರ ಅಲ್ಲವೇ? ಅದೇ ಪುಸ್ತಕ, ಅದೇ ಭಾಷೆಯಲ್ಲಿ ಬಂದಿರೋ ಪುಸ್ತಕ ಓದೋಕೆ ಯಾಕೆ ಆಗಲ್ಲ ಅಂದ್ರೆ, ಇದರ ಅನುಭವ ಲೋಕ ಇದೆಯಲ್ಲ, ಅದನ್ನು ದಕ್ಕಿಸಿಕೊಳ್ಳದವರಿಗೆ ಈ ಪುಸ್ತಕದ ದನಿ ಮತ್ತು ಅದರ ಅಂತರಂಗ ಅರಿಯುವುದು ತುಂಬಾ ಕಷ್ಟ ಎಂದರು.

1002535521

ಈ ಪುಸ್ತಕ ಓದಿ ಮಾತನಾಡುವ ಮೊದಲು ಒಂದು ಸಣ್ಣ ಕೇವಿಯಟ್ ಹಾಕುತ್ತೇನೆ. ಈ ಪುಸ್ತಕ ನನಗೆ ದಕ್ಕಿದ್ದು ಹಿಂಗೆ ಎಂದು ಮಾತ್ರ ಹೇಳುವವನು ನಾನು. ಬುದ್ದನ ಬಗ್ಗೆ, ಬುದ್ದನ ತಾತ್ವಿಕತೆ ಬಗ್ಗೆ ಯಾರಾದ್ರೂ ಮಾತಾಡಲಿಕ್ಕೆ, ಬರೆಯಲಿಕ್ಕೆ ಹೋದ್ರೆ ಅವರಿಗೊಂದು ಕಂಡಿಷನ್. ಅದು ಏನು ಅಂದ್ರೆ ಬುದ್ದ ಹೇಳಿದ್ದೇನು? ಎಂದು ಹೇಳಬೇಡಿ, ಬುದ್ದ ಹೇಳಿದ್ದನ್ನು ನಾನು ಹೆಂಗೆ ಕೇಳಿಸ್ಕಂಡೆ ಮಾತ್ರ ಹೇಳಿ. ಯಾರು ಅಲ್ಲಿರುವ ಹಾಗೆ ನೋಡುವುದಿಲ್ಲ. ಕೇಳಿದ್ದನ್ನೇ ಕೇಳಿಸಿಕೊಳ್ಳುವುದಿಲ್ಲ. ಹಾಗಾಗಿ ಈ ಲೋಕವನ್ನು ಹೇಗಿದೆಯೋ ಹಾಗೆ ನೋಡಲಿಕ್ಕೆ ಆಗುವುದಿಲ್ಲ. ಆದರೆ ಬುದ್ದಿನಿಗೆ ಮಾತ್ರ ಲೋಕ ಇರುವ ಹಾಗೆಯೇ ನೋಡಲು ಸಾಧ್ಯವಾಯಿತು. ಇನ್ನಾರಿಗೂ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಈ ಪುಸ್ತಕದಲ್ಲಿ ಆ ಹಟ್ಟಿಯನ್ನು ಅಲ್ಲಿ ಇರುವ ಹಾಗೆಯೇ ನೋಡಲಾಗಿದೆ. ನನಗೆ ಈ ಪುಸ್ತಕದ ಉದ್ದಕ್ಕೂ ಅದೇ ಕಾಣಿಸಿದ್ದು, ಈ ಹಟ್ಟಿಯಲ್ಲಿ ಇಂಥದ್ದೊಂದು ಬೆಳಕು ಹುಟ್ಟಿತ್ತಲ್ಲ. ಅದು ದೊರೈರಾಜ್ ಹಚ್ಚಿದ ಬೆಳಕಲ್ಲ. ಅದು ಒಂದು ವಿವೇಕ. ಈ ಹಟ್ಟಿಯ ಬಹಳ ಮುಖ್ಯವಾದ ಲಕ್ಷಣಗಳನ್ನು ಈ ಪುಸ್ತಕದ ಉದ್ದಕ್ಕೂ ಪಟ್ಟಿ ಮಾಡುತ್ತದೆ. ಅದೇನು ಅಂದರೆ, ಈ ಹಟ್ಟಿಯ ಜನ ಬೇರೆ ಯಾರನ್ನೂ ಎಂದು ಅಪಮಾನಿಸಿದವರಲ್ಲ, ಎಂದೂ ಯಾರ ಬದುಕನ್ನು ಕಿತ್ತುಕೊಂಡು ಬಾಳಿದವರಲ್ಲ. ಎಂದೂ ಯಾರನ್ನೂ ತುಳಿದವರಲ್ಲ. ಎಂದೂ ಯಾರನ್ನೂ ಹೊರಗೆ ನಿಲ್ಲಿಸಿದವರಲ್ಲ, ತಮ್ಮದಲ್ಲದ್ದನ್ನು ಪಡೆದುಕೊಂಡವರಲ್ಲ. ಕಷ್ಟಪಟ್ಟು ದುಡಿದವರು. ಒಂದೇ ಹೊತ್ತು ತಿಂದು ಮಲಗಿದವರು. ಯಾರನ್ನೂ ನೋಯಿಸಿದವರಲ್ಲ. ಈ ದೇಶದಲ್ಲಿ ಇಷ್ಟೊಂದು ಸಂಕಟ, ಇಷ್ಟೊಂದು ಅಪಮಾನ, ಇಷ್ಟೊಂದು ಅಸ್ಪೃಶ್ಯತೆ ಇಷ್ಟೊಂದೆಲ್ಲ ಕೇಳಿದರಲ್ಲ ಹೇಗೆ ಸಾಧ್ಯ? ಗಾಂಧೀಜಿ ಬಂದಿದ್ದರು ಹಟ್ಟಿಗೆ. ಇದು ಕೂಡ ತುಮಕೂರಿನ ಮನೋಸ್ಮೃತಿಯಲ್ಲಿ ಉಳಿದಿಲ್ಲ. ಜಯಸಿಂಹರಾವ್ ಒಬ್ಬರಿದ್ದರು. ಅವರ ಎರಡು ದಿನಕ್ಕೊಮ್ಮೆ ಹಟ್ಟಿಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಅವರೊಬ್ಬ ದೊಡ್ಡ ಮನುಷ್ಯರು. ಇದು ಈ ಪುಸ್ತಕದಲ್ಲಿ ದಾಖಲಾಗಿದೆ.

ಈ ದೇಶದಲ್ಲಿ ಎಥೇಚ್ಚವಾದ ಅಸಮಾನತೆ, ಅಸ್ಪೃಶ್ಯತೆ, ಲಿಂಗತಾರತಮ್ಯ ಎಲ್ಲವೂ ಇದೆ. ಹೊರಗೆ ನಿಲ್ಲಿಸುವಿಕೆ ಇದೆಯಲ್ಲ, ಅದು ತುಂಬಿ ಹೋಗಿದೆ. ವೈದಿಕ ಆವರಣವನ್ನು ಬಿಟ್ಟರೆ, ಉಳಿದವರೆಲ್ಲರೂ ಒಂದಲ್ಲ, ಒಂದು ರೀತಿಯಲ್ಲಿ ಹೊರಗೆ ನಿಲ್ಲಿಸಲ್ಪಟ್ಟವರು. ಇಡಿಯಾಗಿ ಹೆಣ್ಣು ಮಕ್ಕಳು ಅಸಮಾನತೆಯ ಕಾರಣಕ್ಕೋ ಹೊರಗೆ ನಿಲ್ಲಿಸಲ್ಪಟ್ಟವರು. ಬೇರೆ ಬೇರೆ ಜಾತಿಯ ಜನ, ಬೇರೆ ಬೇರೆಯ ಆವರಣದಲ್ಲಿ ಹೊರಗೆ ನಿಲ್ಲಿಸಲ್ಪಟ್ಟವರು. ಈ ಕ್ರಿಯೆ ಅಷ್ಟೊಂದು ಮುಖ್ಯ ಅಂದರೆ, ಇಡಿಯ ಹಟ್ಟಿಯೇ ಹಾಗೆ ಇದೆ.

ಕಾಲೋನಿ ಎಂಬ ಪದವನ್ನು ತುಂಬ ಸರಳವಾಗಿ ಬಳಸುತ್ತೇವೆ. ಆದರೆ ಅದು ಅಷ್ಟು ಸರಳವಾದ ಪದವಲ್ಲ. ನಮ್ಮ ಹಟ್ಟಿ ಮಾತ್ರ ಕಾಲೋನಿ ಅಂತ ಭಾವಿಸಬೇಕಾಗಿಲ್ಲ. ಈ ಕಾಲೋನಿ ಕಲೋನೈಜೇಷನ್,. ನಾವು ಸಮಾನವಾಗಿ ಬದುಕಲಿಕ್ಕೆ ಬಿಡುವಂತಹದ್ದಲ್ಲ ಈ ಕಾಲೋನಿ. ಬ್ರಿಟೀಷರಿಗೆ ಇಡೀ ಭಾರತವೇ ಕಾಲೋನಿಯಾಗಿತ್ತು. ತುಮಕೂರಿಗೆ ನಮ್ಮ ಹಟ್ಟಿ ಕಾಲೋನಿ, ಇಡೀ ಮಹಿಳೆಯರು ಗಂಡಸರಿಗೆ ಕಾಲೋನಿ. ಈ ಕಾಲೋನಿಯ ಪ್ರಕ್ರಿಯೆ ಜಗತ್ತಿನ ಎಲ್ಲಾ ಪ್ರದೇಶಗಳಲ್ಲೂ ಇದೆ. ಅಸ್ಪೃಶ್ಯತೆ ಕಾಲೋನಿಯ ಪ್ರತೀಕ. ಈ ಕಾಲೋನಿ ಅನ್ನುವುದ ದೇಶದ 70ರಷ್ಟು ಭಾಗಕ್ಕೆ ಅನ್ವಯಿಸುತ್ತದೆ. ಶೂದ್ರ, ದಲಿತ, ಮಹಿಳೆಯರೆಲ್ಲರೂ ಕಾಲೋನೈಜ್ಡ್ ಆದವರು. ಕಾಲೋನಿ ಆದವರು. ನಮ್ಮನ್ನು ಆಳುತ್ತಿರುವ ಕಾಲೋನಿಯ ಯಜಮಾನರು ಇದ್ದಾರಲ್ಲ, ಅವರನ್ನು ನಾವು ಸರಿಯಾಗಿ ಗುರುತಿಸಿಕೊಳ್ಳದೇ ಹೋದರೆ, ಅಸಮಾನತೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ.

ವಿಶ್ವದಲ್ಲಿ ಹೊಸ ಜನರೇಷನ್ ಬರುತ್ತಿದೆ. ಝನ್ ಜಿ. ಮುಂದಿನ ಜನರೇಷನ್ ಬಗ್ಗೆ ಎಷ್ಟೇ ತಕರಾರುಗಳಿದ್ದರು ಹೊಸ ಜನರೇಷನ್ ಧರ್ಮದ ಬಗ್ಗೆ ತೋರಿಸುತ್ತಿರುವ ತಿರಸ್ಕಾರ ಇದೆಯಲ್ಲ, ಅದು ದೊಡ್ಡ ಆಶಾಕಿರಣವಾಗಿ ಕಂಡು ಬರುತ್ತಿದೆ. ನಾನು ನಾನ್ ರಿಲೀಜಿಯನ್ ಆಗಿ ಬದುಕತ್ತೇನೆ ಎಂದು ಡಿಕ್ಲೇರ್ ಮಾಡಿಕೊಳ್ಳುವುದು ಉತ್ತಮವಾದ ಬೆಳವಣಿಗೆ ಎಂದರು

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...

ಮಂಗಳೂರು | ಎಸ್‌ಐಆರ್ ಪ್ರಕ್ರಿಯೆ ನಿಲ್ಲಿಸಿ, ಚುನಾವಣಾ ಆಯೋಗದ ಕಾರ್ಯ ತನಿಖೆಗೊಳಪಡಿಸಿ: ಪ್ರಕಾಶ್ ರಾಜ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು...

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಅಧಿಸೂಚನೆ ಪ್ರಕಟ, ಅಕ್ಟೊಬರ್ 23ಕ್ಕೆ ಮತದಾನ

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸೆ.29ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬೆಳಗಾವಿ...

ವಿಜಯಪುರ | ಹಿಂದಿ ಭಾಷೆ-ಸಾಹಿತ್ಯದ ವಿವಿಧ ಆಯಾಮಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ...