ವಿಜಯಪುರ | NH-50 ದುರಸ್ಥಿಗೆ ಆಗ್ರಹಿಸಿ ಸುನೀಲಗೌಡ ಪತ್ರ; ಸಚಿವ ನಿತಿನ್‌ ಗಡ್ಕರಿ ಸ್ಪಂದನೆ

Date:

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ವಿಜಯಪುರ- ಚಿತ್ರದುರ್ಗ ಮತ್ತು ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ-50 ರ ದುರಸ್ಥಿಗೆ ಆಗ್ರಹಿಸಿ ಬರೆದ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಂದಿಸಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖಿತವಾಗಿ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ.

- Advertisement -

ಶಾಸಕ ಸುನೀಲಗೌಡ ಪಾಟೀಲ ಅವರು ಕಳೆದ ನವೆಂಬರ್‌ 24ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರದ ಸೋಲಾಪುರದಿಂದ ಪ್ರಾರಂಭವಾಗಿ ರಾಜ್ಯದ ವಿಜಯಪುರ ಮೂಲಕ ಚಿತ್ರದುರ್ಗ ಮೂಲಕ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ- 50 ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಆಂತಾರಾಜ್ಯ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿರುವ ಈ ರಸ್ತೆ ಹದಗೆಟ್ಟಿದೆ. ವಿಜಯಪುರದಿಂದ ಚಿತ್ರದುರ್ಗದವರೆಗೆ ರಸ್ತೆಯ ಮೇಲ್ಪದರು ಕಿತ್ತು ಹೋಗಿದೆ. ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯೂ ಬಹುತೇಕ ಹಾಳಾಗಿದೆ. ಈ ಎರಡೂ ಮಾರ್ಗಗಳಲ್ಲಿ ರಸ್ತೆ ಮಧ್ಯದಲ್ಲಿ ಕುಣಿಗಳು ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ವಾಹನಗಳ ಸಂಚಾರ ನಿಧಾನವಾಗಿದ್ದು, ದಿನನಿತ್ಯ ಸಂಚಾರಕ್ಕೆ ಸಾರ್ವಜನಿಕರಿಗೆ ಅಪಾಯ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಎಐ ಯುಗದಲ್ಲಿ ನಿಜವಾದ ಬರಹಕ್ಕೆ ಎಲ್ಲಿದೆ ಸ್ಥಾನ?

ಎಐಯಿಂದ ಬರಹಗಾರರ ಸ್ಥಾನ ಉಳಿಯುತ್ತದೆಯೇ? ಎಂಬುದಲ್ಲ. ಬದಲಾಗಿ, ಎಐಯ ನೆರವಿನ ನಡುವೆಯೂ ತನ್ನದೇ ಧ್ವನಿಯನ್ನು ಕಾಪಾಡಿಕೊಂಡು, ಸ್ವತಂತ್ರವಾಗಿ ಯೋಚಿಸಿ, ಬದುಕಿನ ನೈಜ ಅನುಭವಗಳನ್ನು ಪ್ರಾಮಾಣಿಕವಾಗಿ ದಾಖಲಿಸುವ ಬರಹಗಾರರು ಎಷ್ಟು ಮುಖ್ಯರಾಗುತ್ತಾರೆ ಎಂಬುದಾಗಿದೆ. ತಂತ್ರಜ್ಞಾನ...

ಹಿಂದೂ ಕೋಡ್ ಬಿಲ್ ಹೋರಾಟಕ್ಕೆ 75 ವರ್ಷ: ಸಮಾನತೆಯ...

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಹಿಂದೂ ಕೋಡ್ ಬಿಲ್ ಕೇವಲ ಮಹಿಳಾ ಹಕ್ಕುಗಳ ಮಸೂದೆಯಾಗಿರಲಿಲ್ಲ; ಅದು ಶತಮಾನಗಳಿಂದ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಬಲ ಅಸ್ತ್ರವೂ ಆಗಿತ್ತು. ಜಾತಿ ವ್ಯವಸ್ಥೆಯು ಜೀವಂತವಾಗಿರುವುದೇ 'ಸಜಾತೀಯ...

UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್...

ಡಿಜಿಟಲ್ ಭಾರತವೆಂದರೆ ಕೇವಲ ಮೊಬೈಲ್‌ನಲ್ಲಿ ಕಾಣಿಸುವ QR ಕೋಡ್ ಅಲ್ಲ; ಬದಲಿಗೆ ಅದು ಕೋಟ್ಯಂತರ ಜನರ ಬದುಕು. ಆ ಬದುಕಿನ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ನಿಜವಾದ ಜವಾಬ್ದಾರಿ. ಒಂದು...

ಭಾರಿ ಸಾರಿಗೆ ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುವುದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ. ಅತೀ ಹೆಚ್ಚು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಮಾರ್ಗವೂ ಒಂದಾಗಿದೆ. ಪ್ರತಿನಿತ್ಯ ಈ ಎರಡೂ ಮಾರ್ಗಗಳಲ್ಲಿ ಸುಮಾರು 27 ಸಾವಿರ ಪಿಸಿಯುನಷ್ಟು ವಾಹನಗಳು ಸಂಚರಿಸುತ್ತವೆ. ದಿನೇ ದಿನೇ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ವಿಜಯಪುರದಿಂದ ಬೆಂಗಳೂರು ಮಾರ್ಗದಲ್ಲಿ ಹುನಗುಂದ, ಕುಷ್ಟಗಿ ಹಾಗೂ ಹೊಸಪೇಟೆಗಳಿಗೆ ಬೇರೆ ಹೆದ್ದಾರಿಗಳು ಸಂಪರ್ಕಿಸುವುದರಿಂದ ಆ ಮಾರ್ಗದ ವಾಹನಗಳೂ ಇದೇ ರಸ್ತೆಗೆ ಸೇರಿ ವಾಹನ ದಟ್ಟಣೆ ಇನ್ನೂ ಹೆಚ್ಚಾಗುತ್ತಿದೆ ಎಂದು ಅವರು ಎಳೆಎಳೆಯಾಗಿ ಅಂಕಿ-ಅಂಶ ಸಮೇತ ಪತ್ರದಲ್ಲಿ ಪ್ರಸ್ತಾಪಿಸಿದ್ದರು.

ಅತೀ ಹೆಚ್ಚು ಟೋಲ್ ಸಂಗ್ರಹವಾಗುವ ಮಾರ್ಗಗಳಲ್ಲಿ ಇದೂ ಒಂದಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಪ್ರತಿದಿನ ಸರಾಸರಿ ಸುಮಾರು ರೂ. 30 ಲಕ್ಷ ಟೋಲ್ ಸಂಗ್ರಹಿಸಲಾಗುತ್ತಿದೆ. ಇಷ್ಟೋಂದು ಟೋಲ್ ಹಣ ಸಂಗ್ರಹವಾಗುತ್ತಿದ್ದರೂ ರಸ್ತೆ ಮಾತ್ರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾನದಂಡಕ್ಕೆ ಅನುಗುಣವಾಗಿರದೇ ಕಳಪೆಯಾಗಿದೆ. ಆದ್ದರಿಂದ ಈ ರಸ್ತೆಯನ್ನು ನಿರ್ದಿಷ್ಠ ಮಾನದಂಡಗಳಿಗೆ ಅನುಗುಣವಾಗಿ ದುರಸ್ತಿ ಮಾಡಿ ಮೂಲಭೂತ ಸೌಲಭ್ಯ ಒದಗಿಸಬೇಕು. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ ಹೆದ್ದಾರಿಯಲ್ಲಿ ಹೊಸದಾಗಿ ಮೇಲ್ಪದರು ಹಾಕಬೇಕು. ಅಗತ್ಯವಿರುವ ಕಡೆ ಹೆದ್ದಾರಿಯನ್ನು ಅಗಲೀಕರಣ ಮಾಡಬೇಕು ಎಂದು ಶಾಸಕರು ತಮ್ಮ ಪತ್ರದಲ್ಲಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ವಿಜಯಪುರ | 112 ನಗರ ಸಾರಿಗೆ ವಾಹನಗಳಿಗೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಅಲ್ಲದೇ, ಕೇಂದ್ರ ಸಚಿವರು ಮುತುವರ್ಜಿ ವಹಿಸಿದರೆ ಈ ರಸ್ತೆ ದುರಸ್ಥಿಯಾಗಿ ಮಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಿಗೆ ಸಂಚಾರಕ್ಕೆ ಅನುಕೂಲ ಒದಗಿಸಬೇಕು. ಇದರಿಂದ ಈ ಮಾರ್ಗದಲ್ಲಿ ಬರುವ ಬಹಳಷ್ಟು ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಕೂಡಲೇ ಈ ನಟ್ಟಿನಲ್ಲಿ ಕ್ರಮ ಕೈಗೊಳ್ಳೇಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.

ಇದೀಗ ಕೇಂದ್ರ ಹೆದ್ದಾರಿ ಸಚಿವ ಪತ್ರದ ಮೂಲಕ ಸ್ಪಂದಿಸಿದ್ದು, ರಸ್ತೆ ದುರಸ್ತಿ ಕಾರ್ಯಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರೌಂಡ್ ರಿಪೋರ್ಟ್ | ಪೊಲೀಸ್ ಸೂಚನೆ ಸುತ್ತ ವಿವಾದ: ಶಾಂತಿ ಕಾಪಾಡುವ ಕರ್ತವ್ಯಕ್ಕೆ ರಾಜಕೀಯ ಬಣ್ಣ ಬೇಡವೆಂದ ಸ್ಥಳೀಯರು

ಗೌರಿ-ಗಣೇಶ ಹಬ್ಬದ ಅಂಗವಾಗಿ ನಡೆಯುವ ಮೆರವಣಿಗೆ ಹಾಗೂ ಶೋಭಾಯಾತ್ರೆಗಳ ಸಂದರ್ಭದಲ್ಲಿ ಕಾನೂನು...

ಬೆಂಗಳೂರು | ʼನಿನ್ನನ್ನು ಪಾಕಿಸ್ತಾನಕ್ಕೆ ಕಣ್ಮರೆ ಮಾಡುವೆನುʼ: ಮಹಿಳೆಗೆ ಕಿರುಕುಳ, ಎಫ್‌ಐಆರ್

ಬೆಂಗಳೂರು ಮಹಿಳೆಗೆ ಆಕಸ್ಮಿಕವಾಗಿ ಪರಿಚಯವಾದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ʼಸ್ನೇಹವನ್ನು ಮುರಿದರೆ...

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು: ರೈತರ ಸಮಸ್ಯೆಗಳಿಗೆ ಧ್ವನಿ ಯಾರು?

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ...

ತೆರಿಗೆ ವಂಚನೆ ಪ್ರಕರಣ ಮುಚ್ಚಿಹಾಕಲು ಲಂಚ: ಜಿಎಸ್‌ಟಿ ಅಧಿಕಾರಿ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಪೊಲೀಸರು, ಬೆಂಗಳೂರಿನ ಕೋರಮಂಗಲದಲ್ಲಿ ಕೇಂದ್ರ ಜಿಎಸ್‌ಟಿ ಇಲಾಖೆಯ ಸೂಪರಿಂಟೆಂಡೆಂಟ್ ಮತ್ತು...