ತುಮಕೂರು | ಬಡವರ ಅಭ್ಯುದಯ ಸಿದ್ದರಾಮಯ್ಯನವರ ಆಶಯ: ಸಚಿವ ಕೆ ಎನ್ ರಾಜಣ್ಣ

Date:

ಬಡವರ ಅಭ್ಯುದಯ ಆಗಬೇಕೆಂಬುದು ಸಿದ್ದರಾಮಯ್ಯ ಅವರ ಆಶಯ. ಅವರ ಅನ್ನಭಾಗ್ಯ ಯೋಜನೆ ಜನರಿಗೆ ಬದುಕು ನೀಡಿದೆ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಇಂಥವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅಭಿಪ್ರಾಯ ಪಟ್ಟರು.

- Advertisement -

ತುಮಕೂರು ಜಿಲ್ಲೆ ಮಧುಗಿರಿಯ ಕುರುಬರ ಸಮುದಾಯ ಭವನದಲ್ಲಿ ‘ಕನಕ ನೌಕರರ ಸಂಘʼದ ವತಿಯಿಂದ ಭಾನುವಾರ ಏರ್ಪಡಿಸಿಸಿದ್ದ ‘ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ...

ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ. ಬಸವಣ್ಣನವರನ್ನು ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವುದಾಗಲಿ, ಗಾಂಧಿಯವರ ಹತ್ಯೆಯನ್ನು ಗೋಡ್ಸೆಯ ಸಮರ್ಥನೆಯ ಮೂಲಕ ನ್ಯಾಯೀಕರಿಸುವುದಾಗಲಿ ಇತಿಹಾಸದ ಸಮಗ್ರ ಅಧ್ಯಯನಕ್ಕೆ...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ...

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

“ಪ್ರಸ್ತುತದಲ್ಲಿ ಯಾವುದೇ ಭಿಕ್ಷುಕರೂ ಅನ್ನ ಬೇಡುತ್ತಿಲ್ಲ. ಅದಕ್ಕೆ ಕಾರಣ ಅನ್ನಭಾಗ್ಯ. ಬಡವರ ಕಾರ್ಯಕ್ರಮಗಳನ್ನು ತೆಗೆದುಕೊಂಡು ಹೋದರೆ ಸಿದ್ದರಾಮಯ್ಯ ಮೊದಲ ಆದ್ಯತೆ ನೀಡುತ್ತಾರೆ. ಅವರು ಎಂದಿಗೂ ನುಡಿದಂತೆ ನಡೆಯುವವರು. ಅವರು ಸುಳ್ಳು ಹೇಳುವವರಲ್ಲ. ಯಾರ ಬಗ್ಗೆಯೂ ಹೇಳಿಕೆ ಮಾತು ಕೇಳುವವರಲ್ಲ. ಎಲ್ಲರನ್ನೂ ಸಮಾನವಾಗಿ ಕೊಂಡೊಯ್ಯುತ್ತಾರೆ. ಆದ್ದರಿಂದ ನಮಗೆಲ್ಲ ಅವರು ಅಚ್ಚುಮೆಚ್ಚು” ಎಂದು ಹೇಳಿದರು.

“ಹೆಣ್ಣು-ಗಂಡು ಇಬ್ಬರಲ್ಲೂ ಸಮಾನವಾದ ಬುದ್ಧಿಶಕ್ತಿ ಇರುತ್ತದೆ. ಸೂಕ್ತ ಪರಿಸರ ಮತ್ತು ಮಾರ್ಗದರ್ಶನ ಇದ್ದಾಗ ಸಾಧನೆ ಮಾಡಲು ಸಾಧ್ಯ. ವಿದ್ಯೆಗೆ ಸರ್ವಸ್ವವನ್ನೂ ಗಳಿಸುವ ಶಕ್ತಿ ಇದೆ. ಯಾವುದೇ ಮಕ್ಕಳಲ್ಲೂ ಕೀಳರಿಮೆಯನ್ನು ಬೆಳೆಸಬಾರದು. ಇಬ್ಬರನ್ನೂ ಸಮಾನವಾಗಿ ಕಾಣುವುದರಿಂದ ಗುರಿ ಸಾಧಿಸಲು ಸಾಧ್ಯವಾಗುತ್ತದೆ” ಎಂದರು.

“1957ರಲ್ಲಿ ಶುಲ್ಕ ಪಾವತಿಸದ ಕಾರಣಕ್ಕೆ ಶಾಲೆಯಲ್ಲಿ ನನ್ನ ಸಹಪಾಠಿಯನ್ನು ಆಚೆಗೆ ಹಾಕಿದ್ದರು. ಅಸಹಾಯಕರಿಗೆ ನೆರವಾಗಬೇಕೆಂದು ಅಂದೇ ತೀರ್ಮಾನ ಮಾಡಿದ್ದೆ. ಇಂದು ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಯಾರೇ ಬಂದರೂ ಫೀಸ್ ಎಷ್ಟೇ ಆಗಿದ್ದರೂ ಕೂಡ ಮೊದಲು ಅವರಿಗೆ ಸ್ಪಂದಿಸುತ್ತೇನೆ. ಮೂರನೇ ತಲೆಮಾರಿಗೆ ಭೂಮಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ವಿದ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಸಹಕಾರ ಸ್ಮರಣೆ ಇರಬೇಕು” ಎಂದರು.

“ಅಸಹಾಯಕರಿಗೆ ಮತ್ತು ಧ್ವನಿ ಇಲ್ಲದವರ ಪರ ಧ್ವನಿ ಎತ್ತಿದಾಗ ಅದೇ ನಮಗೆ ದೇವರ ಆಶೀರ್ವಾದ. ನಮ್ಮ ನಡವಳಿಕೆಗಳು ದುರ್ಬಲ ವರ್ಗದವರ ಪರವಾಗಿ ಇರಬೇಕು. ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದಾಗ ಪ್ರತಿಭಾವಂತಿಕೆ ತಿಳಿಯುತ್ತಿದೆ. ವಿದ್ಯೆ ಪಡೆದ ಹೆಣ್ಣು ಮಕ್ಕಳು ಸಮಾಜದ ಆಸ್ತಿ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ತಾಂತ್ರಿಕ ಸಮಸ್ಯೆಗಳಿಂದ ಹೊರಬರದ ಶಾಖೋತ್ಪನ್ನ ಕೇಂದ್ರಗಳು; ವಿದ್ಯುತ್ ಉತ್ಪಾದನೆ ಕುಸಿತ

“ದೊಡ್ಡೇರಿ ಹೋಬಳಿಯಲ್ಲೇ ನಾಲ್ಕೂವರೆ ಸಾವಿರ ಲೀಡ್. ಕುಂಚಿಟಿಗ ಸಮುದಾಯದ ವಿದ್ಯಾವಂತರೂ ನನಗೆ ಬೆಂಬಲ ನೀಡಿದರು. 96 ಸಾವಿರ ಮತಗಳು ಮಧುಗಿರಿ ಇತಿಹಾಸದಲ್ಲಿ ಯಾವ ಅಭ್ಯರ್ಥಿಗಳಿಗೂ ಬಿದ್ದಿಲ್ಲ. ಎಲ್ಲ ಸಮುದಾಯಗಳ ಋಣ ತೀರಿಸುತ್ತೇನೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹಾಗೂ ಕುರುಬ ಸಂಘದ ಮುಖಂಡ ಗೇಟ್ ಶಿವಣ್ಣ, ಸಂಪಾದಕ ಎಸ್ ನಾಗಣ್ಣ, ಕಾಂಗ್ರೆಸ್ ಮುಖಂಡ ತಂಗೋಟಿ ರಾಮಣ್ಣ ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

108 ವರ್ಷಗಳ ಸರ್ಕಾರಿ ಶಾಲೆಯ ಜಾಗದಲ್ಲಿ ಅಪಾರ್ಟ್‌ಮೆಂಟ್: ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು ಗ್ರಾಹಕರ ಪರಿಷತ್, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ)...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ ಚಿತ್ತ

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ...

ಕಡಲ ಅಲೆಗಳ ನಡುವೆ ಜೀವ ಉಳಿಸುವ ಕಾವಲುಗಾರರು: ಕಾಪು ಬೀಚ್‌ನ ರಿಯಲ್ ಹೀರೋಗಳು!

ಸಮಾಜದ ಕಣ್ಣಿಗೆ ಸದಾ ಕಾಣಿಸಿಕೊಳ್ಳದಿದ್ದರೂ, ಅಪಾಯದ ಅಲೆಗಳ ನಡುವೆ ಸಿಲುಕಿದವರ ಪಾಲಿಗೆ...

ಗದಗ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.26ರಿಂದ ರೈತರಿಂದ ಅನಿರ್ದಿಷ್ಟಾವಧಿ ಧರಣಿ

"ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ...