ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಸಂಕಟಗಳ ಹಿಡಿಗನ್ನಡಿ

Date:

‘ಒಂದು’ ಕೇಂದ್ರವನ್ನು ನಿರಾಕರಿಸಿ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡಿಸಿಕೊಳ್ಳುವ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಪರಂಪರೆ ಸಂಕಟಗಳ ಸರಮಾಲೆಯನ್ನೇ ನಮ್ಮ ಮುಂದಿಡುತ್ತದೆ. ಒಂದು ಮೂಳೆ ಪ್ರಸಂಗದಿಂದ ಆರಂಭವಾಗುವ ನಾಟಕ ನೋಡುಗರನ್ನು ಹಾಸ್ಯ ಭರಿತ ಸಂಕಟಗಳಿಂದ ತೊಯ್ಯುಸುತ್ತದೆ. ದಲಿತರಿಗೆ ಹಳ್ಳಿಗಳು ಶೋಷಣೆಯ ಕೂಪಗಳು ಎಂಬುವುದರಿಂದ ಆರಂಭವಾಗಿ ನಗರಗಳಲ್ಲಿಯೂ ಅದೇ ಸರ್ಕಲ್ ನಲ್ಲಿ ಬದುಕಬೇಕಾದ ಆಧುನಿಕ ದಲಿತ ಸಂಕಟಗಳನ್ನು ಅನಾವರಣ ಮಾಡುವ ಮಾಡುವ ಬಾಬ್ ಮಾರ್ಲಿ ಕನ್ನಡ ನಾಟಕ ರಂಗ ಭೂಮಿಗೆ ಅಪೂರ್ವವಾದ ಕೊಡುಗೆ.

- Advertisement -

ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಅಲಕ್ಷಿತ ಪರಂಪರೆಗಳ ಸಂಕಟಗಳನ್ನು ರಂಗಭೂಮಿಯ ಮೇಲೆ ತಂದು ಆಂದೋಲನವನ್ನೇ ರೂಪಿಸಿದ್ದ ಸಿಜಿಕೆಯ ಪರಂಪರೆಯ ಕೊಂಡಿ,ಮತ್ತಷ್ಟು ಆಧುನಿಕ ಪರಿಭಾಷೆಯಲ್ಲಿ ತಳಮೂಲ ಪರಂಪರೆಗಳ ತಿಳುವಳಿಕೆಗಳ ನೆನಪುಗಳನ್ನು ರಂಗದ ಮೇಲೆ ಯಶಸ್ವಿಯಾಗಿ ತರುತ್ತಿರುವ ಕೆ. ಪಿ.ಲಕ್ಷ್ಮಣ್ ಮತ್ತು ವಿ.ಎಲ್.ನರಸಿಂಹಮೂರ್ತಿ ಕನ್ನಡ ರಂಗಭೂಮಿಯ ಭರವಸೆಯ ನಾಟಕಕಾರರು ಮತ್ತು ನಿರ್ದೇಶಕರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...
WhatsApp Image 2024 09 01 at 10.40.04 AM 4

ಮಾಂಸಾಹಾರ ಮತ್ತು ಮಾಂಸ ತಿನ್ನುವವರ ಆಚರಣೆಗಳೇ ಶೋಷಣೆಗೆ ಮೂಲ ಕಾರಣ ಎಂದು ಭೀಗುವ ಪ್ರಭೂತಿಗಳಿಗೆ ಅವೇ ತಳಮೂಲ ನೆಲಮೂಲ ಸಂಸ್ಕೃತಿಯ ಐಡೆಂಟಿಟಿ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸುವ ನಾಟಕ. ಮಿಣುಕು ಹುಳು,ಉತ್ತರಾಣಿ, ತುಂಬೆ, ಎಕ್ಕೆ ಇವುಗಳ ನೆನಪುಗಳ ಮೂಲಕ ಜೀವಂತ ಸಂಸ್ಕೃತಿ ಅನಾವರಣ ಈ ನಾಟಕದ ಹೆಗ್ಗುರುತು.
ತಾಯಿ ಮಗಳನ್ನು ಇಬ್ಬರನ್ನು ಕೂಡವ ಹೊರ ಸಂಸ್ಕೃತಿಯೊಂದರ ಸಮುದಾಯಕ್ಕೆ ಬೀಜಗಳನ್ನು ಕಿತ್ತು ಕೈಗೆ ಕೊಟ್ಟ ಪರಂಪರೆಯೊಂದರ ದಾಖಲೆ ಈ ನಾಟಕದ ಯಶಸ್ವಿಯಲ್ಲೊಂದು.

WhatsApp Image 2024 09 01 at 10.40.04 AM 5

ಮಾರಮ್ಮನ ಪುರಾಣ ಪ್ರಸಂಗವನ್ನು ಅತ್ಯಂತ ಆರ್ದ್ರವಾಗಿ ನಿರೂಪಿಸಿದ, ಕ್ರೌರ್ಯಕ್ಕೆ ತುತ್ತಾದ ಪರಂಪರೆಯ ವಾರಸುದಾರರನ್ನೇ ಅದೇ ಕ್ರೌರ್ಯದಲ್ಲಿ ಮಿಂದೇಳುವಂತೆ ಮಾಡುವ ಬ್ರಾಹ್ಮಣ್ಯ ಪರಂಪರೆಯ ಚೋಧ್ಯವನ್ನು ಈ ನಾಟಕ ಅತ್ಯಂತ ಧಾರಣವಾಗಿ ಮುಂದಿಡುತ್ತದೆ. ಝಮೈಕಾ ದೇಶದ ಸಂಗೀತಗಾರ ಬಾಬ್ ಮಾರ್ಲಿಯ ಜೀವನ ವೃತ್ತಾಂತವನ್ನು ಹೋಲುವ ಕನ್ನಡ ದಲಿತ ಪರಂಪರೆ ನೆನಪುಗಳ ಮೂಲಕ ನೋಡುವ ಈ ನಾಟಕ ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ.

ಈ ನಾಟಕವನ್ನು ತುಮಕೂರು ಜನಕ್ಕೆ ತಲುಪಿಸಿ ದ ಡ್ಯಾಗೇರಳ್ಳಿ ಮತ್ತು ತಂಡಕ್ಕೆ ನಮಸ್ಕಾರ

– ಡಾ. ನಾಗಭೂಷಣ ಬಗ್ಗನಡು
ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ
.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕನಾಯಕನಹಳ್ಳಿ | ಮನೆ ಕುಸಿಯುವ ಮುನ್ನ ತಹಸೀಲ್ದಾರ್ ನೆರವಿನ ಹಸ್ತ ಚಾಚಲಿ

ಒಂದು ಕಡೆ ತಂದೆಯನ್ನು ಕಳೆದುಕೊಂಡ ಅಪ್ರಾಪ್ತ ಮಗಳ ಭವಿಷ್ಯದ ಚಿಂತೆ… ಮತ್ತೊಂದೆಡೆ...

ಶಿರಾ | ಭದ್ರಾ ನೀರಿಗಾಗಿ ಬೃಹತ್ ಹೋರಾಟಕ್ಕೆ ಸಿದ್ಧತೆ: ರೈತರು ಒಗ್ಗಟ್ಟಾಗಲು ಕರೆ

ಜೀವನಕ್ಕಾಗಿ ನೀರು, ನೀರಿಗಾಗಿ ನಮ್ಮ ಹೋರಾಟ ಎಂಬ ಘೋಷವಾಕ್ಯದೊಂದಿಗೆ ಶಿರಾ ತಾಲೂಕಿನಲ್ಲಿ...

ತುಮಕೂರು | ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ : ಆರೋಗ್ಯ ಸಚಿವ ಯು.ಟಿ. ಖದರ್

 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.95ರಷ್ಟು ಅಗತ್ಯ ಸವಲತ್ತುಗಳು ಲಭ್ಯವಿದ್ದು, ಯಾವುದೇ ಕೊರತೆಗಳಿದ್ದರೆ...

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...