ಗುಬ್ಬಿ | ಸ್ವಾಭಿಮಾನಿ ಬದುಕಿನ ಪತ್ರಿಕೆ ಹಂಚುವ ಹುಡುಗರು : ಜಪಾನಂದ ಸ್ವಾಮೀಜಿ

Date:

 ಮಳೆ ಚಳಿ ಲೆಕ್ಕಿಸದೆ ಓದುಗರ ಮನೆ ಮನಗಳಿಗೆ ತಲುಪಿರುವ ಪತ್ರಿಕೆ ಹಂಚುವ ಹುಡುಗರ ಯೋಗಕ್ಷೇಮ ವಿಚಾರಿಸುವ ಕೆಲಸ ನಿರಂತರ ನಡೆಯಬೇಕು ಎಂದು ಪಾವಗಡ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದಜೀ ಮಹಾರಾಜ್ ತಿಳಿಸಿದರು.

- Advertisement -

ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕೆ ಹಂಚಿಕೆದಾರರ ಸಂಘದ ತಾಲ್ಲೂಕು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲಾ ಹಂಚಿಕೆ ಹುಡುಗರಿಗೆ ಜರ್ಕಿನ್ ವಿತರಿಸಿ ಮಾತನಾಡಿದ ಅವರು ದೇಶ ವಿದೇಶ ಸುದ್ದಿಗಳನ್ನು ಬೆಳಿಗ್ಗೆ ಮನೆ ಬಾಗಿಲಿಗೆ ತಲುಪಿಸುವ ಹುಡುಗರು ತಮ್ಮ ಬಡತನ ಬೇಗೆಯಲ್ಲಿ ಕಷ್ಟ ಸ್ವಾಭಿಮಾನದ ದುಡಿಮೆಗೆ ನಿಂತಿದ್ದಾರೆ. ಅಂತಹ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಕೆಲಸ ಸಮುದಾಯ ಮಾಡಬೇಕು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಬೆಳಿಗ್ಗೆ ಪೇಪರ್ ಹಂಚುವ ಕರ್ತವ್ಯ ಮುಗಿಸಿ ಅದರ ದುಡಿಮೆಯ ಹಣದಲ್ಲಿ ತಮ್ಮ ಶಿಕ್ಷಣ ನಡೆಸಿ ಉತ್ತಮ ಬದುಕು ಕಟ್ಟಿಕೊಳ್ಳುವ ಈ ಹುಡುಗರು ತಮ್ಮ ಶಾಲಕಾಲೇಜು ಶುಲ್ಕ ಕಟ್ಟಿ ಮನೆ ಸಂಸಾರ ನಡೆಸುವುದು ಕೂಡಾ ಕಂಡಿದ್ದೇವೆ. ಇಂತಹ ಸ್ವಾಭಿಮಾನಿ ಹಂಚಿಕೆದಾರರ ಬಗ್ಗೆ ಸರ್ಕಾರ ಕೂಡ ಗಮನಹರಿಸಬೇಕಿದೆ. ಕೇವಲ ಕನಿಷ್ಠ ಸವಲತ್ತು ಒದಗಿಸುವುದು ಅಷ್ಟೇ ಅಲ್ಲದೇ ಅವರ ಜೀವನ ರೂಪಿಸುವ ಕೆಲಸ ಸರ್ಕಾರದ ಮೂಲಕ ವಿತರಕರ ಸಂಘ ಮಾಡಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ಚಿ.ನಿ.ಪುರುಷೋತ್ತಮ್ ಮಾತನಾಡಿ ಊರೂರು ಸುತ್ತಿ ಸುದ್ದಿ ಕಲೆ ಹಾಕಿ ಸುದ್ದಿ ಸಿದ್ಧ ಮಾಡುವ ಪತ್ರಕರ್ತರ ಬರವಣಿಗೆ ಓದುವ ಗ್ರಾಹಕರ ಮನೆಗೆ ಪೇಪರ್ ತಲುಪಿಸುವ ಹಂಚಿಕೆದಾರರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಿದೆ. ಪತ್ರಿಕೋದ್ಯಮ ಸಂಕಷ್ಟಕ್ಕೀಡಾಗಿದೆ. ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸಿದೆ. ಪ್ರಸರಣ ಸಂಖ್ಯೆ ಇಳಿಮುಖವಾದರೂ ಜಗ್ಗದೆ ಇಂದಿಗೂ ಮನೆ ಬಾಗಿಲಿಗೆ ಪತ್ರಿಕೆ ಹಂಚುವ ಹುಡುಗರ ಶ್ರಮಕ್ಕೆ ಅಭಿನಂದನೆ ಸಲ್ಲಿಸಬೇಕಿದೆ. ಯಾವುದೇ ಸುದ್ದಿ ವಿಸ್ತಾರವಾಗಿ ಮುದ್ರಿಸುವ ಪತ್ರಿಕೆಯ ಬಗ್ಗೆ ಎಂದಿಗೂ ಗೌರವ ಇರುತ್ತದೆ ಎಂದರು.

ಚೆಸ್ ಅಸೋಸೇಷನ್ ಅಧ್ಯಕ್ಷ ಮಧುಕರ್ ಮಾತನಾಡಿ ಜೀವನ ಮೌಲ್ಯ ತಿಳಿದ ಜಪಾನಂದ ಸ್ವಾಮಿಗಳು ಅನ್ನ ವಸತಿ ಶಿಕ್ಷಣ ಆರೋಗ್ಯ ಈ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಈ ಪೈಕಿ ಪತ್ರಿಕೆ ಕ್ಷೇತ್ರದಲ್ಲಿ ಹಂಚಿಕೆದಾರರ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. ಹೆಚ್ಚು ವಿದ್ಯಾರ್ಥಿಗಳೇ ಇರುವ ಹಂಚಿಕೆದಾರರ ಕಷ್ಟ ಅರಿತು ಮೂಲ ಸವಲತ್ತು ಒದಗಿಸಿದ್ದಾರೆ. ಇವರ ಸೇವೆ ಆರೋಗ್ಯ ಕ್ಷೇತ್ರಕ್ಕೂ ಹಬ್ಬಿದೆ. ಹೊರ ರಾಜ್ಯದಲ್ಲಿ ಸಹ ಸಾಮಾಜಿಕ ಗುರುತರ ಸೇವೆ ಇಂದಿಗೂ ಚರ್ಚೆಯಲ್ಲಿದೆ. ಹಿಂದುಳಿದ ಪಾವಗಡ ತಾಲ್ಲೂಕಿನಲ್ಲಿ ಆಶ್ರಮ ಕಟ್ಟಿ ಕಣ್ಣಿನ ಆಸ್ಪತ್ರೆ ತೆರೆದು ನಿರಂತರ ಸೇವೆ ನಡೆಸಿದ್ದಾರೆ. ಇವರ ಅನನ್ಯ ಸೇವೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.

ಮೀಡಿಯಾ ಬ್ಯಾಕ್ ಆಫೀಸ್ ಸಿಇಓ ಎಸ್.ರಘು ಮಾತನಾಡಿ ಉದ್ಯೋಗ ನೀಡುವ ಕಂಪೆನಿಗಳು ಶಿಕ್ಷಣ ಜೊತೆ ಪ್ರತಿಭೆ ಕೌಶಲ್ಯ ಹುಡುಕುತ್ತದೆ. ಆದರೆ ಕನಿಷ್ಠ ಶಿಕ್ಷಣ ಪಡೆದವರು ಹಾಗೂ ವಿದ್ಯಾಭ್ಯಾಸದಲ್ಲಿ ತೊಡಗಿರುವವರಿಗೆ ದುಡಿಮೆ ನೀಡಿದ್ದು ಪತ್ರಿಕೆ ಹಂಚುವ ಕಾಯಕ. ಬಡ ಮಕ್ಕಳು ಹೆಚ್ಚು ಈ ಕೆಲಸ ಮಾಡುತ್ತಾರೆ. ಇಂತಹ ಮಕ್ಕಳ ಬದುಕಿನ ಚಿಂತನೆ ಮಾಡಿದ ಜಪಾನಂದ ಜೀ ಅವರ ಕಾಳಜಿ ಮೆಚ್ಚುವಂತಹದ್ದು. ಕೋವಿಡ್ ಸಮಯ ಹಾಗೂ ನೆರೆ ಹಾವಳಿ ಪರಿಹಾರ ನೀಡುವಲ್ಲಿ ಸಹ ಅವರ ಕೆಲಸ ಸಾರ್ಥಕ ಸೇವೆ ಎನಿಸಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ಪತ್ರಿಕೆ ಹಂಚುವ ಹುಡುಗರಿಗೆ ಜಪಾನಂದ ಜೀ ಅವರು ಜರ್ಕಿನ್ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಪತ್ರಿಕಾ ಹಂಚಿಕೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ್, ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷ ಯೋಗೀಶ್, ತಾಲ್ಲೂಕು ಗೌರವಾಧ್ಯಕ್ಷ ರಮೇಶ್ ಗೌಡ, ತಾಲ್ಲೂಕು ಅಧ್ಯಕ್ಷ ಜಿ.ಕೆ.ನರಸಿಂಹಮೂರ್ತಿ, ಉಪಾಧ್ಯಕ್ಷ ಕೆಂಪರಾಜ್, ಪ್ರಧಾನ ಕಾರ್ಯದರ್ಶಿ ಜಿ.ಬಿ.ಪುನೀತ್, ಖಜಾಂಚಿ ಮಂಜುನಾಥ್, ಪತ್ರಕರ್ತರಾದ ಗುರು ಚನ್ನಬಸವಯ್ಯ, ರಾಜೇಶ್ ಗುಬ್ಬಿ, ದೇವರಾಜ್, ಕೋಟೆ ರಂಗಸ್ವಾಮಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಚೇಳೂರು ಪ್ರಜಾಸೇವಾ ಅಭಿಯಾನದಲ್ಲಿ ವಿಕಲಚೇತನರು, ಹಿರಿಯ ನಾಗರಿಕರ ಪರದಾಟ :ಅರ್ಜಿ ನೀಡಲು ಮೆಟ್ಟಿಲು ಹತ್ತಲಾಗದೆ ವಾಪಸ್‌

 ಗ್ರಾಮೀಣ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ವಿವಿಧ ಸರ್ಕಾರಿ ಸೇವೆಗಳನ್ನು ತ್ವರಿತವಾಗಿ...

ಗುಬ್ಬಿ | ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ವಲಯ ಅರಣ್ಯಾಧಿಕಾರಿ

ಗುತ್ತಿಗೆದಾರರಿಂದ ಲಂಚದ ಹಣ ಪಡೆಯುತ್ತಿದ್ದ ಆರೋಪದ ಮೇರೆಗೆ ಗುಬ್ಬಿ ವಲಯ ಅರಣ್ಯಾಧಿಕಾರಿ...

ಗುಬ್ಬಿ | ಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ: ಸಿಪಿಐ ರಾಘವೇಂದ್ರ

ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಭಕ್ತಿಭಾವದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ...

ಗುಬ್ಬಿ | ಅಂಬೇಡ್ಕರ್, ಬುದ್ಧ, ಬಸವಣ್ಣ ಅವಹೇಳನ ಖಂಡಿಸಿ ದಸಂಸ ಪ್ರತಿಭಟನೆ

ಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ...