ಗುಬ್ಬಿ | ಎಸ್ಐಆರ್ ಜಾರಿಗೆ ತಂದ ಬಿಜೆಪಿಯಿಂದಲೇ ವಿರೋಧ : ಎಸ್.ಆರ್.ಶ್ರೀನಿವಾಸ್

Date:

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯಕ್ರಮ ದೇಶದಲ್ಲಿ ಜಾರಿಗೆ ತಂದ ಬಿಜೆಪಿ ಪಕ್ಷ ನಮ್ಮ ರಾಜ್ಯದಲ್ಲಿ ವಿರೋಧ ವ್ಯಕ್ತ ಪಡಿಸಿರುವುದು ಹಾಸ್ಯಾಸ್ಪದ ಎನಿಸುತ್ತದೆ. ಎಲ್ಲಾ ಪಕ್ಷದಲ್ಲಿ ಬೂತ್ ಮಟ್ಟದ ಏಜೆಂಟ್ ನೇಮಕ ಮಾಡಿ ತರಬೇತಿ ನೀಡಿ ಪರಿಷ್ಕರಣೆ ನಡೆಸಿದ್ದರೂ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

- Advertisement -

ತಾಲ್ಲೂಕಿನ ಕಸಬ ಹೋಬಳಿ ಪತ್ರೆ ಮತ್ತಿಘಟ್ಟ ಹಾಗೂ ಕರೆಕುರಿಹಟ್ಟಿ ಗ್ರಾಮದಲ್ಲಿ ಒಂದು ಕೋಟಿ ರೂಗಳ ಸಿಸಿರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಈಗಾಗಲೇ ಮ್ಯಾಪಿಂಗ್ ಮೂಲಕ ಶೇ.98.07 ರಷ್ಟು ಮತದಾರರು ಅರ್ಹರು ಎನ್ನಲಾಗಿದೆ. ಉಳಿದ ಒಂದು ಪರ್ಸೆಂಟ್ ಮತದಾರರು ತಮ್ಮ ದಾಖಲಾತಿ ನೀಡುತ್ತಾರೆ. ಅಚ್ಚುಕಟ್ಟಾಗಿ ನಡೆದ ಎಸ್ಐಆರ್ ಕಾರ್ಯದಲ್ಲಿ ಗೊಂದಲ ಮೂಡಿಸುವ ಬಿಜೆಪಿಯ ಡೋಂಗಿ ಆಟ ಏನೂ ಎಂದು ತಿಳಿಯಲಾಗುತ್ತಿಲ್ಲ ಎಂದು ಛೇಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಬಿಜೆಪಿಗೆ ಬಾರದ ಮತಗಳನ್ನು ಕಿತ್ತು ಹಾಕಲು ನಮ್ಮಲ್ಲಿ ಆಗುತ್ತಿಲ್ಲ ಎಂದು ನೋವು ಪಡುತ್ತಿರುವ ಬಿಜೆಪಿ ಪಕ್ಷದವರು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣವನ್ನೇ ಮುಂದಿಟ್ಟುಕೊಂಡು ಸಲ್ಲದ ಆರೋಪಕ್ಕೆ ಮುಂದಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಎಲ್ಲೆಡೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಬಿಎಲ್ಎ 2 ಕೆಲಸ ಮಾಡಬೇಕಿದೆ ಎಂದರು.

ಕುಮಾರಸ್ವಾಮಿ ಅವರು ಹತ್ತು ಸಾವಿರ ಓಟು ಅನರ್ಹ ಎಂದು ಒಂದು ಕೋಮಿನವರನ್ನು ದೂರುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ನೀಡುತ್ತಿದ್ದ ಮುಸ್ಲಿಂ ಬಾಂಧವರು ಈ ಮೊದಲು ಬೇಕಿತ್ತು. ಈಗ ಮತ ಹಾಕಲಿಲ್ಲ ಎಂದು ದೂರುವುದು ಸರಿಯಲ್ಲ ಎಂದ ಅವರು ಶೀಘ್ರದಲ್ಲಿ ನಮ್ಮ ಸರ್ಕಾರ ಸ್ಥಳೀಯ ಚುನಾವಣೆ ನಡೆಸಲಿದೆ. ಮೀಸಲಾತಿ ಮಾತ್ರ ಬಾಕಿ ಇದೆ ಎಂದರು.

ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಕೃಷಿಕರಿಗೆ ಈ ಮಳೆ ಬೇಕಿತ್ತು. ಕುಡಿಯುವ ನೀರಿನ ಸಮಸ್ಯೆ ಸಹ ತಲೆದೋರುತ್ತದೆ. ಬೆಂಗಳೂರಿನಲ್ಲಿ ನೀರು ಪೂರೈಕೆ ಮಾಡುವುದು ಕಷ್ಟವಾಗಲಿದೆ. ನಮ್ಮ ಗುಬ್ಬಿ ತಾಲ್ಲೂಕಿನಲ್ಲಿ 12 ಕಡೆ ಮಾತ್ರ ಸಮಸ್ಯೆ ಕಂಡು ಈಗಾಗಲೇ ಕ್ರಮ ವಹಿಸಿ ಬೋರ್ ವೆಲ್ ಕೊರೆಸಲಾಗಿದೆ. ತಡವಾಗಿ ಮಳೆ ಬರುವ ಸಾಧ್ಯತೆ ಇದೆ. ನಮಗೆ ಹೇಮಾವತಿ ಡ್ಯಾಂ ತುಂಬಬೇಕಿದೆ. ಇಲ್ಲವಾದಲ್ಲಿ ಸಮಸ್ಯೆ ಆಗಲಿದೆ. ಹಿಂಗಾರು ಮಳೆ ಸಾಧ್ಯತೆ ಬಗ್ಗೆ ನಿರೀಕ್ಷೆ ಸರ್ಕಾರ ಹೊಂದಿದೆ ಎಂದರು.

ಮುಖಂಡರಾದ ಪತ್ರೆ ದಿನೇಶ್, ಹೇಮಂತ್, ದೇವರಾಜ್, ರವಿ, ಸಿದ್ದರಾಜು, ಪಾಂಡುರಂಗಯ್ಯ, ಭದ್ರಯ್ಯ, ಲಕ್ಕಣ್ಣ, ಲಕ್ಷ್ಮಣ್, ಗೋಪಾಲ್, ಹಿಮಾಮ್ ಸಾಬ್, ಗುತ್ತಿಗೆದಾರರಾದ ಸಂಪ್ರೀತ್, ಶ್ರೀನಿವಾಸ್ ಗೌಡ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | 10 ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ : 196 ಕ್ಷೇತ್ರಗಳಿಗೆ ಮೀಸಲಾತಿ

ತುಮಕೂರು ಗ್ರಾಮೀಣ ರಾಜಕಾರಣದ ಮುಂದಿನ ಹಂತಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬರುವ ತಾಲ್ಲೂಕು...

ಸಿಜೆಪಿ ಪ್ರತಿಭಟನೆ| ದೆಹಲಿಯಲ್ಲಿ ವಿಮಾನದೊಳಗೇ ದೀಪ್ಕೆ, ದಾಸ್, ರಾಂಕಾ ಬಂಧನ

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸಿಜೆಪಿ ಪ್ರತಿಭಟನೆಗೆ ಎಡಪಕ್ಷಗಳು, ಎಎಪಿ ಬೆಂಬಲ; ದೂರ ಉಳಿದ ಕಾಂಗ್ರೆಸ್

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಎಸ್‌ಐಆರ್‌...

ಸಿಜೆಪಿ ಪ್ರತಿಭಟನೆಗೆ ಹೆದರಿದ ಮೋದಿ ಸರ್ಕಾರ: ಜಂತರ್‌ ಮಂತರ್‌ನಲ್ಲಿ ಮೊಳೆ-ಕಬ್ಬಿಣದ ಕೋಟೆ ಕಟ್ಟಿದ ದೆಹಲಿ ಪೊಲೀಸರು

ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿಯ ಜಂತರ್ ಮಂತರ್ ಮತ್ತು ಸುತ್ತಲಿನ ಪ್ರದೇಶವನ್ನು...