ಗುಬ್ಬಿ ಪಟ್ಟಣದ ಹೊರವಲಯದ ಶಿಲ್ಪಾ ಸಾಮಿಲ್ ಬಳಿ ಮಂಗಳವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಗುಬ್ಬಿ ಪಟ್ಟಣದ ನಾಗರೀಕರು ಆತಂಕ ಗೊಂಡಿದ್ದಾರೆ.
ಪಟ್ಟಣದ ಸಮೀಪದ ತೋಟದ ಸಾಲಿನಲ್ಲಿ ನಿರಾಂತಕವಾಗಿ ಓಡಾಡುವ ಚಿರತೆ ಕ್ಯಾಮರಾ ಕಣ್ಣಿಗೆ ಸಿಕ್ಕಿದೆ. ಆದರೆ ಎಲ್ಲಿಯೂ ಜಾನುವಾರು ಅಥವಾ ಮನುಷ್ಯರ ಮೇಲೆ ದಾಳಿ ಮಾಡಿದ ವರದಿಯಾಗಿಲ್ಲ. ಯಾವ ರೈತರ ಕಣ್ಣಿಗೂ ಕಂಡಿಲ್ಲ. ಆದರೆ ಚಿರತೆ ಪ್ರತ್ಯಕ್ಷ ಎಂಬುದು ಆತಂಕ ಮೂಡಿಸಿದೆ.
ಕೆರೆಂಟ್ ಸಮಸ್ಯೆಯಲ್ಲಿ ರೈತರು ತ್ರೀಫೇಸ್ ಕರೆಂಟ್ ಸಿಗುವ ಮಧ್ಯರಾತ್ರಿ ಸಮಯದಲ್ಲಿ ತೋಟಕ್ಕೆ ನೀರು ಹಾಯಿಸಲು ಹೋಗಲು ಹೆದರುತ್ತಿದ್ದಾರೆ. ಇತ್ತೀಚೆಗೆ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿರತೆಗಳು ನಾಯಿಗಳನ್ನು ಹಿಡಿದು ತಿನ್ನಲು ಆಗಾಗ ಕಾಣಿಸಿಕೊಳ್ಳುತ್ತಿದ್ದವು ಇದೇ ಮೊದಲಸಲ ಗುಬ್ಬಿ ಪಟ್ಟಣದ ಸಮೀಪ ಚಿರತೆಯೊಂದು ಕಾಣಿಸಿಕೊಂಡಿರುವುದು ಜನ ರಾತ್ರಿ ಹೊತ್ತು ತಿರುಗಾಡಲು ಹೆದರುತ್ತಿದ್ದಾರೆ.
“ಗುಬ್ಬಿ ಪಟ್ಟಣದ ಸಮೀಪ ಚಿರತೆಯೊಂದು ಹಾದು ಹೋಗಿರುವ ದೃಶ್ಯ ನಾನು ನೋಡಿದೆ. ಆದರೆ ಅಲ್ಲಿ ಯಾವುದು ಪ್ರಾಣಿಯನ್ನು ಕೊಂದಿಲ್ಲ ಮತ್ತು ಅದು ಅಲ್ಲೇ ಬೀಡು ಬಿಟ್ಟಿಲ್ಲ. ಆ ಕಾರಣಕ್ಕೆ ನಾವು ಚಿರತೆ ಕಾರ್ಯಾಚರಣೆ ಮಾಡುವ ಪ್ರಮೇಯವಿಲ್ಲ. ಆದರೂ ನಮ್ಮ ಸಿಬ್ಬಂದಿಗೆ ನೀಗಾ ವಹಿಸಲು ತಿಳಿಸಿದ್ದೇನೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಹೇಳಿದ್ದಾರೆ.




