ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ಸೇವೆಸಲ್ಲಿಸುತ್ತಿರುವ ಎಲ್ಲ ಅತಿಥಿ ಉಪನ್ಯಾಸಕರು ನ.23ರಂದು (ಇಂದು) ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
“ನಮ್ಮೆಲ್ಲರ ನ್ಯಾಯಯುತ್ತಾ ಬೇಡಿಕೆಯಾದ ಕಾಯಮತಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒತ್ತಾಯಿಸಿ ತರಗತಿಗಳನ್ನು ಬಹಿಷ್ಕಿರಿಸಿ ಪ್ರತಿಭಟಿನೆ ನಡೆಸುತ್ತಿದ್ದೇವೆ” ಎಂದು ಅತಿಥಿ ಉಪಾನ್ಯಾಸಕರು ತಿಳಿಸಿದ್ದಾರೆ.
“ರಾಜ್ಯ ವ್ಯಾಪಿ ಎಲ್ಲ ಜಂಟಿ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಯುತ್ತಿದೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ತರಗತಿಗಳನ್ನು ಬಹಿಷ್ಕರಿಸಿದ್ದೇವೆ” ಎಂದು ತುಮಕೂರಿನ ಅತಿಥಿ ಉಪನ್ಯಾಸಕ ಲೋಕೇಶ್ ಮಾಹಿತಿ ನೀಡಿದ್ದಾರೆ.
ಹಿರಿಯ ಅತಿಥಿ ಉಪನ್ಯಾಸಕ ವೆಂಕಟೇಶ್ ಮಾತನಾಡಿ, “ಭವಿಷ್ಯ ದಿನಗಳಲ್ಲಿ ನಾವೆಲ್ಲರೂ ಬದ್ಧರಾಗಿರಬೇಕು, ಮನೆಯಲ್ಲಿ ಕೂತು ಬೇಡಿಕೆ ಈಡೇರಲಿ ಎಂದು ಬೇಡಿಕೆ ಇಟ್ಟರೆ ಯಾವ ಬೇಡಿಕೆನೂ ಈಡೇರಲ್ಲ, ಅದಕ್ಕಾಗಿ ರಾಜ್ಯ ವ್ಯಾಪಿ ಬೆಂಬಲ ನೀಡಿ ಇಂದು ಅಥವಾ ನಾಳೆ ಪ್ರತೀ ಕಾಲೇಜು ಹಂತದಲ್ಲಿ ಸಭೆ ನಡೆಸಿ ಪ್ರಾಂಶುಪಾಲರಿಗೆ ತರಗತಿ ಬಹಿಷ್ಕರಿಸುವ ಕುರಿತು ತಿಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ ಜ್ಯೋತಿ ,ಕುಸುಮ, ಸುರೇಶ್, ವೇದಮೂರ್ತಿ, ಶಂಕರ್, ದೇವರಾಜು, ಗಿರೀಶ್, ಶಶಿಕುಮಾರ್, ಪದಮ್ಮ ಮತ್ತಿತರ ಉಪಸ್ಥಿತರಿದ್ದರು.