ತುರುವೇಕೆರೆ | ಬೋನಿಗೆ ಬಿದ್ದ ಚಿರತೆ : ಜನ ನಿರಾತಂಕ

Date:

ತುರುವೇಕೆರೆ  ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಭಾನುವಾರವಷ್ಠೇ ಮಹಿಳೆಯೋರ್ವರನ್ನು ಚಿರತೆ ಕೊಂದಿತ್ತು. ಸೋಮವಾರ ಸಾಯಂಕಾಲ ಬೋನಿಗೆ ಬಿದ್ದಿರುವ ಚಿರತೆ ಭಾನುವಾರ ಮಹಿಳೆಯನ್ನು ಕೊಂದಿದ್ದ ಚಿರತೆಯೇ ಅಥವಾ ಅಲ್ಲವೇ ಎಂಬುದು ವೈಜ್ಞಾನಿಕ ಪರೀಕ್ಷೆಯಿಂದಷ್ಟೇ ತಿಳಿದುಬರಬೇಕಿದೆ. 

- Advertisement -

 ಅರೇಮಲ್ಲೇನಹಳ್ಳಿಯ ನಿವಾಸಿ ಸುಜಾತಾರನ್ನು ಚಿರತೆ ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಜಾಗೃತಗೊಂಡಿದ್ದ ಅರಣ್ಯ ಇಲಾಖೆ ಮಹಿಳೆಯನ್ನು ಕೊಂದ ಸ್ಥಳದಲ್ಲಿರುವ ಹುಲಿಕಲ್‌ ಗುಡ್ಡ ಎಂಬಲ್ಲಿ ಡ್ರೋನ್‌ ಕ್ಯಾಮರಾ ಬಳಸಿ ಚಿರತೆಯ ಸಂಚಾರವನ್ನು ಗಮನಿಸಲಾಗಿತ್ತು. ಡ್ರೋನ್‌ ಕ್ಯಾಮರಾದಲ್ಲಿ ಚಿರತೆಯ ಓಡಾಟದ ದೃಶ್ಯ ಕಂಡು ಬಂದ ಬಳಿ ನಿನ್ನೆ ಚಿರತೆಯಿಂದ ಮೃತಪಟ್ಟಿದ್ದ ನಾಯಿಯ ದೇಹವನ್ನು ಬೋನಿನೊಳಗೆ ಇಟ್ಟು ಬಹಳ ನಿಗಾದಿಂದ ವೀಕ್ಷಿಸಲಾಗುತ್ತಿತ್ತು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

 ಅರಣ್ಯ ಇಲಾಖಾಧಿಕಾರಿಗಳ ಕಾರ್ಯಾಚರಣೆ ಫಲ ನೀಡಿತು. ಸೋಮವಾರ ಸಾಯಂಕಾಲ ಸುಮಾರು 5.40 ರ ವೇಳೆಗೆ ನಾಯಿಯ ಮಾಂಸ ಸೇವಿಸಲು ಬಂದ ಚಿರತೆ ಸಲೀಸಾಗಿ ಬೋನಿನೊಳಗೆ ಸೆರೆಯಾಯಿತು. 

 ಭಾನುವಾರ ಗ್ರಾಮದ ಮಹಿಳೆಯನು ಕೊಂದು ಹಾಕಿದ್ದ ಸಂಗತಿಯಿಂದ ಗಾಭರಿಗೊಂಡಿದ್ದ ಗ್ರಾಮದ ಜನರಿಗೆ ಚಿರತೆಯೊಂದು ಸೆರೆ ಸಿಕ್ಕಿದೆ ಎಂಬ ಸಂಗತಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಆತಂಕ ದೂರವಾಗಿ ಸಮಾಧಾನದ ನಿಟ್ಟುಸಿರುವ ಬಿಟ್ಟರು. ಆದರೆ ಅರಣ್ಯ ಇಲಾಖಾ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಇನ್ನೂ ಮೂರ್ನಾಲ್ಕು ಚಿರತೆಗಳು ಇವೆ ಎಂಬ ಸಂಗತಿ ತಿಳಿದು ಆತಂಕಿತರಾಗಿದ್ದಾರೆ. 

 ಒಂದೇ ದಿನದಲ್ಲಿ ಚಿರತೆಯೊಂದನ್ನು ಹಿಡಿಯಲು ಯಶಸ್ವಿಯಾದ ಕ್ರಮಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್‌, ಪಿಎಲ್‌ ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹೇಮಚಂದ್ರು ಸೇರಿದಂತೆ ಹಲವರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. 

ವರದಿ – ಎಸ್. ನಾಗಭೂಷಣ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ದೇವರು ಬಂದಂತೆ ನಟಿಸಿ ದಲಿತ ನವದಂಪತಿಗೆ ಅವಮಾನ; ಆರೋಪಿ ಬಂಧನ

ದಲಿತ ಮುಖ್ಯಮಂತ್ರಿ ಕನಸನ್ನು ಹೊತ್ತಿರುವ ಡಾ. ಜಿ. ಪರಮೇಶ್ವರ್ ಅವರ ಜಿಲ್ಲೆಯಲ್ಲೇ...

ತುರುವೇಕೆರೆ ಪಟ್ಟಣದಲ್ಲಿ ಕಾಣಿಸಿಕೊಂಡ ಚಿರತೆ : ಮನೆ ಮಾಡಿದ ಆತಂಕ

 ತುರುವೇಕೆರೆ  ತಾಲೂಕಿನಲ್ಲಿ ಚಿರತೆ ಕಾಟ ಅತಿಯಾಗಿದೆ. ಗುರುವಾರ ರಾತ್ರಿ ಪಟ್ಟಣದ ಎಪಿಎಂಸಿ...

ತುರುವೇಕೆರೆ | ಹೆಚ್ಚಿದ ಚಿರತೆ ಕಾಟ : ಭಯಭೀತರಾಗಿರುವ ಜನರು

ತುರುವೇಕೆರೆ ತಾಲೂಕಿನ ವಿವಿಧೆಡೆ ಚಿರತೆಯ ಕಾಟ ಅತಿಯಾಗಿದೆ. ಚಿರತೆ, ಕುರಿಗಳು ಮತ್ತು...

ತುರುವೇಕೆರೆ | ನೀರಗುಂದ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವಂತೆ ಅಲ್ಲಪ್ಪ ಒತ್ತಾಯ

ತುರುವೇಕೆರೆ ತಾಲೂಕಿನ ನೀರಗುಂದ ಗ್ರಾಮದಲ್ಲಿ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು...