ಉಡುಪಿ | ಶಾಲಾ ಪಠ್ಯದಲ್ಲಿ ಗೀತಾ ಅಳವಡಿಕೆ ಬೇಡ : ವಿಶ್ವನಾಥ ಪೇತ್ರಿ

Date:

ಕೇಂದ್ರ ಸಚಿವ ಕುಮಾರಸ್ವಾಮಿ ಇತ್ತೀಚೆಗೆ ಭಗವದ್ಗೀತೆಯ ಸಾರಾಂಶವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿ ಸಲ್ಲಿಸಿರುವುದನ್ನು ಸಮತಾ ಸೈನಿಕ ದಳ ತೀವ್ರವಾಗಿ ಆಕ್ಷೇಪಿಸಿದೆ. ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷರಾದ ವಿಶ್ವನಾಥ ಪೇತ್ರಿ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು “ಭಾರತ ಹಲವು ಧರ್ಮ–ಜಾತಿ ಸಮುದಾಯಗಳನ್ನು ಒಳಗೊಂಡ ಪ್ರಜಾಸತ್ತಾತ್ಮಕ ರಾಷ್ಟ್ರ. ಇಂತಹ ಸಂದರ್ಭದಲ್ಲಿ ನಿರ್ದಿಷ್ಟ ಧಾರ್ಮಿಕ ಗ್ರಂಥದ ಆಯ್ದ ಭಾಗಗಳನ್ನು ಶಾಲಾ ಪಠ್ಯಕ್ರಮಕ್ಕೆ ಸೇರಿಸುವುದು ಸಮಾಜದಲ್ಲಿ ಭಿನ್ನಾಭಿಪ್ರಾಯ ಮತ್ತು ಸಂಘರ್ಷದ ವಾತಾವರಣವನ್ನು ಉಂಟುಮಾಡುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.

- Advertisement -

ಭಾರತ ದೇಶ ಹಲವಾರು ಧರ್ಮ ಜಾತಿಯನ್ನೊಳಗೊಂಡ ಶಾಂತಿಯ ತೋಟದ ಪ್ರಬುದ್ಧ ಭಾರತ ಹಾಗಿರುವಾಗ ಜಾತಿ ಧರ್ಮಗಳ ಮಧ್ಯ ಸಂಘರ್ಷನ್ನುಂಟುಮಾಡುವ ಧರ್ಮಕ್ಕೆ ಹಾಗೂ ಕೆಲವೇ ಶೇಖಡವಾರು ಜನಾಂಗದ ಬ್ರಾಹ್ಮಣ್ಯ ಶಾಯಿ ತತ್ವವನ್ನು ಬಹುಸಂಖ್ಯಾತ ಜನರ ಮೇಲೆ ಹೇರಲ್ಪಡುವ ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಯಾವುದೇ ಕಾರಣಕ್ಕೂ ಸೇರಿಸಬಾರದು. ಕುಮಾರಸ್ವಾಮಿ ಮಾಡಿರುವ ಸಲಹೆ ಮಕ್ಕಳಲ್ಲಿ ‘ಸಾಮಾಜಿಕ ವಿಭಜನೆಗೆ ಕಾರಣವಾಗಬಹುದಾದ ಧಾರ್ಮಿಕ ಪರಿಕಲ್ಪನೆಗಳನ್ನು’ ಬಿತ್ತುವ ಪ್ರಯತ್ನವೆಂದು ಅವರು ಟೀಕಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಲವಾರು ಸಂದರ್ಭಗಳಲ್ಲಿ “ಯುದ್ಧ ಬೇಡ, ಬುದ್ಧ ಬೇಕು – ಪ್ರಬುದ್ಧ ಭಾರತದ ಸಂಕಲ್ಪ” ಕುರಿತು ನೀಡಿರುವ ಸಂದೇಶವನ್ನು ಉಲ್ಲೇಖಿಸಿದ ಅವರು, “ವೈವಿಧ್ಯತೆಗೆ ಗೌರವ ನೀಡುವ ರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ಭಗವದ್ಗೀತೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬಾರದು” ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಸಮತಾ ಸೈನಿಕ ದಳ ಮನವಿ ಮಾಡಿದೆ.

WhatsApp Image 2025 12 12 at 9.25.48 PM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಮಗಾರಿ ನಡೆಸಿದರೆ ಸಹಿಸುವುದಿಲ್ಲ: ಶಾಸಕ ಡಾ.ಕೊತ್ತೂರು ಜಿ ಮಂಜುನಾಥ್ ಗರಂ

ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಹಾಗೂ ಶಿಷ್ಟಾಚಾರ ಪಾಲಿಸದೆ ಏಕಾಏಕಿ ಕಾಮಗಾರಿಗಳನ್ನು...

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...

ರಾಯಚೂರು | ಕೆ. ಶಾಂತಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಸಂತಸದ ವಿಚಾರ: ಬೋಸರಾಜು

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ. ಶಾಂತಪ್ಪ ಅವರು ಜವಾಬ್ದಾರಿ...