ಉಡುಪಿ ಪ್ರಕರಣ | ರಶ್ಮಿ ಸಮಂತ್ ವಿರುದ್ಧ ನೀಡಿದ ದೂರು ಟ್ವಿಟರ್‌ನಿಂದ ಮಾಯ- ಅಮೃತ್ ಶೆಣೈ ಆರೋಪ

Date:

- Advertisement -

“ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಶ್ಮಿ ಸಮಂತ್ ಎಂಬ ಮಹಿಳೆ ತನ್ನ ಟ್ವೀಟರ್ ಖಾತೆಯಲ್ಲಿ ಬರೆದ ಪ್ರಚೋದನಾಕಾರಿ ಸಂದೇಶಗಳನ್ನು ರಿಟ್ವೀಟ್ ಮಾಡಿ ದೂರನ್ನು‌ ಬರೆದು ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗೆ ಟ್ಯಾಗ್ ಮಾಡಿದ್ದೆ. ಮರುದಿನವೇ ಆ ಟ್ವೀಟ್ ಡಿಲಿಟ್ ಆಗಿದೆ” ಎಂದು ಉಡುಪಿಯ ʼಸಹಬಾಳ್ವೆʼ ಅಧ್ಯಕ್ಷ ಅಮೃತ್‌ ಶೆಣೈ ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಈ ದಿನ”ದ ಜೊತೆ ಮಾತನಾಡಿದ ಅವರು, ನಾನು ಕೆಲವು ಸ್ಕ್ರೀನ್ ಶಾಟ್‌ಗಳನ್ನು ಲಗತ್ತೀಕರಿಸಿದ್ದೆ. ಅವರ ಟ್ವೀಟ್‌ಗಳಲ್ಲಿ ಅವರು ಉಡುಪಿ ಕಾಲೇಜಿನ‌ ಪ್ರಕರಣದಲ್ಲಿ ಚಿತ್ರೀಕರಣ ಆದ ವೀಡಿಯೋ ‌ನೋಡಿದ್ದೇನೆ ಎಂದೂ‌ ಬರೆದಿದ್ದಾರೆ. ಎಸ್ ಪಿ ಯವರು ಸಾಮಾಜಿಕ‌ ತಾಣದಲ್ಲಿದ್ದ ವಿಡಿಯೋ ಈ ಪ್ರಕರಣದ್ದು ಅಲ್ಲ ಎಂದು ಹೇಳಿದ್ದಾರೆ. ತದನಂತರ ಯೂಟ್ಯೂಬ್ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ. ಆ ಬಳಿಕವೂ ರಶ್ಮಿ ತನ್ನ ಟ್ವೀಟ್ ಅನ್ನು ‌ಡಿಲೀಟ್ ಮಾಡಿಲ್ಲ. ಅದಲ್ಲದೇ ಅವರು ಮಾಧ್ಯಮದವರಲ್ಲಿ ಹಾಗೂ ತನ್ನ ಟ್ವೀಟ್‌ಗಳಲ್ಲಿ‌ ಪದೇ ಪದೇ ಉಡುಪಿ ಪೊಲೀಸರು ಅವರಿಗೆ ಕಿರುಕುಳ ನೀಡಿದ್ದಾರೆ ಆರೋಪ ಮಾಡಿದ್ದಾರೆ” ಎಂದು ಹೇಳಿದರು.

Untitled 2
ರಶ್ಮಿ ಸಮಂತ್‌ ಅವರ ಪ್ರಚೋದನಕಾರಿ ಟ್ವೀಟ್‌

“ವೀಡಿಯೋ ‌ರೆಕಾರ್ಡಿಂಗ್‌ ಮಾಡಿದ್ದರೆ, ಅದನ್ನು‌ ನಾನೂ‌ ವಿರೋಧಿಸುತ್ತೇನೆ. ಯಾವ ಧರ್ಮದವರೇ ಇರಲಿ‌, ತಪ್ಪು ತಪ್ಪೇ. ಆದರೆ ಪೊಲೀಸರು ‌ತನಿಖೆ ನಡೆಸುವ ಮೊದಲೇ ತೀರ್ಪು‌ನೀಡಿದ ರೀತಿಯಲ್ಲಿ ಟ್ವೀಟ್ ಮಾಡುವುದು ಕಾನೂನು‌ ಬಾಹಿರ.

ಪ್ರಚೋದನಕಾರಿ ಹಾಗು ಸುಳ್ಳು ಆರೋಪ ಮಾಡಿರುವ ರಶ್ಮಿಯವರ ಮೇಲೂ‌ ಪ್ರಕರಣ ದಾಖಲು ಮಾಡಬೇಕೆ‌ಂದು ಉಡುಪಿ ಪೊಲೀಸರಿಗೆ ಈ‌ ಮೂಲಕ ಮನವಿ ಮಾಡುತ್ತೇನೆ. ಏಕೆಂದರೆ ಅವರಿಗೆ ಲಕ್ಷಾಂತರ ಫಾಲೊವರ್ಸ್ ಇದ್ದು, ಅವರು ಮಾಡಿದ ಟ್ವೀಟ್‌ಗಳು ಸಮಾಜದ ಶಾಂತಿಯನ್ನು‌ ಕದಡುತ್ತವೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ” ಎಂದು ಅಮೃತ್‌ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...