ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ಹಮ್ಮಿಕೊಂಡಿರುವ “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)” ಸೀರತ್ ಅಭಿಯಾನದ ಪ್ರಯುಕ್ತ ಬುಧವಾರ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ರೋಗಿಗಳನ್ನು ಸಂದರ್ಶಿಸಿ, 150ಕ್ಕೂ ಹೆಚ್ಚು ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಸೀರತ್ ಅಭಿಯಾನದ ಭಾಗವಾಗಿ ಈ ಸೇವಾ ಕಾರ್ಯಕ್ರಮ ನಡೆಯಿತು. ರೋಗಿಗಳ ಯೋಗಕ್ಷೇಮ ವಿಚಾರಿಸಿದ ಸ್ವಾಗತ ಸಮಿತಿ ಸದಸ್ಯರು, ಹಣ್ಣುಹಂಪಲು ವಿತರಿಸಿ ಮಾನವೀಯ ಸೇವೆಯ ಮಹತ್ವವನ್ನು ಸಾರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ ವಾಸುದೇವ, ಸೀರತ್ ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಶಾಹನವಾಝ್ ಮಣಿಪಾಲ, ಕಾರ್ಯದರ್ಶಿ ಜ. ಖಾಲಿದ್ ಅಬ್ದುಲ್ ಅಝೀಝ್, ಖಜಾಂಚಿ ಫೈಝ್ ಅಝೀಝ್ ಸೇರಿದಂತೆ ಸ್ವಾಗತ ಸಮಿತಿ ಸದಸ್ಯರಾದ ಆಸಿಫ್, ಮನ್ಸೂರ್ ಸಂತೆಕಟ್ಟೆ, ಮನ್ಸೂರ್ ಇಕ್ಬಾಲ್, ಶಹಜಹಾನ್ ತೋನ್ಸೆ, ಇಕ್ಬಾಲ್ ಮನ್ನಾ, ಅಬ್ದುಲ್ ಅಝೀಝ್ ಉದ್ಯಾವರ, ದಾನಿಶ್ ಮೌಲಾನಾ, ರಿಯಾಝ್ ಅಹಮದ್ ಕುಕ್ಕಿಕಟ್ಟೆ, ರಈಸ್ ಅಹಮದ್, ಇಫಿಕಾರ್, ಝಿಯಾವುದ್ದೀನ್ ರಹಮಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

“ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)” ಸೀರತ್ ಅಭಿಯಾನವು ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ನಡೆಯಲಿದ್ದು, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.





