ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವತಿಯಿಂದ ಅತೀ ವಂದನೀಯ ಫಾದರ್ ಚಾರ್ಲ್ಸ್ ಮೆನೆಜಸ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಉಡುಪಿ ಶೋಕಮಾತ ಚರ್ಚ್‌ನ ಮಿನಿ ಹಾಲ್‌ನಲ್ಲಿ ನಡೆದ ವೇದಿಕೆಯ ವಿಶೇಷ ಸಭೆಯಲ್ಲಿ ಈ ಕಾರ್ಯಕ್ರಮ ಜರುಗಿತು. ಸಭೆಗೆ ವೇದಿಕೆಯ ಅಧ್ಯಕ್ಷರಾದ ಚಾರ್ಲ್ಸ್ ಅಂಬ್ಲರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಫಾ. ಚಾರ್ಲ್ಸ್ ಮೆನೆಜಸ್ ಭಾಗವಹಿಸಿದ್ದರು.
ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್ ಅತಿಥಿಗಳನ್ನು ಸ್ವಾಗತಿಸಿದರು. ಉಡುಪಿಯಿಂದ ಶಿರ್ವಕ್ಕೆ ವರ್ಗಾವಣೆಗೊಂಡ ಫಾ. ಚಾರ್ಲ್ಸ್ ಮೆನೆಜಸ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೌಲಾ ಹಾಗೂ ಶ್ರೀ ಅಲ್ಫೋನ್ಸ್ ಡಿಕಾಸ್ಟಾ ಮತ್ತು ವೇದಿಕೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಅವರು ಫಾದರ್ ಅವರ ಸೇವೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಫಾ. ಚಾರ್ಲ್ಸ್ ಮೆನೆಜಸ್ ಅವರು ತಮ್ಮ ಸೇವಾ ಅವಧಿಯಲ್ಲಿ ದೊರೆತ ಸಹಕಾರವನ್ನು ಸ್ಮರಿಸಿ, ಕಾಲೇಜು ದಿನಗಳಿಂದ ಇಂದಿನವರೆಗೆ ಎದುರಿಸಿದ ಅನುಭವಗಳನ್ನು ಹಂಚಿಕೊಂಡರು. ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶೋಕಮಾತ ಇಗರ್ಜಿಯ ಉಪಾಧ್ಯಕ್ಷ ಮಾಕ್ಸವ್ ಡಿಸೋಜಾ, ಭಾರತೀಯ ಕ್ರೈಸ್ತ ಒಕ್ಕೂಟದ ಗ್ಲಾಡಿಸನ್ ಕಾಕಡ ಸೇರಿದಂತೆ ವೇದಿಕೆಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಜೀಝ್ ಉದ್ಯಾವರ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಅಲ್ಫೋನ್ಸ್ ಡಿಕಾಸ್ಟಾ ನಿರೂಪಿಸಿದರು.






