ಉಡುಪಿ | ಮೂಲ ನಿವಾಸಿಗಳ ಮತದಾನದ ಹಕ್ಕು ಕಿತ್ತುಕೊಳ್ಳುವ ಸಂಚು: ಜ್ಞಾನಪ್ರಕಾಶ ಸ್ವಾಮೀಜಿ ಆರೋಪ

Date:

ಮೂಲನಿವಾಸಿಗಳ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಅರಿವು ಮೂಡಿಸಿಕೊಂಡು ಜಾಗೃತರಾದಾಗ ಮಾತ್ರ ಸಮಾಜದಲ್ಲಿ ಅಧಿಕಾರ ಮತ್ತು ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಇತಿಹಾಸದ ಅರಿವಿಲ್ಲದ ಸಮುದಾಯಗಳು ತಮ್ಮ ಹಕ್ಕುಗಳಿಂದ ವಂಚಿತರಾಗುವ ಅಪಾಯವಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

- Advertisement -
1013110461

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಉಡುಪಿಯ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ಮಹಿಷ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ,...

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ...

ನವೆಂಬರ್ 26ರ ಸಂವಿಧಾನ ದಿನಾಚರಣೆಯಿಂದ ನವೆಂಬರ್ 26, 2027ರವರೆಗೆ ಐಕ್ಯ ಹೋರಾಟ ಸಮಿತಿಯ ಒಂದು ವರ್ಷದ ಅಭಿಯಾನ; ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹೊಸ ಸಂಕಲ್ಪ ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಿಗೂ...
1013110470

ಅಸುರರು ಎಂದರೆ ದೈತ್ಯರು ಎಂಬ ಅರ್ಥದಲ್ಲಿ ಮಾತ್ರವಲ್ಲದೆ, ದಾನಶೀಲರು ಮತ್ತು ರಕ್ಷಕರಾಗಿಯೂ ಪರಿಗಣಿಸಬೇಕಾದವರು. ದೇಶ, ಪ್ರಕೃತಿ ಮತ್ತು ಜನರನ್ನು ರಕ್ಷಿಸಿದ ಮಹಿಷಾಸುರ ಸೇರಿದಂತೆ ಹಲವು ಸಾಂಸ್ಕೃತಿಕ ನಾಯಕರನ್ನು ರಾಕ್ಷಸರಂತೆ ಚಿತ್ರಿಸುವ ಮೂಲಕ ಇತಿಹಾಸವನ್ನು ತಿರುಚಲಾಗಿದೆ ಎಂಬುದು ತಮ್ಮ ನಿಲುವು ಎಂದು ಸ್ವಾಮೀಜಿ ಹೇಳಿದರು.

1013110462

ಭಾರತದ ಇತಿಹಾಸವನ್ನು ಬ್ರಾಹ್ಮಣ್ಯ ಮತ್ತು ಬೌದ್ಧ, ದ್ರಾವಿಡ ಮತ್ತು ಆರ್ಯ, ವೈದಿಕ ಮತ್ತು ಅವೈದಿಕ ಪರಂಪರೆಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಿದೆ. ಮಹಿಷಾಸುರ ಆದಿವಾಸಿಗಳ ನಾಯಕನಾಗಿದ್ದರು ಎಂಬ ನಂಬಿಕೆಯೊಂದಿಗೆ ಮೂಲನಿವಾಸಿಗಳು ತಮ್ಮ ಚರಿತ್ರೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

1013110460

“ನಮ್ಮಲ್ಲಿ ಇತಿಹಾಸದ ಬಗ್ಗೆ ಜಾಗೃತಿ ಮೂಡಿ ಎಚ್ಚೆತ್ತುಕೊಂಡರೆ ಮಾತ್ರ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ. ಆದರೆ ನಮ್ಮನ್ನು ಜಾಗೃತರಾಗಲು ಬಿಡದ ವಾತಾವರಣವಿದೆ. ಬಾಯಲ್ಲಿ ಭೀಮವಾದ ಹೇಳುತ್ತಾ, ಮನೆಗಳಲ್ಲಿ ಮನುವಾದ ಆಚರಿಸಿದರೆ ಅಂಬೇಡ್ಕರ್ ಮತ್ತು ಬುದ್ಧರ ವಿಚಾರಗಳನ್ನು ಹೇಗೆ ಜೀವಂತವಾಗಿಡಲು ಸಾಧ್ಯ?” ಎಂದು ಪ್ರಶ್ನಿಸಿದರು.

1013110463

ಮಹಿಷಾಸುರ, ರಾವಣಾಸುರ, ರಂಬಾಸುರ, ಮೂಕಾಸುರ, ಬಕಾಸುರ, ಹಿಂಡಬಸುರ ಹಾಗೂ ಬಲಿಚಕ್ರವರ್ತಿಯಂತಹ ವ್ಯಕ್ತಿತ್ವಗಳನ್ನು ತಮ್ಮ ಸಾಂಸ್ಕೃತಿಕ ಪರಂಪರೆಯ ನಾಯಕರಾಗಿ ನೋಡುವ ಸಮುದಾಯಗಳು, ಅವರ ಸ್ಮರಣೆಗೆ ಮಹತ್ವ ನೀಡಬೇಕು. ತಮ್ಮ ಸಾಂಸ್ಕೃತಿಕ ನಾಯಕರನ್ನು ರಾಕ್ಷಸರಂತೆ ಬಿಂಬಿಸುವ ಚಿತ್ರಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

1013110466
  • ಅಂಬೇಡ್ಕರ್ ಸಂವಿಧಾನ ಸಮಾನ ಅವಕಾಶದ ಭರವಸೆ

ಪರಂಪರೆ, ಚರಿತ್ರೆ ಮತ್ತು ಸಂಸ್ಕೃತಿಯ ಅರಿವಿಲ್ಲದ ಸಮುದಾಯಗಳು ಅಧಿಕಾರ ಹಾಗೂ ಹಕ್ಕುಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ದೇಶದ ನಿರ್ಮಾಣದಲ್ಲಿ ಮೂಲನಿವಾಸಿಗಳ ಕೊಡುಗೆಯನ್ನು ಗುರುತಿಸುವುದರ ಜೊತೆಗೆ ಅವರ ಸಾಮಾಜಿಕ ಸ್ಥಿತಿಗತಿಯ ಬಗ್ಗೆಯೂ ಚರ್ಚೆ ನಡೆಯಬೇಕು ಎಂದು ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

1013110465
  • ಮತದಾನದ ಹಕ್ಕು ಕಿತ್ತುಕೊಳ್ಳುವ ಸಂಚು ನಡೆಯುತ್ತಿದೆ: ಆರೋಪ

ಮನುಸ್ಮೃತಿಯ ಸಾಮಾಜಿಕ ವ್ಯವಸ್ಥೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳನ್ನು ಹೋಲಿಸಿದ ಅವರು, “ಕಸ ಗುಡಿಸುವವರ ಮಗಳು ಕಸ ಗುಡಿಸಬೇಕು ಎಂಬ ಮನುವಾದಿ ಚಿಂತನೆಗೆ ವಿರುದ್ಧವಾಗಿ, ಕಸ ಗುಡಿಸುವವರ ಮಗಳು ಜಿಲ್ಲಾಧಿಕಾರಿಯಾಗಬಹುದು ಎಂಬ ಸಮಾನ ಅವಕಾಶವನ್ನು ಅಂಬೇಡ್ಕರ್ ಸಂವಿಧಾನ ಒದಗಿಸುತ್ತದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು” ಎಂದರು.

ಮೂಲ ನಿವಾಸಿಗಳನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮೂಲೆಗುಂಪು ಮಾಡಿ, ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.

1013110469

ಈ ದೇಶದ ಬಹುಜನರು ಆಳುವವರಾಗಬೇಕೇ ಹೊರತು ಗುಲಾಮರಾಗಬಾರದು. ಸ್ವಾಭಿಮಾನ ಮತ್ತು ಘನತೆ ಆಳುವ ಸಮುದಾಯದ ಲಕ್ಷಣಗಳಾಗಿವೆ. ಮೂಲನಿವಾಸಿಗಳನ್ನು ಅನಾಥರನ್ನಾಗಿಸಿ, ಅವರ ಮತದಾನದ ಹಕ್ಕನ್ನು ಕಿತ್ತುಕೊಂಡು ದೇಶದ್ರೋಹಿಗಳಂತೆ ಬಿಂಬಿಸುವ ಸಂಚು ನಡೆಯುತ್ತಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಚರಿತ್ರೆಯಲ್ಲಿ ಮೂಲನಿವಾಸಿಗಳನ್ನು ಊರಿನಿಂದ ಹೊರಗಿಡಲಾಗುತ್ತಿತ್ತು; ಇಂದು ಅವರನ್ನು ಹಕ್ಕು ಮತ್ತು ಅಧಿಕಾರಗಳಿಂದ ದೂರವಿಡಲಾಗುತ್ತಿದೆ ಎಂದು ಅವರು ಹೇಳಿದರು. ದೇಶದ ಸಂಪತ್ತು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಗಂಭೀರ ಚರ್ಚೆ ನಡೆಯಬೇಕಾದ ಸಂದರ್ಭದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಟೀಕೆಯನ್ನೂ ಮಾಡಿದರು.

1013110467

ಮಹಿಷ ಮಂಡಲದ ಒಡೆಯನಾಗಿದ್ದ ಮಹಿಷನ ಸ್ಮರಣೆ ಮಾಡುವುದು ತಮ್ಮ ದೃಷ್ಟಿಯಲ್ಲಿ ನೈಜ ಇತಿಹಾಸದ ಅರಿವಿನ ಭಾಗವಾಗಿದೆ. ಅಸುರ ಪರಂಪರೆಯನ್ನು ಸ್ಮರಿಸುವುದು ಸಮುದಾಯದ ಜವಾಬ್ದಾರಿಯಾಗಿದ್ದು, ಇದು ಯಾವುದೇ ಸರ್ಕಾರ ಅಥವಾ ಧರ್ಮಕ್ಕೆ ಪರ್ಯಾಯವಾದ ಆಚರಣೆಯಲ್ಲ. ಪ್ರತಿಯೊಂದು ಸಮುದಾಯಕ್ಕೂ ತನ್ನ ಸಂಸ್ಕೃತಿ ಮತ್ತು ನಾಯಕರ ಹಬ್ಬವನ್ನು ಆಚರಿಸುವ ಹಕ್ಕಿದೆ. ಆದರೆ ತಮ್ಮ ಸಾಂಸ್ಕೃತಿಕ ನಾಯಕರನ್ನು ರಾಕ್ಷಸರಂತೆ ಚಿತ್ರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

  • ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಮಹಿಷ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು ಹಾಗೂ ಉಡುಪಿ ಜಿಲ್ಲಾ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ನಿರ್ದೇಶಕ ಯು. ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಪಿಎಚ್‌ಡಿ ಪದವಿ ಪಡೆದ ಡಾ. ಆಶಾ ಅವರಿಗೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಮತ್ತು ಬಹುಜನ ಚಿಂತಕ ನಾರಾಯಣ ಮಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಸಂಸ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು ಹಾಗೂ ಅಂಬೇಡ್ಕರ್ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ದಯಾಕರ ಮಲ್ಪೆ ಸ್ವಾಗತಿಸಿದರು. ಲಕ್ಷ್ಮೀನಗರದ ರವಿರಾಜ್ ವಂದಿಸಿದರು. ರಾಘು ಶಿರೂರು ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು ಕಲಾವಿದ ಶಂಕರದಾಸ್ ಚೇಂಡ್ಕಳ ತಂಡದವರಿಂದ ಕ್ರಾಂತಿಗೀತೆಗಳ ಗಾಯನ ನಡೆಯಿತು. ಕ್ರಾಂತಿಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ಜ್ಞಾನಪ್ರಕಾಶ ಸ್ವಾಮೀಜಿ ಮಹೋತ್ಸವವನ್ನು ಉದ್ಘಾಟಿಸಿ, ಮೂಲನಿವಾಸಿಗಳ ಇತಿಹಾಸ, ಸಾಂಸ್ಕೃತಿಕ ಗುರುತು, ಸಾಮಾಜಿಕ ನ್ಯಾಯ, ಸ್ವಾಭಿಮಾನ ಮತ್ತು ಸಂವಿಧಾನದ ಆಶಯಗಳ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.

ಮಹಿಷ ಮಹೋತ್ಸವವು ಮೂಲನಿವಾಸಿಗಳ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವುದು, ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಾಮಾಜಿಕ ಸಮಾನತೆಯ ಕುರಿತು ಚರ್ಚೆ ನಡೆಸುವ ವೇದಿಕೆಯಾಗಿ ನಡೆಯಿತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆ ತಡೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ; ಗರ್ಭಧಾರಣೆ ಸೂಚನೆ

ಜಿಲ್ಲೆಯಲ್ಲಿ ಬಾಲ್ಯವಿವಾಹ, ಹದಿಹರೆಯದ ಗರ್ಭಧಾರಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ...

ಬಸವ ಮಂಟಪ ಕೃತಿಗೆ ತೀವ್ರ ಖಂಡನೆ: ‘ಅನುಭವ ಮಂಟಪ ಅಭಿಯಾನ’, ವೈಚಾರಿಕ ಗ್ರಂಥಗಳ ಮೂಲಕ ಉತ್ತರ ನೀಡಲು ನಿರ್ಣಯ

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಗಳಿಗೆ ಅಪಮಾನ ಮಾಡುವಂತಹ ವಿವಾದಾತ್ಮಕ ಕೃತಿಯ...

ಚಿಕ್ಕಮಗಳೂರು | ದತ್ತಜಯಂತಿ ಪ್ರಯುಕ್ತ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಅಧಿಕಾರಿಗಳ ಭೇಟಿ 

ದತ್ತಜಯಂತಿ-2026 ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ...

ಹಾಸನ | ಕಟ್ಟಡ ಕಟ್ಟಿಕೊಳ್ಳಲು ಪಾಲಿಕೆಯಿಂದಲೇ ಅನುಮತಿ; ಕಾರ್ಮಿಕರು 

ಹಾಸನ ತಾಲೂಕು ಕೆ.ಆ‌ರ್. ಪುರಂ ಮೊದಲನೇ ಹಂತದಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು...