ಮಣ್ಣಿನ ಮಡಕೆ ಬಳಸುವ ವಿಧಾನ – ಪ್ರಯೋಜನ ಕುರಿತ ಉಪಯುಕ್ತ ಮಾಹಿತಿ

Date:

ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದು, ಹಬೆಯಲ್ಲಿ ಬೇಯಿಸುವುದಕ್ಕೆ ಸಮನಾಗಿರುವುದರಿಂದ ಆಹಾರ ಪದಾರ್ಥದೊಳಗಿನ ಪೋಷಕಾಂಶಗಳ ಸತ್ವವು ಹಾಗೆಯೇ ಉಳಿಯುತ್ತವೆ. ಅಡುಗೆಗೆ ಹೆಚ್ಚುವರಿ ಎಣ್ಣೆಯ ಬಳಕೆ ಅಗತ್ಯವಿಲ್ಲ. ಆಹಾರ ಪದಾರ್ಥಗಳನ್ನು ಆಗಾಗ ಬಿಸಿ ಮಾಡುವುದರಿಂದ ಅವುಗಳಲ್ಲಿನ ಪೋಷಕಾಂಶಗಳು ಕಡಿಮೆ ಆಗುತ್ತವೆ. ಆದರೆ ಜೇಡಿಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಉಷ್ಣಾಂಶವು ಧೀರ್ಘ ಕಾಲ ಉಳಿದು, ಆಗಾಗ ಬಿಸಿ ಮಾಡುವ ಅಗತ್ಯ ಇರುವುದಿಲ್ಲ

ಇತ್ತೀಚೆಗೆ ಅಲ್ಯೂಮಿನಿಯಂ, ಸ್ಟೀಲ್‌ ಪಾತ್ರೆಗಳ ಹಾವಳಿಯಿಂದಾಗಿ ವಂಶಪಾರಂಪರ್ಯವಾಗಿ ಕುಲಕಸುಬಾಗಿ ಮಾಡಿಕೊಂಡು ಬಂದಿರುವ ಕುಂಬಾರಿಕೆ ವೃತ್ತಿಗೆ ತೊಡಕುಂಟಾಗುತ್ತಿದೆ. ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಬಗೆ ಬಗೆಯ ಪದಾರ್ಥಗಳು ಹೆಚ್ಚು ರುಚಿಕರ ಹಾಗೂ ಆರೋಗ್ಯಕ್ಕೂ ಪೂರಕವಾಗಿತ್ತು. ಅಂದಿನ ದಿನಗಳಲ್ಲಿ ಮಣ್ಣಿನಿಂದ ಮಾಡಿದ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಪ್ರಸ್ತುತ ಬಹುತೇಕ ಜನರು ಅಲ್ಯೂಮಿನಿಯಂ, ಸ್ಟೀಲ್‌ ಪಾತ್ರೆ ಖರೀದಿಗೆ ಮಾರುಹೋಗುತ್ತಿದ್ದಾರೆ. ಆದರೂ ಕಲಬುರಗಿ ದಕ್ಷಿಣ ಕ್ಷೇತ್ರದ ಮೇಳಕುಂದ (ಕೆ) ಗ್ರಾಮದಲ್ಲಿ ಮಡಕೆ ತಯಾರಿಸುವ ಕುಂಬಾರ ಸಂಪ್ರದಾಯ ಕಂಡುಬರುತ್ತದೆ.

ಮಡಿಕೆ ತಯಾರಿಸುವ ವಿಧಾನ ತುಂಬಾ ಆಕರ್ಷಣೆ:

ಎರಡು ತರಹದ ಮಣ್ಣನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿ ಬಳಿಕ ಜರಡಿಯಲ್ಲಿ ಶೋಧಿಸಿ, ಬೂದಿ, ಕತ್ತೆಯ ಲದ್ದಿ ಸೇರಿಸಿ ನೀರಲ್ಲಿ ಕಲಸಿ 2ಗಂಟೆಗಳ ಕಾಲ ತುಳಿಯಬೇಕು ಅಂಟು ಬರುವವರೆಗೂ ಹದವಾಗಿ ನಾದಿದಾಗ ಅದು ಮಡಕೆ ಮಾಡುವುದಕ್ಕೆ ಯೋಗ್ಯವಾಗಿರುತ್ತದೆ. ನಂತರ ಮಡಕೆ ರೂಪ ಕೊಡುವ ಸಾಧನವಾಗಿರುವ ಟೀಗಾರಿ ಮೇಲೆ ಇಟ್ಟು, ಒಬ್ಬರು ಚಕ್ರ ತಿರುಗಿಸುತ್ತಾರೆ, ಮತ್ತೊಬ್ಬರು ಆ ಮಣ್ಣಿಗೆ ಮಡಕೆಯ ರೂಪವನ್ನು ನಾಜೂಕಾಗಿ ನೀಡುತ್ತಾರೆ. ಅತ್ಯಂತ ತಾಳ್ಮೆ, ಶ್ರದ್ಧೆಯಿಂದ ಈ ಕೆಲಸ ನಿಭಾಯಿಸುವ ಶೈಲಿಯೇ ನೋಡುಗರ ಕಣ್ಮನ ಸೆಳೆಯುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಣ್ಣಿಗೆ ಮಡಕೆಯ ರೂಪಕೊಟ್ಟ ಬಳಿಕ ಅದರ ಅಡಿ ಭಾಗ ತುಂಡರಿಸಿ, ಬೇರ್ಪಡಿಸುತ್ತಾರೆ. ನಂತರ ಮಡಕೆ ಒಳಭಾಗದಲ್ಲಿ ಕಲ್ಲು ಮೇಲ್ಭಾಗದಲ್ಲಿ ಸಣ್ಣ ಮರದ ಹಲಗೆಯಿಂದ ಚೆನ್ನಾಗಿ ತಟ್ಟಿಯೇ ಚಿಕ್ಕ ಮಡಿಕೆಳು ಹಾಗೂ ದೊಡ್ಡ ಮಡಿಕೆಗಳನ್ನು ಮಾರ್ಪಡಿಸುತ್ತಾರೆ. ಹೀಗೆ ತಯಾರಾದ ಹಸಿ ಮಡಕೆ ಮೂರ್ನಾಲ್ಕು ದಿನ ಬಿಸಿಲಿಗೆ ಒಣಗಿಸಿ, ಬಳಿಕ ಬೆಂಕಿಯಲ್ಲಿ ಹಾಕಿ ಚನ್ನಾಗಿ ಕಾಯಿಸಲಾಗುತ್ತದೆ.

ಒಂದು ಮಡಕೆ ಪೂರ್ತಿ ಸಿದ್ಧವಾಗಿ ಮಾರುಕಟ್ಟೆಗೆ ಬರಬೇಕಾದರೆ ಕನಿಷ್ಠ ಒಂದು ವಾರ ಕಾಲಾವಕಾಶ ಬೇಕು. ಒಂದು ದಿನದಲ್ಲಿ ಹತ್ತು ಮಡಕೆಗಳನ್ನು ಮಾಡಬಹುದಾಗಿದೆ.

ನಾನಾ ವಿಧದ ಮಣ್ಣಿನ ಮಡಕೆಗಳು, ಅಲಂಕಾರಿಕ ವಸ್ತು, ಮಡಕೆ, ರೊಟ್ಟಿ ಹೆಂಚು, ಹೂಜಿ, ಫ್ಲವರ್ ಪಾಟ್, ಗ್ಲಾಸ್, ಚಹಾ ಕಪ್, ಕುಂದಲಿ, ಕುಕ್ಕರ್, ಭರಣಿ, ಬಿಸಿಲೆ, ಮಡಕೆ, ಕುಡಿಕೆ, ಅನ್ನ ಬೇಯಿಸುವ ಮಡಕೆ, ಪಣತಿ, ನೀರಿನ ಬಾಟೆಲ್, ಹಾಟ್‌ ಬಾಕ್ಸ್‌, ಸೇರಿದಂತೆ ದೇವಸ್ಥಾನಕ್ಕೆ ಬೇಕಾದ ಕಲಶ, ಹಣತೆ ಹೀಗೆ ಧಾರ್ಮಿಕ ಕಾರ್ಯಕ್ರಗಳಿಗೂ ಕುಂಬಾರರು ಸಿದ್ಧಪಡಿಸಿದ ಮಡಕೆ ಅತಿ ಅಗತ್ಯವಾಗಿ ಬೇಕು. ಹುಟ್ಟಿನ ಸಂಭ್ರಮಕ್ಕೂ, ಸಾವಿನ ಸೂತಕಕ್ಕೂ ಮಣ್ಣಿನ ಮಡಕೆಯ ಅವಶ್ಯಕತೆ ಇದ್ದೇ ಇದೆ.

‌ಕಲಬುರಗಿ ದಕ್ಷಿಣ ಕ್ಷೇತ್ರದ ಮೇಳಕುಂದ(ಕೆ)ಗ್ರಾಮದಲ್ಲಿ ಪ್ರಸ್ತುತ ಸುಮಾರು 50 ಕುಟುಂಬಗಳು ಕುಂಬಾರಿಕೆ ವೃತ್ತಿ ಅವಲಂಬಿಸಿದ್ದಾರೆ. ಈ ವೃತ್ತಿನಿರತರಿಗೆ ಯಾವುದೇ ರೀತಿಯ ಸರ್ಕಾರದಿಂದ ನೆರವು ಸಿಕ್ಕಿಲ್ಲ. ಗ್ರಾಮದಲ್ಲಿ 50 ಕುಟುಂಬಗಳು ಈ ವೃತ್ತಿ ಮುಂದುವರಿಸಿಕೊಂಡು ಬಂದಿದ್ದಾರೆ.

ಕುಡಿಯುವ ನೀರನ್ನು ಕಡಿಮೆ ವೆಚ್ಚದಲ್ಲಿ ತಂಪಾಗಿಡಲು ಸುಲಭ ಹಾಗೂ ಸರಳ ವಿಧಾನ ಮಣ್ಣಿನ ಮಡಕೆ. ಬಿಸಿಲ ಬೇಗೆಗೆ ನಗರ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲರೂ ಇದೀಗ ಮಣ್ಣಿನ ಮಡಕೆ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಡಕೆ ಮಣ್ಣಿನಲ್ಲಿ ನೀರು ತುಂಬಿಸಿಡುವುದು ಆರೋಗ್ಯಕರ ಮಾತ್ರವಲ್ಲದೆ ಫ್ಯಾಶನ್‌ ಆಗಿಯೂ ಬದಲಾಗಿದೆ. ಇದು ಕುಲಕಸುಬುದಾರರಿಗೆ ಪ್ರೋತ್ಸಾಹ ನೀಡಿದಂತಾಗುವುದಲ್ಲದೆ, ಸಂಸ್ಕೃತಿ ಮರುಕಳಿಸುವಂತೆಯೂ ಮಾಡಿದೆ. ಫ್ರಿಜ್‌ ಇದ್ದರೂ ಕೆಲವರಿಗೆ ಮಣ್ಣಿನ ಮಡಕೆಯ ನೀರು ಕುಡಿದರೆ ಮಾತ್ರ ಸಮಾಧಾನ.

ಮಣ್ಣಿನ ಪಾತ್ರೆಗಳ ಬಳಕೆಯ ವಿಧಾನ : ಹೊಸದಾದ ಪಾತ್ರೆಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ಸಂಪೂರ್ಣ ನೆನೆಸಿಟ್ಟು ನಂತರ ಶುದ್ಧ ನೀರಿನಿಂದ ತೊಳೆದು ಬಿಸಿಲಿನಲ್ಲಿ 2-3 ಗಂಟೆ ಇಟ್ಟು ಒಣಗಿಸಬೇಕು. ಅಡುಗೆಗೆ ಬಳಸುವ ಯಾವುದಾದರೂ ಎಣ್ಣೆಯನ್ನು ಪಾತ್ರೆಯ ಒಳ ಮತ್ತು ಹೊರ ಭಾಗಕ್ಕೆ ಲೇಪಿಸಿ, ಒಂದು ಗಂಟೆಯ ಕಾಲ ಹಾಗೇ ಬಿಟ್ಟು ಬಳಿಕ ಪಾತ್ರೆಯಲ್ಲಿ ಮುಕ್ಕಾಲು ಭಾಗದಷ್ಟು ನೀರು ತುಂಬಿ ಕಡಿಮೆ ಉಷ್ಣಾಂಶದಲ್ಲಿ ಕಾಯಿಸಿ, ನೀರು ಕುದಿಯಲು ಬಂದಾಗ 5-6 ಚಮಚದಷ್ಟು ಅಕ್ಕಿ, ಗೋಧಿ ಅಥವಾ ಮೈದಾ ಹಿಟ್ಟುನ್ನು ಹಾಕಿ 15-20 ನಿಮಿಷ ಕುದಿಸಿ. ನಂತರ 5-6 ಗಂಟೆಗಳ ಕಾಲ ಹಾಗೇ ತಣ್ಣಗಾಗಲು ಬಿಟ್ಟು, ಆ ನೀರನ್ನು ಹಾರ ಹಾಕಿ ಮತ್ತೊಮ್ಮೆ ಒಣಗಲು ಬಿಡಬೇಕು. ಸಂಪೂರ್ಣ ಒಣಗಿದ ನಂತರ ಮಣ್ಣಿನ ಪಾತ್ರೆ ಬಳಕೆಗೆ ಸಿದ್ದವಾಗುತ್ತದೆ.

ಮಣ್ಣಿನ ಪಾತ್ರೆ ಬಳಕೆಗೆ ಮುಂಚೆ ಶುಚಿ ಮಾಡುವಿಕೆ ವಿಧಾನ

ಬೆಚ್ಚಗಿನ ನೀರಿನಲ್ಲಿ ಮೃದು ಬ್ರಷ್ ಅಥವಾ ಸ್ಕ್ರಬ್ಬಿಂಗ್ ಪ್ಯಾ‌ಡ್‌ನಿಂದ ಮೆಲ್ಲನೆ ಉಜ್ಜಿ ತೊಳೆಯಬೇಕು. ಯಾವುದೇ ಕಾರಣಕ್ಕೂ ಸೋಪು, ಡಿಟರ್ಜೆಂಟ್ ಪೌಡರ್ ಅಥವಾ ರಾಸಾಯನಿಕಗಳನ್ನು ಉಪಯೋಗಿಸಿ ತೊಳೆಯಬಾರದು. ಜೇಡಿಮಣ್ಣಿನ ಪಾತ್ರೆಯಲ್ಲಿ ಅತಿಸೂಕ್ಷ್ಮ ರಂಧ್ರಗಳಿರುವುದರಿಂದ ಇವು ರಾಸಾಯನಿಕಗಳನ್ನು ಹೀರಿಕೊಂಡು, ಅನಂತರ ನಿಮ್ಮ ಆಹಾರ ಪದಾರ್ಥಗಳೊಂದಿಗೆ ಮಿಶ್ರಣವಾಗುವ ಸಾಧ್ಯತೆ ಇರುತ್ತದೆ ಎಂಬುದು ಕುಂಬಾರರ ಎಚ್ಚರಿಕೆ.

ಗಟ್ಟಿಯಾದ ಕಲೆಗಳನ್ನು ಹೋಗಲಾಡಿಸಲು ಕಲ್ಲುಪ್ಪು ಅಥವಾ ಬೂದಿ ಹಾಕಿ ನಯವಾಗಿ ಉಜ್ಜಿ ತೊಳೆಯಬೇಕು. ಬಳಿಕ ಅದರಲ್ಲಿ ನೀರು ತುಂಬಿಸಿ ಅರ್ಧ ಗಂಟೆ ಹಾಗೇ ಬಿಟ್ಟು, ಆನಂತರ ನೀರನ್ನು ಚಲ್ಲಿ, ಹೊಸ ನೀರಿನಲ್ಲಿ ಪಾತ್ರೆಯನ್ನು ತೊಳೆದು ಬಳಸಬೇಕು.

ಮಣ್ಣಿನ ಪಾತ್ರೆ ಬಳಸುವಾಗ ವಹಿಸಬೇಕಾದ ಮುಂಜಾಗರೂಕತೆ ಕ್ರಮಗಳು

ಅಡುಗೆ ಮಾಡುವಾಗ ಮರದ ಸೌಟುಗಳನ್ನು ಬಳಸುವುದು ಉತ್ತಮ, ಲೋಹದ ಸೌಟುಗಳು ಪಾತ್ರೆಯನ್ನು ಕೆರೆದು ಹಾಳು ಮಾಡಬಹುದು. ಇತರ ಲೋಹದ ಪಾತ್ರೆಗಳಲ್ಲಿ ಅಡುಗೆ ಮಾಡುವುದಕ್ಕಿಂತ ಜೇಡಿಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ಸರಿಯಾಗಿ ನಿರ್ವಹಿಸದಿದ್ದರೆ ಇವು ಬಿರುಕಾಗಬಹುದು ಅಥವಾ ಒಡೆಯಬಹುದು ಉರಿಯುತ್ತಿರುವ ಒಲೆಯ ಮೇಲೆ ಖಾಲಿ ಪಾತ್ರೆ ಇಡದಂತೆ ಎಚ್ಚರ ವಹಿಸಬೇಕು.

ಒಂದೇ ಬಾರಿಗೆ ಉಷ್ಣವನ್ನು ಹೆಚ್ಚು ಅಥವಾ ಕಡಿಮೆ ಮಾಡಬಾರದು. ಉದಾಹರಣೆಗೆ ಫ್ರಿಜ್‌ನಿಂದ ತೆಗೆದ ಪಾತ್ರೆಯನ್ನು ನೇರವಾಗಿ ಒಲೆಯ ಮೇಲೆ ಇಡಬಾರದು. ಮೊದಲು ಕೋಣೆಯ ಉಷ್ಣಾಂಶಕ್ಕೆ ಬರಲುಬಿಡಬೇಕು. ಇದೇ ರೀತಿ ಬಿಸಿ ಪಾತ್ರೆಯನ್ನು ತಣ್ಣಗಾದ ಮೇಲೆ ಫ್ರಿಡ್ಜ್‌ನಲ್ಲಿ ಇಡಬೇಕು.

ಅತ್ಯುತ್ತಮ ಫಲಿಯಶಕ್ಕಾಗಿ ಮೊಸರು, ಟೀ‌, ಕಾಫಿ ಮತ್ತು ಇತರ ಮೂಲಿಕೆ ಕಷಾಯಗಳಿಗೆ ಬೇರೆ ಪಾತ್ರೆಗಳನ್ನು ಉಪಯೋಗಿಸಿ, ಸಸ್ಯಹಾರ ಮತ್ತು ಮಾಂಸಾಹಾರಕ್ಕಾಗಿ ಪ್ರತ್ಯೇಕ ಪಾತ್ರೆಗಳನ್ನು ಉಪಯೋಗಿಸುವುದು ಅಪೇಕ್ಷನೀಯ.

ಆಹಾರವನ್ನು ಮಧ್ಯಮ ಅಥವಾ ಕಡಿಮೆ ಉಷ್ಣಾಂಶದಲ್ಲಿ ತಯಾರಿಸಬೇಕು. ಇದರಿಂದ ಪಾತ್ರೆಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ.

ಮಣ್ಣಿನ ಪಾತ್ರೆಗಳಿಂದ ಆಗುವ ಪ್ರಯೋಜನಗಳು

ಯಾವುದೇ ಖನಿಜ, ರಾಸಾಯನಿಕ, ಹೊಳಪುಕಾರಕ, ಸೀಸ, ಕ್ಯಾಡ್ಮಿಯಂ ಮುಂತಾದವುಗಳ ಕಲ್ಮಶವಿಲ್ಲದೆ ಶೇ.100ರಷ್ಟು ಶುದ್ಧ ಮತ್ತು ಸಂಪೂರ್ಣ ಪ್ರಾಕೃತಿಕ ಜೇಡಿಮಣ್ಣಿನಿಂದ ತಯಾರಾಗಿರುವುದರಿಂದ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಮ್ಮ ದೇಹಕ್ಕೆ ಖಾರಯುಕ್ತ ಆಹಾರವು ಹೆಚ್ಚು ಆರೋಗ್ಯಕರ. ಆದರೆ ಇಂದಿನ ವೇಗದ ಜಗತ್ತಿನಲ್ಲಿ ನಾವು ನಂಜುಕಾರಕ ಆಮ್ಲೀಯ ಪದಾರ್ಧಗಳನ್ನೇ ಹೆಚ್ಚು ಬಯಸುತ್ತೇವೆ. ಜೇಡಿಮಣ್ಣು ಸಹಜವಾಗಿಯೇ ಕ್ಷಾರಗುಣವನ್ನು ಹೊಂದಿದ್ದು ಇದರಲ್ಲಿ ಆಹಾರವನ್ನು ತಯಾರಿಸಿದಾಗ, ಅದು ಆಮ್ಲ ಮತ್ತು ಕ್ಷಾರ ಗುಣವನ್ನು ಸರಿದೂಗಿಸಿ ಪ್ರಾಕೃತಿಕ ನಂಜುನಾಶಕವಾಗಿ ಕೆಲಸ ಮಾಡುತ್ತದೆ.

ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದು, ಹಬೆಯಲ್ಲಿ ಬೇಯಿಸುವುದಕ್ಕೆ ಸಮನಾಗಿರುವುದರಿಂದ ಆಹಾರ ಪದಾರ್ಥದೊಳಗಿನ ಪೋಷಕಾಂಶಗಳ ಸತ್ವವು ಹಾಗೆಯೇ ಉಳಿಯುತ್ತವೆ. ಅಡುಗೆಗೆ ಹೆಚ್ಚುವರಿ ಎಣ್ಣೆಯ ಬಳಕೆ ಅಗತ್ಯವಿಲ್ಲ. ಆಹಾರ ಪದಾರ್ಥಗಳನ್ನು ಆಗಾಗ ಬಿಸಿ ಮಾಡುವುದರಿಂದ ಅವುಗಳಲ್ಲಿನ ಪೋಷಕಾಂಶಗಳು ಕಡಿಮೆ ಆಗುತ್ತವೆ. ಆದರೆ ಜೇಡಿಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಉಷ್ಣಾಂಶವು ಧೀರ್ಘ ಕಾಲ ಉಳಿದು, ಆಗಾಗ ಬಿಸಿ ಮಾಡುವ ಅಗತ್ಯ ಇರುವುದಿಲ್ಲ.

ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಮಗಳ ಸಾವಿಗೆ ಕಾರಣ ತಿಳಿಯುತ್ತಿಲ್ಲ, ತನಿಖೆಯೂ ತ್ವರಿತವಾಗಿಲ್ಲ; ಅಮೂಲ್ಯ ಪೋಷಕರ ಅಳಲು

ನಮ್ಮ ಪಾತ್ರೆಗಳು ಆಹಾರ ತಯಾರಿಕೆಗೆ ಮಾತ್ರವಲ್ಲದೆ ಟೇಬಲ್ ಮೇಲೆ ಜೋಡಿಸಿ ಬಡಿಸಲು ಬಳಸಬಹುದಾದ ಸರಳ ದೇಸೀ ಸೌಂದರ್ಯವನ್ನೂ ಹೊಂದಿವೆ(ಕುಕ್ ಅಂಡ್ ಸರ್ವ್). ಲೋಹದ ಪಾತ್ರೆಗಳ ರೀತಿಯಲ್ಲಿ ಜೇಡಿಮಣ್ಣು ಆಹಾರದೊಂದಿಗೆ ಪ್ರತಿಕ್ರಿಸುವುದಿಲ್ಲ. ಇದರಿಂದ ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಶೇ.100ರಷ್ಟು ನಂಜುರಹಿತವಾಗಿದ್ದು, ಆಹಾರವು ನೈಜಸ್ವಾದವನ್ನೂ ಹೊಂದಿರುತ್ತದೆ ಎಂಬುದು ಕುಂಬಾರರ ಮಾತು.

ಜೇಡಿಮಣ್ಣಿನ ಪಾತ್ರೆಗಳು ಪರಿಸರಸ್ನೇಹಿ. ಈ ಮಣ್ಣು ಶೇ.100 ರಷ್ಟು ಪ್ರಾಕೃತಿಕ, ಸಂಪೂರ್ಣವಾಗಿ ಜೈವಿಕ ವಿಘಟನೆ ಹೊಂದಬಲ್ಲದು ಮತ್ತು ಮರುಬಳಕೆ ಮಾಡಬಲ್ಲ ಸಂಪನ್ಮೂಲವಾಗಿದೆ. ನಮ್ಮ ಈ ಪಾತ್ರೆಗಳನ್ನು ಮೈಕ್ರೋವೇವ್, ಗ್ಯಾಸ್ ಮತ್ತು ವಿದ್ಯುತ್ ಒಲೆಗಳ ಮೇಲೆಯೂ ಬಳಸಬಹುದು. ಪ್ರತಿಯೊಂದು ಪಾತ್ರೆಯೂ ವೃತ್ತಿಪರ ಕುಶಲಕರ್ಮಿಗಳ ವಿಶೇಷ ಕರಕುಶಲದಿಂದ ನಿರ್ಮಿತವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಡೊನೇಷನ್ ಹಾವಳಿ ತಡೆಗಟ್ಟುವಂತೆ ಡಿವಿಪಿ ಆಗ್ರಹ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಅಂತಹ ಸಂಸ್ಥೆಗಳ ವಿರುದ್ಧ...

ದಾವಣಗೆರೆ | ಅಂಜಲಿ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಅಗ್ರಹ

ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರಳನ್ನು ಮನೆಗೆ ನುಗ್ಗಿ ಕೊಲೆಮಾಡಿದ ಆರೋಪಿಗೆ ಗಲ್ಲು ಶಿಕ್ಷೆ...

ದಾವಣಗೆರೆ | ಸ್ಮಾರ್ಟ್‌ ಸಿಟಿ ರಿಂಗ್‌ ರೋಡ್‌; ಸ್ಥಳಾಂತರಗೊಂಡವರ ಬದುಕು ದುಸ್ತರ

ಸ್ಮಾರ್ಟ್‌ ಸಿಟಿ ರಿಂಗ್‌ ರೋಡ್‌ಗಾಗಿ ನಮ್ಮ ಮನೆಗಳನ್ನು ವಶಪಡಿಸಿಕೊಂಡು, ನಮ್ಮನ್ನು ಒಕ್ಕಲೆಬ್ಬಿಸಿದರು....

ಮೇ 26ರಂದು ‍ಬಂಗಾಳಕೊಲ್ಲಿಯಲ್ಲಿ ಉಂಟಾಗಲಿದೆ ‘ರೆಮಲ್ ಚಂಡ‌ಮಾರುತ’; ಭಾರೀ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಮೇ 26ರ ವೇಳೆಗೆ ತೀವ್ರ ಚಂಡಮಾರುತವಾಗಿ ಪಶ್ಚಿಮ...