ವಿಜಯಪುರ | ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಕ್ಯಾಂಡಲ್ ಮಾರ್ಚ್

Date:

ವಿಜಯಪುರದ ಪ್ರಗತಿಪರ ಸಂಘಟನೆಗಳ ವೇದಿಕೆ ನಗರದ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತದವರೆಗೂ ಕ್ಯಾಂಡಲ್ ಮಾರ್ಚ್ ಮಾಡಿ, ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಾಂಧೀಜಿಯವರ ಹುತಾತ್ಮ ದಿನ ಆಚರಿಸಿದರು.

- Advertisement -

ಒಂದು ನಿಮಿಷ ಮೌನಚರಣೆ ನಂತರ, ಪ್ರಗತಿಪರ ಸಂಘಟನೆಯ ಮುಖಂಡ ಅಕ್ರಮ ಮಾಶಾಳಕಾರ ಮಾತನಾಡಿ, ಜನವರಿ 30, ಮಹಾತ್ಮ ಗಾಂಧಿಯ ಹತ್ಯೆಯ ದಿನ, ಈ ಹತ್ಯೆಯನ್ನು ಮಾಡಿದವನು ನಾತುರಾಮ್ ಗೋಡ್ಸೆ ಎಂಬ ಹಂತಕ, ಹತ್ಯೆ ಮಾಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಂಡಿದ್ದನು. ಇಂಥ ಸಂಸ್ಕೃತಿ ನಮ್ಮ ದೇಶದಲ್ಲ. ಬಹುತ್ವವನ್ನು ಪ್ರತಿಪಾದಿಸುವಂತಹ ದೇಶ. ಹಿಂಸೆ ಯನ್ನು ವೈಭವಿಕರಿಸುವಂತದ್ದು ನಮ್ಮ ಸಂಸ್ಕೃತಿಯಲ್ಲ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಗಾಂಧೀಜಿಯವರ ವಿಚಾರಗಳು ವಿಶ್ವಮಟ್ಟದಲ್ಲೇ ಪ್ರಚಾರ ಗೊಂಡಿರುವುದು ತಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ನನ್ನ ಜೀವನವೇ ನನ್ನ ಸಂದೇಶ ಎಂಬ ವಾಕ್ಯ ಗಾಂಧೀಜಿಯವರ ವಿಚಾರವಾಗಿತ್ತು. ದೇಶಕ್ಕೋಸ್ಕರ ತಮ್ಮ ಜೀವದಾನ ಮಾಡಿದಂತ ಮಹಾ ಪುಣ್ಯಾತ್ಮ ಗಾಂಧೀಜಿ. ಆದರೆ, ಇಂದಿನ ದಿನಮಾನಗಳಲ್ಲಿ ಮತ್ತೆ ಗೋಡ್ಸೆಅಂತಹ ವಿಚಾರಗಳು ಮುನ್ನೆಲೆಗೆ ಬರುತ್ತಿರುವುದು ದೇಶಕ್ಕೆ ಅಪಾಯಕಾರಿ ಎಂದರು.

ಪ್ರಗತಿಪರರೆಲ್ಲರೂ ಸೇರಿ ಗಾಂಧೀಜಿ ನೆನೆಯುವುದೆಂದರೆ ಅವರ ವಿಚಾರಗಳನ್ನು ಹರಡುವುದು ಎಂದರ್ಥ. ನಾವೆಲ್ಲರೂ ಸೇರಿ ಗಾಂಧೀಜಿಯವರ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕೆಂದರು.

ರಿಯಾಜ ಫಾರೂಕಿ ಮಾತನಾಡಿ, ನಮ್ಮ ದೇಶ ಸಂವಿಧಾನವನ್ನು ಹೊಂದಿರುವಂತದ್ದು. ಬಹು ಸಂಸ್ಕೃತಿಗೆ ನಮ್ಮ ದೇಶ ವಿಶ್ವದಲ್ಲೇ ವಿಶೇಷತೆಯನ್ನು ಹೊಂದಿದೆ. ಆದರೆ, ಇಂದಿನ ದಿನ  ಕೋಮುವಾದಿಗಳ ಕೈಗೆ ಸಿಕ್ಕು ಅಲ್ಪಸಂಖ್ಯಾತರು ಶೋಷಣೆಗೊಳಗಾಗುತ್ತಿದ್ದಾರೆ. ಇದರ ವಿರುದ್ಧ ಬಲಿಷ್ಠವಾಗಿ ಹೋರಾಟಗಳನ್ನು ಕಟ್ಟುವುದು ಗಾಂಧೀಜಿ ವಿಚಾರ ಇಟ್ಟುಕೊಂಡು  ಹೋರಾಟ ಮಾಡುವುದು ಅತ್ಯವಶ್ಯ  ಎಂದರು.

ಈ ಸಂದರ್ಭದಲ್ಲಿ ಫಾದರ್ ಟಿಯೋಲಾ ಮಾಚಾದೊ, ಅಥಲ್ವಾ ದ್ರಾಕ್ಷಿ, ಮುತ್ತು ಭೋವಿ, ನಿರ್ಮಲಾ ಹೊಸಮನಿ, ಪಾಟೀಲ, ಹಮೀದ್ ಪಾಟೀಲ, ಕೃಷ್ಣಾ ಜಾಧವ, ರೇಷ್ಮಾ ಪಡಗನ್ನವರ, ಸಿ.ಬಿ. ಪಾಟೀಲ, ಬೀರಪ್ಪ ಜಮಾನಾಳ, ರುಕುಮುದ್ದಿನ್ ತೋರವಿ, ಇಬ್ರಾಯಿಮ ಮಸಾಗನಾಳ, ವರ್ಷ ಭೋವಿ, ಬಾಳು ಜೇವೂರು ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...