ವಿಜಯಪುರ | ಕನ್ನಡ ನಮ್ಮೆಲ್ಲರ ಉಸಿರು: ಹಾಸಿಂ ಪೀರ್‌ ವಾಲಿಕಾರ

Date:

ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಹಸಿರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂಬ ಜಯಘೋಷದೊಂದಿಗೆ ಸಂಭ್ರಮದಿಂದ ತಾಂಬಾ ಗ್ರಾಮಕ್ಕೆ ಸಾವಿರಾರು ವಿದ್ಯಾರ್ಥಿಗಳು ಮಕ್ಕಳು ಹಾಗೂ ಶಿಕ್ಷಕರು, ಗ್ರಾಮದ ಹಿರಿಯರು ಪಾಲ್ಗೊಂಡು ಕರ್ನಾಟಕ ಸುವರ್ಣ ಸಂಭ್ರಮ 50ರ ನಿಮಿತ್ಯ ಜನರಲ್ಲಿ ಕರ್ನಾಟಕದ ಅಭಿಮಾನ ಮೂಡಿಸುವ ಸಲುವಾಗಿ ಕರ್ನಾಟಕದ ಕನ್ನಡ ರಥವನ್ನು ವಿಜಯಪುರ ಜಿಲ್ಲೆ ತಾಂಬಾ ಗ್ರಾಮಕ್ಕೆ ಸ್ವಾಗತಿಸಿದರು.

- Advertisement -

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ ಮಾತನಾಡಿ‌, “ಕನ್ನಡ ನಮ್ಮೆಲ್ಲರ ಉಸಿರು, ಕನ್ನಡ ಸಾಹಿತ್ಯ ನಮ್ಮೆಲ್ಲರಿಗೂ ಅನ್ನ ನೀಡುವುದಾಗಿದೆ. ತಾಯಿ ಭಾಷೆ, ವ್ಯವಹಾರ ಭಾಷೆ, ಆಡಳಿತ ಭಾಷೆ, ಕನ್ನಡವಾಗಿರುವುದರಿಂದ ನಾವೆಲ್ಲರೂ ಕನ್ನಡವನ್ನು ಕಡ್ಡಾಯವಾಗಿ ಅರಿಯಬೇಕು. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಲಿನಲ್ಲಿ ಕರ್ನಾಟಕ ಅಗ್ರಗಣ್ಯವಾಗಿದೆ. ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಪರಂಪರೆ ನಮ್ಮ ಸಂಪತ್ತಾಗಿವೆ. ಕನ್ನಡದ ಶಾಲೆಗಳು ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರಿ ಶಾಲೆಗಳು ಅತ್ಯಂತ ಪ್ರತಿಭಾವಂತ ಶಿಕ್ಷಕರಿಂದ ಬೋಧನೆಯಾಗುತ್ತಿದೆ. ಅನೇಕ ಜನರು ಇಂಗ್ಲೀಷ್ ಶಾಲೆಗಳಿಗೆ ಕಳಿಸುವ ವ್ಯಾಮೋಹದಿಂದ ಹೊರಬರಬೇಕು” ಎಂದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇಂಡಿ ತಾಲೂಕು ತಹಶೀಲ್ದಾರ್ ಬಿ‌ ಎಸ್ ಕಡಕಬಾವಿ ಅವರ ನೇತೃತ್ವದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ತಾಂಬಾ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅನೇಕ ಜನರು ಭುವನೇಶ್ವರಿಗೆ ಪೂಜೆ ಹಾಗೂ ಆರತಿ ಮತ್ತು ನೂರಾರು ವಿದ್ಯಾರ್ಥಿನಿಯರು ಕುಂಭಮೇಳ ಮಾಡಿ ನಾಡದೇವತೆಗೆ ವಿಜ್ರಂಭಣೆಯಿಂದ ಗೌರವ ಸಲ್ಲಿಸಿದರು. ರೈತರು ಹಾಗೂ ಶಿಕ್ಷಕರು ಎತ್ತಿನ ಗಾಡಿಯ ಮೇಲೆ ಸಂಗೊಳ್ಳಿ ರಾಯಣ್ಣ, ಕಿತ್ತೂರ ಚನ್ನಮ್ಮ, ಒನಕೆ ಓಬವ್ವ, ಮಹಾತ್ಮಾ ಗಾಂಧೀಜಿ, ಡಾ ಅಂಬೇಡ್ಕರ್, ಸಿದ್ದೇಶ್ವರ ಶ್ರೀ, ವೇಷಭೂಷಣದಲ್ಲಿ ಮಕ್ಕಳು ಪಾಲ್ಗೊಂಡಿದ್ದು‌, ರೋಮಾಂಚನವಾಗಿತ್ತು. ನೂರಾರು ಶಿಕ್ಷಕರು ಭಾಗಿಯಾಗಿದ್ದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಜಿಲ್ಲೆಗೆ 371ಜೆ ಸ್ಥಾನಮಾನ ನೀಡಬೇಕೆಂದು ಆಗ್ರಹ

ಇದೇ ಸಂದರ್ಭದಲ್ಲಿ ಇಂಡಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅಪ್ಪಣ್ಣ ಕಲ್ಲೂರ, ರಜಾಕ ಚಿಕ್ಕಅಗಸಿ, ರಾಚಪ್ಪ ಗಳೆದ, ಪ್ರಕಾಶ ಮುಂಜಿ, ವಾಸಿಮ ವಾಲಿಕಾರ, ರಾಜು ಗಂಗನಳ್ಳಿ, ಪರಶುರಾಮ ಬಿಸನಾಳ, ಎಂ. ಎ. ವಾಲಿಕಾರ, ಎಸ್ ಆರ್ ನಡಗಡ್ಡಿ, ಅಡಿವೆಪ್ಪ ಸರಸಂಬಿ, ಶ್ರೀಧರ ಉಕ್ಕಲಿ, ಬಸವರಾಜ ಅವಟಿ, ಅಹ್ಮದ ವಾಲಿಕಾರ, ಬೌರಮ್ಮ ಡೊಣ್ಣಿ, ಸಾತಿರವ್ವ ಸಕ್ರಿ, ಬೌರಮ್ಮ ಯಳಮೇಲಿ, ಕನ್ಯಾಕುಮಾರಿ ಜುಮನಾಳ, ಆನಂದ ಕಂಬಾರ, ಶಾಂತಾ ಬೆಳ್ಳುಂಡಿ, ಶಶಿಕಲಾ ಪ್ಯಾಟಿ, ಅಮೋಘಸಿದ್ದ ಮಾಶ್ಯಾಳ, ವಸರಾಯ ದೊಡ್ಡಮನಿ, ಬಸವರಾಜ ಗುಂಡಳ್ಳಿ, ಗೂಳಪ್ಪ ಗೊಬ್ಬೂರ ಸೇರಿದಂತೆ ಮುಂತಾದವರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...

ಯಲ್ಲಾಪುರ | ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸಂಗ್ರಹಿಸಿದ್ದ ₹36 ಸಾವಿರ ಮೌಲ್ಯದ ಕಡಿ, ಎಂ-ಸ್ಯಾಂಡ್ ಕಳವು

ಯಲ್ಲಾಪುರ: ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಕಡಿ ಹಾಗೂ ಎಂ-ಸ್ಯಾಂಡ್ ಕಳವು ಮಾಡಿರುವ...