ಹಾವೇರಿ | ಮಹಿಳೆಯರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆತರೆ ಆರ್ಥಿಕ ಸಬಲತೆ: ಶಾಸಕ ಶ್ರೀನಿವಾಸ ಮಾನೆ

Date:

“ಉದ್ಯಮಶೀಲತೆಯ ಮೊದಲ ಹೆಜ್ಜೆ ಮನೆಯಿಂದಲೇ ಆರಂಭವಾಗಬೇಕು. ಸಣ್ಣ ಪ್ರಮಾಣದಲ್ಲಿ, ಕೇವಲ ನೂರು ರೂಪಾಯಿಗಳಿಂದ ಆರಂಭವಾದ ಉದ್ಯಮಗಳು ಇಂದು ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿರುವ ಅನೇಕ ಪ್ರೇರಣಾದಾಯಕ ಉದಾಹರಣೆಗಳಿವೆ. ಮಹಿಳೆಯರಲ್ಲಿ ಪರಿಶ್ರಮ, ಸೃಜನಶೀಲತೆ ಮತ್ತು ಸಾಧಿಸುವ ಛಲವಿದೆ. ಅವರ ಉತ್ಪನ್ನಗಳಿಗೆ ಗುಣಮಟ್ಟದ ಜೊತೆಗೆ ಸೂಕ್ತ ಮಾರುಕಟ್ಟೆ ಸಂಪರ್ಕ ದೊರೆತರೆ ಉದ್ಯಮದ ಬೆಳವಣಿಗೆಗೆ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ” ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

- Advertisement -

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ನಾಲ್ಕಾರ್ ಕ್ರಾಸ್ ಬಳಿ ರೋಶನಿ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ಇಂದು ಮಂಗಳವಾರ ಹ್ಯುಮ್ಯಾನಿಟಿ ಫೌಂಡೇಶನ್ ವತಿಯಿಂದ ಮಹಿಳಾ ಉದ್ಯಮಿಗಳ ಉತ್ಪನ್ನ ಪ್ರದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಸಮಾವೇಶವು ರೋಶನಿ ಸಮಾಜ ಸೇವಾ ಸಂಸ್ಥೆ, ಲೋಯಲಾ ವಿಕಾದ ಕೇಂದ್ರ , ರಾಷ್ಟ್ರೀ ಗ್ರಾಮೀಣ ಜೀವನೋಪಾಯ ಮಿಷನ್, ರಾಷ್ಟ್ರೀಯ ನಗರ ಸ್ವಯಂ ಉದ್ಯೋಗ ಯೋಜನೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವರ್ತಕರ ಸಂಘ, ಹೋಟೆಲ್ ಮಾಲಿಕರ ಸಂಘ ಸಹಯೋಗದಲ್ಲಿ ನಡೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ತಂಬೂರಿಯ ನಾದದಲ್ಲಿ ಜೀವಂತ ಮಂಟೇಸ್ವಾಮಿ ಪರಂಪರೆ: ಶಿಷ್ಯರು, ಮಹಿಳಾ...

ಧರೆಗೆ ದೊಡ್ಡವರ ತತ್ವ, ಶಿಷ್ಯರ ಸಾಮಾಜಿಕ ಕೊಡುಗೆ, ಜನಪದ ಜ್ಞಾನದ ಉಳಿವು ಮತ್ತು ಮುಂದಿನ ಪೀಳಿಗೆಯ ಜವಾಬ್ದಾರಿ. ಒಂದು ಪರಂಪರೆಯ ಮಹತ್ವವನ್ನು ಅದರ ಸ್ಥಾಪಕನ ಜೀವನದಿಂದ ಮಾತ್ರ ಅಳೆಯಲಾಗದು. ಆ ಪರಂಪರೆಯ ವಿಚಾರಗಳನ್ನು...

ಸಿಜೆಐ ವಿರುದ್ಧ ವಕೀಲರ ಆಕ್ರೋಶ: ನ್ಯಾಯಾಂಗದ ಘನತೆಗೆ ಧಕ್ಕೆ...

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನ್ಯಾಯಾಲಯದಲ್ಲೇ ವಕೀಲರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನ್ಯಾಯಾಂಗದ ಘನತೆ, ನ್ಯಾಯಾಧೀಶರ ನಿಷ್ಪಕ್ಷಪಾತತೆ ಹಾಗೂ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸದ ಕುರಿತು ಮಹತ್ವದ ಚರ್ಚೆಗೆ...

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಅವರು, “ತಾಲೂಕಿನ ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಹಾಗೂ ಅವರ ಉದ್ಯಮಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಉದ್ದೇಶದಿಂದ ಆಯೋಜಿದಲಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳಿಗೆ ಅಗತ್ಯ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು” ಎಂದು ಹೇಳಿದರು.

ಮಹಿಳಾ ಉತ್ಪಾದಕಿ ಚಿಂತನಾ ಮಾತನಾಡಿ, “ನಾವು ಮನೆಯಲ್ಲಿ ತಯಾರಿಸುವ ಉತ್ಪನ್ನಗಳಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಸಂಪರ್ಕ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಮ್ಮ ಉತ್ಪನ್ನಗಳನ್ನು ವರ್ತಕರು ಮತ್ತು ಖರೀದಿದಾರರತಜ್ಞ ನೇರವಾಗಿ ಪರಿಚಯಿಸಲು ಈ ಸಮಾವೇಶ ಉತ್ತಮ ವೇದಿಕೆಯಾಗಿದೆ. ನಮ್ಮ ಪರಿಶ್ರಮಕ್ಕೆ ಮಾರುಕಟ್ಟೆಯಲ್ಲಿ ಮನ್ನಣೆ ಸಿಗುವ ಭರವಸೆ ಮೂಡಿದ್ದು, ಮುಂದಿನ ದಿನಗಳಲ್ಲಿ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಪ್ರೇರಣೆ ದೊರೆತಿದೆ” ಎಂದರು.

1004264244

ಆನಲೈನ್ ಮಾರುಕಟ್ಟೆ ತಜ್ಞ ದೇವೇಂದ್ರ ಬನ್ಸಾಲಿ ಮಾತನಾಡಿ, “ಹಾನಗಲ್ ತಾಲೂಕಿನ ಮಹಿಳೆಯರು ತಯಾರಿಸಿರುವ ಉತ್ಪನ್ನಗಳಲ್ಲಿ ವೈವಿಧ್ಯತೆ ಹಾಗೂ ಉತ್ತಮ ಗುಣಮಟ್ಟ ಕಂಡುಬಂದಿದೆ. ಸ್ಥಳೀಯವಾಗಿ ಇಷ್ಟೊಂದು ಉತ್ತಮ ಉತ್ಪನ್ನಗಳು ಸಿದ್ಧವಾಗುತ್ತಿರುವುದು ಸಂತಸದ ಸಂಗತಿ. ಇಂತಹ ಸಮಾವೇಶಗಳು ಉತ್ಪಾದಕರು ಮತ್ತು ಖರೀದಿದಾರರ ನಡುವಿನ ಅಂತರ ಕಡಿಮೆ ಮಾಡಿ, ನೇರ ವ್ಯಾಪಾರಕ್ಕೆ ಉತ್ತಮ ಅವಕಾಶ ಕಲ್ಪಿಸುತ್ತವೆ. ಇಲ್ಲಿನ ಉತ್ಪನ್ನಗಳಿಗೆ ಇನ್ನಷ್ಟು ದೊಡ್ಡ ಮಾರುಕಟ್ಟೆ ಕಲ್ಪಿಸುವ ಸಾಧ್ಯತೆಗಳಿವೆ” ಎಂದರು.

ಸಮಾವೇಶದಲ್ಲಿ ತಾಲೂಕಿನ 145ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ತಾವು ತಯಾರಿಸಿದ ವೈವಿಧ್ಯಮಯ 200ಕ್ಕೂ ಅಧಿಕ ಉತ್ಪನ್ನಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ರೊಟ್ಟಿ, ಉಪ್ಪಿನಕಾಯಿ, ಮಸಾಲೆ, ಅರಿಷಿಣ ಪುಡಿ, ಖಾರದ ಪುಡಿ, ಚಕ್ಕಲಿ, ಕೋಡುಬೇಳೆ, ಚಟ್ನಿಪುಡಿ, ಶೇಂಗಾ ಎಣ್ಣೆ, ಹಪ್ಪಳ, ಸಂಡಿಗೆ, ಹೋಳಿಗೆ ಸೇರಿದಂತೆ ಬಗೆಬಗೆಯ ಆಹಾರ ಉತ್ಪನ್ನಗಳು, ಎಂಬ್ರಾಯ್ಡರಿ ವರ್ಕ್, ಆರಿ ವರ್ಕ್, ಸೀರೆ ಕುಚ್ಚು ಸೇರಿದಂತೆ ಅಲಂಕಾರಿಕ ವಸ್ತುಗಳು, ಮೇಣದಬತ್ತಿಗಳು, ಕರ್ಪೂರ, ಹೆಣಿಗೆ ಚೀಲಗಳು, ಗಂಧದ ಮಾಲೆ, ಅಗರಬತ್ತಿ, ದೀಪದ ಬತ್ತಿ, ಕಸಬರಿಗೆ, ಉಲ್ಲನ್ ವರ್ಕ್ ಸೇರಿದಂತೆ ವಿವಿಧ ಗೃಹಬಳಕೆಯ ವಸ್ತುಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ವರ್ತಕರು, ಖರೀದಿದಾರರು ಮತ್ತು ಆನ್‌ಲೈನ್ ಮಾರುಕಟ್ಟೆ ತಜ್ಞರು ಉತ್ಪನ್ನಗಳನ್ನು ವೀಕ್ಷಿಸಿ, ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಆಸಕ್ತಿ ತೋರಿದರು. ಅಲ್ಲದೆ, ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಆಕರ್ಷಕ ಪ್ಯಾಕಿಂಗ್, ಮಾರುಕಟ್ಟೆಯ ಬೇಡಿಕೆ ಹಾಗೂ ಮಾರಾಟದ ಹೊಸ ವಿಧಾನಗಳ ಕುರಿತು ಮಾರ್ಗದರ್ಶನ ನೀಡಿದರು. ಹಲವು ಮಹಿಳಾ ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯ ಗಡಿ ದಾಟಿಸಿ ವಿಶಾಲ ಮಾರುಕಟ್ಟೆಗೆ ಪರಿಚಯಿಸುವ ಅವಕಾಶ ಲಭಿಸಿತು. ಖರೀದಿದಾರರು ಹಾಗೂ ವರ್ತಕರೊಂದಿಗೆ ನೇರ ಸಂಪರ್ಕ ಸಾಧಿಸಲು ಈ ಸಮಾವೇಶ ಕೊಂಡಿಯಾಯಿತು.

ಸಮಾವೇಶದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್, ರೋಶನಿ ಸಮಾಜ ಸೇವಾ ಸಂಸ್ಥೆ, ಲೋಯಲಾ ವಿಕಾಸ ಕೇಂದ್ರ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ರಾಷ್ಟ್ರೀಯ ನಗರ ಸ್ವಯಂ ಉದ್ಯೋಗ ಯೋಜನೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವರ್ತಕರ ಸಂಘದ ಆಶ್ರಯದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸ್ವಾತಿ ಮಾಳಗಿ, ಅನಿತಾ ಡಿಸೋಜಾ, ಫಾದರ್ ವಿನ್ಸೆಂಟ್ ಜೈಸನ್, ಹನುಮಂತಪ್ಪ ಮರಗಡಿ, ಈರಪ್ಪ ಬೈಲವಾಳ, ಗುರುರಾಜ ನಿಂಗೋಜಿ, ಆದರ್ಶ ಶೆಟ್ಟಿ, ಜಗದೀಶ ಕಮ್ಮಾರ ಇದ್ದರು‌.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಧ್ಯೇಯ: ಬಸವರಾಜ ಸಾವಳಗಿ

ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. ಪಠ್ಯದ ಜೊತೆಗೆ ಇಂತಹ ಸಾಂಸ್ಕೃತಿಕ...

ಆಲೂರು | ಕೆಂಚಾಂಬ ಜಾತ್ರೆಯಲ್ಲಿ ಮಾಂಗಲ್ಯ ಸರ ಕಳ್ಳತನ 

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹರಿಹಳ್ಳಿ ಗ್ರಾಮದ ಕೆಂಚಾಂಬ ಜಾತ್ರೆಯಲ್ಲಿ ಮಹಿಳೆಯ...

ಮಂಗಳೂರು | ಶಾಲಾ ಆವರಣದಲ್ಲಿ ರಾಜಕೀಯ ಭಾಷಣ ಖಂಡನೀಯ: ಪದ್ಮರಾಜ್ ಪೂಜಾರಿ ಆಕ್ರೋಶ

ಮಂಗಳೂರು: ಬೆಳ್ತಂಗಡಿಯ ಪೂಂಜಾಲಕಟ್ಟೆಯ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಹರೀಶ್...

ಕರಾವಳಿ ಅಭಿವೃದ್ಧಿಗೆ ವೇಗ: ರೂ. 8,295 ಕೋಟಿ ಮೌಲ್ಯದ ಹೂಡಿಕೆದಾರರ ಕೈಪಿಡಿ ಬಿಡುಗಡೆ

ಕರ್ನಾಟಕ ಜಲಸಾರಿಗೆ ಮಂಡಳಿಯು ₹8,295 ಕೋಟಿ ಮೌಲ್ಯದ, ಸಚಿವ ಸಂಪುಟದ ಅನುಮೋದನೆ...