ಮುದ್ದೇಬಿಹಾಳ | ಬರದ ನಡುವೆ ಸಿಗದ ಸ್ಪ್ರಿಂಕ್ಲರ್ ಸೌಲಭ್ಯ: ತುಂತುರು ನೀರಾವರಿ ಕನಸು ಭಗ್ನ

Date:

ಸರ್ಕಾರದ ತುಂತುರು ನೀರಾವರಿ ಪ್ರೋತ್ಸಾಹ ಯೋಜನೆಯಡಿ ಸಬ್ಸಿಡಿಯಲ್ಲಿ ನೀಡಬೇಕಿದ್ದ ಸ್ಪ್ರಿಂಕ್ಲರ್ ಪೈಪ್‌ಗಳಿಗಾಗಿ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿರುವ ನೂರಾರು ರೈತರು ಇನ್ನೂ ಕಾಯುವಿಕೆಯಲ್ಲಿದ್ದಾರೆ. ಅನುದಾನ ಬಿಡುಗಡೆಯಾಗದ ಕಾರಣ ಟೆಂಡರ್ ಪಡೆದ ಕಂಪನಿಯೇ ಪೈಪ್ ಪೂರೈಕೆ ಸ್ಥಗಿತಗೊಳಿಸಿದ ಪರಿಣಾಮ ಮುದ್ದೇಬಿಹಾಳ ತಾಲೂಕಿನ ರೈತರ ತುಂತುರು ನೀರಾವರಿ ಕನಸು ನನಸಾಗದೆ ಉಳಿದಿದೆ.

- Advertisement -

ತಾಲೂಕಿನ ನಾಲತವಾಡ, ತಾಳಿಕೋಟೆ, ಢವಳಗಿ ಹಾಗೂ ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಸುಮಾರು 1,400ಕ್ಕೂ ಹೆಚ್ಚು ರೈತರು ಸ್ಪ್ರಿಂಕ್ಲರ್ ಪೈಪ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಪೈಪ್ ಕೂಡ ರೈತರ ಕೈ ಸೇರದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕೃಷಿ ಇಲಾಖೆಯ ಮಾಹಿತಿ ಪ್ರಕಾರ, 2023-24ನೇ ಸಾಲಿನಲ್ಲಿ ಕೊನೆಯ ಬಾರಿ ರೈತರಿಗೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ವಿತರಿಸಲಾಗಿತ್ತು. ಬಳಿಕ ಸರ್ಕಾರದಿಂದ ಟೆಂಡರ್ ಪಡೆದ ಕಂಪನಿಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಹೊಸ ಪೂರೈಕೆ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಇಲಾಖೆಯಲ್ಲೂ ಪೈಪ್‌ಗಳ ಸಂಗ್ರಹವಿಲ್ಲದೆ ರೈತರು ಕಾಯುವಂತಾಗಿದೆ.

ಸಬ್ಸಿಡಿ ಇದ್ದರೂ ಸೌಲಭ್ಯ ಮಾತ್ರ ಇಲ್ಲ. ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಮತ್ತು ಮಹಿಳಾ ರೈತರಿಗೆ ಶೇ. 90ರಷ್ಟು ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಪೈಪ್ ನೀಡುವ ಯೋಜನೆ ಜಾರಿಗೊಳಿಸಿದೆ. ಸಾಮಾನ್ಯ ರೈತರಿಗೆ ಶೇ. 55ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಕೇವಲ ₹4,667 ಪಾವತಿಸಿ ಪೈಪ್ ಪಡೆಯುವ ಅವಕಾಶವಿದೆ. ಆದರೆ ಯೋಜನೆ ಕಾಗದದಲ್ಲೇ ಉಳಿದಂತಾಗಿದ್ದು, ಅರ್ಜಿ ಸಲ್ಲಿಸಿರುವ ರೈತರಿಗೆ ಪೈಪ್ ವಿತರಣೆ ನಡೆಯದ ಕಾರಣ ಯೋಜನೆಯ ಉದ್ದೇಶವೇ ಪ್ರಶ್ನೆಗೆ ಒಳಗಾಗಿದೆ.

ಬರದ ನಡುವೆಯೇ ರೈತರ ಆಶಾಕಿರಣ. ಮುದ್ದೇಬಿಹಾಳ ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆಯ ಕೊರತೆ ಎದುರಾಗುತ್ತಿದ್ದು, ರೈತರು ಕೊಳವೆ ಬಾವಿ, ಕೃಷಿ ಹೊಂಡ ಹಾಗೂ ಕಾಲುವೆ ನೀರನ್ನು ಅವಲಂಬಿಸಿ ಕೃಷಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚಿನ ಪ್ರದೇಶಕ್ಕೆ ನೀರುಣಿಸುವ ತುಂತುರು ನೀರಾವರಿ ಪದ್ಧತಿ ರೈತರಿಗೆ ಅತ್ಯಂತ ಉಪಯುಕ್ತವಾಗಿದೆ.

ಸಜ್ಜೆ, ತೊಗರಿ, ಮೆಕ್ಕೆಜೋಳ, ಶೇಂಗಾ ಸೇರಿದಂತೆ ಅನೇಕ ಬೆಳೆಗಳಿಗೆ ಸ್ಪ್ರಿಂಕ್ಲರ್ ಪದ್ಧತಿ ಉತ್ತಮ ಫಲಿತಾಂಶ ನೀಡುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಸುಲಭವಾಗಿ ಸ್ಥಳಾಂತರಿಸಬಹುದಾದ ಕಾರಣ ರೈತರು ಈ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ನಾಲತವಾಡದಲ್ಲೇ 400 ಅರ್ಜಿಗಳು. ನಾಲತವಾಡ ರೈತ ಸಂಪರ್ಕ ಕೇಂದ್ರದಲ್ಲೇ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 400 ಸಾಮಾನ್ಯ ರೈತರು ಸ್ಪ್ರಿಂಕ್ಲರ್ ಪೈಪ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ತಾಳಿಕೋಟೆ, ಢವಳಗಿ ಹಾಗೂ ಮುದ್ದೇಬಿಹಾಳ ಭಾಗದ ಅರ್ಜಿಗಳನ್ನು ಸೇರಿಸಿದರೆ ಈ ಸಂಖ್ಯೆ 1,400ಕ್ಕೂ ಅಧಿಕವಾಗುತ್ತದೆ. ಆದರೆ ಈವರೆಗೆ ಯಾವುದೇ ಅರ್ಜಿದಾರರಿಗೆ ಪೈಪ್ ವಿತರಣೆಯಾಗಿಲ್ಲ.

ರೈತರಲ್ಲಿ ಹೆಚ್ಚುತ್ತಿರುವ ಆತಂಕ

ಮುಂಗಾರು ಮಳೆ ಕೈಕೊಟ್ಟರೆ ಬೆಳೆ ಉಳಿಸಿಕೊಳ್ಳಲು ತುಂತುರು ನೀರಾವರಿಯೇ ಏಕೈಕ ಮಾರ್ಗವಾಗಿದೆ. ಆದರೆ ಅಗತ್ಯ ಸಮಯದಲ್ಲೇ ಪೈಪ್ ದೊರೆಯದ ಕಾರಣ ರೈತರು ಖಾಸಗಿ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಖರೀದಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ರೈತರಿಗೆ ಇದು ಮತ್ತೊಂದು ಹೊರೆಯಾಗಿ ಪರಿಣಮಿಸಿದೆ.

ಈ ಕುರಿತು ಈದಿನ.ಕಾಮ್‌ ಜೊತೆಗೆ ಮಾತನಾಡಿದ ರೈತ ದ್ಯಾಮಣ್ಣ ವಡಗೇರಿ “ಅರ್ಜಿ ಸಲ್ಲಿಸಿ ಎರಡು ವರ್ಷಗಳೇ ಕಳೆದಿವೆ. ಇನ್ನೂ ಸ್ಪ್ರಿಂಕ್ಲರ್ ಪೈಪ್‌ಗಳು ದೊರೆತಿಲ್ಲ. ಮಳೆ ಅಭಾವದ ಪರಿಸ್ಥಿತಿಯಲ್ಲಿ ಕೃಷಿ ಹೊಂಡ ಹಾಗೂ ಕೊಳವೆ ಬಾವಿಗಳೇ ನಮ್ಮ ಆಸರೆ. ಸರ್ಕಾರ ಶೀಘ್ರ ಪೈಪ್ ವಿತರಣೆ ಮಾಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮುದ್ದೇಬಿಹಾಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಬಾವಿಕಟ್ಟಿ, “ಸ್ಪ್ರಿಂಕ್ಲರ್ ಪೈಪ್‌ಗಳ ಬೇಡಿಕೆ ತಾಲೂಕಿನಲ್ಲಿ ಸಾಕಷ್ಟು ಇದೆ. ಸುಮಾರು 1,400 ರೈತರು ಅರ್ಜಿ ಸಲ್ಲಿಸಿದ್ದಾರೆ. ಪೈಪ್ ವಿತರಣೆ ಸರ್ಕಾರದ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆಯಾಗಿದ್ದು, ಅನುದಾನ ಬಿಡುಗಡೆಯಾದ ಬಳಿಕ ಪೂರೈಕೆ ಆರಂಭವಾಗಲಿದೆ,” ಎಂದಿದ್ದಾರೆ.

ಕೃಷಿಯಲ್ಲಿ ನೀರಿನ ಪ್ರತಿಯೊಂದು ಹನಿಯೂ ಅಮೂಲ್ಯವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ತುಂತುರು ನೀರಾವರಿ ವಿಸ್ತರಣೆ ಸರ್ಕಾರದ ಆದ್ಯತೆಯಾಗಬೇಕು. ಯೋಜನೆ ಘೋಷಣೆ ಮಾಡಿದರಷ್ಟೇ ಸಾಲದು, ಕಾಲಕಾಲಕ್ಕೆ ಸಬ್ಸಿಡಿ ಬಿಡುಗಡೆ ಮಾಡಿ ರೈತರ ಕೈಗೆ ಕೃಷಿ ಉಪಕರಣ ತಲುಪಿಸಿದಾಗಷ್ಟೇ ಉದ್ದೇಶ ಸಾರ್ಥಕವಾಗಲಿದೆ. ಎರಡು ವರ್ಷಗಳಿಂದ ಕಾಯುತ್ತಿರುವ ಮುದ್ದೇಬಿಹಾಳ ಭಾಗದ ನೂರಾರು ರೈತರ ನಿರೀಕ್ಷೆಗೆ ಸರ್ಕಾರ ಯಾವಾಗ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರಮೇಶ್ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
+ posts

ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...