ಆಲಮಟ್ಟಿ ಆಣೆಕಟ್ಟಿನಲ್ಲಿ 524.256 ಮೀಟರ್ ಮಟ್ಟದವರೆಗೆ ನೀರು ಸಂಗ್ರಹಣೆ ಹಾಗೂ ಅದರ ಸಮರ್ಪಕ ಬಳಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯ ಸದಸ್ಯರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಎರಡನೇ ಕೃಷ್ಣಾ ನ್ಯಾಯಮಂಡಳಿಯ ತೀರ್ಪಿಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಗ್ಯಾಜೆಟ್ ನೋಟಿಫಿಕೇಶನ್ ಪ್ರಕಟಿಸಬೇಕೆಂಬ ಬೇಡಿಕೆಯನ್ನು ಸಚಿವರ ಗಮನಕ್ಕೆ ತರಲಾಯಿತು. ನೀರಿನ ಮಟ್ಟ ಹೆಚ್ಚಳದಿಂದ ಸ್ಥಳಾಂತರಗೊಳ್ಳಬೇಕಿರುವ 22 ಹಳ್ಳಿಗಳ ಸಮಸ್ಯೆಗಳ ಕುರಿತು ಚರ್ಚಿಸಿ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಕೃಷ್ಣಾ ನೀರಿನ ನ್ಯಾಯಯುತ ಬಳಕೆ ಹಾಗೂ ಆಲಮಟ್ಟಿ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಸಮಿತಿ ಸದಸ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಅರವಿಂದ್ ಕುಲಕರ್ಣಿ, ಪಂಚಪ್ಪ ಕಲ್ಬುರ್ಗಿ, ಎಸ್.ವಿ.ಪಾಟೀಲ್, ಅಕ್ರಮ ಮಾಶಾಲ್ಕರ್, ಲಲಿತಾ ಬಿಜ್ಜರಗಿ, ಸುರೇಶ್ ಜೀಬಿ, ಸುರೇಶ್ ಬಿಜಾಪುರ, ಸಿದ್ದಲಿಂಗ ಬಾಗೇವಾಡಿ, ಭೋಗೇಶ್ ಸೋಲಾಪುರ್, ಸತೀಶ್ ನಾವಿ, ಗಿರೀಶ್ ಕಲಘಟಗಿ, ಲಕ್ಷ್ಮಣ್ ಕಂಬಾಗಿ, ನೀಲಂಬಿಕಾ ಬಿರಾದಾರ್, ಶ್ರೀಕಾಂತ್ ಉಪ್ಪಾರ, ಗುರುರಾಜ್ ಪಡಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು




