ವಿಜಯಪುರ | ಐತಿಹಾಸಿಕ ಕರೇಜ್‌ಗೆ ನವ ಜೀವ: ಡಿಪಿಆರ್‌ ಸಿದ್ಧತೆಗೆ ತಯಾರಿ

Date:

ವಿಜಯಪುರ ನಗರದ ಐತಿಹಾಸಿಕ ಕರೇಜ್ ವ್ಯವಸ್ಥೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂಡಿಯನ್ ಹೆರಿಟೇಜ್ ಸಿಟಿ ನೆಟ್ ವರ್ಕ್ ಫೌಂಡೇಶನ್ ಸಂಸ್ಥೆ ಡಿಪಿಆರ್ (ಕ್ರಿಯಾ ಯೋಜನೆ) ಸಿದ್ಧಪಡಿಸಲು ಜೂ.24 ಹಾಗು 25ರಂದು ನಗರಕ್ಕೆ ಭೇಟಿ ನೀಡಲಿದೆ.

ಈ ಹಿನ್ನೆಲೆಯಲ್ಲಿ ಇಟಗಿ ಪೆಟ್ರೋಲ್ ಪಂಪ್ ಬಳಿ ಇರುವ ವೆಂಟ್ ಸ್ವಚ್ಛಗೊಳಿಸುವಂತೆ ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

- Advertisement -

ನಗರದಲ್ಲಿರುವ ಐತಿಹಾಸಿಕ ಕರೇಜ್ ವ್ಯವಸ್ಥೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕೆಂಬ ಹಿನ್ನೆಲೆಯಲ್ಲಿ ಕರೇಜ್ ಮಾರ್ಗದಲ್ಲಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳ ಕುರಿತು ಇಟಗಿ ಪೆಟ್ರೋಲ್ ಬಂಕ್ ಹತ್ತಿರ ಕರೇಜ್ ವೆಂಟ್ಸ್ ಹಾಗೂ ಮಾರ್ಗ ಪರಿಶೀಲಿಸಿ ಮಾತನಾಡಿ, ಚರಂಡಿ ನೀರು ವೆಂಟ್ನಲ್ಲಿ ಹರಿಯುವುದನ್ನು ತಡೆಗಟ್ಟಲು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

2024-25ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರ ಪ್ರದೇಶದಲ್ಲಿರುವ ಐತಿಹಾಸಿಕ ಕರೇಜ್ -ನೀರು ಸರಬರಾಜು ಸುರಂಗ ಮಾರ್ಗ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪುರಾತತ್ವ, ವಸ್ತು ಸಂಗ್ರಾಹಾಲಯ ಮತ್ತು ಪರಂಪರೆ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಕರೇಜ್ ಪುನಶ್ವೇತನ ಮತ್ತು ಅಭಿವೃದ್ಧಿಗೊಳಿಸಲು ಡಿಪಿಆರ್ ತಯಾರಿಸುವ ಕಾರ್ಯದಲ್ಲಿ ನೈಪುಣ್ಯತೆ ಹೊಂದಿರುವ ಐಎಚ್‌ಸಿಎನ್‌ಎಫ್ ಸಂಸ್ಥೆಯವರಿಂದ ವಿಸ್ತೃತ ಡಿಪಿಆರ್ ಯೋಜನಾ ವರದಿ ಸಿದ್ಧಪಡಿಸಲು ನೇಮಕ ಮಾಡಿದೆ ಎಂದರು.

“ನುರಿತ ತಂಡ ಜೂ. 24 ಮತ್ತು 25 ರಂದು ಸ್ಥಳ ಪರಿಶೀಲನೆ ಮಾಡಿ ವರದಿ ಮಾಡುವುದಕ್ಕೆ ನಗರಕ್ಕೆ ಆಗಮಿಸುತ್ತಿದ್ದು, ಈ ಕರೇಜ್ ವ್ಯವಸ್ಥೆಯನ್ನು ಪರಿಶೀಲನೆ ಮಾಡಲು ಸೂಕ್ತವಾದ ಸ್ಥಳ ಗುರುತಿಸಿ ಸುರಂಗ ಮಾರ್ಗದಲ್ಲಿ ತಂಡದ ವೀಕ್ಷಣೆಗೆ ವ್ಯವಸ್ಥೆ ಕೈಗೊಳ್ಳಬೇಕಿದೆ. ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವಕ್ಷಣಾ ಇಲಾಖೆ, ಮಹಾನಗರ ಪಾಲಿಕೆ, ಅಗ್ನಿಶಾಮಕ ಇಲಾಖೆ, ನಗರ ಕುಡಿಯುವ ನೀರು ಸರಬರಾಜು ಮತ್ತು ಚರಂಡಿ ಇಲಾಖೆ ನೇತೃತ್ವದಲ್ಲಿ ತಂಡ ನೇಮಕ ಮಾಡಲಾಗಿದೆ” ಎಂದರು.

ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿಷೇಕ ಸೆಹರಾ, ಮಹಾನಗರ ಪಾಲಿಕೆ, ಸಹಾಯಕ ಸಂರಕ್ಷಣಾಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪಾಲಿಕೆಯ ಎಸ್ ಇ ತಿಮ್ಮಪ್ಪ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ ನಲಿಗಾರ್, ಪರಿಸರ ಅಭಿಯಂತರ ಹಳ್ಳಿ ಅಭಿಷೇಕ್, ಪ್ರವಾಸಿ ಅಧಿಕಾರಿ ಬಿ.ಹೆಚ್. ಕುಡಪಲಿ, ಅನೀಲಕುಮಾರ, ಪೀಟರ್ ಅಲೆಕ್ಷಾಂಡರ್, ಡಾ. ಅಮೀನ ಹುಲ್ಲೂರ, ಧರ್ಮೇಂದ್ರ ಜಾಧವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸುಳ್ಳು ದಾಖಲೆ ಸೃಷ್ಠಿಸಿ ವಕ್ಫ ಜಾಗ ಮಾರಾಟ; ಅಕ್ಬರ್‌ ನಾಗುಂಡಿ

ನಗರದ ಜಹೀರಾಬಾದ್ ಬಡಾವಣೆಯಲ್ಲಿ ವಕ್ಸ್‌ಗೆ ಸೇರಿದ ಸರ್ವೆ ನಂ. 1209/1ರಲ್ಲಿರುವ ಒಂದು...

ಬಾಗಲಕೋಟೆ |ಅವಧಿ ಮೀರಿದ ಆಹಾರ ಮಾರಾಟ: 16 ಅಂಗಡಿಗಳ ವಿರುದ್ಧ ಪ್ರಕರಣ

ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಹಾಗೂ ಅಗತ್ಯ ಪರವಾನಗಿ ಇಲ್ಲದೆ...

ಬೀದರ್‌ | ಕನ್ನಡ ಅಸ್ಮಿತೆ ಉಳಿಸಿ ಬೆಳೆಸುವಲ್ಲಿ ಏಕೀಕರಣ ಚಳವಳಿ ಕೊಡುಗೆ ಅಪಾರ

ಕರ್ನಾಟಕ ಏಕೀಕರಣ ಚಳವಳಿ ಕನ್ನಡಿಗರಲ್ಲಿ ನಾಡು, ನುಡಿ ಹಾಗೂ ಭಾಷಾಭಿಮಾನವನ್ನು ಜಾಗೃತಗೊಳಿಸುವಲ್ಲಿ...

ಭೂ ಮಾಫಿಯಾ, ಬೆದರಿಕೆ ಆರೋಪ: ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟು ಜಾರ್ಖಂಡ್ ಬುಡಕಟ್ಟು ನಾಯಕಿ ಆತ್ಮಹತ್ಯೆ

ಜಾರ್ಖಂಡ್‌ನ ರಾಂಚಿಯಲ್ಲಿ ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ ಮತ್ತು ನಾಯಕಿ ನಿಶಾ ಕುಮಾರಿ...