ಉಡುಪಿ‌-ಕಾಸರಗೋಡು 400 KV ವಿದ್ಯುತ್ ಲೈನ್ ಅಳವಡಿಕೆಗೆ ಗ್ರಾಮಸ್ಥರ ವಿರೋಧ

Date:

ಉಡುಪಿ ಮತ್ತು ಕಾಸರಗೋಡು ನಡುವೆ 400 KV ವಿದ್ಯುತ್‌ ಲೈನ್ ಅಳವಡಿಕೆ ವಿರೋಧಿಸಿ, ಕಂಪನಿಯವರ ದುರ್ವರ್ತನೆ ಮತ್ತು ಜಿಲ್ಲಾಧಿಕಾರಿಯ ಅಸಂವಿಧಾನಿಕ ನಡೆಯನ್ನು ಖಂಡಿಸಿ ಇನ್ನಾ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು, ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಗ್ರಾಮ ಪಂಚಾಯತಿ ಎದುರು ನಾನಾ ಗ್ರಾಮಗಳ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. “ಈಗಾಗಲೇ ಇನ್ನಾ ಗ್ರಾಮದ ಮೂಲಕ ಹಾದು ಹೋಗಿರುವ ಉಡುಪಿ-ಹಾಸನ ವಿದ್ಯುತ್ ಮಾರ್ಗ ಮತ್ತು ಪಾದೂರು ತೈಲ ಸಂಗ್ರಹಾಗಾರದ ಪೈಪ್ ಲೈನ್ ಮಾರ್ಗದಿಂದಾಗಿ ಇನ್ನಾ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಜನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ, ಉಡುಪಿ-ಕಾಸರಗೋಡು ವಿದ್ಯುತ್ ಲೈನ್‌ಅನ್ನು ಅಳವಡಿಸುವುದು ಜನರ ಬದುಕನ್ನು ಕಸಿದುಕೊಳ್ಳಲಿದೆ” ಎಂದು ಆಕ್ರೋಶ ವ್ಯಕ್ತಪಿಸಿದ್ದಾರೆ.

“ಇನ್ನಾ ಮತ್ತು ಸುತ್ತಲಿನ ಗ್ರಾಮಗಳ ರೈತರು, ಕೃಷಿ ಕೂಲಿ ಕಾರ್ಮಿಕರು, ನಿತ್ಯ ಅನುಭವಿಸುತ್ತಿರುವ ಸಂಕಷ್ಟಕ್ಕೆ ಪರಿಹಾರವೇ ಇಲ್ಲವಾಗಿದೆ. ಈ ಯೋಜನೆಗಳಿಗೆ ಕೃಷಿ ಅವಲಂಬಿತ ಭೂ-ಮಾಲಿಕರಿಂದ ಬಲವಂತವಾಗಿ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲಾಗಿದೆ. ವಿದ್ಯುತ್‌ ಲೈನ್‌ನ ಸೆಳೆತದಿಂದ ಜನ-ಜಾನುವಾರುಗಳನ್ನು ಪ್ರಾಣ ಭಯದಿಂದ ಬದುಕುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈಗ ಉಡುಪಿ–ಕಾಸರಗೋಡು 400 KV ವಿದ್ಯುತ್ ಲೈನ್ ಅಳವಡಿಕೆಗಾಗಿ ಗ್ರಾಮಸ್ಥರ ತೀರ್ವ ವಿರೋಧದ ವ್ಯಕ್ತಪಡಿಸಿದ್ದಾರೆ. ಅನೇಕ ಬಾರಿ ಜಿಲ್ಲಾಧಿಕಾರಿಗೆ, ಜಿಲ್ಲೆಯ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ, ಸರ್ಕಾರಕ್ಕೆ ರೈತರು ಮಾಡಿದ ಮನವಿ, ಹಕ್ಕೊತ್ತಾಯ ಸಲ್ಲಿಸಿದ್ದಾರೆ. ಆದರೂ, ಯೋಜನೆಯ ಗುತ್ತಿಗೆ ಪಡೆದಿರುವ ‘Udupi – Kasargod Power Transmission Ltd’ (UKTL) (Sterlite Company) ಅವರು ಯೋಜನೆಯಿಂದ ಭಾದಿತರಾಗುವ ಜನರಿಗೆ ಯಾವುದೇ ಪರಿಹಾರ ನೀಡದೆ, ಮಾಹಿತಿ ಕೊಡದೆ ಜೆಸಿಬಿಗಳ ಮೂಲಕ ಭೂಮಿಯನ್ನು ಅಗೆದಿದ್ದಾರೆ. ಅಗೆಯುವುದಕ್ಕೆ ತಡೆಯೊಡ್ಡಿದ ಮಹಿಳೆಯರು, ವೃದ್ಧರನ್ನೆಲ್ಲ ದೂಡಿ, ಭತ್ತದ ಬೆಳೆಗಾಗಿ ಸಿದ್ಧತೆಗೊಂಡ ಗದ್ದೆಗೆ ನುಗ್ಗಿ ದೊಡ್ಡ ದೊಡ್ಡ ಹೊಂಡಗಳನ್ನು ತೋಡಿದ್ದಾರೆ. ಕಾನೂನನ್ನು ಗಾಳಿಗೆ ತೂರಿ ದುರ್ವತ್ರನೆ ತೋರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಜಿಲ್ಲಾಧಿಕಾರಿಯವರ ಲಿಖಿತ ಆದೇಶದ ಪ್ರತಿಯನ್ನು ತಹಶೀಲ್ದಾರರು ಮತ್ತು ಗುತ್ತಿಗೆದಾರರಲ್ಲಿ ಕೇಳಿದಾಗಲೂ, ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಈ ಯೋಜನೆ ಸಂಪೂರ್ಣ ಕಾನೂನು ಬಾಹಿರವಾಗಿ ಜಾರಿ ಮಾಡಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆ ಜಿಲ್ಲಾಡಳಿತದ ಕಣ್ಣಮುಂದೆಯೇ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಮೌನವಾಗಿದ್ದಾರೆ. ಅವರ ನಡೆ ಖಂಡನೀಯವಾಗಿದೆ” ಎಂದು ಗ್ರಾಮಸ್ಥರು ದೂರಿದ್ದಾರೆ.

“ಕೃಷಿಯನ್ನೇ ನಂಬಿಕೊಂಡಿರುವ ರೈತರ ಫಲವತ್ತಾದ ಕೃಷಿ ಭೂಮಿ, ಅವರು ಬೆವರು ಸುರಿಸಿ ನೆಟ್ಟು ಬೆಳೆಸಿದ ತೆಂಗು, ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ನಮ್ಮ ನೆಲ-ಜಲ-ಪರಿಸರವನ್ನು ಕಾಪಾಡಿಕೊಳ್ಳುವುದಕ್ಕಾಗಿ ನಮ್ಮ ಉಗ್ರ ಹೋರಾಟ ಅನಿವಾರ್ಯವಾಗಿದೆ” ಎಂದು ಹೋರಾಟಗಾರ ಸಮಿತಿ ಪ್ರತಿಭಟನೆಗೆ ಇಳಿದಿರುವುದಾಗಿ ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ: ರೈತ ಮುಖಂಡ ಚಾಮರಸ ಮಾಲೀ ಪಾಟೀಲ್

"ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ, ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಹಗರಣಗಳ...

ಚಿಕ್ಕನಾಯಕನಹಳ್ಳಿ | ವೆಲ್ಡಿಂಗ್ ಮಾಲೀಕರ-ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಚಿಕ್ಕನಾಯಕನಹಳ್ಳಿ ಪಟ್ಟಣದ ಮತಿಘಟ್ಟ ಗೇಟ್ ಬಳಿಯಿರುವ ವೀರಭದ್ರೇಶ್ವರ ಇಂಜಿನಿಯರಿಂಗ್ ವರ್ಕ್ಸ್ ಆವರಣದಲ್ಲಿ...

ಶಿವಮೊಗ್ಗ | ವ್ಯಾಪಕ ಮಳೆ ಹಿನ್ನೆಲೆ: ಜು.16ರಂದು ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ...

ಕಲಬುರಗಿ | ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು; ಕುಟುಂಬಸ್ಥರಿಂದ ಪ್ರತಿಭಟನೆ

ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ವೈದ್ಯರು ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು...