ಯಾದಗಿರಿ | ಸಂವಿಧಾನ, ಪ್ರಜಾಪ್ರಭುತ್ವ ಉಳುವಿಗಾಗಿ ಕಾಂಗ್ರೆಸ್‌ಗೆ ಬೆಂಬಲ; ದಸಂಸ ತೀರ್ಮಾನ

Date:

2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳುವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌ಗೆ ಬೆಂಬಲ ನೀಡಲು ದಸಂಸ ತೀರ್ಮಾನಿಸಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಹೇಳಿದ್ದಾರೆ.

- Advertisement -

ಯಾದಗಿರಿ ಜಿಲ್ಲೆಯ ದಸಂಸ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಸ್ವಾತಂತ್ರ್ಯ ನಂತರ ಸಂವಿಧಾನದ ಜಾರಿಗೆ ಒತ್ತಾಯಿಸಿ ಅನೇಕ ಚಳವಳಿಗಳು ಹುಟ್ಟಿಕೊಂಡವು ಅದರಲ್ಲಿ ಮುಖ್ಯವಾಗಿ ಆದಿವಾಸಿ ಚಳುವಳಿ, ರೈತ ಚಳುವಳಿ, ಕಾರ್ಮಿಕ ಚಳುವಳಿ, ಮಹಿಳಾ ಚಳುವಳಿಗಳಿಂದ ಒಂದಷ್ಟು ಅವಕಾಶಗಳನ್ನು ದಕ್ಷಿಸಿಕೊಂಡು ಶೋಷಿತ ತಳಸಮುದಾಯಗಳು ಪ್ರಗತಿಯತ್ತ ಮುನ್ನಡೆಯತೊಡಗಿದವು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದನ್ನು ಸಹಿಸದ ಆರ್‌ಎಸ್‌ಎಸ್‌, ಬಿಜೆಪಿ, ಸಂಘ-ಪರಿವಾರಗಳು ಈ ಚಳುವಳಿಗಳ ವಿರುದ್ಧ ಷಡ್ಯಂತ್ರ ರೂಪಿಸಿದ್ದವು. ಹಿಂದುಗಳು ನಾವೆಲ್ಲರು ಒಂದೇ ಎಂದು ಹೇಳುತ್ತಾ ಅಲ್ಪಸಂಖ್ಯಾತರ ಮುಸ್ಲಿಂ, ಕ್ರೈಸ್ತರನ್ನು ಶತ್ರುಗಳಂತೆ ಬಿಂಬಿಸತೊಡಗಿದವು. ದೇವರು ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಹಾಗೂ ಕೋಮುಭಾವನೆಗಳನ್ನು ಕೇರಳಿಸಿ ಜಾತಿ ರಾಜಕಾರಣಕ್ಕೆ ಬಳಸಿಕೊಂಡು ಜನರ ನಡುವೆ ವಿಷದ ಬೀಜ ಬಿತ್ತುತ್ತಿರುವುದು ಖಂಡನೀಯ ಎಂದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳಂತೆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮ ಧರ್ಮದ ಆಚರಣೆಗಳನ್ನು ಆಚರಿಸಲು ಅವಕಾಶವಿದ್ದಾಗ ಆರ್.ಎಸ್.ಎಸ್‌ನವರು ಇವುಗಳನ್ನು ಆಚರಿಸದಂತೆ ಅವರನ್ನು ತಡೆಯುತ್ತಿರುವುದು ಹಾಗೂ ಸ್ವಾರ್ಥ ರಾಜಕಾರಣಕ್ಕೆ ಕೋಮುಭಾವನೆಗಳನ್ನು ಕೆರಳಿಸುವುದು ದೇಶದ ರಾಜಕಾರಣವನ್ನು ಪ್ರತಿಬಿಂಬಿಸುವುದನ್ನು ದಸಂಸ ತೀವ್ರವಾಗಿ ಖಂಡಿಸುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಜಾತಿಗಳ ನಡುವೆಯೇ ಜಗಳ ತಂದಿದ್ದು, ರಾಜಕೀಯ ಲಾಭ ಪಡೆಯುತ್ತಿವುದು ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ. ಪಕ್ಷಗಳ ಕುತಂತ್ರವಾಗಿದೆ ಎಂದರು.

ಇಡಬ್ಲ್ಯುಎಸ್ ಹೆಸರಿನಲ್ಲಿ ಶೇ.3ರಷ್ಟು ಮೇಲ್ವರ್ಗದವರೆ ಶೇ.10ರಷ್ಟು ಮಿಸಲಾತಿಗಿಟ್ಟಿಸಿಕೊಂಡರು ಅಸ್ಪೃಶ್ಯ ಜಾತಿಗಳಿಗೆ ಹಾಗೂ ಉಪಜಾತಿಗಳಿಗೆ ಅದರ ಲಾಭ ಮಾತ್ರ ಶೂನ್ಯ. ಹಿಂದು ಧರ್ಮದ ಹೆಸರಿನಲ್ಲಿ ಮನುಧರ್ಮ ಸ್ಥಾಪನೆಗೆ ಶೇ. 3ರಷ್ಟು ಜನರು ಇರುವ ಈ ರಾಷ್ಟ್ರದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡಿ ಮನು ಧರ್ಮವನ್ನು ಸ್ಥಾಪಿಸಲು ಭಾರಿ ಕುತಂತ್ರಗಳು ದೇಶದಲ್ಲಿ ನಡೆಯುತ್ತಿರುವುದು ಕಂಡು ಬರುತ್ತಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ಸಂವಿಧಾನ ಬದಲಾವಣೆಗೆ ಹಾಗೂ ಅದನ್ನು ಶೀಥಿಲಗೊಳಿಸುವಂತಃ ಹುನ್ನಾರಗಳು ಮೇಲಿಂದ ಮೇಲೆ ನಡೆಯುತ್ತಿದೆ. ಭಾರತ ಸರ್ಕಾರ, ಮಂತ್ರಿಗಳು ಆರ್.ಎಸ್.ಎಸ್‌ನ ಮುಖಂಡರುಗಳು ಹಿಂದು ಧರ್ಮದ ಹೆಸರಿನಲ್ಲಿ ಧರ್ಮ ಸಂಸದ ಸ್ಥಾಪಿಸಿ ಮೇಲ್ಮಾತಿ ಹಿಡಿತವನ್ನು ಮರುಸ್ಥಾಪಿಸುವುದು ಅವರ ಗುರಿಯಾಗಿದೆ. ಮನುಧರ್ಮವನ್ನು ಸ್ಥಾಪಿಸುವುದು ಹಾಗೂ ಸಂವಿಧಾನ ಅಸ್ಥಿರಗೊಳಿಸುವುದು ಅವರ ರಾಜಕೀಯ ಅಜೆಂಡಾ ಇರುವುದು ಮೇಲ್ನೋಟಕ್ಕೆ ಗೊಚರಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ನಾಗಣ್ಣ ಬಡಿಗೇರ್ ರಾಜ್ಯ ಸಂ.ಸಂಚಾಲಕ, ಗೋಪಾಲ ತೆಳಿಗೇರಿ, ಸೈದಪ್ಪ ಕುಲೂರ್, ನಿಂಗಣ್ಣ ಬೀರಣಾಳ, ಮರಳುಸಿದ್ದಪ್ಪ ನಾಯ್ಕಲ್, ಮಲ್ಲಿನಾಥ ಸುಂಗುಲ್ಕರ್, ಆಜೀಜ್ ಐಕುರ್ ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...