ಶಹಾಪುರ ಪಟ್ಟಣದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸತ್ಯಂಪೇಟೆ ಗ್ರಾಮದಲ್ಲಿ ತೀವ್ರ ಬಿಸಿಲಿನ ತಾಪಕ್ಕೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಮೃತರನ್ನು ಸಿದ್ದಪ್ಪ ಶರಣಪ್ಪ ಕೊಂಡಗುಳಿ (30) ಎಂದು ಗುರುತಿಸಲಾಗಿದೆ. ಶರಣಪ್ಪ ಪಕ್ಕದ ಹಸನಾಪುರ ಗ್ರಾಮದ ಪೆಟ್ರೋಲ್ ಬಂಕ್ ಪ್ರದೇಶಕ್ಕೆ ತೆರಳಿ ಮನೆಗೆ ಮರಳಿ ಬಂದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಡ ಕುಟುಂಬಕ್ಕೆ ಸೇರಿದ ಸಿದ್ದಪ್ಪ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಕೆಲಸ ಇಲ್ಲದ ಕಾರಣ ಹೊರಗೆ ಹೋಗಿ ಮನೆಗೆ ಹಿಂದಿರುಗಿದ ಬಳಿಕ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ತೀವ್ರ ಬಿಸಿಲು ಮತ್ತು ಉಷ್ಣತೆಯ ನಡುವೆಯೇ ಈ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ ಹೊಸ 6 ಜಿಲ್ಲೆ, 12 ತಾಲೂಕು ರಚನೆಗೆ ಒತ್ತಾಯ




