ಯಾದಗಿರಿ | ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

Date:

ಕಟ್ಟಡ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು. ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಎಐಯುಟಿಯುಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದೆ. ಸಂಘಟನೆಯ ಕಾರ್ಯಕರ್ತರು ಯಾದಗಿರಿಯಲ್ಲಿಯೂ ಪ್ರತಿಭಟನೆ ನಡೆಸಿದ್ದು, ಯಾದಗಿರಿ ವೃತ್ತ ನಿರೀಕ್ಷಕ ಶಿವರಾಜ್ ಪಾಟೀಲ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

“ಕಟ್ಟಡ ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸುವ ಆಶಯದೊಂದಿಗೆ ಕಲ್ಯಾಣ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಮಂಡಳಿಯು ಕಟ್ಟಡ ಕಾರ್ಮಿಕರಿಗೆ ಎಲ್ಲ ಘೋಷಿತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಆದರೆ, ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಕಾರ್ಮಿಕರನ್ನು ಹಕ್ಕುಗಳಿಂದ ವಂಚಿತರನ್ನಾಗಿಸುತ್ತಿದೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

“ನೊಂದಾಯಿತ ಕಾರ್ಮಿಕನ ಇಡೀ ಕುಟುಂಬಕ್ಕೆ ಸಿಗಬೇಕಾದ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ. ಕಳೆದ 2 ವರ್ಷಗಳಿಂದ ಬರಬೇಕಾದ ಶೈಕ್ಷಣಿಕ ಸಹಾಯಧನ ಇನ್ನೂ ಬಂದಿಲ್ಲ. ಎಲ್ಲರಿಗೂ ಸೂರು ಕಟ್ಟುವ ಈ ಕಟ್ಟಡ ಕಾರ್ಮಿಕರು ತಮಗೊಂದು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಇಂದಿಗೂ ಬಹುತೇಕ ಕಟ್ಟಡ ಕಾರ್ಮಿಕರು ನೊಂದಾವಣೆಯಾಗದೆ ಹೊರಗುಳಿದ್ದಾರೆ. ಆದರೆ, ಕೆಲವೆಡೆ ಕಟ್ಟಡ ಕಾರ್ಮಿಕರಲ್ಲದವರು ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ವಂಚಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಬೇಡಿಕೆಗಳು:
1) ಕಳೆದ 2 ವರ್ಷಗಳಿಂದ ಬಾಕಿಯಿರುವ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಿ. ಪ್ರಸಕ್ತ 2023-24ನೇ ವರ್ಷದ ಶೈಕ್ಷಣಿಕ ಸಹಾಯಧನದ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಿ.
2) ಅರ್ಹ ಕಾರ್ಮಿಕನಿಗೆ ಪಿಂಚಣಿಗಾಗಿ 6 ತಿಂಗಳೂಳಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ತೆಗೆದುಹಾಕಿ ಹಾಗೂ ಮೊದಲ ಬಾರಿಗೆ ಕಂದಾಯ ಅಧಿಕಾರಿಗಳು ‘ಜೀವಿತ ಪ್ರಮಾಣ’ ಪತ್ರವನ್ನು ನೀಡಿದ ನಂತರ, ಮುಂದಿನ ವರ್ಷಗಳಲ್ಲಿ ಕಾರ್ಮಿಕ ಇಲಾಖೆಯಿಂದಲೇ ಜೀವಿತ ಪ್ರಮಾಣ ಪತ್ರ ನೀಡಬೇಕು. ಮತ್ತು ಬೇರೆ ಯಾವುದೇ ಪಿಂಚಣಿ ಪಡೆದರೂ ಈ ಪಿಂಚಣಿಯನ್ನು ನಿಲ್ಲಿಸಬಾರದು.
3) ರೂ.5 ಲಕ್ಷ ರೂಪಾಯಿಗಳ ‘ನಗದು ರಹಿತ ಆರೋಗ್ಯ ಸೇವೆ’ಯನ್ನು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಕೂಡಲೇ ಜಾರಿಗೊಳಿಸಿ.
4) ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಮಂಡಳಿಯು ರೂ. 5 ಲಕ್ಷ ಸಹಾಯಧನ ಒದಗಿಸಬೇಕು.
6) ಮಂಡಳಿಯ ಸದಸ್ಯತ್ವದ ನವೀಕರಣ ಅವಧಿಯನ್ನು ಕೇವಲ 1 ವರ್ಷಕ್ಕೆ ಇಳಿಸಿರುವ ಮಂಡಳಿಯ ನಿರ್ಧಾರವನ್ನು ಕೈಬಿಡಿ ಹಾಗೂ ಈ ಬಗ್ಗೆ ಹಿಂದಿನ ವಿಧಾನವನ್ನು ಮುಂದುವರಿಸಿ.
6) ಸ್ಲಂ ಬೋರ್ಡ್ ಗೆ ನೀಡಿದ 518 ಕೋಟಿ ರೂಪಾಯಿ ಮಂಡಳಿಯ ಹಣವನ್ನು ಕೂಡಲೇ ವಾಪಸ್ ಪಡೆಯಿರಿ.
7) ಮಂಡಳಿಯ ಹಣ ಪೋಲು ಮಾಡುವ ಶಿಶುವಿಹಾರ, ಅಂಗನವಾಡಿ, ಮೊಬೈಲ್ ಕ್ಲಿನಿಕ್ ಇತ್ಯಾದಿ ಯೋಜನೆಗಳನ್ನು ನಿಲ್ಲಿಸಿ.
8) ಅವಶ್ಯಕತೆ ಇರುವ ಮಕ್ಕಳಿಗೆ ಮಾತ್ರ…ಲ್ಯಾಪ್‌ಟಾಪ್-ಟ್ಯಾಬ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಿ ಹಾಗೆ ಅವಶ್ಯಕತೆ ಇರುವ ಕಟ್ಟಡ ಕಾರ್ಮಿಕರಿಗೆ ಮಾತ್ರ ಟೂಲ್ ಕಿಟ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಿ.
9) ಮಂಡಳಿಯ ಆದಾಯ ಹೆಚ್ಚಿಸಲು ಬಾಕಿಯಿರುವ ಸೆಸ್ ಕೂಡಲೇ ವಸೂಲು ಮಾಡಲು ಕ್ರಮ ಕೈಗೊಳ್ಳಿ ಮತ್ತು ಸರ್ಕಾರಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ 2% ವರೆಗೆ ಸೆಸ್ ಹೆಚ್ಚಿಸಿ.
10) ಈವರೆಗೆ ವಿವಿಧ ಕಿಟ್‌ಗಳು, ಲ್ಯಾಪ್ ಟಾಪ್ ಖರೀದಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ.
11) ಬೋಗಸ್ ಕಾರ್ಡಗಳನ್ನು ಪತ್ತೆಹಚ್ಚಿ ರದ್ದು ಮಾಡಿ. ನೋಂದಾವಣೆಯನ್ನು ಈ ಹಿಂದೆ ಇದ್ದಂತೆ ಕಾರ್ಮಿಕ ಸಂಘಟನೆಯ ಮೂಲಕ ಮತ್ತು ಕಾರ್ಮಿಕ ಇಲಾಖೆಯ ಮೂಲಕ ಮಾತ್ರ ಮಾಡುವ ಕ್ರಮ ಜಾರಿಗೆ ತನ್ನಿ. ಏಜಂಟರ ಶೋಷಣೆ ತಪ್ಪಿಸಿ.
12) ಅಪಘಾತದಲ್ಲಿ ಜೀವ ಕಳೆದುಕೊಂಡ ಕಾರ್ಮಿಕರ ಕುಟುಂಬಗಳಿಗೆ 10ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿ. ಅಪಘಾತದಲ್ಲಿ ದುಡಿಯುವ ಸಾಮರ್ಥ್ಯವನ್ನು ಕಳೆದುಕೊಂಡ ಕಾರ್ಮಿಕರಿಗ 10 ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಜೀವನ ಯೋಗ್ಯ ಪಿಂಚಣಿ ನೀಡಿ.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ರಾಮಲಿಂಗಪ್ಪ ಬಿ.ಎನ್, ಸದಸ್ಯರಾದ ಭೀಮಪ್ಪ, ಶಂಕರ್ ಠಾಕೂರ್ ಚವ್ಹಾಣ್, ಮಲ್ಲಿಕಾರ್ಜುನ್, ಮಟಾಲ್ಲೇಶ್ ವಡ್ಡರ್, ಯಲ್ಲಾಲಿಂಗ, ಬಂದೆನವಾಜ್, ಅಂಬ್ರೇಶ್ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಬಸ್‌ ನಿಲ್ದಾಣವಿಲ್ಲದೇ ಬಿಸಿಲಲ್ಲಿ ಕಾಯುವ ಪ್ರಯಾಣಿಕರ ಗೋಳು ಕೇಳುವವರಾರು

ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳು ಬಿಸಿಲಿನ ನಾಡು ಬೇಸಿಗೆಯಲ್ಲಿ ಅತೀ ಹೆಚ್ಚು...

ಯಾದಗಿರಿ | ಶಹಾಪುರದಲ್ಲಿ ಮಹಿಳೆಯರಿಗಾಗಿ ಹತ್ತು ದಿನಗಳ ಕಸೂತಿ ತರಬೇತಿ ಕಾರ್ಯಾಗಾರ

ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ಹಾಗೂ ಈಸಾಫ್ ಫೌಂಡೇಶನ್ ಸಹಯೋಗದಲ್ಲಿ ಯಾದಗಿರಿ...

ಯಾದಗಿರಿ | ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಮನುಷ್ಯರ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡಾಕೂಟಗಳು ಹೆಚ್ಚಿನ ಸಹಕಾರಿ. ಸರ್ಕಾರಿ ನೌಕರರು...

ಯಾದಗಿರಿ | ಸಾಮಾಜಿಕ ಭದ್ರತೆ ಯೋಜನೆಗಳ ನಿಯಮ ಸಡಿಲಿಸಿ ಮಾಸಿಕ ₹5,000ಕ್ಕೆ ಹೆಚ್ಚಿಸುವಂತೆ ಆಗ್ರಹ

ಸಾಮಾಜಿಕ ಭದ್ರತೆ ಯೋಜನೆಗಳ ನಿಯಮವನ್ನು ಸಡಿಲಿಸಿ ಮಾಸಿಕ ₹5,000 ಹೆಚ್ಚಿಸುವಂತೆ ಒತ್ತಾಯಿಸಿ...