ಬೀದರ್‌ | ಯೋಗ ಅಂತರಿಕ ಮತ್ತು ಬಾಹ್ಯ ವ್ಯಕ್ತಿತ್ವ ರೂಪಿಸುವ ಸಾಧನ: ಪ್ರೊ. ಗುರುನಾಥ ಮೂಲಗೆ

Date:

  • ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ಹಾಗೂ ಯೋಗಾ ವಿಶೇಷ ಶಿಬಿರ
  • ಯಶಸ್ವಿ ಜೀವನಕ್ಕೆ ಜೀವನ ಕೌಶಲ್ಯಗಳು ಅವಶ್ಯಕವಾಗಿವೆ.

ಯೋಗವು ಇಂದಿನ ಯುಗದಲ್ಲಿ ವ್ಯಕ್ತಿಯ ಅಂತರಿಕ ಮತ್ತು ಬಾಹ್ಯ ವ್ಯಕ್ತಿತ್ವವನ್ನು ರೂಪಿಸಿ ರೋಗಮುಕ್ತನಾಗಿ ಮಾಡುವ ಸಾಧನವಾಗಿದೆ. ರೋಗಗಳ ಪರಿಹಾರಕ್ಕೆ ಎಲ್ಲಿ ವಿಜ್ಞಾನವು ನಿಲ್ಲುತ್ತದೆಯೋ ಅಲ್ಲಿಂದ ಯೋಗವು ರೋಗ ಪರಿಹಾರಕವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಗುರುನಾಥ ಮೂಲಗೆ ಅಭಿಪ್ರಾಯಪಟ್ಟರು.

ಬೀದರ್‌ ನಗರದ ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ವ್ಯಕ್ತಿತ್ವ ಮತ್ತು ಯೋಗಾ ಕುರಿತು ಮೂರು ದಿನಗಳ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಂಡು ಉತ್ತಮ ಅಂಕ ಗಳಿಸಲು ಸಹಕಾರಿಯಾಗುತ್ತದೆ. ಅಲ್ಲದೇ ಯೋಗವು ವ್ಯಕ್ತಿಯನಲ್ಲ ಆತನ ವ್ಯಕ್ತಿತ್ವವನ್ನು ರೂಪಿಸು, ಚಿತ್ರವನಲ್ಲ ಚರಿತ್ರೆಯನ್ನು ರೂಪಿಸು, ಎನ್ನುವ ಮನೋಭಾವನೆಯನ್ನು ಮೂಡಿಸುತ್ತದೆ” ಎಂದರು.

“ಇಂದಿನ ಯುವಜನರು ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮಾನಸಿಕವಾಗಿ ಅಶ್ವಸ್ಥರಾಗುತ್ತಿದ್ದು, ಅವರಿಗೆಲ್ಲಾ ಯೋಗವು ಇವೆಲ್ಲವುಗಳಿಂದ ಮುಕ್ತಿ ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸದ ಜೊತೆಗೆ ರಾಷ್ಟ್ರಾಭಿಮಾನ, ವೈಜ್ಞಾನಿಕ ಚಿಂತನೆ, ಸುಸ್ಥಿರ ಆರ್ಥಿಕ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಜವಾಬ್ದಾರಿಯ ಬದುಕನ್ನು ಕಟ್ಟಿಕೊಳ್ಳಬೇಕು” ಎಂದು ನುಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಸಿ. ಕನಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಇಂದಿನ ಯುವಪೀಳಿಗೆ ಅನೇಕ ತೊಂದರೆಗಳಿಗೆ ಈಡಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಯುವಕ-ಯುವತಿಯರಿಗೆ ಸರಿಯಾದ ಮಾರ್ಗದರ್ಶನ ಇರದಿರುವುದು. ಯಶಸ್ವಿ ಜೀವನಕ್ಕೆ ಜೀವನ ಕೌಶಲ್ಯಗಳು ಅವಶ್ಯಕವಾಗಿವೆ. ಯೋಗದಿಂದ ತಮ್ಮ ಆಂತರಿಕ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಉತ್ತಮ ಆಲೋಚನೆಗಳಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಪ್ರಕೃತಿ ವಿಕೋಪ ಪರಿಹಾರಕ್ಕೆ 21.34 ಕೋಟಿ ಅನುದಾನ ಲಭ್ಯ: ಸಚಿವ ಕೃಷ್ಣ ಭೈರೇಗೌಡ

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶಿಲ್ಪಾ ಹಿಪ್ಪರಗಿ, ವೀಣಾ ಜಲಾದಿ, ಡಾ. ಸಿದ್ಧರಾಮ ನೆಂಗಾ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷಕುಮಾರ ಸಜ್ಜನ ನಿರೂಪಿಸಿದರು, ರಾಜಕುಮಾರ ಸಿಂಧೆ ಸ್ವಾಗತಿಸಿದರು, ಪಾಂಡುರಂಗ ಕುಂಬಾರ ವಂದಿಸಿದರು

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ ವಿದ್ಯಾರ್ಥಿ ಯುವಜನರ ಪ್ರಣಾಳಿಕೆ ಬಿಡುಗಡೆ 

ರಾಜ್ಯದಲ್ಲಿ ಒಟ್ಟು ಎಂಟು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ 2024ರ ಈ ಬಾರಿಯ...

ವಿಜಯಪುರ | ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಭೆ

ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ್,...

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ: ಸದಾಶಿವ ಉಳ್ಳಾಲ್ ವಿಶ್ವಾಸ

ಉಳುವವನೇ ಭೂಮಿಯೊಡೆಯ, ಲೋನ್ ಮೇಳ, ಬ್ಯಾಂಕ್ ರಾಷ್ಟ್ರೀಕರಣ, ಮಂಗಳೂರಿಗೆ ಎನ್‌ಎಂಪಿಟಿ, ವಿಮಾನ...

ವಿಜಯಪುರ ಲೋಕಸಭಾ ಕ್ಷೇತ್ರ; 21 ಅಭ್ಯರ್ಥಿಗಳಿಂದ 35 ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಏಪ್ರಿಲ್‌...