ಲೋಕಸಭೆ ಚುನಾವಣೆ | ಕಣದಿಂದ ದೂರಸರಿದ ಹಲವು ಹಾಲಿ ಬಿಜೆಪಿ ಸಂಸದರು!

Date:

ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಲವಾರು ಹಾಲಿ ಸಂಸದರು (ಎಂಪಿಗಳು) ಮುಂಬರುವ ಲೋಕಸಭೆ ಚುನಾವಣೆಯ ಕಣದಿಂದ ತಾವಾಗಿಯೇ ದೂರ ಸರಿದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಬಳಿಕ ಚುನಾವಣಾ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ವಿನಂತಿಸಿದ್ದಾರೆ. ಇನ್ನು ಕೆಲವರು ರಾಜಕೀಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಈ ವಿಷಯವು ಈಗ ಬಿಜೆಪಿಯ ಹಾಲಿ ಸಂಸದರು ಪಕ್ಷದಿಂದ ಬೇಸತ್ತಿದ್ದಾರಾ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಕೆಲವೇ ದಿನಗಳಿಗೂ ಮುನ್ನ ಪೂರ್ವ ದೆಹಲಿಯ ಪಕ್ಷದ ಹಾಲಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು, ತಾನು ಕ್ರಿಕೆಟ್‌ ಮೇಲೆ ಅಧಿಕ ಗಮನಹರಿಸಲು ಸಹಾಯವಾಗಲು ತನ್ನನ್ನು ಚುನಾವಣಾ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ವಿನಂತಿಸಿದ್ದಾರೆ.

ಇದನ್ನು ಓದಿದ್ದೀರಾ?  ಲೋಕಸಭೆ ಚುನಾವಣೆ ಗೆಲ್ಲಲು ಮತ್ತೆ ‘ಪುಲ್ವಾಮಾ, ಬಾಲಕೋಟ್’ ರೀತಿಯ ದಾಳಿ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅದಾದ ಬಳಿಕ ಜಾರ್ಖಂಡ್‌ನ ಹಜಾರಿಬಾಗ್‌ನ ಬಿಜೆಪಿಯ ಹಾಲಿ ಸಂಸದ ಜಯಂತ್ ಸಿನ್ಹಾ ಅವರು ತಮ್ಮನ್ನು ನೇರ ಚುನಾವಣಾ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಪಕ್ಷದ ಮುಖ್ಯಸ್ಥರಿಗೆ ವಿನಂತಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನೇರ ಚುನಾವಣಾ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ನಾನು ಪಕ್ಷದ ಅಧ್ಯಕ್ಷರು ಜೆಪಿ ನಡ್ಡಾ ಅವರನ್ನು ವಿನಂತಿಸಿದ್ದೇನೆ” ಎಂದು ಹೇಳಿದ್ದಾರೆ. ಹಾಗೆಯೇ ಆರ್ಥಿಕ ಮತ್ತು ಇತರ ವಿಷಯಗಳಲ್ಲಿ ಪಕ್ಷದೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆ. ಜಯಂತ್ ಸಿನ್ಹಾ ಕಳೆದ 10 ವರ್ಷಗಳಿಂದ ಜಾರ್ಖಂಡ್‌ನ ಹಜಾರಿಬಾಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಭಾನುವಾರ, ಬಿಜೆಪಿ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇಬ್ಬರು ಹಾಲಿ ಸಂಸದರಾದ ಗಾಜಿಯಾಬಾದ್‌ನ ಜನರಲ್ (ನಿವೃತ್ತ) ವಿ ಕೆ ಸಿಂಗ್ ಮತ್ತು ಕಾನ್ಪುರದ ಸತ್ಯದೇವ್ ಪಚೌರಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆಯಿಲ್ಲ ಎಂದು ಪಕ್ಷದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಅದೇ ರೀತಿ ವಡೋದರಾ ಸಂಸದೆ ರಂಜನಾ ಭಟ್ ಅವರು ಈ ಬಾರಿ ಸ್ಪರ್ಧಿಸಲು ಇಚ್ಚೆಯಿಲ್ಲ ಎಂದು ತಿಳಿಸಿದರು.

ಗುಜರಾತಿನ ಸಬರ್ಕಾಂತ ಕ್ಷೇತ್ರದಿಂದ ಹೊಸ ಅಭ್ಯರ್ಥಿ ಭಿಖಾಜಿ ಠಾಕ್ರ್ ಅವರು ಬಿಜೆಪಿ ಟಿಕೆಟ್ ಲಭಿಸಿದ ಬಳಿಕ ತನಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಂತರ ಪಕ್ಷವು ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ದೆಹಲಿಯ ಚಾಂದನಿ ಚೌಕ್‌ನ ಹಾಲಿ ಸಂಸದ ಹರ್ಷವರ್ಧನ್ ಅವರು ಪಕ್ಷವು ಈ ಕ್ಷೇತ್ರಕ್ಕೆ ಉದ್ಯಮಿ ಪ್ರವೀಣ್ ಖಂಡೇಲ್‌ವಾಲ್‌ರನ್ನು ಅಭ್ಯರ್ಥಿಯನ್ನಾಗಿಸಿದ ಒಂದು ದಿನದ ನಂತರ ಸಕ್ರಿಯ ರಾಜಕೀಯವನ್ನು ತೊರೆದಿದ್ದಾರೆ. ವರ್ಧನ್ ಈ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದರು.

ಭಾನುವಾರ, ಬಿಜೆಪಿಯು ಇಬ್ಬರು ಪ್ರಮುಖ ಕೇಂದ್ರ ಸಚಿವರನ್ನು ತನ್ನ ಪಟ್ಟಿಯಿಂದ ಕೈಬಿಟ್ಟಿದೆ. ಬಿಹಾರದ ಬಕ್ಸರ್‌ನಿಂದ ಹಾಲಿ ಸಂಸದ ಅಶ್ವಿನಿ ಕುಮಾರ್ ಚೌಬೆ ಮತ್ತು ಗಾಜಿಯಾಬಾದ್‌ನ ಹಾಲಿ ಸಂಸದ ಜೆನ್ ಸಿಂಗ್ ಹೆಸರನ್ನು ಕೈಬಿಡಲಾಗಿದೆ. ಹೋಳಿ ಶುಭಾಶಯಗಳನ್ನು ತಿಳಿಸುತ್ತಾ ಅಶ್ವಿನಿ ಕುಮಾರ್ ಚೌಬೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. “ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದುರ ವಿಜಯವನ್ನು ಸಂಕೇತಿಸುತ್ತದೆ. ಸತ್ಯ ಮತ್ತು ಹೋರಾಟ ನನ್ನ ಜೀವನದ ಒಂದು ಭಾಗವಾಗಿದೆ. ಸತ್ಯಕ್ಕೆ ತೊಂದರೆಯಾಗಬಹುದು ಆದರೆ ಸೋಲದು. ಎಲ್ಲಾ ಹಿತೈಷಿಗಳು ಮತ್ತು ಬೆಂಬಲಿಗರು ತಾಳ್ಮೆಯನ್ನು ಕಾಪಾಡಿಕೊಳ್ಳಲು ವಿನಂತಿಸುತ್ತೇನೆ. ಎಲ್ಲವೂ ಚೆನ್ನಾಗಿರುತ್ತದೆ” ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾನನಷ್ಟ ಆರೋಪ: ಬಿಜೆಪಿ, ಚುನಾವಣಾ ಆಯೋಗಕ್ಕೆ ನೋಟಿಸ್ ಕಳುಹಿಸಿದ ಟಿಎಂಸಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಂಗಳವಾರ ಬಿಜೆಪಿ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ...

ಅದಾನಿ, ಅಂಬಾನಿಗೆ ಸಹಾಯ ಮಾಡಲು ಮೋದಿಯವರನ್ನು ಆ ಪರಮಾತ್ಮನೇ ಕಳುಹಿಸಿದ್ದು: ರಾಹುಲ್ ಲೇವಡಿ

ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡಲು ನರೇಂದ್ರ...

ಮೋದಿ ಸುಳ್ಳುಗಳು | ಶೋಷಣೆಯಿಂದ ಮುಕ್ತಿ ನೀಡದ ಮೋದಿ, ಬುಡಕಟ್ಟುಗಳ ಅಭಿವೃದ್ಧಿಗೆ ನಿಲ್ಲುತ್ತಾರೆಯೇ?  

ಜಾರ್ಖಂಡ್‌ನ ದುಮ್ಕಾದಲ್ಲಿ ಇಂದು ನಡೆದ ಸಾರ್ವಜನಿಕ  ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ...

ಮೋದಿ ವಿರುದ್ಧ ಎದೆ ಸೆಟೆಸಿದ ಪಂಜಾಬ್ ಪುನಃ ಕೇಜ್ರೀವಾಲರ ಪೊರಕೆ ಹಿಡಿಯುವುದೇ?

ದೇಶದಲ್ಲೇ ಅತಿ ಹೆಚ್ಚು ಶೇಕಡಾವಾರು ದಲಿತರಿರುವ ಈ ರಾಜ್ಯದ 13 ಸೀಟುಗಳು...