ರಾಜ್ಯದ 30% ಕಾಫಿ ತೋಟಗಳು ಅರಣ್ಯ ಭೂಮಿ ಒತ್ತುವರಿ? – ಸರ್ಕಾರದ ನೂತನ ಸರ್ವೆ ಆದೇಶದಿಂದ ಬೆಳೆಗಾರರಲ್ಲಿ ಆತಂಕ!

Date:

ರಾಜ್ಯದಲ್ಲಿರುವ ಒಟ್ಟು ಕಾಫಿ ಎಸ್ಟೇಟ್‌ಗಳ ಪೈಕಿ ಸುಮಾರು ಶೇಕಡ 30ರಷ್ಟು ಭಾಗವು ಅರಣ್ಯ ಭೂಮಿ ಹಾಗೂ ಕಂದಾಯ ಇಲಾಖೆಯ ಜಾಗಗಳನ್ನು ಆಕ್ರಮಿಸಿಕೊಂಡಿವೆ ಅಥವಾ ಗಡಿ ಹಂಚಿಕೊಂಡಿವೆ ಎಂಬ ಮಾತುಗಳ ಬೆನ್ನಲ್ಲೇ, ರಾಜ್ಯ ಸರ್ಕಾರವು ಅರಣ್ಯ, ಬಫರ್ ಜೋನ್ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳ (Eco-Sensitive Areas – ESA) ಸಮಗ್ರ ನೂತನ ಸರ್ವೆ ನಡೆಸಲು ನಿರ್ಧರಿಸಿದೆ. ಸರ್ಕಾರದ ಈ ತೀರ್ಮಾನವು ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಕಾಫಿ ತೋಟಗಳ ಮಾಲೀಕರಲ್ಲಿ ಭಾರೀ ಆತಂಕ ಮತ್ತು ಕಳವಳವನ್ನು ಹುಟ್ಟುಹಾಕಿದೆ.

- Advertisement -

ಇತ್ತೀಚೆಗೆ ಕಸ್ತೂರಿರಂಗನ್ ವರದಿಯ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತಾದರೂ, ಕಾಡಂಚಿನ ಪ್ರದೇಶಗಳು ಮತ್ತು ಪರಿಸರ ಸೂಕ್ಷ್ಮ ವಲಯಗಳ ಗಡಿಗಳನ್ನು ನಿಖರವಾಗಿ ಗುರುತಿಸಲು ಹೊಸ ಸರ್ವೆ ನಡೆಸುವುದಾಗಿ ಪ್ರಕಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ...

ಇದನ್ನೂ ಓದಿ: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಇದರೊಂದಿಗೆ ಭಾರತೀಯ ಕಾಫಿ ಮಂಡಳಿಯು ಸಹ ಕಾಫಿ ಬೆಳೆಯುವ ಪ್ರದೇಶಗಳ ಜಮೀನುಗಳ ಸ್ಥಿತಿಗತಿ ಹಾಗೂ ಇತ್ತೀಚಿನ ಹವಾಮಾನ ಬದಲಾವಣೆಗಳ ಕುರಿತು ಸಮಗ್ರ ಸರ್ವೆ ಆರಂಭಿಸಿದೆ. ಈ ಸರ್ವೆಗಳ ಫಲಿತಾಂಶದಿಂದಾಗಿ ದಶಕಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಜಮೀನುಗಳು ಕೈತಪ್ಪಿ ಹೋಗಬಹುದು ಎಂಬ ಭಯ ಬೆಳೆಗಾರರಲ್ಲಿ ಎದುರಾಗಿದೆ.

ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ಬಹುತೇಕ ಕಾಫಿ ತೋಟಗಳು ಅರಣ್ಯ ಮತ್ತು ಕಂದಾಯ ಭೂಮಿಗೆ ಹೊಂದಿಕೊಂಡಿವೆ. ಇವುಗಳಲ್ಲಿ ಕಂದಾಯ ಜಾಗ ಅಥವಾ ಪೈಸಾರಿ ಜಾಗಗಳನ್ನು ದಶಕಗಳ ಹಿಂದೆ ಕೃಷಿಗೆ ಬಳಸಿಕೊಳ್ಳಲಾಗಿದ್ದು, ಇಂದಿಗೂ ಅವು ಸಂಪೂರ್ಣವಾಗಿ ಸಕ್ರಮಗೊಂಡಿಲ್ಲ. ಸರ್ಕಾರ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡರೆ ಕಾಫಿ ಬೆಳೆಯುವ ವಿಸ್ತೀರ್ಣ ಗಣನೀಯವಾಗಿ ಕಡಿಮೆಯಾಗಲಿದೆ.

ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಕಾಫಿಯಲ್ಲಿ ಸುಮಾರು ಶೇಕಡ 70ರಷ್ಟು ಭಾಗವನ್ನು ಕರ್ನಾಟಕ ಒಂದೇ ಕೊಡುಗೆಯಾಗಿ ನೀಡುತ್ತದೆ. ಒಮ್ಮೆ ಪರಿಸರ ಸೂಕ್ಷ್ಮ ವಲಯ ಅಥವಾ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಬಿರುಸಾದರೆ, ಶೇಕಡ 30ರಿಂದ 35ರಷ್ಟು ಕಾಫಿ ಬೆಳೆಯುವ ಪ್ರದೇಶ ಅರಣ್ಯ ಕಾಯ್ದೆಯಡಿ ಸಿಲುಕಲಿದ್ದು, ದೇಶದ ಕಾಫಿ ಉತ್ಪಾದನೆಗೆ ಬಹುದೊಡ್ಡ ಹೊಡೆತ ಬೀಳಲಿದೆ.

ಇದನ್ನೂ ಓದಿ: ಅರಣ್ಯ ಇಲಾಖೆಯ ಇಬ್ಬಗೆಯ ನೀತಿ: ಬಡವರಿಗೊಂದು ನ್ಯಾಯ, ಬಲ್ಲಿದರಿಗೊಂದು ನ್ಯಾಯ!!

ಅರಣ್ಯ ಇಲಾಖೆಯ ಪ್ರಕಾರ, ಕಾಡಂಚಿನ ಒತ್ತುವರಿಯಿಂದಾಗಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಆದರೆ, ಬೆಳೆಗಾರರು “ನಾವು ಕಾಡನ್ನು ನಾಶಪಡಿಸಿಲ್ಲ, ಶೇಡ್-ಗ್ರೋನ್ (ನೆರಳಿನಲ್ಲಿ ಬೆಳೆಯುವ) ಕಾಫಿ ಬೆಳೆಯುವ ಮೂಲಕ ಅರಣ್ಯದ ಜೈವಿಕ ವೈವಿಧ್ಯತೆಯನ್ನು ಉಳಿಸಿಕೊಂಡು ಬಂದಿದ್ದೇವೆ” ಎಂದು ವಾದಿಸುತ್ತಿದ್ದಾರೆ.

ದೊಡ್ಡ ಎಸ್ಟೇಟ್‌ಗಳಷ್ಟೇ ಅಲ್ಲದೆ, 3 ರಿಂದ 5 ಎಕರೆ ಹೊಂದಿರುವ ಸಣ್ಣ ಮತ್ತು ಮಧ್ಯಮ ಕ್ರಮಾಂಕದ ಬೆಳೆಗಾರರು ಈ ನೂತನ ಸರ್ವೆಯಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಒತ್ತುವರಿ ತೆರವು ನೆಪದಲ್ಲಿ ದಶಕಗಳ ಜೀವನೋಪಾಯವನ್ನು ಕಿತ್ತುಕೊಳ್ಳಬಾರದು ಎಂಬುದು ಬೆಳೆಗಾರರ ಒಕ್ಕೂಟಗಳ ಆಗ್ರಹವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...

ಬೀದರ್‌ |ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಸಿಎಂಗೆ ಮನವಿ

ಬೀದರ್ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹಳ್ಳಿಖೇಡ (ಬಿ) ಸಮೀಪದ ಬೀದರ್ ಸಹಕಾರ...

ಆಲಮಟ್ಟಿ 3ನೇ ಹಂತಕ್ಕೆ ವೇಗ ನೀಡಲು ಅವಳಿ ಜಿಲ್ಲೆಗಳ ಹೋರಾಟಗಾರರ ರಣತಂತ್ರ

ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್‌ನಿಂದ 524.256...