4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

Date:

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ ಈ ಮೋದಿ ಸರ್ಕಾರದ ಅಡಿಯಲ್ಲಿ 2022ರಿಂದ 2026 ರ ನಡುವಿನ ಅವಧಿಯಲ್ಲಿ ದೇಶಾದ್ಯಂತ ಒಟ್ಟು 111 ಹಾಲಿ ಸಂಸದರು ಮತ್ತು ಶಾಸಕರು ತಾವು ಚುನಾಯಿತರಾದ ಪಕ್ಷಗಳನ್ನು ತೊರೆದು ಬೇರೆ ಪಕ್ಷಗಳಿಗೆ ಜಿಗಿದಿದ್ದಾರೆ. ಹೀಗೆ ಪಕ್ಷಾಂತರ ಮಾಡಿದ ಒಟ್ಟು ಜನಪ್ರತಿನಿಧಿಗಳ ಪೈಕಿ ಶೇಕಡ 26ರಷ್ಟು (29 ನಾಯಕರು) ಜನಪ್ರತಿನಿಧಿಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ.

- Advertisement -

ಚುನಾವಣಾ ಸುಧಾರಣೆಗಳಿಗಾಗಿ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್‌) ಮತ್ತು ‘ನ್ಯಾಷನಲ್ ಎಲೆಕ್ಷನ್ ವಾಚ್’ ಜಂಟಿಯಾಗಿ ನಡೆಸಿರುವ ನೂತನ ಅಧ್ಯಯನ ವರದಿಯಲ್ಲಿ ಈ ಕಳವಳಕಾರಿ ಅಂಶಗಳು ಬಹಿರಂಗಗೊಂಡಿವೆ. 2022ರಿಂದ 2026ರವರೆಗೆ ನಡೆದ ಲೋಕಸಭೆ, ರಾಜ್ಯಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮತ್ತು ಉಪಚುನಾವಣೆಗಳ ಅಂಕಿಅಂಶಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

26 ಮಂದಿ ಲೋಕಸಭಾ ಸಂಸದರು, 7 ಮಂದಿ ರಾಜ್ಯಸಭಾ ಸಂಸದರು, 78 ಮಂದಿ ವಿಧಾನಸಭಾ ಶಾಸಕರು ಪಕ್ಷಾಂತರಗೊಂಡಿದ್ದಾರೆ. ನಾಗಾಲ್ಯಾಂಡ್ ಗರಿಷ್ಠ 32 (ಶೇ. 29) ಶಾಸಕರು ಪಕ್ಷಾಂತರ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 20 ಸಂಸದರು (ಶೇ. 18) ಪಕ್ಷ (ಬಂಡಾಯ ಟಿಎಂಸಿ ನಾಯಕರು) ಬದಲಾಯಿಸಿದ್ದಾರೆ. ತೆಲಂಗಾಣದಲ್ಲಿ (ಬಿಆರ್‌ಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ) 9 ಶಾಸಕರು, ಗೋವಾ ಹಾಗೂ ಪಂಜಾಬ್‌ನಲ್ಲಿ ತಲಾ 8 ಜನಪ್ರತಿನಿಧಿಗಳು, ಮಹಾರಾಷ್ಟ್ರದ 6 ಸಂಸದರು ಪಕ್ಷಾಂತರಗೊಂಡಿದ್ದಾರೆ.

ಇದನ್ನೂ ಓದಿ: ಪಕ್ಷಾಂತರಿಗಳಿಗೆ 20 ವರ್ಷಗಳ ನಿಷೇಧ ಹೇರಿ: ಕಪಿಲ್ ಸಿಬಲ್ ಪ್ರಸ್ತಾವನೆಗೆ ‘ಸಿಜೆಪಿ’ ಬೆಂಬಲ

ತಮ್ಮ ಹಾಲಿ ಜನಪ್ರತಿನಿಧಿಗಳನ್ನು ಕಳೆದುಕೊಂಡ ಸಾಲಿನಲ್ಲಿ ನಾಗಾಲ್ಯಾಂಡ್‌ನ ಎನ್‌ಡಿಪಿಪಿ (25 ನಾಯಕರು) ಮೊದಲ ಸ್ಥಾನದಲ್ಲಿದ್ದರೆ, ಟಿಎಂಸಿ (20 ನಾಯಕರು) ಎರಡನೇ ಸ್ಥಾನ ಹಾಗೂ ಕಾಂಗ್ರೆಸ್ (19 ನಾಯಕರು) ಮೂರನೇ ಸ್ಥಾನದಲ್ಲಿವೆ. ಈ ಮೂರು ಪಕ್ಷಗಳೇ ಒಟ್ಟು ಪಕ್ಷಾಂತರದ ಶೇ. 58ರಷ್ಟನ್ನು ಹೊಂದಿವೆ. ಇದರ ಜತೆಗೆ ಬಿಆರ್‌ಎಸ್ (9), ಆಮ್ ಆದ್ಮಿ ಪಾರ್ಟಿ (7), ಎನ್‌ಸಿಪಿ (7) ಹಾಗೂ ಶಿವಸೇನೆ (ಉದ್ಧವ್ ಬಿಸಿಆರ್‌) (6) ಪಕ್ಷಗಳು ಕೂಡ ತಮ್ಮ ನಾಯಕರನ್ನು ಕಳೆದುಕೊಂಡಿವೆ.

ಹೆಚ್ಚು ನಾಯಕರನ್ನು ಸೇರಿಸಿಕೊಂಡ ಪಕ್ಷಗಳು

ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್‌): 32 ಜನಪ್ರತಿನಿಧಿಗಳು ಸೇರ್ಪಡೆ (ಶೇ. 29)

ಭಾರತೀಯ ಜನತಾ ಪಾರ್ಟಿ (ಬಿಜೆಪಿ): 29 ಜನಪ್ರತಿನಿಧಿಗಳು ಸೇರ್ಪಡೆ (ಶೇ. 26)

ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ): 20 ಜನಪ್ರತಿನಿಧಿಗಳು ಸೇರ್ಪಡೆ (ಶೇ. 18)

ಕಾಂಗ್ರೆಸ್: 9 ನಾಯಕರು ಸೇರ್ಪಡೆ

ದೇಶದ ಪ್ರಜಾರಾಷ್ಟ್ರದಲ್ಲಿ ಪ್ರಜೆಗಳ ಹಿತಾಸಕ್ತಿ ಮುಖ್ಯವಾಗಿರಬೇಕು. ಆದರೆ, ಜನಪ್ರತಿನಿಧಿಗಳಲ್ಲಿ ಹೆಚ್ಚುತ್ತಿರುವ ‘ಅಧಿಕಾರ ಮತ್ತು ಹಣದ ದಾಹ’ ಹಾಗೂ ‘ಆಯಾ ರಾಮ್, ಗಯಾ ರಾಮ್’ ಮನಸ್ಥಿತಿಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕುಸಿಯುವಂತೆ ಮಾಡಿದೆ ಎಂದು ಎಡಿಆರ್ ಕಳವಳ ವ್ಯಕ್ತಪಡಿಸಿದೆ.

ಪಕ್ಷಾಂತರ ಅರ್ಜಿಗಳ ನಿರ್ಧಾರವನ್ನು ಸಭಾಪತಿ/ಸ್ಪೀಕರ್ ಅವರಿಂದ ತೆಗೆದು, ಕೇಂದ್ರ ಹಂತದಲ್ಲಿ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯ ಹಂತದಲ್ಲಿ ರಾಜ್ಯಪಾಲರಿಗೆ ನೀಡಬೇಕು. ಪಕ್ಷಾಂತರ ಮಾಡಿದ ನಾಯಕರು ಮತ್ತೆ ಜನಾದೇಶ (ಮರು ಚುನಾವಣೆ) ಪಡೆದು ಗೆಲ್ಲುವವರೆಗೆ ಯಾವುದೇ ಸರ್ಕಾರಿ ಅಥವಾ ಸಾರ್ವಜನಿಕ ಹುದ್ದೆಗಳನ್ನು ವಹಿಸದಂತೆ ತಡೆಯಬೇಕು ಎಂದು ಎಡಿಆರ್ ಕಳವಳ ವ್ಯಕ್ತಪಡಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...