SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ ಪ್ರವಾಸ ಕುರಿತು ಹಾಸನ ನಗರದಲ್ಲಿ ಹೋಟೆಲ್ ಅಶೋಕದಲ್ಲಿ ಸಮಾಲೋಚನಾ ಸಭೆ ಹಾಗೂ ಪತ್ರಿಕಾಗೋಷ್ಠಿಯನ್ನು ಭಾನುವಾರ ನಡೆಸಲಾಯಿತು.
ಮೊಟ್ಟ ಮೊದಲಿಗೆ ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದ ಎಂಬ ಸತ್ಯಾಂಸವನ್ನು ನಿರ್ಭೀಡೆಯಾಗಿ ಜಗತ್ತಿನ ಮುಂದೆ ತಂದ ಪತ್ರಕರ್ತೆ 1.ರವರಿಗೂ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೂ ಖಪಖ ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ ಧನ್ಯವಾದಗಳನ್ನು ಹಾಗೂ ಅಭಿನಂದನೆಗಳನ್ನು ತಿಳಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಮಹತ್ವದ ಸಂಸ್ಥೆಯಾದ ಚುನಾವಣಾ ಆಯೋಗದ ಘನತೆಯನ್ನು ಜ್ಞಾನೇಶ್ ಕುಮಾರ್ ಧ್ವಂಸಗೊಳಿಸಿದ್ದಾರೆ. ದೇಶದ ಎಲ್ಲಾ ವಿರೋಧ ಪಕ್ಷಗಳು ಹಾಗೂ ನಾಗರೀಕ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಯಾರ ಮಾತಿಗೂ ಬೆಲೆ ನೀಡದೆ ಸರ್ವಾಧಿಕಾರಿ ರೀತಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಈ ದೇಶದ ಮೇಲೆ SIR ಎಂಬ ಹಿಂದೆಂದೂ ಕಾಣದ ಮತ ಪರಿಷ್ಕರಣೆಯ ಪ್ರಕ್ರಿಯೆಯನ್ನು ಈ ದೇಶದ ಮೇಲೆ ಹೇರಿತು ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಇಡೀ ದೇಶ ಜ್ಞಾನೇಶ್ ಕುಮಾರ್ ರಾಜಿನಾಮೆಗಾಗಿ ಕೇಳುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿನೋಡಿಕೊಂಡ ಎಂಬಂತೆ ಬಿಜೆಪಿ ಪಟಾಲಂ ನಾಚಿಕೆ ಇಲ್ಲದಂತೆ ಜ್ಞಾನೇಶ್ ಕುಮಾರ್ ಸಮರ್ಥನೆಗೆ ನಿಂತಿದೆ. ಈ ಪ್ರಕ್ರಿಯೆಯಲ್ಲಿ ಅನೇಕ ಅಕ್ರಮಗಳನ್ನು ಎಸಗಲಾಯಿತು. ಈಗ ಬಯಲಾಗಿರುವ ಸತ್ಯವೆಂದರೆ ಚುನಾವಣಾ ಆಯೋಗ ಅಕ್ರಮ ಪದ್ಧತಿಯನ್ನು ಅಕ್ರಮ ರೀತಿಯಲ್ಲಿ ಜಾರಿಗೊಳಿಸುವುದು ಮಾತ್ರವಲ್ಲ. ಇದರ ತೀರ್ಮಾನಗಳನ್ನು ಸಹ ಅಕ್ರಮವಾಗಿ ತೆಗೆದುಕೊಳ್ಳಲಾಗಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಅ. 29ರಿಂದ ನ. 11ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ
ಈ ವೇಳೆ SIR ವಿರೋಧಿ ಒಕ್ಕೂಟ ಕರ್ನಾಟಕ ಮುಖಂಡರು ಕೆ. ಎಲ್ ಅಶೋಕ್,ಇರ್ಷಾದ್ ಅಹಮದ್ ದೇಸಾಯಿ, ಸೈಯದ್ ಫರಿದ್, ಗಿರಿಜಾ ಎಸ್. ಜಿ, SDPI ಮುಖಂಡರು, ಎದ್ದೇಳು ಕರ್ನಾಟಕ ಮುಖಂಡರು,ಅನೇಕ ಸಂಘಟನೆಗಳು ಹಾಗೂ ಇನ್ನಿತರರಿದ್ದರು.




