ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಂಗಳವಾರ, 2026-27ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಪ್ರತಿ ಮನೆಗೆ ವಾರ್ಷಿಕ 2 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಬಜೆಟ್‌ನಲ್ಲಿ ಬೃಹತ್ ಮೂಲಸೌಕರ್ಯ ವೆಚ್ಚಗಳು ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು 1,03,700 ಕೋಟಿ ರೂ.ಗಳ ಬೆಜೆಟ್‌ಅನ್ನು ರೇಖಾ ಮಂಡಿಸಿದ್ದಾರೆ. ರಸ್ತೆಗಳು, ನಗರಾಭಿವೃದ್ಧಿ ಮತ್ತು ನಾಗರಿಕ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದಿರುವ ಅವರು, ತಮ್ಮ ಬಜೆಟ್‌ಅನ್ನು ‘ಹಸಿರು ಬಜೆಟ್’ ಎಂದು ಕರೆದಿದ್ದಾರೆ.
ಹಿಂದಿನ ಎಎಪಿ ಸರ್ಕಾರ ನೀಡುತ್ತಿದ್ದ ಉಚಿತ ಸೌಲಭ್ಯಗಳನ್ನು ‘ಉಚಿತ ಸಂಸ್ಕೃತಿ’ಎಂದು ಟೀಕಿಸಿದ್ದ ರೇಖಾ ಗುಪ್ತಾ ಕೂಡ ಈಗ ಉಚಿತ ಯೋಜನೆಗಳ ಮೊರೆಹೋಗಿದ್ದಾರೆ. ಪ್ರತಿ ಮನೆಗೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲು ಬಜೆಟ್‌ನಲ್ಲಿ ‘260 ಕೋಟಿ ರೂ.’ ಗಳನ್ನು ಮೀಸಲಿಟ್ಟಿದ್ದಾರೆ. ಒಂದು ಸಿಲಿಂಡರ್ ಅನ್ನು ಹೋಳಿ ಹಬ್ಬದಂದು ಮತ್ತು ಇನ್ನೊಂದನ್ನು ದೀಪಾವಳಿಯಂದು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಜೆಟ್‌ನ ಮುಖ್ಯಾಂಶಗಳು
| ಪ್ರಮುಖ ಅಂಶ | FY27 (ಬಜೆಟ್) |
| ಒಟ್ಟು ಗಾತ್ರ | 1,03,700 ಕೋಟಿ ರೂ. |
| ಹಸಿರು ಹಂಚಿಕೆ (ವಾಯುಮಾಲಿನ್ಯದ ವಿರುದ್ಧ ಹೋರಾಟ) | 21% (822 ಕೋಟಿ ರೂ.) |
| ತಲಾ ಆದಾಯ ಗುರಿ | ರೂ. 5 ಲಕ್ಷ – ರೂ. 5.3 ಲಕ್ಷ |
| ಜಿಡಿಪಿ ಪಾಲು ಗುರಿ | 3.67% – 3.72% |



