ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ. ಭಾರತದ ವಿದೇಶಾಂಗ ನೀತಿ “ಅವರ ವೈಯಕ್ತಿಕ ವಿದೇಶಾಂಗ ನೀತಿ”ಯಾಗಿ ಬದಲಾಗಿದೆ ಮತ್ತು ಇದೊಂದು “ಯೂನಿವರ್ಸಲ್ ಜೋಕ್” ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಬಿಸಿ ಇಡೀ ವಿಶ್ವಕ್ಕೆ ಮುಟ್ಟಿರುವಾಗ ರಾಷ್ಟ್ರೀಯ ರಾಜಕಾರಣದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ. ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿರುವ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು”Universal Joke” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?
ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಹಾದಿ ತಪ್ಪಿದೆ. “ನಮ್ಮ ವಿದೇಶಾಂಗ ನೀತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವೈಯಕ್ತಿಕ ವಿದೇಶಾಂಗ ನೀತಿಯಾಗಿ ಪರಿವರ್ತನೆಯಾಗಿದೆ. ಎಲ್ಲರೂ ಇದನ್ನು ಜಾಗತಿಕ ಜೋಕ್ (Universal Joke) ಎಂದು ಪರಿಗಣಿಸುತ್ತಾರೆ” ಎಂದು ಟೀಕಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಪ್ರಸ್ತಾಪಿಸಿದ ರಾಹುಲ್, “ಭಾರತದ ಪ್ರಧಾನಿ ಏನೂ ಮಾಡಲಾರರು ಎಂಬ ಸತ್ಯ ಅಮೆರಿಕ ಅಧ್ಯಕ್ಷರಿಗೆ ಗೊತ್ತಿದೆ. ಹೀಗಾಗಿ ನರೇಂದ್ರ ಮೋದಿ ಅಮೆರಿಕದ ಒತ್ತಡಕ್ಕೆ ಮಣಿದು, ರಾಜಿಯಾಗಿದ್ದಾರೆ. ನಮ್ಮ ಪ್ರಧಾನಿಯೇ ರಾಜಿಯಾದ ಮೇಲೆ ನಮ್ಮ ವಿದೇಶಾಂಗ ನೀತಿಯೂ ರಾಜಿಯಾದಂತೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ : ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ ₹5 ಸಾವಿರ ರೊಕ್ಕ ಕೊಟ್ಟು…
“ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಿತಿಮೀರಿರುವಾಗ, ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗೆ ನೆರೆಯ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿರುವ ವರದಿಗಳಿವೆ. ಈ ವಿಚಾರದಲ್ಲಿ ಭಾರತ ತನ್ನ ತಟಸ್ಥ ನಿಲುವನ್ನು ಪ್ರದರ್ಶಿಸಿದ್ದರಿಂದ ಜಾಗತಿಕ ಮಟ್ಟದಲ್ಲಿ ಕಡೆಗಣಿಸಲ್ಪಟ್ಟಿದೆ” ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.




