ʼಮೊದಲು ಯುದ್ಧದ ಸಲಹೆ ನೀಡಿದ್ದೇ ನೀನುʼ- ಪೀಟ್‌ ಕಡೆಗೆ ಬೊಟ್ಟು ಮಾಡಿದ ಟ್ರಂಪ್‌

Date:

ದಿನಕ್ಕೊಂದರಂತೆ ಯುದ್ಧದ ಕತೆ ಹೇಳುವ ಟ್ರಂಪ್‌ ಈಗ ಹೊಸಕತೆ ಹೇಳಲು ಶುರು ಮಾಡಿದ್ದಾರೆ. ಇರಾನ್‌ ಮೇಲೆ ಆಕ್ರಮಣ ಮಾಡಲು ಕಾರಣಗಳೇನು ಎಂಬ ಪ್ರಶ್ನೆಗೆ ನಿತ್ಯವೂ ಹೊಸ ಉತ್ತರ ನೀಡುತ್ತಿದ್ದ ಟ್ರಂಪ್‌ ಹಾಗೂ ಅವರ ಆಪ್ತ ವಲಯ.

- Advertisement -

ಈಗ ಟ್ರಂಪ್‌ ಯುದ್ಧ ಮಾಡುವಂತೆ ಪ್ರೇರಣೆ ಮಾಡಿದ್ದು ತಮ್ಮ ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗೆತ್ಸ್‌  ಎಂದು ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇರಾನ್‌ ಅಣ್ವಸ್ತ್ರ ತಯಾರಿಕೆಯನ್ನು ತಡೆಯಬೇಕು ಹಾಗಾಗಿ ಇರಾನ್‌ ಮೇಲೆ ಯುದ್ಧ ಸಾರೋಣ ಎಂದು ಪೀಟ್‌ ಹೇಳಿದ್ದರು ಎಂದ ಟ್ರಂಪ್‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಮಧ್ಯ ಪ್ರಾಚ್ಯ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಐದು ದಿನದ ಕದನ ವಿರಾಮ ಘೋಷಿಸಿಕೊಂಡ ಟ್ರಂಪ್‌ ಇರಾನಿನ ಜೊತೆ ಮಾತುಕತೆಗೆ ಮುಂದಾಗುವುದಾಗಿ ಹೇಳಿದರು. ಇದಾದ ಬಳಿಕ ದುಂಡು ಮೇಜಿನ ಸಭೆ ನಡೆಸಿದ ಟ್ರಂಪ್‌ ತಮ್ಮ ಪಕ್ಕದಲ್ಲಿಯೇ ಇದ್ದ ಪೀಟ್‌ ಹೆಗೆತ್ಸ್‌ ಕಡೆ ಬೆರಳು ಮಾಡಿ ಯುದ್ಧ ಮಾಡುವಂತೆ ಪ್ರೇರೇಪಿಸಿದ್ದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಎಂದು ಹೇಳಿಕೆ ನೀಡಿದ್ದಾರೆ.

ಅಮೆರಿಕದ ಟೆನ್ನೆಸ್ಸೀ ರಾಜ್ಯದ ಮೆಂಫಿಸ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಟ್ರಂಪ್‌ ಇರಾನ್‌  ಮೇಲಿನ ಯುದ್ಧ ಆರಂಭವಾದದ್ದು ಹೇಗೆ ಎಂಬುದರ ಕುರಿತಾಗಿ ಬೇರೆ ಕತೆ ಹೇಳಿದ್ದಾರೆ. ಮಧ್ಯ ಪ್ರಾಚ್ಯದ ಸಮಸ್ಯೆಯ ಕುರಿತು ನಾನು ಪೀಟ್‌ ಹಾಗೂ ಕೇನ್‌ ಜೊತೆಗೆ ಚರ್ಚಿಸುವಾಗ ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದೆವು ಎಂದಿದ್ದಾರೆ.

ಇರಾನ್‌ ಮೇಲೆ ದಾಳಿ ಮಾಡುವ ಕುರಿತು ಮೊದಲು ಸೂಚಿಸಿದ್ದೇ ಪೀಟ್‌ ಹಗೆತ್ಸ್‌, ಇರಾನ್‌ ಒಂದು ಭಯೋತ್ಪಾದಕ ದೇಶ ಅದು ಪರಮಾಣು ಶಕ್ತಿ ಪಡೆಯದಂತೆ ತಡೆಯಬೇಕು ಎಂದು ಪೀಟ್‌ ಸಲಹೆ ನೀಡಿದರು ಎಂದು ಟ್ರಂಪ್‌ ತಮ್ಮ ರಕ್ಷಣಾ ಕಾರ್ಯದರ್ಷಿಯ ಕಡೆಗೆ ಬೊಟ್ಟು ಮಾಡಿದ್ದಾರೆ.

ಇರಾನ್‌ ನಕಾರ: ಇನ್ನೂ ಟ್ರಂಪ್‌ ಜೊತೆಗೆ ಮಾತುಕತೆಯನ್ನು ಇರಾನ್‌ ನಿರಾಕರಿಸಿದೆ. ಅಮೆರಿಕ ಜೊತೆಗೆ ಯಾವ ಒಪ್ಪಂದವನ್ನು ಮಾಡಿಕೊಂಡಿಲ್ಲ. ನಾವು ಕದನ ವಿರಾಮ ಘೋಷಿಸಿಕೊಂಡಿಲ್ಲ, ಮೊಜ್ತಬಾ ಖಮೇನಿ ನೇತೃತ್ವದಲ್ಲಿ ಇಸ್ರೇಲ್‌ ಮೇಲಿನ ದಾಳಿಯನ್ನು ಮುಂದುವರೆಯುವುದು ಎಂದು ಹೇಳಿರುವ ಇರಾನ್‌ ಮಧ್ಯಪ್ರಾಚ್ಯದ ರಾಷ್ಟ್ರಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ, ಇತ್ತ ಟ್ರಂಪ್‌ ಒಬ್ಬ ಪುಕ್ಕಲು ದೊರೆ ಎಂದು ಇರಾನಿನ ಮಾಧ್ಯಮಗಳು ಟೀಕಿಸುತ್ತಿವೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...

ಮಳೆ ಅಬ್ಬರ: ಉತ್ತರ ಪ್ರದೇಶದಲ್ಲಿ 10 ಮಂದಿ ಸಾವು; ಒಡಿಶಾದಲ್ಲಿ ಪ್ರವಾಹ

ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಉತ್ತರ ಪ್ರದೇಶ...

26 ಬಾರಿ ಸೋತರೂ ಕುಗ್ಗದ ಛಲ; 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವೃದ್ಧ

ಸರಿಯಾದ ಪ್ರಯತ್ನ ಮತ್ತು ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು...

1,870 ಕೋಟಿ ರೂ. ದೇಣಿಗೆ ದಂಧೆ ಆರೋಪ: ಗುಜರಾತ್‌ನ 3 ರಾಜಕೀಯ ಪಕ್ಷಗಳ ಅಕ್ರಮ ಬಯಲು

ಗುಜರಾತ್‌ನಲ್ಲಿ ನೋಂದಾಯಿತವಾಗಿದ್ದ, ಆದರೆ ಮಾನ್ಯತೆ ಪಡೆಯದ ಮೂರು ರಾಜಕೀಯ ಪಕ್ಷಗಳು ಆದಾಯ...