ದೇಶದಲ್ಲಿ 10 ಶಾಸಕರಲ್ಲಿ 6 ಮಂದಿ ಎನ್‌ಡಿಎಗೆ ಸೇರಿದವರು!

Date:

2024ರ ಲೋಕಸಭಾ ಚುನಾವಣೆಯ ನಂತರ ದೇಶದ ರಾಜಕಾರಣದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವು ಸಮ್ಮಿಶ್ರ ಸರ್ಕಾರವನ್ನು ರಚಿಸುವ ಜತೆಗೆ ವಿಧಾನಸಭೆಗಳಲ್ಲಿ ಒಟ್ಟಾರೆಯಾಗಿ ತಮ್ಮ ಶಾಸಕರ ಸಂಖ್ಯಾಬಲವನ್ನೂ ಹೆಚ್ಚಿಸಿಕೊಂಡಿದೆ. 2024ರ ಬಳಿಕ ಸದ್ಯ ದೇಶದ 10 ಶಾಸಕರ ಪೈಕಿ ಆರು ಮಂದು ಎನ್‌ಡಿಎಗೆ ಸೇರಿದವರಾಗಿದ್ದಾರೆ.

- Advertisement -

ದೇಶದಲ್ಲಿ ಒಟ್ಟಾರೆ 31 ರಾಜ್ಯಗಳು ಮತ್ತು ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಳಲ್ಲಿ ಒಟ್ಟು 4,126 ವಿಧಾನಸಭೆ ಸ್ಥಾನಗಳಿವೆ. ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ADR) ಮತ್ತು ಚುನಾವಣಾ ಆಯೋಗದ ಅಂದಿನ ದತ್ತಾಂಶಗಳ ಪ್ರಕಾರ, 2023ರ ಕೊನೆಯ ಭಾಗ ಮತ್ತು 2024ರ ಆರಂಭದಲ್ಲಿ ದೇಶದ ಒಟ್ಟು 4,033 ಹಾಲಿ ಶಾಸಕರ ಪೈಕಿ ಕೇವಲ ಬಿಜೆಪಿ ಪಕ್ಷವೊಂದಕ್ಕೇ ಸುಮಾರು 1,532 ಶಾಸಕರ ಬಲವಿತ್ತು. ಇನ್ನುಳಿದ ಮಿತ್ರಪಕ್ಷಗಳಾದ ಶಿಂದೆ ಬಣದ ಶಿವಸೇನೆ, ಅಜಿತ್ ಪವಾರ್ ಬಣದ ಎನ್‌ಸಿಪಿ ಹಾಗೂ ಇತರ ಸಣ್ಣ ಪ್ರಾದೇಶಿಕ ಪಕ್ಷಗಳನ್ನು ಸೇರಿಸಿದರೆ ಎನ್‌ಡಿಎ ಮೈತ್ರಿಕೂಟದ ಒಟ್ಟು ಶಾಸಕರ ಸಂಖ್ಯೆ 2,096 ಆಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಇದನ್ನು ಓದಿದ್ದೀರಾ? ರಾಜ್ಯಸಭೆ ಚುನಾವಣೆ | 18 ಅಭ್ಯರ್ಥಿಗಳು ಅವಿರೋಧ ಆಯ್ಕೆ; ಬಿಜೆಪಿಗೆ ಅಧಿಕ ಸ್ಥಾನ

ಆದರೆ 2024ರ ಬಳಿಕ ಸದ್ಯ ಎಲ್ಲ ರಾಜ್ಯ, ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ಈಗ 1,813 ಶಾಸಕರನ್ನು ಹೊಂದಿದೆ. ಎನ್‌ಡಿಎಯ ಒಟ್ಟು ಸಂಖ್ಯಾಬಲವು 2,530ಕ್ಕೆ ಏರಿಕೆಯಾಗಿದೆ.

ನಾವು ಶೇಕಡವಾರು ಲೆಕ್ಕಾಚಾರ ನೋಡಿದಾಗ 2024ರಲ್ಲಿ ದೇಶದ ಒಟ್ಟು 4,123 ಶಾಸಕರ ಪೈಕಿ ಬಿಜೆಪಿ ಶಾಸಕರ ಪ್ರಮಾಣ 37.16% ಆಗಿತ್ತು. ಎನ್‌ಡಿಎ ಒಟ್ಟು ಶಾಸಕರ ಪ್ರಮಾಣ 50.84% ಆಗಿತ್ತು. ಆದರೆ ಇತ್ತೀಚೆಗೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದ ಬಳಿಕ ಬಿಜೆಪಿ ಶಾಸಕರ ಪ್ರಮಾಣ 43.97% ಕ್ಕೆ ಏರಿದೆ. ಎನ್‌ಡಿಎ ಶಾಸಕರ ಪ್ರಮಾಣ 61.36% ಕ್ಕೆ ಬೆಳೆದಿದೆ.

ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟದ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ವಿಪಕ್ಷಗಳ ಇಂಡಿಯಾ ಒಕ್ಕೂಟದಲ್ಲಿರುವ ಶಾಸಕರ ಸಂಖ್ಯಾಬಲವು ಕುಗ್ಗುತ್ತಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಇಂಡಿಯಾ ಒಕ್ಕೂಟದಲ್ಲಿ ಶೇ. 38.88 ಅಥವಾ 1,603 ಶಾಸಕರು ಇದ್ದರು. ಹಾಗೆಯೇ ಶೇ.7.79 ಅಂದರೆ 321 ಸ್ವತಂತ್ರ ಅಥವಾ ಅಲಿಪ್ತ ಶಾಸಕರು ಇದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಇಂಡಿಯಾ ಒಕ್ಕೂಟದ ಶಾಸಕರ ಸಂಖ್ಯೆ ಶೇ.24.52ಕ್ಕೆ ಅಥವಾ 1,011ಕ್ಕೆ ಇಳಿದಿದೆ. ಇನ್ನೊಂದೆಡೆ ಈ ಎರಡೂ ಒಕ್ಕೂಟಕ್ಕೆ ಸೇರದ ಅಲಿಪ್ತ ಶಾಸಕರ ಸಂಖ್ಯೆಯು ಶೇ.13.66 ಅಥವಾ 563ಕ್ಕೆ ಏರಿದೆ.

ಇದನ್ನು ಓದಿದ್ದೀರಾ? ಅಮರಾವತಿ ಆಂಧ್ರ ಪ್ರದೇಶದ ರಾಜಧಾನಿ: ಚಂದ್ರಬಾಬು ನಾಯ್ಡು

2024ರ ಬಳಿಕ ಈ ಬಲ ಹೆಚ್ಚಾಗಲು ಕಾರಣಗಳೇನು?

2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದಕ್ಕೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲದಿದ್ದರೂ, ಅದರ ನಂತರ ನಡೆದ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡಿದೆ. 2024ರ ಲೋಕಸಭೆ ಚುನಾವಣೆ ಬಳಿಕ 11 ವಿಧಾನಸಭಾ ಚುನಾವಣೆಗಳು ನಡೆದಿವೆ. ಈ ಅವಧಿಯಲ್ಲಿ ಬಿಜೆಪಿಯ 281 ಶಾಸಕರು ಗೆದ್ದಿದ್ದಾರೆ. ಎನ್‌ಡಿಎ ಮಿತ್ರಪಕ್ಷಗಳಾದ ಜನತಾದಳ (ಯುನೈಟೆಡ್), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ಶಿವಸೇನೆಯ ಕ್ರಮವಾಗಿ 36, 20 ಮತ್ತು 19 ಶಾಸಕರು ಗೆದ್ದಿದ್ದಾರೆ.

ಆದರೆ ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್ 18 ಶಾಸಕರನ್ನು ಕಳೆದುಕೊಂಡರೆ, ಡಿಎಂಕೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಎಎಪಿಯಂತಹ ಪಕ್ಷಗಳು ಕ್ರಮವಾಗಿ 75, 51 ಮತ್ತು 37 ಶಾಸಕರ ಬಲವನ್ನು ಕಳೆದುಕೊಂಡಿದೆ.

2024ರ ಉತ್ತರಾರ್ಧದಲ್ಲಿ ನಡೆದ ಆಂಧ್ರಪ್ರದೇಶ ಚುನಾವಣೆಯಲ್ಲಿ ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿಕೂಟವು ಗೆದ್ದಿವೆ. ಮಹಾರಾಷ್ಟ್ರದಲ್ಲಿ ಮಹಾಯುತಿ (NDA) ಮೈತ್ರಿಕೂಟವೂ ಶಿವಸೇನೆ, ಎನ್‌ಸಿಪಿ ವಿಭಜನಗೊಳಿಸಿ ಅಧಿಕಾರ ಪಡೆದುಕೊಂಡಿದೆ. ಇದರಿಂದಾಗಿ ಎನ್‌ಡಿಎ ಶಾಸಕರ ಸಂಖ್ಯೆ ಹೆಚ್ಚಾಗಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಧಿಕಾರ ಕಳೆದುಕೊಂಡಿದೆ, ಬಿಜೆಪಿ ಗದ್ದುಗೆ ಏರಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿಯೂ ಹಲವು ಚುನಾವಣಾ ಗಿಮಿಕ್‌ಗಳನ್ನು ನಡೆಸಿ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಲದಿಂದ ಬಿಜೆಪಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ಕೆಳಗಿಳಿಸಿ, ಅಧಿಕಾರ ಪಡೆದುಕೊಂಡಿದೆ. ಹೀಗೆ ಹಲವೆಡೆ ಇಡಿ, ಸಿಬಿಐ ಬಲೆ ಬೀಸಿ ವಿಪಕ್ಷ ನಾಯಕರನ್ನು ಸೆಳೆದುಕೊಳ್ಳುವ ತಂತ್ರವನ್ನೂ ಬಿಜೆಪಿ ಮಾಡಿ ತನ್ನ ಶಾಸಕರ ಬಲ ಹೆಚ್ಚಿಸಿಕೊಂಡಿದೆ.

ಮೂಲ ಮಾಹಿತಿ: ಇಂಡಿಯನ್ ಎಕ್ಸ್‌ಪ್ರೆಸ್

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಮೆರಾ ಆಫ್ ಆಗಿದೆ ಎಂದುಕೊಂಡು ಇಸ್ರೇಲ್ ನೀತಿ ಟೀಕೆ; ಲೈವ್ ಪ್ರಸಾರ ತಿಳಿದು ದಂಗಾದ ನಟಿ!

ದೇಶದ ನೀತಿಗಳ ಬಗ್ಗೆ ಸ್ವತಃ ಇಸ್ರೇಲ್‌ನಲ್ಲೇ ವಿರೋಧಿ ಧ್ವನಿಗಳು ಕೇಳಿಬರುತ್ತಿರುವುದು ತಿಳಿದೇ...

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...