ಮಗುವಿನ ಜೀವನಾಂಶ ಕೇಳುವ ತಾಯಿ ‘ಗೋಲ್ಡ್‌ ಡಿಗ್ಗರ್‌’ ಅಲ್ಲ: ಮದ್ರಾಸ್ ಹೈಕೋರ್ಟ್‌ ಅಸಮಾಧಾನ

Date:

ತನ್ನ ಮಗುವಿನ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಪಾಲನೆಗೆ ಹಣ ಕೇಳುವ ಮಹಿಳೆಯನ್ನು ‘ಗೋಲ್ಡ್ ಡಿಗ್ಗರ್’ ಎಂದು ನಿಂದಿಸುವುದು ಹಾಗೂ ಆಕೆಯ ಚಾರಿತ್ರ್ಯವನ್ನು ಪ್ರಶ್ನಿಸುವುದು ಸಂಪೂರ್ಣವಾಗಿ ಅಸಹನೀಯ ಎಂದು ಮದ್ರಾಸ್ ಹೈಕೋರ್ಟ್ ತೀವ್ರವಾಗಿ ಆಕ್ಷೇಪಿಸಿದೆ. 

- Advertisement -

ತನ್ನ ಮಗಳ 6.14 ಲಕ್ಷ ರೂ. ವೆಚ್ಚದ ಕ್ಲೈಮ್ ಅನ್ನು ಪ್ರಶ್ನಿಸಿ ತಂದೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ತಾಯಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿ ಆರ್ಥಿಕ ಸ್ವಾವಲಂಬನೆ ಹೊಂದಿದ್ದರೂ, ಅದು ಮಗುವಿನ ಜವಾಬ್ದಾರಿಯಿಂದ ತಂದೆಯನ್ನು ಮುಕ್ತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ...

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ...

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ...

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ ಬಗ್ಗೆ ಮಾತನಾಡುವ ನೈತಿಕ ಅರ್ಹತೆ ಇದೆಯೇ? “ಮೀಸಲು ಅನುಕೂಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ, ನನ್ನ ಜನ ಅನಾಥರಾಗಿದ್ದಾರೆ” ಎಂಬ ಕೇಂದ್ರ...

ನ್ಯಾಯಮೂರ್ತಿ ಎಂ. ಡಿ. ಸುಮಾತಿ ಅವರಿದ್ದ ಪೀಠವು ಈ ಪ್ರಮುಖ ತೀರ್ಪನ್ನು ನೀಡಿದ್ದು, 2022 ರ ಸೆಪ್ಟೆಂಬರ್ 22 ರಂದು ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.  ಆರ್ಥಿಕ ಬೆಂಬಲ ಕೋರುವ ಮಹಿಳೆಯರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ‘ಗೋಲ್ಡ್ ಡಿಗ್ಗರ್’ ಎಂದು ಕರೆಯುವ ಪ್ರವೃತ್ತಿಯನ್ನು ಹೈಕೋರ್ಟ್ ಕಟುವಾಗಿ ಖಂಡಿಸಿದೆ.

“ನ್ಯಾಯಸಮ್ಮತ ಬೆಂಬಲ ಕೋರುವ ಮಹಿಳೆಯನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಅರ್ಜಿಯನ್ನು ಪ್ರಶ್ನಿಸುವ ಹಕ್ಕು ತಂದೆಗಿದೆ ಎಂದ ಮಾತ್ರಕ್ಕೆ ಅರ್ಜಿದಾರರ ಚಾರಿತ್ರ್ಯವನ್ನು ಕುಗ್ಗಿಸುವ ಹಕ್ಕು ಸಿಗುವುದಿಲ್ಲ. ಮಗುವಿನ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ನ್ಯಾಯಸಮ್ಮತ ಹಕ್ಕಿನ ಹೋರಾಟದಲ್ಲಿ, ವಿಷಯದ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು ಮಹಿಳೆಯ ಚಾರಿತ್ರ್ಯವನ್ನು ವಿಚಾರಣೆಗೆ ಒಳಪಡಿಸುವುದು ಖಂಡನೀಯ,” ಎಂದು ನ್ಯಾಯಾಧೀಶರು ಅಕ್ಟೋಬರ್ 28 ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಆಕ್ಷೇಪಾರ್ಹ ಬಿಲ್‌ಗಳನ್ನು ಪರಿಶೀಲಿಸಬಹುದು, ಈಗಾಗಲೇ ಪಾವತಿಸಿದ ಹಣವನ್ನು ಕಳೆದು ಲೆಕ್ಕ ಹಾಕಬಹುದು. ಆದರೆ ಮಹಿಳೆಯ ಚಾರಿತ್ರ್ಯದ ಮೇಲಿನ ದಾಳಿಯು ವಸ್ತುನಿಷ್ಠ ಪರಿಶೀಲನೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ತಾಯಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ, ಆಕೆಯ ಆರ್ಥಿಕ ಸ್ವಾವಲಂಬನೆಯು ಮಗಳ ಮೇಲಿನ ತಂದೆಯ ಶಾಸನಬದ್ಧ ಮತ್ತು ನೈತಿಕ ಜವಾಬ್ದಾರಿಯನ್ನು ರದ್ದುಗೊಳಿಸುವುದಿಲ್ಲ ಎಂದಿದೆ. ತಾಯಿಯ ಕೊಡುಗೆಯನ್ನು ಕೇವಲ ಹಣದಿಂದ ಅಳೆಯಲಾಗುವುದಿಲ್ಲ, ಮಗುವನ್ನು ಪ್ರತಿದಿನ ಶಾಲೆಗೆ ಕಳುಹಿಸುವುದು, ವೈದ್ಯಕೀಯ ಆರೈಕೆ ಮಾಡುವುದು, ಶಿಕ್ಷಣದ ಮೇಲ್ವಿಚಾರಣೆ ಮತ್ತು ಭಾವನಾತ್ಮಕ ಬೆಂಬಲ ನೀಡುವುದರಲ್ಲಿ ಆಕೆಯ ಪಾತ್ರ ದೊಡ್ಡದಿದೆ. ತಂದೆ ತನ್ನ ಕರ್ತವ್ಯ ನಿರ್ವಹಿಸುವ ಮುನ್ನ ತಾಯಿ ತನ್ನ ಆರ್ಥಿಕ ಅಸಹಾಯಕತೆಯನ್ನು ಸಾಬೀತುಪಡಿಸಬೇಕು ಎಂದು ನಿರೀಕ್ಷಿಸುವುದು ತಪ್ಪ ಎಂದು ಪೀಠ ಹೇಳಿದೆ.

ಈ ಕಾನೂನು ಹೋರಾಟವು 2014 ರ ಆಗಸ್ಟ್ 14 ರಂದು ತಾಯಿ ಸಲ್ಲಿಸಿದ ಜೀವನಾಂಶ ಅರ್ಜಿಯಿಂದ ಆರಂಭವಾಗಿತ್ತು. 2015 ಜುಲೈರಂದು ಕುಟುಂಬ ನ್ಯಾಯಾಲಯವು ಹೆಂಡತಿ ಮತ್ತು ಮಗಳಿಗೆ ತಲಾ 5,000 ರೂ. ಮಾಸಿಕ ಜೀವನಾಂಶ ನೀಡುವಂತೆ ಆದೇಶಿಸಿತ್ತು.

2017 ಜನವರಿರಂದು ಮಗಳಿಗೆ ನೀಡುವ ಮಾಸಿಕ ಜೀವನಾಂಶವನ್ನು 20,000 ರೂ.ಗೆ ಹೆಚ್ಚಿಸಲಾಯಿತು ಹಾಗೂ ಹೆಂಡತಿಯ ಜೀವನಾಂಶ ಅರ್ಜಿಯನ್ನು ವಜಾಗೊಳಿಸಲಾಯಿತು.

2018 ನವೆಂಬರ್‌ರಂದು ಹೈಕೋರ್ಟ್‌ನಲ್ಲಿ ನಡೆದ ಸಂಧಾನದಂತೆ ತಂದೆಯು ಫ್ಲ್ಯಾಟ್‌ ಒಂದರ ಅಡಮಾನ ತೀರಿಸಿ, ಅದನ್ನು ತಾಯಿ-ಮಗಳ ಜಂಟಿ ಹೆಸರಿನಿಂದ ಮಗಳ ಹೆಸರಿಗೆ ವರ್ಗಾಯಿಸಲು ಒಪ್ಪಿಕೊಂಡಿದ್ದರು. ಆದರೆ ಈ ಪ್ರಕ್ರಿಯೆಯನ್ನು ಅವರು ಪೂರ್ಣಗೊಳಿಸಿರಲಿಲ್ಲ.

ಬಿಕರಿಯಾಗದ ಆಸ್ತಿ ಒಪ್ಪಂದದ ಬಳಿಕ, ತಾಯಿಯು ಒಟ್ಟು 19.62 ಲಕ್ಷ ರೂ. ಪಾವತಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಲ್ಲಿ 11.60 ಲಕ್ಷ ರೂ. ಮಾಸಿಕ ಜೀವನಾಂಶ ಮತ್ತು 8.02 ಲಕ್ಷ ರೂ. ಇತರ ವೆಚ್ಚ ಸೇರಿತ್ತು.

ಕುಟುಂಬ ನ್ಯಾಯಾಲಯವು ತಂದೆ ಈಗಾಗಲೇ ಪಾವತಿಸಿದ್ದ 11.87 ಲಕ್ಷ ರೂ.ಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಮಾಸಿಕ ಜೀವನಾಂಶದ ಬಾಕಿ ಇಲ್ಲ ಎಂದು ತೀರ್ಮಾನಿಸಿತು. ಇನ್ನುಳಿದ ವೆಚ್ಚಗಳಲ್ಲಿ ಹಿಂದಿ ಟ್ಯೂಷನ್, ಡ್ರಾಯಿಂಗ್, ಡ್ಯಾನ್ಸ್ ಮತ್ತು ಡೇ-ಕೇರ್ ವೆಚ್ಚಗಳನ್ನು ಹೊರಗಿಟ್ಟು, ಸಾರಿಗೆ ವೆಚ್ಚ 1.22 ಲಕ್ಷ ರೂ. ಮತ್ತು ವೈದ್ಯಕೀಯ ವೆಚ್ಚ 2.64 ಲಕ್ಷ ರೂ. ಹಾಗೂ ಶಾಲಾ ಶುಲ್ಕಗಳನ್ನು ಅನುಮೋದಿಸಿತು. ಶಾಲಾ ಶುಲ್ಕದಲ್ಲಿ ಈಗಾಗಲೇ ಪಾವತಿಸಿದ 28,666 ರೂ.ಗಳನ್ನು ಕಳೆದು ಅಂತಿಮವಾಗಿ 6.14 ಲಕ್ಷ ರೂ. ಪಾವತಿಸುವಂತೆ ಆದೇಶಿಸಿತು.

ತಂದೆಯು ವೈದ್ಯಕೀಯ ಮತ್ತು ಸಾರಿಗೆ ಬಿಲ್‌ಗಳನ್ನು ಪ್ರಶ್ನಿಸಿ, ಇನ್ಶೂರೆನ್ಸ್ ಕ್ಲೈಮ್ ಮಾಡಲು ತಾಯಿ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ ಎಂದು ವಾದಿಸಿದ್ದರು. ಆದರೆ, ಇನ್ಶೂರೆನ್ಸ್ ಪಡೆಯಬಹುದಿತ್ತು ಎಂಬ ವಾದದಿಂದ ಮಗುವಿನ ವೈದ್ಯಕೀಯ ವೆಚ್ಚಗಳು ಸಂಭವಿಸಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಂದೆಯ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ, 6.14 ಲಕ್ಷ ರೂ. ಪಾವತಿಯನ್ನು ಎತ್ತಿಹಿಡಿದಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಛತ್ತೀಸ್‌ಗಢದಲ್ಲಿ ವಿಕೃತಿ: ಅಂಗಾಂಗ ಮಾರಾಟ ಮಾಡಲು ಸೋದರಳಿಯನ್ನೇ ಕೊಂದ ದುರುಳ

ತ್ವರಿತವಾಗಿ ಹಣ ಗಳಿಸುವ ಧಾವಂತಕ್ಕೆ ಬಿದ್ದಿದ್ದ ಯುವಕನೊಬ್ಬ, ಅಂಗಾಂಗಳನ್ನು ಮಾರಿ, ಸಂಪಾದನೆ...

ಕರ್ನಾಟಕದ ಬೆನ್ನಲ್ಲೇ ಎಚ್ಚೆತ್ತ ಕೇರಳ: ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಮುಂದು

ಕರ್ನಾಟಕದಲ್ಲಿ ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ...

ಕರ್ನಾಟಕ | ಪೆಟ್ರೋಲ್‌ಗೆ ಅಧಿಕ ಎಥನಾಲ್ ಮಿಶ್ರಣ;  67 ಕಡೆ ಪೆಟ್ರೋಲ್ ತಪಾಸಣೆಗೆ ಸಿಎಂ ಡಿಕೆಶಿ ಸೂಚನೆ! 

ಪೆಟ್ರೋಲ್‌ನಲ್ಲಿ ಅಧಿಕ ಪ್ರಮಾಣದ ಎಥನಾಲ್ ಬೆರೆಸುವುದರಿಂದ ವಾಹನಗಳ ಎಂಜಿನ್ ಕಾರ್ಯಕ್ಷಮತೆ ಕುಸಿಯುತ್ತಿದೆ...

ದೀಪಾವಳಿ ಸಂಭ್ರಮದ ಬೆನ್ನಲ್ಲೇ ದೆಹಲಿಯಲ್ಲಿ ‘ವಿಷಗಾಳಿ’: ಉಸಿರುಕಟ್ಟಿಸುವ ವಾತಾವರಣ, 1,331ಕ್ಕೆ ತಲುಪಿದ AQI!

ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟವು...