ತಾನು ಬೆಳೆಸಿದ್ದ ಮರ ಕಡಿದಿದ್ದನ್ನು ಕಂಡು ಬಿಕ್ಕಿ-ಬಿಕ್ಕಿ ಕಣ್ಣೀರಿಟ್ಟ ಮಹಿಳೆ

Date:

20 ವರ್ಷಗಳ ಹಿಂದೆ ಮಹಿಳೆಯೊಬ್ಬರು ನೆಟ್ಟು ಬೆಳೆಸಿದ್ದ ಮರವೊಂದನ್ನು ಭೂ ವ್ಯಾಪಾರಿಗಳು ಕಡಿದು ಉರುಳಿಸಿದ್ದಾರೆ. ನೆಲಕ್ಕುರುಳಿ ಬಿದ್ದಿದ್ದ ಮರವನ್ನು ಕಂಡು ಆ ಮಹಿಳೆ ಬಿಕ್ಕಿ-ಬಿಕ್ಕಿ ಅತ್ತಿರುವ ಘಟನೆ ಛತ್ತೀಸ್‌ಗಢದ ಸರ್ರೋಗೊಂಡಿ ಗ್ರಾಮದಲ್ಲಿ ನಡೆದಿದೆ. ಘಟನೆಯ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ವೈರಲ್ ಆಗಿರುವ ವಿಡಿಯೋದಲ್ಲಿ; ಕತ್ತರಿಸಲಾಗಿದ್ದ ಮರದ ಬಡುಕ್ಕೆ ಓರ್ವ ಮಹಿಳೆ ನಮಸ್ಕರಿಸುತ್ತಿರುವುದು ಮತ್ತು ಅಳುತ್ತಿರುವುದು ಕಂಡುಬಂದಿದೆ. ಆಕೆ ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡಂತೆ ದುಃಖಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಸ್ಥಳೀಯ ವರದಿಗಳ ಪ್ರಕಾರ, ಗ್ರಾಮದ ಕೆಲವು ಹಳೆಯ ಮರಗಳನ್ನು ಭೂ ವ್ಯಾಪಾರಿಯ ಆದೇಶದ ಮೇರೆಗೆ ಕತ್ತರಿಸಲಾಗಿದೆ. ಗ್ರಾಮದ ಬೃಹತ್ ಮರಗಳನ್ನು ಕತ್ತರಿಸಲಾಗಿದೆ ಎಂಬುದನ್ನು ತಿಳಿದು, ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಆತಂಕಕ್ಕೊಳಗಾಗಿದ್ದಾರೆ. ಕಡಿದು ಹಾಕಲಾದ ಹಲವು ಮರಗಳು ದಶಕಗಳಷ್ಟು ಹಳೆಯವು. ಗ್ರಾಮಸ್ಥರು ಅವುಗಳ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು.

ಈ ಲೇಖನ ಓದಿದ್ದೀರಾ?: ಎಸ್‌ಟಿ ಒಳಮೀಸಲಾತಿ ಮುನ್ನಲೆಗೆ; ‘ನಾಯಕ- ಕುರುಬ’ರ ನಡುವೆ ಬಿಕ್ಕಟ್ಟು ಮೂಡುವುದೇ?

ಕಡಿದು ಹಾಕಲಾದ ಮರದ ಎದುರು ಮಹಿಳೆಯು ಅಳುತ್ತಿರುವ ವಿಡಿಯೋ ಮಾನವರು ಮತ್ತು ಪ್ರಕೃತಿಯ ನಡುವಿನ ಬೇರೂರಿದ ಸಂಬಂಧದ ರೂಪಕವಾಗಿದೆ ಎಂದು ಹಲವಾರು ನೆಟ್ಟಿಗರು ಹೇಳಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ಇವು ಕೇವಲ ಮರಗಳಲ್ಲ, ಅವು ನಮ್ಮ ಬಾಲ್ಯದ ನೆನಪುಗಳು. ಪ್ರಕೃತಿ ಇಲ್ಲದಿದ್ದರೆ ಜೀವನ ಹೇಗಿರುತ್ತದೆ. ಆಧುನಿಕತೆಯ ಹೆಸರಿನಲ್ಲಿ ನಾವು ಅಮೂಲ್ಯವಾದದ್ದನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ MLC ಚುನಾವಣೆ: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಾರ್ಟಿ

ಬಿಹಾರ ವಿಧಾನ ಪರಿಷತ್ತಿನ (ಎಂಎಲ್‌ಸಿ) ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ...

ರಾಜಸ್ಥಾನದ ಬುಡಕಟ್ಟು ಶಾಲೆಗಳ ದುಸ್ಥಿತಿ: ‘ಖಾಲಿ ಜಾಗ, ಕುಡಿಯುವ ನೀರಿಲ್ಲ’ – ಸಿಜೆಪಿ ಆಕ್ರೋಶ

ರಾಜಸ್ಥಾನದ ಬುಡಕಟ್ಟು (ಆದಿವಾಸಿ) ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳ ಶೋಚನೀಯ ಸ್ಥಿತಿಯನ್ನು ಖಂಡಿಸಿ...

ಜಾತಿ ಕಿರುಕುಳ | ಐಐಟಿ-ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಪ್ರೊಫೆಸರ್ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈನ ಐಐಟಿ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ...