ಆಮ್ ಆದ್ಮಿ ಪಕ್ಷವೇ (ಎಎಪಿ) ನಿಜವಾದ ಸನಾತನ ಪಕ್ಷವಾಗಿದ್ದು, ಸನಾತನ ಮೌಲ್ಯಗಳ ಕಡೆಗೆ ನಿಜವಾದ ಭಕ್ತಿಯಿಂದ ಕೆಲಸ ಮಾಡಿದೆ. ಆದರೆ ಬಿಜೆಪಿ ಚುನಾವಣಾ ಲಾಭಕ್ಕಾಗಿ ಶ್ರೀರಾಮನನ್ನು ಬಳಸಿಕೊಳ್ಳುತ್ತಾ ಬಂದಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ತನ್ನ ಭಾಷಣಗಳು ಮತ್ತು ಚುನಾವಣಾ ಪ್ರಚಾರಗಳಲ್ಲಿ ಶ್ರೀರಾಮ ಮತ್ತು ಶ್ರೀರಾಮನ ಬಗ್ಗೆ ಆಗಾಗ್ಗೆ ಉಲ್ಲೇಖಿಸುತ್ತದೆ. ಆದರೆ ಅದರ ಹಿರಿಯ ನಾಯಕರು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆಯನ್ನೂ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ಪತ್ರಿಕಾಗೋಷ್ಠಿಗೆ ನಿರ್ಬಂಧ: 77 ವರ್ಷ ಹಳೆಯ ಸಮಿತಿಯ ಧ್ವನಿ ಹತ್ತಿಕ್ಕಲು ಯತ್ನ!
ಹಾಗೆಯೇ, “ಬಿಜೆಪಿ ಶ್ರೀರಾಮನ ಹೆಸರಿನಲ್ಲಿ ಮತ ಕೇಳುತ್ತದೆ, ಆದರೆ ಬಿಜೆಪಿ ಶ್ರೀರಾಮನನ್ನು ದೇವರೆಂದು ಪರಿಗಣಿಸುವುದಿಲ್ಲ. ರಾಮಮಂದಿರದಲ್ಲಿ ದೇಣಿಗೆ ಕಳ್ಳತನವಾಗಿರುವುದರಿಂದ ದೇಶದಲ್ಲಿರುವ ಎಲ್ಲಾ ಸನಾತನಿಗಳ ಮನಸ್ಸಿಗೆ ನೋವಾಗಿದೆ. ಇದರಿಂದಾಗಿ ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಿಂದ ಹೊರಗುಳಿಯಲಿದೆ” ಎಂದರು.
ರಾಮಮಂದಿರದಲ್ಲಿ ದೇಣಿಗೆ, ಚಿನ್ನ, ಬೆಳ್ಳಿ ಆಭರಣಗಳ ಲೂಟಿಯು ಬಹಿರಂಗವಾಗಿದೆ. ಸದ್ಯ ಈ ಸಂಬಂಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ಎಂಟು ಮಂದಿಯ ಬಂಧನವಾಗಿದೆ. ರಾಮಮಂದಿರವನ್ನು ಸಂಪೂರ್ಣವಾಗಿ ಬಿಜೆಪಿ, ಆರ್‌ಎಸ್‌ಎಸ್, ಸಂಘಪರಿವಾರದವರೇ ನಿರ್ವಹಿಸಿಕೊಂಡು ಬಂದಿರುವ ಕಾರಣ ಸದ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.




