ಭಾರತೀಯ ವಿಮಾನಗಳಲ್ಲಿ ‘ಪವರ್ ಬ್ಯಾಂಕ್‌’ ನಿಷೇಧಕ್ಕೆ ಕ್ರಮ? ಕಠಿಣ ನಿಯಮಗಳ ಕುರಿತು ಚರ್ಚೆ

Date:

ಇತ್ತೀಚೆಗೆ, ದೆಹಲಿಯಲ್ಲಿ ಇಂಡಿಗೋ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ಬೆಂಕಿಗೆ ಪ್ರಯಾಣಿಕರೊಬ್ಬರು ಕೊಂಡೊಯ್ಯುತ್ತಿದ್ದ ‘ಪವರ್‌ ಬ್ಯಾಂಕ್‌’ ಕಾರಣವೆಂದು ಹೇಳಲಾಗಿದೆ. ಇದರ ಬೆನ್ನಲ್ಲೇ, ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ದೇಶಾದ್ಯಂತ ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳ ಬಳಕೆಯ ಮೇಲೆ ಸಂಭಾವ್ಯ ನಿಷೇಧ ಅಥವಾ ಕಠಿಣ ನಿಯಮಗಳನ್ನು ರೂಪಿಸಲು ಚರ್ಚಿಸುತ್ತಿದೆ ಎಂದು ವರದಿಯಾಗಿದೆ.

- Advertisement -

ಭಾನುವಾರ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಗಲ್ಯಾಂಡ್‌ನ ದಿಮಾಪುರಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ಹಾರಟ ಆರಂಭಿಸಲು ‘ರನ್‌ವೇ’ನಲ್ಲಿ ಹೋಗುತ್ತಿದ್ದಾಗ, ಪ್ರಯಾಣಿಕರೊಬ್ಬರ ‘ಪವರ್ ಬ್ಯಾಂಕ್’ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ‘ಪವರ್‌ ಬ್ಯಾಂಕ್‌’ನಲ್ಲಿದ್ದ ಲಿಥಿಯಂನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೇಳಾಗಿದೆ. ಹೀಗಾಗಿ, ಲಿಥಿಯಂವುಳ್ಳ ಬ್ಯಾಟರಿ ಚಾಲಿತ ಸಾಧನಗಳ ಬಳಕೆ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಆದ್ದರಿಂದಲೇ, ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳು ವಿಮಾನಗಳಲ್ಲಿ ‘ಪವರ್ ಬ್ಯಾಂಕ್‌’ಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಕುರಿತು DGCA ಸಮಗ್ರ ಪರಿಶೀಲನೆ ಪ್ರಾರಂಭಿಸಿದೆ. ಈ ಪರಿಶೀಲನೆಯು ವಿಮಾನದಲ್ಲಿ ‘ಪವರ್‌ ಬ್ಯಾಂಕ್‌’ ಬಳಕೆಯ ಮೇಲೆ ನಿಷೇಧ, ವಿದ್ಯುತ್ ಸಾಧನಗಳ ವಿದ್ಯುತ್ ಸಾಮರ್ಥ್ಯದ ಮೇಲೆ ಕಡ್ಡಾಯ ನಿರ್ಬಂಧಗಳು ಅಥವಾ ಅಪಾಯಗಳನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಸಾಧ್ಯವಾಗದಿದ್ದರೆ ವಿದ್ಯುತ್‌ ಸಾಧನಗಳ ಸಾಗಣೆಯ ಸಂಪೂರ್ಣ ನಿಷೇಧ ಕುರಿತು ಚರ್ಚೆಗಳು ನಡೆಯುತ್ತಿವೆ.

ಜಿಡಿಸಿಎ ತನ್ನ ಶಿಫಾರಸುಗಳ ಕುರಿತು ನಾಗರಿಕ ವಿಮಾನಯಾನ ಸಚಿವಾಲಯಕ್ಕೂ (MoCA) ಮಾಹಿತಿ ನೀಡಿದೆ. ಎರಡೂ ಸಂಸ್ಥೆಗಳು ಈಗ ಹೊಸ ಸುರಕ್ಷತಾ ಕ್ರಮಗಳನ್ನು ನಿರ್ಧರಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗಿದೆ.

ಈಗಾಗಲೇ, ಎಮಿರೇಟ್ಸ್‌ ಏರ್‌ಲೈನ್ಸ್‌ ಸಂಸ್ಥೆಯು ಅಕ್ಟೋಬರ್ ಆರಂಭದಿಂದಲೇ, ತನ್ನ ಎಲ್ಲ ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳ ಬಳಕೆಯನ್ನು ನಿಷೇಧಿಸಿದೆ. 100 ವ್ಯಾಟ್‌ಗಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ಪವರ್ ಬ್ಯಾಂಕ್‌ಗಳನ್ನು ಮಾತ್ರ ಸಾಗಿಸಲು ಅನುಮತಿಸಲಾಗಿದೆ. ಆದಾಗ್ಯೂ, ವಿಮಾನಗಳಲ್ಲಿ ಅವುಗಳನ್ನು ಚಾರ್ಜ್ ಮಾಡುವುದು ಅಥವಾ ಅವುಗಳ ಮೂಲಕ ಮೊಬೈಲ್‌ಗಳನ್ನು ಚಾರ್ಜ್‌ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.

ಈ ಲೇಖನ ಓದಿದ್ದೀರಾ?: 50% ಮಿತಿ ದಾಟಿದ ತೆಲಂಗಾಣ ಮೀಸಲಾತಿಗೆ ಸುಪ್ರೀಮ್ ತಡೆ; ಕರ್ನಾಟಕಕ್ಕೂ ಅಡೆ-ತಡೆ?

ಅದೇ ರೀತಿ, ಸಿಂಗಾಪುರ್ ಏರ್ಲೈನ್ಸ್ ಕೂಡ ಏಪ್ರಿಲ್‌ನಿಂದಲೇ ವಿಮಾನಗಳಲ್ಲಿ ‘ಪವರ್ ಬ್ಯಾಂಕ್‌’ ಬಳಕೆ ಅಥವಾ ಚಾರ್ಜ್ ಮಾಡುವುದನ್ನು ನಿಷೇಧಿಸಿದೆ. ಕ್ಯಾಥೆ ಪೆಸಿಫಿಕ್ ಮತ್ತು ಕತಾರ್ ಏರ್ವೇಸ್ ಸೇರಿದಂತೆ ಇತರ ಅನೇಕ ಸಂಸ್ಥೆಗಳು ಕೂಡ ಪ್ರಯಾಣಿಕರು ತಮ್ಮ ಪವರ್ ಬ್ಯಾಂಕ್‌ಗಳ ಬಳಕೆ ಕುರಿತು ನಿಯಮಗಳನ್ನು ರೂಪಿಸಿವೆ.

ಪವರ್ ಬ್ಯಾಂಕ್‌ಗಳು ಲಿಥಿಯಂ-ಐಯಾನ್ ಸೆಲ್‌ಗಳನ್ನು ಒಳಗೊಂಡಿರುತ್ತವೆ. ಇವುಗಳು ಗಮನಾರ್ಹ ವಿದ್ಯುತ್‌ಅನ್ನು ಸಂಗ್ರಹಿಸಲು ಬ್ಯಾಟರಿಗಳಿಗೆ ನೆರವಾಗುತ್ತವೆ. ಆದಾಗ್ಯೂ, ಪ್ರಮಾಣೀಕರಣ ಅಥವಾ ಗುಣಮಟ್ಟದ ಪರೀಕ್ಷೆಯಿಲ್ಲದೆ ಹೆಚ್ಚಾಗಿ ಮಾರಾಟವಾಗುವ ಅಗ್ಗದ ಪವರ್‌ ಬ್ಯಾಂಕ್‌ಗಳು ಶಾರ್ಟ್-ಸರ್ಕ್ಯೂಟ್ ಅಥವಾ ತಾಪಮಾನ ನಿಯಂತ್ರಣದಂತಹ ಅಪಾಯಗಳನ್ನು ತಪ್ಪಿಸುವ ಸುರಕ್ಷತಾ ಅಂಶಗಳನ್ನು ಹೊಂದಿರುವುದಿಲ್ಲ ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ದಿನಗಳ ಬ್ಯಾಂಕ್ ಮುಷ್ಕರ ವಾಪಸ್: ವಾರಕ್ಕೆ 5 ದಿನ ಕೆಲಸದ ಪರಿಶೀಲನೆಗೆ ಸಮಿತಿ

ಸಾರ್ವಜನಿಕ ವಲಯದ ಬ್ಯಾಂಕ್‌ ನೌಕರರ ಒಕ್ಕೂಟವು (ಯುಎಫ್‌ಬಿಯು) ಸೋಮವಾರದಿಂದ ಹಮ್ಮಿಕೊಂಡಿದ್ದ ಮೂರು...

2017ರಲ್ಲಿ ಚುನಾವಣಾ ಆಯೋಗವನ್ನು ನಂಬಿದ್ದೆವು, ಆದರೆ 2022ರಲ್ಲಿ ಎಸ್‌ಪಿ ಮತಗಳನ್ನು ಇಸಿ ಅಳಿಸಿದೆ: ಅಖಿಲೇಶ್ ಆರೋಪ

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲಿಗರ...

ಪಶ್ಚಿಮ ಬಂಗಾಳ | ಸುವೇಂದು ಅಧಿಕಾರಿಗೆ ‘ಅಲ್ಲಾಹ್ ಮೇಲಕ್ಕೆ ಟಿಕೆಟ್ ಕಾಯ್ದಿರಿಸಲಿ’ – ಹುಮಾಯೂನ್ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಬಂಗಾಳದ ರೇಜಿನಗರ ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಾಗ್ದಾಳಿಗಳು ತೀವ್ರ ಸ್ವರೂಪ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಇಸಿಐ ವಿವರಣೆ ತಿರಸ್ಕರಿಸಿದ ಸಿಪಿಐಎಂ; ಸಿಇಸಿ ಪದಚ್ಯುತಿಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ...