ಅತ್ಯಾಚಾರಿ ರಾಮ್ ರಹೀಮ್ ಸಮರ್ಥನೆಯ ಜಾಹೀರಾತು; ಭಾರಿ ಜನಾಕ್ರೋಶದ ಬಳಿಕ ಕ್ಷಮೆ ಯಾಚಿಸಿದ ‘ದಿ ಹಿಂದು’

Date:

ಕಾರ್ಪೊರೇಟ್ ಮಾಧ್ಯಮಗಳು ತಮ್ಮ ಮೂಲಭೂತ ಸಂಪಾದಕೀಯ ನೈತಿಕತೆಯನ್ನು ಅಗ್ಗದ ಚೌಕಾಸಿಗೆ ಒಡ್ಡಿವೆ ಎಂಬ ಆರೋಪಗಳು ಕಳೆದೊಂದು ದಶಕಗಳಿಂದ ಕೇಳಿಬರುತ್ತಿವೆ. ಇಂತಹದೊಂದು ಆರೋಪಕ್ಕೆ ಇದೀಗ, ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆ ‘ದಿ ಹಿಂದು’ ಮತ್ತು ಹಿಂದಿ ಪತ್ರಿಕೆ ‘ದೈನಿಕ್ ಭಾಸ್ಕರ್’ಗಳು ಗುರಿಯಾಗಿವೆ. ಇಬ್ಬರು ಮಹಿಳಾ ಶಿಷ್ಯೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನನ್ನು ‘ವಿಶುದ್ಧ’ ಎಂದು ಬಿಂಬಿಸುವ, ಕೋರ್ಟ್‌ಗಳ ತೀರ್ಪನ್ನೇ ಪ್ರಶ್ನಿಸುವ ಪೂರ್ಣ ಪುಟದ ಜಾಹೀರಾತನ್ನು ಎರಡೂ ಪತ್ರಿಕೆಗಳು ತಮ್ಮ ಮುಖಪುಟದಲ್ಲೇ ಪ್ರಕಟಿಸಿವೆ. ‘ಪತ್ರಿಕಾ ನೈತಿಕತೆಯನ್ನು ಗಾಳಿಗೆ ತೂರಿವೆ’ ಎಂಬ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿವೆ.

- Advertisement -

ಈ ಪತ್ರಿಕೆಗಳು ಸೆಪ್ಟೆಂಬರ್ 12ರಂದು ದೆಹಲಿ, ಮೊಹಾಲಿ ಸೇರಿದಂತೆ ಉತ್ತರ ಭಾರತದ ಪ್ರಮುಖ ಆವೃತ್ತಿಗಳಲ್ಲಿ ‘ಡೇರಾ ಸಚ್ಚಾ ಸೌದಾ ಎಂದರೇನು? (ಸತ್ಯ vs ಕಾಲ್ಪನಿಕಕಥೆ)’ ಎಂಬ ವಿವಾದಾತ್ಮಕ ಶೀರ್ಷಿಕೆಯ ಜಾಹೀರಾತನ್ನು ಪ್ರಕಟಿಸಿದ್ದವು. ಇದೇ ಜಾಹೀರಾತಿನಲ್ಲಿ, ಗುರು ಜಿ ವಿರುದ್ಧ ಪಿತೂರಿ ನಡೆದಿದೆಯೇ?’ ಎಂಬ ಪ್ರಶ್ನೆಗೆ ‘ಹೌದು, ಖಂಡಿತ’ ಎಂದೂ ಬರೆಯಲಾಗಿತ್ತು. ಈ ಜಾಹೀರಾತು ಸಂತ್ರಸ್ತರ ಕಟು ಸತ್ಯವನ್ನು ಮತ್ತು ನ್ಯಾಯಾಂಗದ ಸುದೀರ್ಘ ತನಿಖೆಯನ್ನು ಬಹಿರಂಗವಾಗಿ ಅಪಹಾಸ್ಯಕ್ಕೀಡು ಮಾಡಿತ್ತು. ಅಲ್ಲದೆ, ರಾಮ್ ರಹೀಮ್‌ಗೆ ಸರ್ಕಾರಗಳು ಸರಣಿಯಾಗಿ ನೀಡುತ್ತಿರುವ ಪೆರೋಲ್ ಮತ್ತು ಫರ್ಲೋಗಳು ‘ವಿಐಪಿ ಆತಿಥ್ಯವಲ್ಲ’ ಎಂದು ಧರ್ಮದಂಡ ಹಿಡಿಯುವ ಪ್ರಯತ್ನವನ್ನೂ ಮಾಡಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಈ ಜಾಹೀರಾತಿನ ಪ್ರಕಟಣೆಯು ಸಾರ್ವಜನಿಕ ರಂಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಲಯದಿಂದ ಅತ್ಯಾಚಾರ ಅಪರಾಧಿ ಎಂದು ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯನ್ನು ಸಮರ್ಥಿಸುವ ಈ ಜಾಹೀರಾತನ್ನು ಪ್ರಕಟಿಸಿರುವ ಪತ್ರಿಕೆಗಳ ನೈತಿಕ ಬದ್ಧತೆಯನ್ನು ಹಲವಾರು ನೆಟ್ಟಿಗರು ಪ್ರಶ್ನಿಸಿದ್ದರು.

ಗಮನಾರ್ಹವಾಗಿ, 2026ರ ಜೂನ್ ಅಂತ್ಯದ ವೇಳೆಗೆ ಈ ಅತ್ಯಾಚಾರ ಅಪರಾಧಿ ರಾಮ್ ರಹೀಮ್‌ ಪೆರೋಲ್ ಹೆಸರಿನಲ್ಲಿ ಭರ್ತಿ 435 ದಿನಗಳನ್ನು ಜೈಲಿನಿಂದ ಹೊರಗೆ ಕಳೆದಿದ್ದಾನೆ. ಅಂದರೆ ತನ್ನ ಶಿಕ್ಷೆಯ ಅವಧಿಯ 13.5%ಕ್ಕಿಂತಲೂ ಹೆಚ್ಚು ದಿನಗಳು ಆತ ಜೈಲಿನಿಂದ ಹೊರಗಿದ್ದಾನೆ. ಮಾತ್ರವಲ್ಲದೆ, ರಾಜಕೀಯ ಹಿತಾಸಕ್ತಿ ಮತ್ತು ವೋಟ್ ಬ್ಯಾಂಕ್‌ಗಾಗಿ ಹರಿಯಾಣದ ಬಿಜೆಪಿ ಸರ್ಕಾರ ಈತನಿಗೆ ರಾಜಾತಿಥ್ಯ ನೀಡುತ್ತಿದೆ ಎಂಬ ಗಂಭೀರ ಆರೋಪವೂ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ.

ಇಂತಹ ಸಂದರ್ಭದಲ್ಲಿ, ಮಾಧ್ಯಮಗಳು ಕೋಟಿ ಕೋಟಿ ಹಣಕ್ಕಾಗಿ ಇಂತಹ ಕ್ರಿಮಿನಲ್ ಸಮರ್ಥನೆಯ ಜಾಹೀರಾತನ್ನು ತಮ್ಮ ಮುಖಪುಟದಲ್ಲಿ ಪ್ರಕಟಿಸಿರುವುದು ಸಮಾಜದ ಸಾಕ್ಷಿಪ್ರಜ್ಞೆಯನ್ನು ತಲ್ಲಣಗೊಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕೋದ್ಯಮದ ಮೂಲಭೂತ ಹೊಣೆಗಾರಿಕೆಯನ್ನೇ ಪ್ರಶ್ನಿಸಿ ಜನಾಕ್ರೋಶ ಮುಗಿಲುಮುಟ್ಟಿದೆ. ಈ ಬೆನ್ನಲ್ಲೇ, ಎಚ್ಚೆತ್ತುಕೊಂಡ ‘ದಿ ಹಿಂದು’ ಸಂಸ್ಥೆಯು ತನ್ನ ಓದುಗರಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿದೆ. ಅಪರಾಧಿಯನ್ನು ಸಮರ್ಥಿಸುವ ವಿಷಯವನ್ನು ಪ್ರಕಟಿಸಿದ್ದು ತೀವ್ರ ವಿಷಾದನೀಯ ಎಂದು ಪತ್ರಿಕೆ ಹೇಳಿಕೊಂಡಿದೆ.

ಆದರೆ, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಹೋರಾಟ, ನ್ಯಾಯಾಲಯಗಳು ನೀಡಿದ ಐತಿಹಾಸಿಕ ತೀರ್ಪುಗಳನ್ನು ಹಣದ ಹಣಾಹಣಿಯಲ್ಲಿ ಧೂಳೀಪಟ ಮಾಡುವ ಜಾಹೀರಾತನ್ನು ಸಂಪಾದಕೀಯ ಮಂಡಳಿ ಕಣ್ಣುಮುಚ್ಚಿ ಒಪ್ಪಿಕೊಂಡಿದ್ದಾದರೂ ಹೇಗೆ? ಪತ್ರಿಕೆಯ ಆದಾಯಕ್ಕಾಗಿ ಸಂತ್ರಸ್ತರ ನೋವು ಮತ್ತು ಕಾನೂನಿನ ಆಶಯವನ್ನು ಬಲಿಕೊಡುವುದು ‘ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಕಂಬ’ ಎಂಬ ಪರಿಕಲ್ಪನೆಯನ್ನೇ ನಗೆಪಾಟಲಿಗೀಡು ಮಾಡಿದೆ ಎಂದು ನೆಟ್ಟಿಗರು ಮತ್ತು ಓದುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...