ಜ್ಞಾನೇಶ್ ವಿರುದ್ಧದ ನ.1ರ ರ‍್ಯಾಲಿಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಬೆಂಬಲಿಸಲಿರುವ ಸಿಜೆಪಿ

Date:

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಿರೋಧಿಸಿ ‘ಇಂಡಿಯಾ’ (I.N.D.I.A.) ಮೈತ್ರಿಕೂಟವು ಮುಂದಿನ ಭಾನುವಾರ (ನವೆಂಬರ್ 1) ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ‍್ಯಾಲಿಗೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ತನ್ನ ಬೆಂಬಲವನ್ನು ಘೋಷಿಸಿದೆ. ಇದು ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ಅತಿ ದೊಡ್ಡ ಜನಾಂದೋಲನಗಳಲ್ಲಿ ಒಂದಾಗಿದೆ.

- Advertisement -

ಈ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಯಾವೊಬ್ಬ ಅರ್ಹ ನಾಗರಿಕನೂ ತನ್ನ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಾಗಿ, ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಹೋರಾಡುತ್ತಿರುವ ‘ಎಲ್ಲಾ ಸಂಘಟನೆಗಳನ್ನು’ ಸಿಜೆಪಿ ಬೆಂಬಲಿಸುತ್ತದೆ” ಎಂದು ಹೇಳಿದ್ದಾರೆ. “ಜ್ಞಾನು (ಜ್ಞಾನೇಶ್ ಕುಮಾರ್) ತೊಲಗಬೇಕು! ಇಂಡಿಯಾ ಒಕ್ಕೂಟದ ನವೆಂಬರ್ 1ರ ರ‍್ಯಾಲಿಗೆ ಕಾಕ್ರೋಚ್ ಜನತಾ ಪಾರ್ಟಿ ಬೆಂಬಲ ನೀಡಲಿದೆ. ದೇಶವೇ ಮೊದಲು! #JaiBhim #JaiHind,” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಸಿಜೆಪಿಯ ಸಹ-ಸಂಚಾಲಕರು ಸಹ ಈ ಪೋಸ್ಟ್ ಅನ್ನು ಮರುಹಂಚಿಕೊಂಡು “ನ್ಯಾಯ ಮತ್ತು ಹೊಣೆಗಾರಿಕೆ ಗೆಲ್ಲಲೇಬೇಕು” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಈ ಹಿಂದೆ ‘ಇಂಡಿಯಾ’ ಮೈತ್ರಿಕೂಟದ ಕೆಲವು ಪಕ್ಷಗಳು ಸಿಜೆಪಿಯನ್ನು ತಮ್ಮ ಹೋರಾಟದಲ್ಲಿ ಸೇರಿಸಿಕೊಳ್ಳಲು ಒಲವು ತೋರಿದ್ದರೂ, ಈ ಯುವ ಚಳವಳಿಯ ಬಗ್ಗೆ ಕಾಂಗ್ರೆಸ್‌ಗೆ ಅನುಮಾನಗಳಿದ್ದವು. ಆದರೆ ಕಳೆದ ಒಂದು ತಿಂಗಳಲ್ಲಿ ಕಾಂಗ್ರೆಸ್ ತನ್ನ ನಿಲುವು ಬದಲಿಸಿದೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ಇತ್ತೀಚೆಗೆ ಕರೆದಿದ್ದ ಮೈತ್ರಿ ಪಕ್ಷಗಳು, ನಾಗರಿಕ ಸಮಾಜ, ವಿದ್ಯಾರ್ಥಿ ಮತ್ತು ಯುವ ನಾಯಕರ ಸಭೆಗೆ ಸಿಜೆಪಿ ನಾಯಕರನ್ನು ಆಹ್ವಾನಿಸಿದ್ದರು (ಆದರೆ ಸಿಜೆಪಿ ನಾಯಕರು ಸಭೆಗೆ ಗೈರಾಗಿದ್ದರು). ಅಕ್ಟೋಬರ್ 12ರಂದು ನಡೆದ ‘ಸುಪ್ರೀಂ ಕೋರ್ಟ್ ಚಲೋ’ಗೆ ಸಿಜೆಪಿ ಒಲವು ಹೊಂದಿದ್ದರೂ, ಬಹಿರಂಗ ಬೆಂಬಲ ಘೋಷಿಸಿರಲಿಲ್ಲ. ಇದೇ ಮೊದಲ ಬಾರಿಗೆ ರಾಜಕೀಯ ವಿರೋಧ ಪಕ್ಷಗಳಿಗೆ ಸಿಜೆಪಿ ಬಹಿರಂಗ ಬೆಂಬಲ ವ್ಯಕ್ತಪಡಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಗೊಂದಲಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಿಜೆಪಿ, “ಪ್ರಜಾಪ್ರಭುತ್ವದ ಮೂಲ ತತ್ವವೆಂದರೆ ಜನರು ತಮ್ಮ ಸರ್ಕಾರವನ್ನು ಆಯ್ಕೆ ಮಾಡುವುದು; ಬದಲಾಗಿ ಸರ್ಕಾರವೇ ತನ್ನ ಮತದಾರರನ್ನು ಆಯ್ಕೆ ಮಾಡುವುದಲ್ಲ. ಎಸ್‌ಐಆರ್ ಮೂಲಕ ಈ ತತ್ವಕ್ಕೇ ಧಕ್ಕೆ ತರಲಾಗುತ್ತಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ವಿಶ್ವಾಸವನ್ನು ಜ್ಞಾನೇಶ್ ಕುಮಾರ್ ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಅವರ ರಾಜೀನಾಮೆ ಅತ್ಯಗತ್ಯ” ಎಂದು ಆಗ್ರಹಿಸಿದೆ.

“ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ಜವಾಹರಲಾಲ್ ನೆಹರೂ, ಬಿ.ಆರ್. ಅಂಬೇಡ್ಕರ್ ಮುಂತಾದ ನಾಯಕರು ಅರ್ಥಮಾಡಿಕೊಂಡಿದ್ದರು. ಹೆಚ್ಚು ಜನರನ್ನು ಪ್ರಜಾಪ್ರಭುತ್ವದತ್ತ ತರುವುದು ಇದರ ಹಿಂದಿನ ಸರಳ ಉದ್ದೇಶವಾಗಿತ್ತು. ಆದರೆ ಇಂದು, ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನು ಕೈಬಿಡುತ್ತಿರುವ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗುತ್ತಿವೆ. ನಾಗರಿಕರು ತಮ್ಮ ಹಕ್ಕು ಚಲಾಯಿಸುವುದನ್ನು ಸುಲಭಗೊಳಿಸುವ ಬದಲು, ಅವರನ್ನು ದೂರವಿಡುವ ವ್ಯವಸ್ಥಿತ ಯತ್ನ ನಡೆಯುತ್ತಿದೆ” ಎಂದು ಪಕ್ಷ ಆರೋಪಿಸಿದೆ.

ಮೇ ತಿಂಗಳ ಮಧ್ಯಭಾಗದಲ್ಲಿ ಸಿಜೆಪಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಮತ್ತು ಸಿಜೆಪಿ ಪರಸ್ಪರ ಅನುಮಾನದಿಂದಲೇ ಅಂತರ ಕಾಯ್ದುಕೊಂಡಿದ್ದವು. ನೀಟ್ (NEET) ವಿರೋಧಿ ಪ್ರತಿಭಟನೆಗಳನ್ನು ರಾಹುಲ್ ಗಾಂಧಿ ಮುನ್ನಡೆಸಿದ್ದರೂ, ಜೂನ್-ಜುಲೈನಲ್ಲಿ ನಡೆದ ಸಿಜೆಪಿಯ ಪ್ರತಿಭಟನೆಯನ್ನು ಬಹಿರಂಗವಾಗಿ ಬೆಂಬಲಿಸಿರಲಿಲ್ಲ. ಆದರೆ, ಇತ್ತೀಚೆಗೆ ಅಕ್ಟೋಬರ್ ಎರಡನೇ ವಾರದಲ್ಲಿ ಮಾತನಾಡಿದ್ದ ರಾಹುಲ್, “ಚುನಾವಣಾ ಆಯುಕ್ತರ ವಿರುದ್ಧ ನಡೆಯುತ್ತಿರುವುದು ಒಂದೇ ಪ್ರತಿಭಟನೆ (ಸಮಾನಾಂತರ ಪ್ರತಿಭಟನೆಗಳಿಲ್ಲ)” ಎಂದು ಹೇಳಿದ್ದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಿಜೆಪಿಯ ನೀತಿ ನಿರೂಪಣಾ ವಿಭಾಗದ ಮುಖ್ಯಸ್ಥೆ ಮೆಹರ್ ಪಸ್ರಿಚಾ, ತಾವು ಇಂಡಿಯಾ ಒಕ್ಕೂಟದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದರು. ನಮ್ಮನ್ನು ಒಡೆಯುವ ಸರ್ಕಾರದ ತಂತ್ರಕ್ಕೆ ನಾವು ಬಲಿಯಾಗಬಾರದು ಎಂದು ದಿಪ್ಕೆ ಕೂಡ ಹೇಳಿದ್ದರು. ನಾಗರಿಕ ಸಮಾಜದ ಕೆಲ ಪ್ರಮುಖರು ಕಾಂಗ್ರೆಸ್ ಮತ್ತು ಸಿಜೆಪಿ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...

ಬಸವಣ್ಣನವರ ಕನಸಿನ ಸಮಸಮಾಜ ಇನ್ನೂ ನಿರ್ಮಾಣವಾಗಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿರಹಿತ, ವರ್ಗರಹಿತ ಮತ್ತು ಲಿಂಗಭೇದವಿಲ್ಲದ ಸಮಸಮಾಜ ನಿರ್ಮಾಣದ...