ಬಿಜೆಪಿಯ ಕೋಮವಾದದ ವಿರುದ್ಧ ಚಳವಳಿ ಕಟ್ಟಿ: ಯುವಜನರಿಗೆ ಎಐಡಿವೈಒ ಕರೆ

Date:

ಬಿಜೆಪಿ, ಸಂಘಪರಿವಾರದ ಕೋಮುವಾದಿ ವಿಭಜಕ ನೀತಿಯ ವಿರುದ್ಧ ಸಂಘಟಿತ ಯುವಜನ ಚಳವಳಿಯನ್ನು ಕಟ್ಟಿ ಎಂದು ಯುವಜನರಿಗೆ ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಕರೆ ನೀಡಿದೆ.

- Advertisement -

ಎಐಡಿವೈಒ ಯುವ ಚಳುವಳಿ ಮತ್ತು ಅನೇಕ ಕಾರ್ಯಕ್ರಮಗಳ ಮೂಲಕ ತನ್ನ 60ನೇ ವರ್ಷಾಚರಣೆಯನ‍್ನು ಆಚರಿಸಿದೆ. ಜೂನ್ 27ರಂದು ಕೋಲ್ಕತ್ತಾದಲ‍್ಲಿ 60ನೇ ವರ್ಷಾಚರಣೆಯ ಸಮಾರೋಪ ಸಮಾರಂಭವನ‍್ನು ನಡೆಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಇದನ್ನೂ ಓದಿ: ಎಐಡಿವೈಒ 60ನೇ ವರ್ಷಾಚರಣೆ |’ಪ್ರಶ್ನೆ ಮಾಡುವುದು ಜೀವಂತಿಕೆಯ ಸಂಕೇತ’: ನಿರ್ದೇಶಕ ಬಿ ಸುರೇಶ್‌

ಈ ಸಂದರ್ಭದಲ‍್ಲಿ ಕಾಲೇಜು ಚೌಕದಿಂದ ರಾಜಾ ಸುಬೋಧ್ ಮಲ್ಲಿಕ್ ಚೌಕಕ್ಕೆ ಅಖಿಲ ಭಾರತ ಮಟ್ಟದ ಯುವಜನ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ದೇಶದ 20 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ರ‍್ಯಾಲಿಗೂ ಮುನ್ನ ಸಭೆ ನಡೆದಿದ್ದು ಎಐಡಿವೈಒ ನಾಯಕರಾದ ಸಿದ್ದಲಿಂಗ ಬಾಗೇವಾಡಿ (ಕರ್ನಾಟಕ), ಪ್ರಮೋದ್ ನಾಮದೇವ್ (ಮಧ್ಯಪ್ರದೇಶ), ಅಂಜನ್ ಮಖರ್ಜಿ (ಪಶ‍್ಚಿಮ ಬಂಗಾಳ) ಭಾಷಣ ಮಾಡಿದ್ದಾರೆ. ಎಐಡಿವೈಒನ ಅಖಿಲ ಭಾರತ ಸಮಿತಿ ಕಚೇರಿ ಕಾರ್ಯದರ್ಶಿ ಕಾಮ್ರೇಡ್ ಬಿಜೋಯ್ ಮಲ್ಲಿಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಭಾರತ ಸಾರ್ವಜನಿಕ ಸಭೆಯನ‍್ನು ರಾಜಾ ಸುಬೋಧ್ ಮಲ್ಲಿಕ್ ಚೌಕದಲ‍್ಲಿ ನಡೆಸಲಾಗಿದ್ದು, ಎಸ್‍ಯಸಿಐ(ಕಮ್ಯುನಿಸ್ಟ್‌)ನ ಕೇಂದ್ರ ಸಮಿತಿಯ ಸದಸ್ಯರಾದ ಕಾಮ್ರೇಡ್ ಅರುಣ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಸ‍್ಟೇಟ್ ಸೆಕ್ರೇಟ್ರಿಯೇಟ್ ಸದಸ್ಯರಾದ ಕಾಮ್ರೇಡ್ ಸುಬ್ರತಾ ಗೌರಿ ಸಭೆಯನ‍್ನು ಉದ‍್ದೇಶಿಸಿ ಮಾತನಾಡಿದರು.

ಎಐಡಿವೈಒ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಅಮರ್‌ಜೀತ್ ಕುಮಾರ್ ಮತ್ತು ಅಖಿಲ ಭಾರತ ಉಪಾಧ್ಯಕ್ಷ ಕಾಮ್ರೇಡ್ ಜಿ. ಶಶಿ ಕುಮಾರ್ ಭಾಷಣ ಮಾಡಿದರು. ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ಕಾಮ್ರೇಡ್ ನಿರಂಜನ್ ನಾಸ್ಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. 60 ವರ್ಷಗಳ ಅಮೋಘ ಹೋರಾಟದ ಇತಿಹಾಸವನ್ನು ಭಾಷಣಕಾರರು ಸ್ಮರಿಸಿದರು.

ಇದನ್ನೂ ಓದಿ: ಕಲಬುರಗಿ | “ಯುವಜನರಿಗೆ ನಿರಾಸೆ ಮೂಡಿಸಿದ ಬಜೆಟ್”; ಎಐಡಿವೈಒ ಆರೋಪ

ಈ ಸಂದರ್ಭದಲ್ಲೇ ನಿರುದ‍್ಯೋಗ, ಉದ‍್ಯೋಗಗಳ ನಾಶ, ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರದ ಬುಲ‍್ಡೋಜರ್ ನೀತಿ, ಭ್ರಷ‍್ಟಾಚಾರ, ಮಹಿಳೆಯರ ವಿರುದ್ಧದ ಅಪರಾಧ, ಮದ್ಯ ಮತ‍್ತು ಮಾದಕ ವ್ಯಸನ ಮೊದಲಾದ ವಿಚಾರದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಹಾಗೆಯೇ ಎಸ್‍ಐಆರ್ ಮೂಲಕ ಮಾನ್ಯ ಮತದಾರರನ‍್ನು ಚುನಾವಣಾ ಪಟ‍್ಟಿಯಿಂದ ಕೈಬಿಡುವುದು ಮತ್ತು ಬಿಜೆಪಿ, ಸಂಘ ಪರಿವಾರದ ಕೋಮವಾದಿ ವಿಭಜಕ ನೀತಿಯ ವಿರುದ್ಧ ಸಂಘಟಿತ ಯುವಜನ ಚಳವಳಿಯನ‍್ನು ಕಟ‍್ಟುವಂತೆ ಯುವಜನರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ 20ಕ‍್ಕೂ ಹೆಚ‍್ಚು ಯುವಜನ ಪ್ರತಿನಿಧಿಗಳು ಭಾಗವಹಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...

4 ವರ್ಷದಲ್ಲಿ BJP, NPFಗೆ ಹಾರಿದ 111 ಜನಪ್ರತಿನಿಧಿಗಳು; ಎಡಿಆರ್‌ ವರದಿ

2022ರಿಂದ 2026ರ ಅವಧಿಯಲ್ಲಿ ಚುನಾವಣೆ ಗೆದ್ದ ಬಳಿಕ ಒಟ್ಟು 111 ಹಾಲಿ...

ನಕಲಿ ಔಷಧ ಜಾಲ ಭೇದಿಸಿದ ಎಸ್‌ಐಟಿ: ಅಜರ್‌ಬೈಜಾನ್‌ಗೆ ಪರಾರಿಯಾಗಿದ್ದ ಕಿಂಗ್‌ಪಿನ್‌ ಪ್ರಶಾಂತ್‌ ಸೆರೆ

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧ...

ಉದ್ಯೋಗ ಮಾಹಿತಿ | ರೈಲ್ವೆಯಲ್ಲಿ 590 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್ ವಿಭಾಗದ...