ಅಮಿತ್‌ ಶಾ ತಪ್ಪಿತಸ್ಥರು, ಇಲ್ಲವೇ ಅಸಮರ್ಥರು: ರಾಹುಲ್‌ ಗಾಂಧಿ

Date:

2026ರ ಜುಲೈ 20ರಂದು ಭಾರತದ ಯುವಜನರು ನ್ಯಾಯಯುತ ಶಿಕ್ಷಣ ವ್ಯವಸ್ಥೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ಒತ್ತಾಯಿಸಿ ಒಂದಾಗಿ ಧ್ವನಿ ಎತ್ತಿದರು. ಯುವತಿಯರು, ಯುವಕರು ದೇಶದ ಎಲ್ಲ ಜಾತಿ, ವರ್ಗ, ಪ್ರದೇಶ ಮತ್ತು ಧರ್ಮಗಳಿಂದ ಬಂದಿದ್ದರು. ನ್ಯಾಯಕ್ಕಾಗಿ ಧ್ವನಿ ಎತ್ತುವ ಧೈರ್ಯ ಅವರಲ್ಲಿತ್ತು. ತಮ್ಮ ಸಂವಿಧಾನಾತ್ಮಕ ಹಕ್ಕುಗಳ ಅರಿವೂ ಅವರಿಗಿತ್ತು. ತಮ್ಮ ಸಮಸ್ಯೆಗಳ ನಡುವೆಯೂ ನಗುವಷ್ಟು ಮುಕ್ತ ಮನಸ್ಸು ಅವರಲ್ಲಿತ್ತು. ಹೋರಾಡಿದರೆ ಗೆಲ್ಲಬಹುದು ಎಂಬ ನಂಬಿಕೆಯೂ ಅವರಿಗಿತ್ತು.

- Advertisement -

ಪ್ರತಿಭಟನಾಕಾರರು ಹಾಡುತ್ತಾ, ಕುಣಿಯುತ್ತಾ, ನಗುತ್ತಾ, ಕೈ ಕೈ ಹಿಡಿದು ಒಟ್ಟಾಗಿ ನಿಂತ ದೃಶ್ಯವನ್ನು ದೇಶವೇ ಗಮನಿಸಿತು. ಅವರ ಹೋರಾಟ ಕೇವಲ ಅವರ ತಲೆಮಾರಿನ ನೋವಿಗೆ ಮಾತ್ರ ಧ್ವನಿಯಾಗಿರಲಿಲ್ಲ. ಭಯದಿಂದ ಮೌನವಾಗಿರುವ ಕೋಟ್ಯಂತರ ಭಾರತೀಯರ ನೋವಿಗೂ ಅದು ಧ್ವನಿಯಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಈ ಪ್ರತಿಭಟನೆ ಭಾರತದ ಶಾಂತಿಯುತ ಹೋರಾಟದ ಪರಂಪರೆಯನ್ನು ಮುಂದುವರಿಸಿತು. ಇದೇ ರೀತಿಯ ಹೋರಾಟದ ಮೂಲಕ ಭಾರತ ಸ್ವಾತಂತ್ರ್ಯ ಪಡೆದಿದೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಸಂವಿಧಾನದ 19ನೇ ವಿಧಿಯೂ ನೀಡಿದೆ. ಆದರೆ ಸರ್ಕಾರ ಯುವಜನರ ಧ್ವನಿಯನ್ನು ಹತ್ತಿಕ್ಕಲು ಹಿಂಸಾತ್ಮಕ ಕ್ರಮಕ್ಕೆ ಮುಂದಾಯಿತು. ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಲಾಯಿತು. ಮೊಳೆಗಳನ್ನು ಅಳವಡಿಸಿದ್ದ ಲಾಠಿಗಳಿಂದ ಹಲ್ಲೆ ನಡೆಸಲಾಯಿತು. ಪೆಲೆಟ್‌ ಗನ್‌ಗಳಿಂದ ಗುಂಡು ಹಾರಿಸಲಾಯಿತು.

ನಾನು ಭೇಟಿಯಾದ 19 ವರ್ಷದ ಸಾಹಿಲ್‌ ಲೋಚಬ್‌ ಅವರ ದೇಹದ ಮೇಲ್ಭಾಗದಲ್ಲಿ ನೂರಾರು ಸೀಸದ ಪೆಲೆಟ್‌ಗಳು ಹೊಕ್ಕಿದ್ದವು. ಒಂದು ಪೆಲೆಟ್‌ ಅವರ ಕಣ್ಣಿಗೂ ತಗುಲಿದ್ದು, ಅವರು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಪೊಲೀಸರು ಲಾಠಿಗಳಿಂದ ಯುವತಿಯರ ಮೇಲೂ ಹಲ್ಲೆ ನಡೆಸಿದ್ದು, ಹಲವರು ದೇಹದ ಸೂಕ್ಷ್ಮ ಭಾಗಗಳಲ್ಲಿ ಗಾಯಗೊಂಡಿದ್ದಾರೆ. ಅಪ್ರಾಪ್ತರ ಮೇಲೂ ಲಾಠಿ ಬೀಸಲಾಗಿದೆ. ಹಲವರ ಮೂಳೆಗಳು ಮುರಿದಿವೆ. ದೇಹದ ಮೇಲೆ ಗಾಯಗಳು ಮತ್ತು ಏಟಿನ ಗುರುತುಗಳಿವೆ.

ಬಿಹಾರದ ಸಿವಾನ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಎಕೆ-47 ಸೇರಿದಂತೆ ಬಂದೂಕುಗಳಿಂದ ಗುಂಡು ಹಾರಿಸಲಾಗಿದೆ. ಇದರಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಕ್ರಮ ಮತ್ತು ಸಂವಿಧಾನ ವಿರೋಧಿ ಹಿಂಸಾಚಾರಕ್ಕೆ ಯಾರು ಆದೇಶ ನೀಡಿದರು?

ನರೇಂದ್ರ ಮೋದಿ ಸರ್ಕಾರ ತನ್ನ ಕೇಂದ್ರೀಕೃತ ಅಧಿಕಾರದ ಬಗ್ಗೆ ಹೆಮ್ಮೆಪಡುತ್ತದೆ. ಮಂಗಳಯಾನದಿಂದ ಹಿಡಿದು ಒಲಿಂಪಿಕ್ಸ್‌ ಪದಕದವರೆಗೆ ದೇಶದ ಪ್ರತಿಯೊಂದು ಸಾಧನೆಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರೇ ಕಾರಣ ಎಂದು ಸರ್ಕಾರ ಹೇಳಿಕೊಳ್ಳುತ್ತದೆ. ಅವರ ಅನುಮತಿಯಿಲ್ಲದೆ ಏನೂ ನಡೆಯುವುದಿಲ್ಲ ಎಂಬ ರೀತಿಯಲ್ಲಿ ಸರ್ಕಾರ ತನ್ನನ್ನು ತಾನು ಬಿಂಬಿಸಿಕೊಂಡಿದೆ. ಈ ಹಿಂಸಾಚಾರ ನಡೆದದ್ದು ಸಂಸತ್ತಿನಿಂದ ಕೇವಲ 500 ಮೀಟರ್‌ ದೂರದಲ್ಲಿ. ಪ್ರತಿಭಟನಾಕಾರರ ವಿರುದ್ಧ ನಿಯೋಜಿಸಲಾಗಿದ್ದ ದೆಹಲಿ ಪೊಲೀಸರು ಮತ್ತು ರ‍್ಯಾಪಿಡ್‌ ಆಕ್ಷನ್‌ ಫೋರ್ಸ್‌ (RAF) ಎರಡೂ ಗೃಹ ಸಚಿವರ ಅಧೀನದಲ್ಲಿವೆ.

ಹೀಗಾಗಿ ಇಲ್ಲಿ ಎರಡು ಸಾಧ್ಯತೆಗಳಿವೆ. ಮೊದಲನೆಯದು, ವಿದ್ಯಾರ್ಥಿಗಳ ಮೇಲಿನ ದಾಳಿಗೆ ಅಮಿತ್‌ ಶಾ ಅನುಮತಿ ನೀಡಿರಬೇಕು. ಹಾಗಿದ್ದರೆ ಅವರು ಈ ಘಟನೆಗೆ ನೇರವಾಗಿ ಹೊಣೆಗಾರರು. ಎರಡನೆಯದು, ಈ ದಾಳಿ ನಡೆಯುತ್ತಿರುವುದೇ ಅವರಿಗೆ ತಿಳಿದಿರಲಿಲ್ಲ. ಹಾಗಿದ್ದರೆ ಅವರು ಸಂಪೂರ್ಣ ಅಸಮರ್ಥರು. ಯಾವುದೇ ಸಂದರ್ಭದಲ್ಲಿ ಗೃಹ ಸಚಿವರಾಗಿ ಆ ದಿನ ನಡೆದ ಘಟನೆಗೆ ಅಮಿತ್‌ ಶಾ ಹೊಣೆಗಾರರು. ಅವರು ರಾಜೀನಾಮೆ ನೀಡಬೇಕು.

ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆಗೆ ಆದೇಶಿಸಿಲ್ಲ. ಈ ಕುರಿತು ಹೇಳಿಕೆಯನ್ನೂ ನೀಡಿಲ್ಲ. ಸಂಸತ್ತಿಗೆ ಬಂದು ಚರ್ಚೆ ಎದುರಿಸಲು ನಿರಾಕರಿಸಿದ್ದಾರೆ. ಪ್ರತಿಪಕ್ಷಗಳು ಪ್ರತಿದಿನ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದರೂ ಅವುಗಳನ್ನು ತಿರಸ್ಕರಿಸಲಾಗುತ್ತಿದೆ. ಇದೇ ವೇಳೆ ಪ್ರಧಾನಿ ಮೋದಿ ತಮ್ಮ ರಾಜಕೀಯ ಇಮೇಜ್‌ ಉಳಿಸಿಕೊಳ್ಳಲು ಸರ್ಕಾರದ ಪ್ರಚಾರ ವ್ಯವಸ್ಥೆ ಮತ್ತು ‘ಗೋದಿ ಮೀಡಿಯಾ’ವನ್ನು ಬಳಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಯುವ ಪ್ರತಿಭಟನಾಕಾರರನ್ನು ಬೆದರಿಸಲು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವುದು ಮತ್ತು ಬಂಧಿಸುವುದು ಮುಂದುವರಿದಿದೆ. ಬಿಜೆಪಿ ಬೆಂಬಲಿಗರ ಆನ್‌ಲೈನ್‌ ಟ್ರೋಲ್‌ಗಳು ಯುವತಿಯರು ಮತ್ತು ಅವರ ಪೋಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಕೆಲ ಯುವತಿಯರು ಸಾರ್ವಜನಿಕವಾಗಿ ಕ್ಷಮೆ ಕೇಳುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಾಕ್‌, ಟರ್ಕಿ ಜೊತೆ ಸೌದಿ ಕೈಜೋಡಿಸಿದ್ದೇಕೆ? ಮೆಕ್ಕಾ ಒಪ್ಪಂದದ ಹಿಂದಿನ ಲೆಕ್ಕಾಚಾರವೇನು?

ಪ್ರಧಾನಿ ಮೋದಿ ಸ್ವತಃ ಭಾರತದ ಯುವಜನರನ್ನು ‘ಕ್ಷಮಿಸುವ’ ಸಂದೇಶವಿರುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿ, ಸರ್ಕಾರದಿಂದ ಹೊಣೆಗಾರಿಕೆ ಕೇಳುತ್ತಿರುವ ದೇಶದ ಯುವಜನರನ್ನು ಪ್ರಧಾನಿಯೊಬ್ಬರು ‘ಕ್ಷಮಿಸುವುದು’ ಎಷ್ಟು ವಿಚಿತ್ರ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. ದೇಶದ ಯುವಜನರು ಎಚ್ಚೆತ್ತುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಇಮೇಜ್‌ ನಾಶವಾಗಿದೆ ಮತ್ತು ಅದನ್ನು ಮತ್ತೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ.

ಮೋದಿ, ಅಮಿತ್‌ ಶಾ ಅಥವಾ ಯಾವುದೇ ಸರ್ಕಾರಿ ಅಧಿಕಾರಿ ತಮ್ಮ ಕ್ರಮಗಳ ಪರಿಣಾಮದಿಂದ ತಪ್ಪಿಸಿಕೊಳ್ಳಲು ಯುವಜನತೆ ಅವಕಾಶ ನೀಡುವುದಿಲ್ಲ. ಪ್ರತಿಪಕ್ಷಗಳು ಯುವಜನರ ಪರವಾಗಿ ನಿಲ್ಲಲಿವೆ. ನಡೆದಿರುವ ಘಟನೆಗಳು ಶಿಕ್ಷೆಯಿಲ್ಲದೆ ಉಳಿಯಲು ಬಿಡುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಜುಲೈ 20ರಂದು ಸಾಹಿಲ್‌ ಲೋಚಬ್‌ ಸೇರಿದಂತೆ ದೇಶದಾದ್ಯಂತ ಸಾವಿರಾರು ಯುವಜನರು ತಾವು ಆಯ್ಕೆ ಮಾಡಿ ಅಧಿಕಾರಕ್ಕೆ ಕಳುಹಿಸಿದ ನಾಯಕರಿಂದ ಹೊಣೆಗಾರಿಕೆಯನ್ನು ಕೇಳಿದರು. ತಡವಾದರೂ ಅವರು ಆ ಹೊಣೆಗಾರಿಕೆಯನ್ನು ಪಡೆದೇ ತೀರುತ್ತಾರೆ. ಅದನ್ನು ಖಚಿತಪಡಿಸುವುದು ನಮ್ಮ ಜವಾಬ್ದಾರಿ.

ಇದು ʼದ ಹಿಂದುʼ ಪ್ರಕಟಿಸಿರುವ ರಾಹುಲ್‌ ಗಾಂಧಿ ಅವರ ಟಿಪ್ಪಣಿಯ ಅನುವಾದ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...

‘ವೀರಮಣಿ ಅತ್ಯಾಚಾರ ಪ್ರಕರಣ ಮುಚ್ಚುವುದರ ಹಿಂದೆ ಯಾವ ಒಪ್ಪಂದವಿತ್ತು’?; ಡಿಎಂಕೆ ವಿರುದ್ಧ ಸಿಎಂ ವಿಜಯ್‌ ವಾಗ್ದಾಳಿ

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ತಮಿಳುನಾಡಿನ ಆರ್‌....

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ...